ಯೆಶಾಯ
ಮೋವಾಬಿನ ಆರ್+ ಪಟ್ಟಣ ನಿಶ್ಶಬ್ದವಾಗುತ್ತೆ,
ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.
ಮೋವಾಬಿನ ಕೀರ್+ ಪಟ್ಟಣ ನಿಶ್ಶಬ್ದವಾಗುತ್ತೆ,
ಯಾಕಂದ್ರೆ ಅದನ್ನ ರಾತ್ರೋರಾತ್ರಿ ನಾಶ ಮಾಡಲಾಗುತ್ತೆ.
ನೆಬೋಗಾಗಿ+ ಮತ್ತು ಮೇದೆಬಕ್ಕಾಗಿ+ ಮೋವಾಬ್ ಗೋಳಾಡುತ್ತೆ.
ಪ್ರತಿಯೊಬ್ಬರ ತಲೆಯನ್ನ ಬೋಳಿಸಲಾಗುತ್ತೆ,+ ಪ್ರತಿಯೊಬ್ಬರ ಗಡ್ಡವನ್ನ ಕತ್ತರಿಸಲಾಗುತ್ತೆ.+
3 ಅದ್ರ ಬೀದಿಗಳಲ್ಲಿ ಗೋಣಿ ಸುತ್ಕೊಂಡಿರೋ ಜನ ಕಾಣಿಸ್ತಾರೆ,
ತಮ್ಮ ಮನೆಯ ಚಾವಣಿಯಲ್ಲಿ ಮತ್ತು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಅವರು ಗೋಳಾಡ್ತಾರೆ,
ಅವರು ಅಳ್ತಾ ಅಳ್ತಾ ನೆಲಕ್ಕೆ ಕುಸಿದು ಬೀಳ್ತಾರೆ.+
ಹಾಗಾಗಿ ಮೋವಾಬಿನ ಸೈನಿಕರು ಕಿರುಚ್ತಾ ಇರ್ತಾರೆ.
ಮೋವಾಬ್ ಭಯದಿಂದ ನಡುಗುತ್ತೆ.
5 ಮೋವಾಬನ್ನ ನೋಡಿ ನನ್ನ ಹೃದಯ ಕೊರಗ್ತಿದೆ.
ಅದ್ರಿಂದ ತಲೆತಪ್ಪಿಸ್ಕೊಂಡು ಹೋಗಿರುವವರು ಚೋಗರ್+ ತನಕ ಎಗ್ಲತ್-ಶೆಲಿಶೀಯ+ ತನಕ ಓಡಿಹೋಗ್ತಾರೆ.
ಅವರು ಲೂಹೀತನ್ನ ಹತ್ತಿ ಹೋಗುವಾಗ ಕಣ್ಣೀರು ಹಾಕ್ತಾ ಹೋಗ್ತಾರೆ,
ನಡೆದ ಮಹಾದುರಂತಕ್ಕಾಗಿ ಹೊರೊನಯಿಮಿಗೆ ಹೋಗೋ ಮಾರ್ಗದಲ್ಲಿ ಗಟ್ಟಿಯಾಗಿ ಅಳ್ತಾರೆ.+
6 ಯಾಕಂದ್ರೆ ನಿಮ್ರೀಮಿನ ನೀರೆಲ್ಲ ಒಣಗಿಹೋಗುತ್ತೆ,
ಹಸಿಹುಲ್ಲು ಬಾಡಿಹೋಗುತ್ತೆ,
ಹುಲ್ಲೇ ಇಲ್ಲದಂತಾಗಿ ಹಸಿರು ಕಣ್ಮರೆಯಾಗುತ್ತೆ.
7 ಹಾಗಾಗಿ ಜನ ಉಳಿದಿರೋ ತಮ್ಮ ವಸ್ತುಗಳನ್ನ ಮತ್ತು ಆಸ್ತಿಯನ್ನ ಹೊತ್ಕೊಂಡು,
ನೀರವಂಜಿ* ಮರಗಳ ಕಣಿವೆ ದಾಟಿಹೋಗ್ತಾರೆ.
8 ಅವರ ಗೋಳು ಮೋವಾಬಿನ ಪ್ರಾಂತ್ಯದಲ್ಲೆಲ್ಲ ಪ್ರತಿಧ್ವನಿಸುತ್ತೆ,+
ಆ ರೋದನೆ ಎಗ್ಲಯಿಮಿನ ತನಕ ಬೆಯೇರ್-ಏಲೀಮಿನ ತನಕ ತಲುಪುತ್ತೆ.