-
1 ಅರಸು 12:8-11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆದ್ರೆ ಅವನು ಆ ಹಿರಿಯರ* ಸಲಹೆಯನ್ನ ಗಾಳಿಗೆ ತೂರಿ ತನ್ನ ಜೊತೆ ಬೆಳೆದು ಈಗ ತನ್ನ ಸೇವಕರಾಗಿದ್ದ ಯುವಕರ ಸಲಹೆ ಕೇಳಿದ.+ 9 ಅವನು ಅವ್ರಿಗೆ “ಈ ಜನ್ರು ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರವನ್ನ ಹಗುರಮಾಡು’ ಅಂತ ಕೇಳ್ತಿದ್ದಾರೆ. ಅವ್ರಿಗೆ ನಾನು ಏನು ಉತ್ರ ಕೊಡ್ಲಿ?” ಅಂತ ಕೇಳಿದ. 10 ಅದಕ್ಕೆ ಆ ಯುವಕರು “ಯಾವ ಜನ್ರು ನಿನಗೆ ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರವನ್ನ ನೀನು ಹಗುರಮಾಡು’ ಅಂತ ಕೇಳ್ತಿದ್ದಾರೋ ಅವ್ರಿಗೆ ಹೀಗೆ ಹೇಳು: ‘ನನ್ನ ಕಿರುಬೆರಳು ನನ್ನ ಅಪ್ಪನ ಸೊಂಟಕ್ಕಿಂತ ದಪ್ಪ ಇರುತ್ತೆ. 11 ನನ್ನ ಅಪ್ಪ ನಿಮ್ಮ ಮೇಲೆ ಭಾರವಾದ ನೊಗ ಅಷ್ಟೇ ಹೊರಿಸಿದ. ಆದ್ರೆ ನಾನು ಅದ್ರ ಮೇಲೆ ಇನ್ನೂ ಭಾರ ಹಾಕ್ತೀನಿ. ನನ್ನ ಅಪ್ಪ ನಿಮ್ಮನ್ನ ಕೊರಡೆಯಿಂದ ಹೊಡಿಸಿದ. ನಾನು ನಿಮ್ಮನ್ನ ಮುಳ್ಳಿನ ಕೊರಡೆಯಿಂದ ಹೊಡಿಸ್ತೀನಿ’” ಅಂತ ಸಲಹೆ ಕೊಟ್ರು.
-