-
ಯೆಶಾಯ 11:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್,+ ಈಜಿಪ್ಟ್,+ ಪತ್ರೋಸ್,+ ಕೂಷ್,+ ಏಲಾಮ್,+ ಶಿನಾರ್,* ಹಾಮಾತ್ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+ 12 ಆತನು ಜನಾಂಗಗಳಿಗಾಗಿ ಒಂದು ಧ್ವಜವನ್ನ* ಎತ್ತಿ ನಿಲ್ಲಿಸಿ ಚೆದರಿ ಹೋಗಿರೋ ಇಸ್ರಾಯೇಲ್ ಜನ್ರನ್ನ ಒಟ್ಟುಗೂಡಿಸ್ತಾನೆ.+ ಅಷ್ಟೇ ಅಲ್ಲ ಭೂಮಿಯ ನಾಲ್ಕೂ ಮೂಲೆಗಳಿಗೆ ಚೆದರಿಹೋಗಿರೋ ಯೆಹೂದದ ಜನ್ರನ್ನ ಒಟ್ಟುಗೂಡಿಸ್ತಾನೆ.+
-
-
ಯೆರೆಮೀಯ 23:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವ ಹೇಳೋದು ಏನಂದ್ರೆ “ಆಗ ಅವರು ‘ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ಜೀವ ಇರೋ ದೇವರಾದ ಯೆಹೋವನಾಣೆ!’+ ಅಂತ ಹೇಳಲ್ಲ. 8 ಅದ್ರ ಬದಲು ‘ಇಸ್ರಾಯೇಲ್ ಜನ್ರ ವಂಶದವ್ರನ್ನ ಉತ್ತರ ದೇಶದಿಂದ, ತಾನು ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದ ಕರ್ಕೊಂಡು ಬಂದು, ಅವ್ರನ್ನ ಸ್ವದೇಶಕ್ಕೆ ವಾಪಸ್ ಸೇರಿಸಿದ ಜೀವ ಇರೋ ದೇವರಾದ ಯೆಹೋವನಾಣೆ’ ಅನ್ನೋ ದಿನ ಬರುತ್ತೆ. ಅವರು ತಮ್ಮ ದೇಶದಲ್ಲಿ ವಾಸಿಸ್ತಾರೆ.”+
-