ಯೆಶಾಯ
17 ದಮಸ್ಕದ ವಿರುದ್ಧ ಈ ಸಂದೇಶ ಕೊಡಲಾಯ್ತು+
“ನೋಡಿ! ದಮಸ್ಕ ಇನ್ಮುಂದೆ ಒಂದು ಪಟ್ಟಣವಾಗಿ ಉಳಿಯಲ್ಲ,
ಅದು ಒಂದು ಹಾಳು ಕುಪ್ಪೆಯಾಗುತ್ತೆ.+
3 ಭದ್ರ ಕೋಟೆಗಳಿರೋ ಎಫ್ರಾಯೀಮಿನ ಪಟ್ಟಣಗಳು ಕಣ್ಮರೆ ಆಗ್ತವೆ,+
ದಮಸ್ಕದ ಸಾಮ್ರಾಜ್ಯ ಅಳಿದುಹೋಗುತ್ತೆ,+
ಇಸ್ರಾಯೇಲ್ಯರ* ಮಹಿಮೆ ಕಣ್ಮರೆ ಆದ ಹಾಗೇ
ಅರಾಮಿನಲ್ಲಿ ಉಳ್ಕೊಂಡಿರುವವರ ಮಹಿಮೆ ಕಣ್ಮರೆ ಆಗುತ್ತೆ” ಅಂತ ಸೈನ್ಯಗಳ ದೇವರಾದ ಯೆಹೋವ ಘೋಷಿಸ್ತಿದ್ದಾನೆ.
ಅಲ್ಲಿ ಹಕ್ಕಲಾಯೋಕೆ ಬರೀ ಕೆಲವೇ ತೆನೆಗಳು ಉಳ್ಕೊಂಡಿರುತ್ತೆ.
6 ಬಡಿದ ಮೇಲೆ ಕೆಲವೇ ಹಣ್ಣುಗಳು ಉಳಿದಿರೋ
ಆಲಿವ್ ಮರದ ತರ ಅವರು ಕಾಣ್ತಾರೆ.
ಹೆಚ್ಚಂದ್ರೆ ಎರಡು ಅಥವಾ ಮೂರು ಮಾಗಿದ ಆಲಿವ್ ಹಣ್ಣುಗಳು ಎತ್ರದ ರೆಂಬೆಯಲ್ಲಿ ಇರ್ತವೆ.
ಫಲಬಿಡೋ ರೆಂಬೆಗಳಲ್ಲಿ ಬರೀ ನಾಲ್ಕು ಅಥವಾ ಐದು ಹಣ್ಣುಗಳು ನೇತಾಡ್ತವೆ”+ ಅಂತ ಇಸ್ರಾಯೇಲ್ ದೇವರಾದ ಯೆಹೋವ ಘೋಷಿಸ್ತಿದ್ದಾನೆ.
7 ಆ ದಿನ ಮನುಷ್ಯ ತನ್ನನ್ನ ಸೃಷ್ಟಿಮಾಡಿದವನ* ಕಡೆ ನೋಡ್ತಾನೆ, ಅವನ ಕಣ್ಣುಗಳು ಇಸ್ರಾಯೇಲ್ಯರ ಪವಿತ್ರ ದೇವರ ಕಡೆ ದಿಟ್ಟಿಸಿ ನೋಡ್ತವೆ. 8 ಅವನು ತಾನು ಮಾಡಿದ ಯಜ್ಞವೇದಿ ಕಡೆ ನೋಡಲ್ಲ,+ ತನ್ನ ಕೈಬೆರಳುಗಳು ತಯಾರಿಸಿರೋ+ ಪೂಜಾಕಂಬಗಳ* ಕಡೆಗಾಗಲಿ ಧೂಪಸ್ತಂಭಗಳ ಕಡೆಗಾಗಲಿ ದಿಟ್ಟಿಸಿ ನೋಡಲ್ಲ.
9 ಆ ದಿನ ಅವನ ಭದ್ರ ಕೋಟೆಗಳಿರೋ ಪಟ್ಟಣಗಳು ಕಾಡಲ್ಲಿ ತೊರೆದುಬಿಟ್ಟಿರೋ ವಾಸಸ್ಥಳದ ಹಾಗೆ ಆಗ್ತವೆ,+
ಇಸ್ರಾಯೇಲ್ಯರ ಮುಂದೆ ಎಸೆಯಲಾಗಿರೋ ರೆಂಬೆ ತರ ಆಗ್ತವೆ,
ಅವು ನಿಷ್ಪ್ರಯೋಜಕ ಭೂಮಿ ಆಗ್ತವೆ.
10 ಯಾಕಂದ್ರೆ ನೀನು* ನಿನ್ನ ರಕ್ಷಕನಾಗಿರೋ ದೇವರನ್ನ ಮರೆತುಬಿಟ್ಟೆ,+
ನಿನ್ನ ಬಂಡೆ ತರ ಇರೋ ಕೋಟೆಯನ್ನ ನೆನಪಿಸ್ಕೊಳ್ಳಲಿಲ್ಲ.+
ಹಾಗಾಗಿ ನೀನು ಅಂದವಾಗಿರೋ ಮರಗಿಡಗಳನ್ನು ನೆಡ್ತೀಯ,
ಅವುಗಳ ಮಧ್ಯ ಅಪರಿಚಿತನ ಚಿಗುರುಗಳನ್ನ ಇಡ್ತೀಯ.
11 ಆ ದಿನ ನೀನು ಅವುಗಳ ಸುತ್ತ ಜಾಗ್ರತೆಯಿಂದ ಬೇಲಿ ಹಾಕ್ತೀಯ,
ಬೆಳಿಗ್ಗೆ ಬೀಜಗಳು ಚಿಗುರೊಡೆಯೋ ತರ ಮಾಡ್ತೀಯ,
ಆದ್ರೆ ನೀನು ಕಾಯಿಲೆ ಬಿದ್ದಿರುವಾಗ ಮತ್ತು ಸಹಿಸಲಾರದ ನೋವನ್ನ ಅನುಭವಿಸುವಾಗ ನಿನ್ನ ಫಸಲು ಮಾಯವಾಗಿ ಹೋಗುತ್ತೆ.+
12 ಕೇಳು! ಜನಾಂಗಗಳ ಜನ್ರಲ್ಲಿ ಕೋಲಾಹಲ ಕೇಳಿಸ್ತಿದೆ,
ಅವರ ಗಲಭೆ ಸಮುದ್ರದ ಅಬ್ಬರದ ಹಾಗೆ ಇದೆ!
ಜನಾಂಗಗಳ ಗದ್ದಲ ಕೇಳಿಸ್ತಿದೆ,
ಅದು ದೊಡ್ಡ ಪ್ರವಾಹದ ಗರ್ಜನೆ ತರ ಇದೆ.
13 ಸಮುದ್ರ ಗರ್ಜಿಸೋ ತರ ಜನಾಂಗಗಳು ಗರ್ಜಿಸ್ತವೆ,
ಆತನು ಅವ್ರನ್ನ ಗದರಿಸ್ತಾನೆ, ಅವರು ದೂರ ಓಡಿಹೋಗ್ತಾರೆ,
ಬೆಟ್ಟದ ಮೇಲಿಂದ ಹೊಟ್ಟು ಗಾಳಿಗೆ ಹಾರಿಹೋಗೋ ಹಾಗೇ ಅವರು ಹಾರಿಹೋಗ್ತಾರೆ.
ಬಿರುಗಾಳಿಗೆ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಅವರು ತಿರುಗ್ತಾರೆ.
14 ಸಂಜೆಯಲ್ಲಿ ಆತಂಕ ಆವರಿಸಿರುತ್ತೆ,
ಬೆಳಿಗ್ಗೆ ಆಗುವಷ್ಟರಲ್ಲಿ ಅವ್ರಲ್ಲಿ ಯಾರೂ ಇರಲ್ಲ.
ನಮ್ಮನ್ನ ಲೂಟಿಮಾಡುವವರಿಗೆ ಸಿಗೋ ಪಾಲು ಇದೇ,
ನಮ್ಮನ್ನ ದೋಚುವವರಿಗೆ ಆಗೋ ಗತಿ ಇದೇ.