ಯೆಶಾಯ
8 ಯೆಹೋವ ನನಗೆ ಹೀಗಂದನು “ಒಂದು ದೊಡ್ಡ ಹಲಗೆ ತಗೊಂಡು+ ಅದ್ರ ಮೇಲೆ ಮಾಮೂಲಿ ಲೇಖನಿಯಿಂದ* ‘ಮಹೇರ್-ಶಾಲಾಲ್-ಹಾಷ್-ಬಜ್’* ಅಂತ ಬರಿ. 2 ಇದನ್ನ ನಂಬಿಗಸ್ತ ಸಾಕ್ಷಿಗಳಾದ ಪುರೋಹಿತ ಊರೀಯನಿಗೆ+ ಮತ್ತು ಯೆಬೆರೆಕ್ಯನ ಮಗ ಜೆಕರ್ಯನಿಗೆ ಬರೆದು ಪಕ್ಕಾ ಮಾಡೋಕೆ ಹೇಳು.”
3 ಆಮೇಲೆ ನಾನು ಪ್ರವಾದಿನಿಯಾಗಿದ್ದ ನನ್ನ ಹೆಂಡತಿಯನ್ನ ಕೂಡಿದಾಗ* ಅವಳು ಗರ್ಭಿಣಿಯಾಗಿ ಒಂದು ಗಂಡುಮಗು ಹೆತ್ತಳು.+ ಆಗ ಯೆಹೋವ ನನಗೆ “ಇವನಿಗೆ ಮಹೇರ್-ಶಾಲಾಲ್-ಹಾಷ್-ಬಜ್ ಅಂತ ಹೆಸರಿಡು. 4 ಯಾಕಂದ್ರೆ ಆ ಹುಡುಗ ‘ಅಪ್ಪಾ!’ ‘ಅಮ್ಮಾ!’ ಅಂತ ಕರೆಯೋಕೆ ಕಲಿಯೋದಕ್ಕಿಂತ ಮುಂಚೆನೇ ದಮಸ್ಕದ ಸಂಪನ್ಮೂಲಗಳನ್ನ ಮತ್ತು ಸಮಾರ್ಯದ ಕೊಳ್ಳೆಯನ್ನ ತಗೊಂಡು ಹೋಗಿ ಅಶ್ಶೂರ್ಯರ ರಾಜನ ಮುಂದೆ ಇಡಲಾಗುತ್ತೆ”+ ಅಂದನು.
5 ಯೆಹೋವ ಮತ್ತೆ ನನಗೆ ಹೀಗಂದನು
6 “ಈ ಜನ ಪ್ರಶಾಂತವಾಗಿ ಹರಿಯೋ ಸಿಲೋವಿನ* ನೀರನ್ನ ತಿರಸ್ಕರಿಸಿ+
ರೆಚೀನನ ವಿಷ್ಯದಲ್ಲಿ, ರೆಮಲ್ಯನ ಮಗನ ವಿಷ್ಯದಲ್ಲಿ ಸಂತೋಷಪಡ್ತಾ ಇರೋದ್ರಿಂದ+
7 ಇಗೋ! ಯೆಹೋವನಾದ ನಾನು
ಶಕ್ತಿಯುತವಾದ, ತುಂಬ ವಿಸ್ತಾರವಾದ ನದಿ* ನೀರನ್ನ,
ಅಂದ್ರೆ ಅಶ್ಶೂರ್ಯರ ರಾಜನನ್ನ+ ಮತ್ತು ಅವನ ಎಲ್ಲ ಮಹಿಮೆಯನ್ನ ಅವ್ರ ಮೇಲೆ ಬರಮಾಡ್ತೀನಿ.
ಅವನ ತೊರೆಗಳು ತುಂಬಿ ತುಳುಕುತ್ತೆ,
ಅವನು ದಡ ಮೀರಿ ಹರಿತಾನೆ.
9 ಜನಾಂಗಗಳೇ ಹಾನಿಮಾಡಿ, ಆದ್ರೆ ನಿಮ್ಮನ್ನ ತುಂಡುತುಂಡು ಮಾಡಲಾಗುತ್ತೆ.
ಭೂಮಿಯ ದೂರದೂರದ ಪ್ರದೇಶಗಳ ಜನ್ರೇ ನೀವೆಲ್ಲ ಕೇಳಿ!
ಯುದ್ಧಕ್ಕೆ ಸಿದ್ಧರಾಗಿ,* ಆದ್ರೆ ನಿಮ್ಮನ್ನ ತುಂಡುತುಂಡು ಮಾಡಲಾಗುತ್ತೆ!+
ಯುದ್ಧಕ್ಕೆ ಸಿದ್ಧರಾಗಿ, ಆದ್ರೆ ನಿಮ್ಮನ್ನ ತುಂಡುತುಂಡು ಮಾಡಲಾಗುತ್ತೆ!
10 ಏನು ಯೋಜನೆ ಮಾಡ್ತಿರೋ ಮಾಡಿ, ಅದು ಮಣ್ಣು ಮುಕ್ಕುತ್ತೆ!
ಏನು ಹೇಳ್ತೀರೋ ಹೇಳಿ, ನೀವು ಹೇಳಿದ ಹಾಗೆ ನಡಿಯಲ್ಲ.
ಯಾಕಂದ್ರೆ ದೇವರು ನಮ್ಮ ಜೊತೆ ಇದ್ದಾನೆ!*+
11 ಯೆಹೋವ ತನ್ನ ಬಲವಾದ ಕೈಯನ್ನ ನನ್ನ ಮೇಲೆ ಇಟ್ಟು ಈ ಜನ್ರ ದಾರಿ ಹಿಡಿಬಾರದು ಅಂತ ನನ್ನನ್ನ ಎಚ್ಚರಿಸೋಕೆ ಹೀಗಂದನು
12 “ಈ ಜನ ಯಾವುದನ್ನ ಸಂಚು ಅಂತ ಕರಿತಾರೋ ಅದನ್ನ ನೀವು ಸಂಚು ಅಂತ ಕರಿಬಾರದು!
ಅವರು ಯಾವುದಕ್ಕೆ ಭಯಪಡ್ತಾರೋ ಅದಕ್ಕೆ ನೀವು ಭಯಪಡಬೇಡಿ,
ಅದನ್ನ ನೋಡಿ ನಡುಗಬೇಡಿ.
13 ನೆನಪಿಡಿ, ಸೈನ್ಯಗಳ ದೇವರಾದ ಯೆಹೋವ ಪವಿತ್ರನಾಗಿದ್ದಾನೆ,+
ಆತನೊಬ್ಬನಿಗೇ ನೀವು ಭಯಪಡಬೇಕು,
ಆತನೊಬ್ಬನಿಗೇ ನೀವು ನಡುಗಬೇಕು.”+
14 ಆತನು ಒಂದು ಪವಿತ್ರ ಸ್ಥಳವಾಗ್ತಾನೆ,
ಆದ್ರೆ ಇಸ್ರಾಯೇಲಿನ ಎರಡೂ ಮನೆತನಗಳಿಗೆ
ಆತನು ಬಡಿಯೋ ಕಲ್ಲಿನ ಹಾಗೆ ಆಗ್ತಾನೆ,
ಅವರನ್ನ ಎಡವಿಸೋ ಬಂಡೆ ತರ ಆಗ್ತಾನೆ.+
ಯೆರೂಸಲೇಮಿನ ನಿವಾಸಿಗಳಿಗೆ
ಉರ್ಲಿನ ತರ ಆಗ್ತಾನೆ, ಬಲೆ ತರ ಆಗ್ತಾನೆ.
15 ಅವ್ರಲ್ಲಿ ತುಂಬ ಜನ ಎಡವಿ ಬೀಳ್ತಾರೆ ಮತ್ತು ಗಾಯಗೊಳ್ತಾರೆ,
ಅವರು ಸಿಕ್ಕಿಬೀಳ್ತಾರೆ, ಅವ್ರನ್ನ ಹಿಡಿಯಲಾಗುತ್ತೆ.
17 ಯಾಕೋಬನ ಮನೆತನದ ಕಡೆಯಿಂದ ತನ್ನ ಮುಖ ತಿರುಗಿಸ್ಕೊಂಡ+ ಯೆಹೋವನಿಗಾಗಿ ನಾನು ಕಾತುರದಿಂದ ಕಾಯ್ತೀನಿ,+ ಆತನ ಮೇಲೆನೇ ನಿರೀಕ್ಷೆ ಇಡ್ತೀನಿ.
18 ನೋಡಿ! ಯೆಹೋವ ನನಗೆ ಕೊಟ್ಟಿರೋ ಈ ಮಕ್ಕಳು+ ಮತ್ತು ನಾನು ಇಸ್ರಾಯೇಲಿಗೆ ಸೂಚನೆಯಾಗಿ ಇದ್ದೀವಿ,+ ಅದ್ಭುತಗಳಾಗಿದ್ದೀವಿ. ಈ ಸೂಚನೆ ಮತ್ತು ಅದ್ಭುತಗಳನ್ನ ಚೀಯೋನ್ ಬೆಟ್ಟದ ಮೇಲೆ ನೆಲೆಸಿರೋ ಸೈನ್ಯಗಳ ದೇವರಾದ ಯೆಹೋವ ಕೊಟ್ಟಿದ್ದಾನೆ.
19 ಅವರು “ಪಿಸುಗುಟ್ಟೋ, ಗುಸುಗುಸು ಅಂತ ಮಾತಾಡೋ ಭವಿಷ್ಯ ಹೇಳುವವರ ಹತ್ರ, ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋ ಜನ್ರ ಹತ್ರ ಹೋಗು” ಅಂತ ನಿನಗೆ ಹೇಳಿದ್ರೆ ನೀನು ಹಾಗೆ ಮಾಡ್ತೀಯಾ? ಬದುಕಿರೋ ಜನ್ರಿಗಾಗಿ ಸತ್ತವರ ಹತ್ರ ವಿಚಾರಿಸೋದು ಸರಿನಾ?+ ಅದ್ರ ಬದಲಿಗೆ ಮನುಷ್ಯರು ತಮ್ಮ ದೇವರ ಹತ್ರ ವಿಚಾರಿಸೋದು ಸರಿ ಅಲ್ವಾ? 20 ಹೌದು, ಬರೆದು ಪಕ್ಕಾ ಮಾಡಿರೋದನ್ನ ಮತ್ತು ನಿಯಮ ಪುಸ್ತಕವನ್ನ ಅವರು ವಿಚಾರಿಸಬೇಕು.
ಅವರು ದೇವರ ಈ ಮಾತಿನ ಪ್ರಕಾರ ಮಾತಾಡದಿದ್ರೆ ಅವ್ರಿಗೆ ಬೆಳಕು* ಇರಲ್ಲ.+ 21 ಪ್ರತಿಯೊಬ್ರೂ ದುಃಖದಿಂದ, ಹಸಿವಿಂದ ದೇಶದಲ್ಲಿ ಅಲಿತಾರೆ.+ ಅವರು ಹಸಿವು ಮತ್ತು ಸಿಟ್ಟಿಂದ ತಮ್ಮ ರಾಜನನ್ನ ಶಪಿಸ್ತಾರೆ, ಮೇಲೆ ನೋಡಿ ತಮ್ಮ ದೇವರನ್ನ ದೂರ್ತಾರೆ. 22 ಅವರು ಭೂಮಿಯಲ್ಲಿ ಎಲ್ಲಿ ನೋಡಿದ್ರೂ ವಿಪತ್ತು, ಕತ್ತಲೆ, ಅಸ್ಪಷ್ಟತೆ, ಕಷ್ಟಕಾಲಗಳು, ಗಾಢಾಂಧಕಾರ ಇವೇ ಕಾಣಿಸುತ್ತೆ. ಬೆಳಕಿನ ಯಾವ ಕಿರಣಗಳೂ ಕಾಣಿಸಲ್ಲ.