-
ಯೆರೆಮೀಯ 33:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 “ಯೆಹೋವ ಹೇಳೋದು ಏನಂದ್ರೆ ‘ಯೆಹೂದದ ಪಟ್ಟಣಗಳನ್ನ, ಯೆರೂಸಲೇಮಿನ ಬೀದಿಗಳನ್ನ ನೀವು ಬಂಜರುಭೂಮಿ, ಯಾರೂ ಇಲ್ಲದ ಜಾಗ, ಮನುಷ್ಯನಾಗಲಿ ಪ್ರಾಣಿಯಾಗಲಿ ಇಲ್ಲದೆ ಬಿಕೋ ಅಂತಿದೆ ಅಂತ ಹೇಳ್ತೀರ. ಆದ್ರೆ ಅಲ್ಲಿ 11 ಸಂತೋಷ ಸಂಭ್ರಮದ ಸದ್ದು+ ಮದುಮಗ ಮದುಮಗಳ ಸ್ವರ ಕೇಳಿಸುತ್ತೆ. ಅಲ್ಲದೆ “ಸೈನ್ಯಗಳ ದೇವರಾದ ಯೆಹೋವನಿಗೆ ಧನ್ಯವಾದ ಸಲ್ಲಿಸಿ. ಯಾಕಂದ್ರೆ ಯೆಹೋವ ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ!”+ ಅಂತ ಹೇಳ್ತಾರೆ.’
‘ಅವರು ಯೆಹೋವನ ಆಲಯದ ಒಳಗೆ ಕೃತಜ್ಞತಾ ಅರ್ಪಣೆಗಳನ್ನ ತರ್ತಾರೆ.+ ಯಾಕಂದ್ರೆ ಈ ದೇಶದಿಂದ ಕೈದಿಗಳಾಗಿ ಹೋದವ್ರನ್ನ ನಾನು ವಾಪಸ್ ಕರ್ಕೊಂಡು ಬರ್ತಿನಿ, ಅವ್ರನ್ನ ಮುಂಚಿನ ತರ ಮಾಡ್ತೀನಿ’ ಅಂತ ಯೆಹೋವ ಹೇಳ್ತಾನೆ.”
-