ಮೀಕ
5 “ದಾಳಿಗೆ ಒಳಗಾದ ಮಗಳೇ,
ನೀನು ನಿನ್ನ ಮೈಯನ್ನ ಕೊಯ್ದು ಗಾಯ ಮಾಡ್ಕೊಳ್ತಾ ಇದ್ದೀಯ.
ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ.+
ಅವರು ಇಸ್ರಾಯೇಲಿನ ನ್ಯಾಯಾಧೀಶನ ಕೆನ್ನೆಗೆ ಕೋಲಿಂದ ಹೊಡಿತಾರೆ.+
ಹಾಗಿದ್ರೂ ನನಗಾಗಿ ಇಸ್ರಾಯೇಲನ್ನ ಆಳೋ ರಾಜ ನಿನ್ನಿಂದಾನೇ ಬರ್ತಾನೆ.+
ಅವನ ಆರಂಭ ಪ್ರಾಚೀನ ಕಾಲದಲ್ಲಿ, ಲೆಕ್ಕ ಇಲ್ಲದಷ್ಟು ವರ್ಷಗಳ ಹಿಂದೆನೇ ಆಗಿತ್ತು.
3 ಹಾಗಾಗಿ ಗರ್ಭಿಣಿ ಮಗು ಹೆರೋ ತನಕ
ಆತನು ತನ್ನ ಜನ್ರನ್ನ ಶತ್ರುಗಳ ಕೈಗೆ ಒಪ್ಪಿಸ್ತಾನೆ.
ರಾಜನ ಸಹೋದರರಲ್ಲಿ ಉಳಿದವರು ಇಸ್ರಾಯೇಲ್ ಜನ್ರ ಹತ್ರ ವಾಪಸ್ ಬರ್ತಾರೆ.
5 ಅವನು ಶಾಂತಿ ನೆಲೆಸೋ ತರ ಮಾಡ್ತಾನೆ.+
ಅಶ್ಶೂರದವನು ನಮ್ಮ ದೇಶವನ್ನ ದಾಳಿ ಮಾಡಿದ್ರೆ, ನಮ್ಮ ಭದ್ರ ಕೋಟೆಗಳನ್ನ ತುಳಿದುಹಾಕಿದ್ರೆ,+
ಅವನನ್ನ ಎದುರಿಸೋಕೆ ಮನುಷ್ಯರಿಂದ ಆರಿಸ್ಕೊಂಡ ಏಳು ಕುರುಬರನ್ನ, ಹೌದು, ಎಂಟು ಅಧಿಕಾರಿಗಳನ್ನ* ನಾವು ನೇಮಿಸ್ತೀವಿ.
6 ಅವರು ಕತ್ತಿಯಿಂದ ಅಶ್ಶೂರ ದೇಶಕ್ಕೆ ಶಿಕ್ಷೆ ಕೊಡ್ತಾರೆ,+
ನಿಮ್ರೋದ್+ ದೇಶದ ಬಾಗಿಲಲ್ಲಿ ಕತ್ತಿ ಬೀಸ್ತಾರೆ,
ಅಶ್ಶೂರ ನಮ್ಮ ಮೇಲೆ ದಾಳಿಮಾಡಿ, ನಮ್ಮ ಪ್ರದೇಶವನ್ನ ತುಳಿದಾಗ,
ಅವನ ಕೈಯಿಂದ ರಾಜ ನಮ್ಮನ್ನ ಬಿಡಿಸ್ತಾನೆ.+
7 ಯಾಕೋಬನ ವಂಶದವ್ರಲ್ಲಿ ಉಳಿದವರು ಅನೇಕ ಜನಾಂಗಗಳ ಮಧ್ಯ
ಯೆಹೋವನಿಂದ ಬರೋ ಇಬ್ಬನಿ ತರ,
ಮರಗಿಡಗಳ ಮೇಲೆ ಬೀಳೋ ಹದವಾದ ಮಳೆ ತರ ಇರ್ತಾರೆ.
ಆ ಇಬ್ಬನಿಯಾಗಲಿ ಮಳೆಯಾಗಲಿ ಮನುಷ್ಯನನ್ನ ಅವಲಂಬಿಸಿಲ್ಲ,
ಮಾನವರಿಗಾಗಿ ಕಾಯಲ್ಲ.
8 ಯಾಕೋಬನ ವಂಶದವ್ರಲ್ಲಿ ಉಳಿದವರು ಜನಾಂಗಗಳ ಮಧ್ಯ,
ದೇಶದೇಶಗಳ ಜನ್ರ ಮಧ್ಯ
ಕಾಡಿನ ಪ್ರಾಣಿಗಳ ಮಧ್ಯದಲ್ಲಿರೋ ಸಿಂಹದ ತರ,
ಕುರಿ ಹಿಂಡುಗಳ ಮಧ್ಯದಲ್ಲಿರೋ ಸಿಂಹದ ತರ ಇರ್ತಾರೆ.
ಅದು ಆ ಪ್ರಾಣಿಗಳ ಮಧ್ಯ ಹೋಗುವಾಗ ಅವುಗಳ ಮೇಲೆ ಬಿದ್ದು ಸೀಳಿ ತುಂಡುತುಂಡು ಮಾಡುತ್ತೆ.
ಅವುಗಳನ್ನ ರಕ್ಷಿಸುವವರು ಯಾರೂ ಇಲ್ಲ.
9 ನಿನ್ನ ವಿರೋಧಿಗಳ ಮೇಲೆ ನೀನು ಜಯ ಸಾಧಿಸ್ತೀಯ,
ನಿನ್ನ ಎಲ್ಲ ಶತ್ರುಗಳು ನಾಶವಾಗ್ತಾರೆ.”
10 ಯೆಹೋವ ಹೀಗೆ ಹೇಳ್ತಾನೆ: “ಆ ದಿನದಲ್ಲಿ
ನಾನು ನಿನ್ನ ಕುದುರೆಗಳನ್ನ, ನಿನ್ನ ರಥಗಳನ್ನ ನಾಶ ಮಾಡ್ತೀನಿ.
11 ನಾನು ನಿನ್ನ ದೇಶದ ಪಟ್ಟಣಗಳನ್ನ ನೆಲಸಮ ಮಾಡಿ,
ನಿನ್ನ ಎಲ್ಲ ಭದ್ರ ಕೋಟೆಗಳನ್ನ ಕೆಡವಿಹಾಕ್ತೀನಿ.
12 ನೀನು ಮಾಡ್ತಿರೋ ಮಾಟಮಂತ್ರ ನಿಲ್ಲಿಸಿಬಿಡ್ತೀನಿ,
ನಿನ್ನಲ್ಲಿ ಮಂತ್ರತಂತ್ರ ಮಾಡೋ ಎಲ್ರನ್ನೂ ನಾಶಮಾಡ್ತೀನಿ.+
13 ನಿನ್ನ ಕೆತ್ತಿದ ಮೂರ್ತಿಗಳನ್ನೂ ನಿನ್ನ ವಿಗ್ರಹಸ್ತಂಭಗಳನ್ನೂ ಮಣ್ಣುಪಾಲು ಮಾಡ್ತೀನಿ.
ನಿನ್ನ ಕೈಯಿಂದ ಮಾಡಿದ ವಸ್ತುಗಳಿಗೆ ನೀನು ಇನ್ನು ಯಾವತ್ತೂ ತಲೆಬಾಗಲ್ಲ.+
14 ನಾನು ನಿನ್ನ ಪೂಜಾಕಂಬಗಳನ್ನ* ಕಿತ್ತುಹಾಕ್ತೀನಿ.+
ನಿನ್ನ ಪಟ್ಟಣಗಳನ್ನ ನಿರ್ನಾಮ ಮಾಡ್ತೀನಿ.
15 ನನ್ನ ಮಾತು ಕೇಳದ ಜನಾಂಗಗಳಿಗೆ
ನಾನು ಕೋಪ, ಕ್ರೋಧದಿಂದ ಸೇಡು ತೀರಿಸ್ತೀನಿ.”