-
1 ಅರಸು 11:30, 31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಅವನು ಆ ಹೊಸ ಬಟ್ಟೆನ ತಗೊಂಡು ಅದನ್ನ ಹರಿದು 12 ತುಂಡು ಮಾಡಿದ. 31 ಆಮೇಲೆ ಅವನು ಯಾರೊಬ್ಬಾಮನಿಗೆ
“ನೀನು ಈ ಹತ್ತು ತುಂಡುಗಳನ್ನ ತಗೊ. ಯಾಕಂದ್ರೆ, ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಸೊಲೊಮೋನನ ಕೈಯಿಂದ ರಾಜ್ಯ ಕಿತ್ಕೊಂಡು ಅದರ ಹತ್ತು ಕುಲಗಳನ್ನ ನಿನಗೆ ಕೊಡ್ತೀನಿ.+
-
-
1 ಅರಸು 14:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಹಾಗಾಗಿ ಯಾರೊಬ್ಬಾಮ ತನ್ನ ಹೆಂಡತಿಗೆ “ದಯವಿಟ್ಟು ವೇಷ ಬದಲಾಯಿಸ್ಕೊಂಡು ಶೀಲೋಗೆ ಹೋಗು. ನೀನು ನನ್ನ ಹೆಂಡತಿ ಅಂತ ಯಾರಿಗೂ ಗೊತ್ತಾಗಬಾರದು. ಅಲ್ಲಿ ಪ್ರವಾದಿ ಅಹೀಯ ಇದ್ದಾನೆ. ಈ ಜನ್ರ ಮೇಲೆ ನಾನು ರಾಜ ಆಗ್ತೀನಿ ಅಂತ ನನಗೆ ಹೇಳಿದ್ದು ಅವನೇ.+
-
-
1 ಅರಸು 14:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯಾರೊಬ್ಬಾಮನ ಹೆಂಡತಿ ಮನೆ ಬಾಗಿಲ ಹತ್ರ ಬಂದ ತಕ್ಷಣ ಅವಳ ಹೆಜ್ಜೆ ಸದ್ದು ಕೇಳಿ ಅಹೀಯ ಅವಳಿಗೆ ಹೀಗಂದ: “ಯಾರೊಬ್ಬಾಮನ ಹೆಂಡತಿ ಒಳಗೆ ಬಾ. ಯಾಕೆ ವೇಷ ಬದಲಾಯಿಸ್ಕೊಂಡು ಬಂದಿದ್ದೀಯಾ? ನಿನಗೆ ಒಂದು ಕೆಟ್ಟ ಸುದ್ದಿ ಕೊಡೋಕೆ ದೇವರು ನನಗೆ ಹೇಳಿದ್ದಾನೆ.
-
-
1 ಅರಸು 14:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಾಗಿ, ಯಾರೊಬ್ಬಾಮನೇ ನಾನು ನಿನ್ನ ಮನೆತನದ ಮೇಲೆ ಕಷ್ಟ ತರ್ತೀನಿ. ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ನಿನ್ನ ಮನೆಯಲ್ಲಿರೋ ಎಲ್ಲ ಗಂಡಸ್ರನ್ನ ನಾನು ನಾಶ ಮಾಡ್ತೀನಿ.+ ಹೇಗೆ ಒಬ್ಬ ವ್ಯಕ್ತಿ ಸಗಣಿ ಹೋಗೋ ತನಕ ಸರಿಯಾಗಿ ತೊಳಿತಾನೋ ಅದೇ ತರ ನಾನು ನಿನ್ನ ಮನೆತನವನ್ನ ತೊಳೆದುಬಿಡ್ತೀನಿ!
-