-
ವಿಮೋಚನಕಾಂಡ 12:42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
42 ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಆ ರಾತ್ರಿ ಹೊರಗೆ ಕರ್ಕೊಂಡು ಬಂದಿದ್ದನ್ನ ನೆನಪಿಸ್ಕೊಳ್ಳೋಕೆ ಅವರು ಪ್ರತಿವರ್ಷ ಆ ರಾತ್ರಿ ಹಬ್ಬ ಆಚರಿಸ್ತಾರೆ. ಇಸ್ರಾಯೇಲ್ಯರ ಎಲ್ಲ ಪೀಳಿಗೆಯವರು ಆ ರಾತ್ರಿಯನ್ನ ಯೆಹೋವನ ಘನತೆಗಾಗಿ ಸ್ಮರಿಸಿ ಆಚರಿಸಬೇಕು.+
-
-
ಧರ್ಮೋಪದೇಶಕಾಂಡ 16:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆ ಮಾಂಸದ ಜೊತೆ ಹುಳಿ ಸೇರಿಸಿರೋ ಯಾವುದನ್ನೂ ತಿನ್ನಬಾರದು.+ ಅವತ್ತಿಂದ ಏಳು ದಿನ ತನಕ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು. ಈಜಿಪ್ಟಿಂದ ಅವಸರ ಅವಸರವಾಗಿ+ ಹೊರಟ ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿಂದ ಹಾಗೇ ಈಗ್ಲೂ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು. ಅವು ಈಜಿಪ್ಟಲ್ಲಿ ಪಟ್ಟ ಕಷ್ಟನ ನಿಮಗೆ ನೆನಪಿಸುತ್ತೆ. ಈಜಿಪ್ಟಿಂದ ಹೊರಗೆ ಬಂದ ದಿನವನ್ನ ಜೀವನಪೂರ್ತಿ ನೆನಪಲ್ಲಿಡೋಕೆ ಹೀಗೆ ಮಾಡಬೇಕು.+
-