23 ಯೆಹೂದದ ರಾಜ ಆಸನ ಆಳ್ವಿಕೆಯ 31ನೇ ವರ್ಷದಲ್ಲಿ ಒಮ್ರಿ ಇಸ್ರಾಯೇಲಿನ ರಾಜನಾದ. ಅವನು 12 ವರ್ಷ ಆಳಿದ. ಅವನು ತಿರ್ಚದಿಂದ ಆರು ವರ್ಷ ಆಳಿದ. 24 ಅವನು ಶೆಮೆರಿಂದ ಸಮಾರ್ಯ ಬೆಟ್ಟನ ಎರಡು ತಲಾಂತು ಬೆಳ್ಳಿಗೆ ಕೊಂಡ್ಕೊಂಡು ಅದ್ರ ಮೇಲೆ ಒಂದು ಪಟ್ಟಣನ ಕಟ್ಟಿದ. ಆ ಪಟ್ಟಣಕ್ಕೆ ಆ ಬೆಟ್ಟದ ಒಡೆಯ ಶೆಮೆರನ ನೆನಪಿಗಾಗಿ ಸಮಾರ್ಯ+ ಅಂತ ಹೆಸ್ರಿಟ್ಟ.