ಯೆರೆಮೀಯ
24 ಯೆಹೋಯಾಕೀಮನ+ ಮಗ ಯೆಹೂದದ ರಾಜ ಯೆಕೊನ್ಯನನ್ನ,*+ ಯೆಹೂದದ ಅಧಿಕಾರಿಗಳನ್ನ, ಕರಕುಶಲಗಾರರನ್ನ, ಲೋಹದ ಕೆಲಸಗಾರರನ್ನ* ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ* ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಹಿಡ್ಕೊಂಡು ಹೋದ.+ ಆಮೇಲೆ ಯೆಹೋವ ನನಗೆ ಅಂಜೂರ ಹಣ್ಣುಗಳಿರೋ ಎರಡು ಬುಟ್ಟಿ ಯೆಹೋವನ ಆಲಯದ ಮುಂದೆ ಇರೋದನ್ನ ತೋರಿಸಿದನು. 2 ಒಂದು ಬುಟ್ಟಿಯಲ್ಲಿ ತುಂಬ ಒಳ್ಳೇ ಅಂಜೂರ ಹಣ್ಣುಗಳು ಇತ್ತು. ಅವು ಮೊದಲ ಫಸಲಿನ ಅಂಜೂರಗಳ ತರ ಇತ್ತು. ಆದ್ರೆ ಇನ್ನೊಂದು ಬುಟ್ಟಿಯಲ್ಲಿದ್ದ ಅಂಜೂರ ಹಣ್ಣುಗಳು ತುಂಬ ಕೆಟ್ಟುಹೋಗಿದ್ದವು. ಎಷ್ಟಂದ್ರೆ ಅವುಗಳನ್ನ ತಿನ್ನೋಕೆ ಆಗಲಿಲ್ಲ.
3 ಆಗ ಯೆಹೋವ ನನಗೆ “ಯೆರೆಮೀಯ, ನಿನಗೇನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ ನಾನು “ಅಂಜೂರ ಹಣ್ಣುಗಳು ಕಾಣಿಸ್ತಿವೆ. ಒಳ್ಳೇ ಅಂಜೂರಗಳು ತುಂಬ ಚೆನ್ನಾಗಿದೆ, ಕೆಟ್ಟುಹೋದ ಅಂಜೂರಗಳು ತುಂಬ ಕೆಟ್ಟುಹೋಗಿವೆ, ತಿನ್ನಕ್ಕಾಗಲ್ಲ”+ ಅಂದೆ.
4 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು 5 “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ, ‘ಯೆಹೂದದಿಂದ ಕೈದಿಗಳಾಗಿ ಹೋದವರು ಅಂದ್ರೆ ನಾನು ಈ ಜಾಗದಿಂದ ಕಸ್ದೀಯರ ದೇಶಕ್ಕೆ ಕಳಿಸಿದ ಜನ್ರು ಈ ಒಳ್ಳೇ ಅಂಜೂರಗಳ ತರ ಇದ್ದಾರೆ. ನಾನು ಅವ್ರನ್ನ ಮೆಚ್ತೀನಿ. 6 ಅವ್ರಿಗೆ ಒಳ್ಳೇದನ್ನ ಮಾಡೋಕೆ ಅವ್ರನ್ನ ನೋಡ್ತಾ ಇರ್ತಿನಿ. ಅವರು ಈ ದೇಶಕ್ಕೆ ವಾಪಸ್ ಬರೋ ಹಾಗೆ ಮಾಡ್ತೀನಿ.+ ಅವ್ರನ್ನ ಕಟ್ತೀನಿ, ಹಾಳು ಮಾಡಲ್ಲ. ಅವ್ರನ್ನ ನೆಡ್ತೀನಿ, ಕಿತ್ತು ಹಾಕಲ್ಲ.+ 7 ನಾನು ಯೆಹೋವ ಅಂತ ತಿಳ್ಕೊಳ್ಳೋ ಮನಸ್ಸನ್ನ* ಅವ್ರಿಗೆ ಕೊಡ್ತೀನಿ.+ ಅವರು ನನ್ನ ಜನ್ರಾಗ್ತಾರೆ, ನಾನು ಅವ್ರ ದೇವರಾಗ್ತೀನಿ.+ ಯಾಕಂದ್ರೆ ಪೂರ್ಣ ಹೃದಯದಿಂದ ಅವರು ನನ್ನ ಹತ್ರ ವಾಪಸ್ ಬರ್ತಾರೆ.+
8 ಯಾರೂ ತಿನ್ನೋಕೆ ಆಗದಷ್ಟು ಕೆಟ್ಟು ಹೋಗಿರೋ ಅಂಜೂರಗಳ+ ಬಗ್ಗೆ ಯೆಹೋವ ಹೀಗೆ ಹೇಳ್ತಾನೆ “ಯೆಹೂದದ ರಾಜನಾದ ಚಿದ್ಕೀಯ,+ ಅವನ ಅಧಿಕಾರಿಗಳು, ಯೆರೂಸಲೇಮಿನ ನಾಶನದಿಂದ ಪಾರಾಗಿ ಈ ದೇಶದಲ್ಲಿ ಈಜಿಪ್ಟಲ್ಲಿ ವಾಸ ಮಾಡ್ತಿರೋರು+ ಕೆಟ್ಟುಹೋದ ಆ ಅಂಜೂರಗಳ ತರ ಇದ್ದಾರೆ. 9 ನಾನು ಅವ್ರ ಮೇಲೆ ತರೋ ಕಷ್ಟವನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳು ಭಯ ಪಡೋ ತರ ಮಾಡ್ತೀನಿ.+ ನಾನು ಅವ್ರನ್ನ ಚದರಿಸಿಬಿಡೋ ಎಲ್ಲ ಜಾಗಗಳಲ್ಲಿ+ ಜನ್ರು ಅವ್ರನ್ನ ಬೈತಾರೆ, ಅವಮಾನ ಮಾಡ್ತಾರೆ, ಶಾಪ ಹಾಕ್ತಾರೆ.+ ಅವರು ಜನ್ರ ಬಾಯಲ್ಲಿ ಗಾದೆ ಮಾತಾಗ್ತಾರೆ. 10 ನಾನು ಅವ್ರಿಗೆ ಅವ್ರ ಪೂರ್ವಜರಿಗೆ ಕೊಟ್ಟ ದೇಶದಿಂದ ಅವರು ಪೂರ್ತಿ ನಾಶ ಆಗೋ ತನಕ ಅವರು ಕತ್ತಿಗೆ+ ಬರಗಾಲಕ್ಕೆ ಅಂಟುರೋಗಕ್ಕೆ* ಸಿಕ್ಕಿ ಸಾಯೋ ತರ ಮಾಡ್ತೀನಿ.”’”+