3 ಒಂದುವೇಳೆ ಗಂಡು ಅಥವಾ ಹೆಣ್ಣು ಹಸುನ ಯೆಹೋವನಿಗೆ ಸಮಾಧಾನ ಬಲಿಯಾಗಿ+ ಅರ್ಪಿಸೋಕೆ ಯಾರಾದ್ರೂ ಇಷ್ಟಪಟ್ರೆ ಅದ್ರಲ್ಲಿ ಯಾವುದೇ ದೋಷ ಇರಬಾರದು. 2 ಅದನ್ನ ಕೊಡೋನು ತನ್ನ ಕೈಯನ್ನ ಆ ಪ್ರಾಣಿ ತಲೆ ಮೇಲೆ ಇಡಬೇಕು. ಪುರೋಹಿತರಾದ ಆರೋನನ ಮಕ್ಕಳು ದೇವದರ್ಶನ ಡೇರೆಯ ಬಾಗಿಲ ಹತ್ರ ಆ ಪ್ರಾಣಿನ ಕಡಿಬೇಕು. ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.