ಓಬದ್ಯ
1 ಓಬದ್ಯ* ಕಂಡ ದರ್ಶನ.
ವಿಶ್ವದ ರಾಜ ಯೆಹೋವ ಎದೋಮಿನ ಬಗ್ಗೆ ಹೇಳಿದ ಮಾತುಗಳನ್ನ ಓಬದ್ಯ ಹೀಗೆ ಹೇಳಿದ:+
“ಯೆಹೋವ ಹೇಳಿದ ಸುದ್ದಿಯನ್ನ ನಾವು ಕೇಳಿಸ್ಕೊಂಡಿದ್ದೀವಿ,
ಆತನು ದೇಶಗಳ ಮಧ್ಯ ಒಬ್ಬ ಪ್ರತಿನಿಧಿಯನ್ನ ಕಳಿಸಿದ್ದಾನೆ,
ಆ ಪ್ರತಿನಿಧಿ ‘ಬನ್ನಿ, ಎದೋಮಿನ ವಿರುದ್ಧ ಯುದ್ಧ ಮಾಡೋಕೆ ಸಿದ್ಧರಾಗೋಣ’ ಅಂತ ಹೇಳ್ತಿದ್ದಾನೆ.”+
2 “ನೋಡು! ನಾನು ನಿನ್ನನ್ನ ಬೇರೆಲ್ಲ ಜನಾಂಗಗಳಿಗಿಂತ ಕೀಳಾಗಿ ಮಾಡಿದ್ದೀನಿ,
ಅವರು ನಿನ್ನನ್ನ ತುಂಬ ಕೀಳಾಗಿ ಕಾಣ್ತಾರೆ.+
3 ನೀನು ಬಂಡೆ ಸಂದುಗಳಲ್ಲಿ,
ಎತ್ತರದ ಬೆಟ್ಟಗಳಲ್ಲಿ ವಾಸಿಸ್ತಾ,
‘ನನ್ನನ್ನ ನೆಲಕ್ಕೆ ನೂಕೋಕೆ ಯಾರಿಂದಾನೂ ಆಗಲ್ಲ’ ಅಂದ್ಕೊಳ್ತಿಯಲ್ಲಾ,
ಆದ್ರೆ ನಿನ್ನ ಹೃದಯದ ಸೊಕ್ಕೇ ನಿನ್ನನ್ನ ಮೋಸ ಮಾಡಿದೆ.+
4 ನೀನು ಹದ್ದಿನ ತರ ಎತ್ತರದಲ್ಲಿ ವಾಸಸ್ಥಾನವನ್ನ ಮಾಡ್ಕೊಂಡ್ರೂ*
ನಕ್ಷತ್ರಗಳ ಮಧ್ಯ ಗೂಡು ಕಟ್ಕೊಂಡ್ರೂ
ನಾನು ನಿನ್ನನ್ನ ಅಲ್ಲಿಂದ ತಳ್ಳಿಬಿಡ್ತೀನಿ” ಅಂತ ಯೆಹೋವ ಹೇಳ್ತಾನೆ.
5 “ರಾತ್ರಿಯಲ್ಲಿ ಕಳ್ಳರು, ದರೋಡೆಕೋರರು ಬಂದ್ರೆ
ತಮಗೆ ಬೇಕಿರೋದನ್ನ ಮಾತ್ರ ಕದ್ಕೊಂಡು ಹೋಗ್ತಾರಲ್ವಾ?
ದ್ರಾಕ್ಷಿಹಣ್ಣುಗಳನ್ನ ಕೀಳುವವರು ಬಂದ್ರೆ ಬೇರೆಯವ್ರಿಗಾಗಿ ಸ್ವಲ್ಪನಾದ್ರೂ ಬಿಟ್ಟುಹೋಗ್ತಾರಲ್ವಾ?+
ಆದ್ರೆ ನಿನ್ನ ಶತ್ರುಗಳು ನಿನ್ನನ್ನ ಪೂರ್ತಿ ನಾಶಮಾಡ್ತಾರೆ!*
6 ಅವರು ಏಸಾವನಿಗಾಗಿ ಪೂರ್ತಿಯಾಗಿ ಹುಡುಕಾಡಿದ್ದಾರೆ!
ಅವನ ನಿಧಿನಿಕ್ಷೇಪಗಳಿಗಾಗಿ ಎಲ್ಲ ಕಡೆ ಹುಡುಕಿ ಲೂಟಿ ಮಾಡಿದ್ದಾರೆ!
7 ಅವರು ನಿನ್ನನ್ನ ತಮ್ಮ ಗಡಿಯಾಚೆ ಓಡಿಸಿದ್ದಾರೆ.
ನಿನ್ನ ಎಲ್ಲ ಮಿತ್ರರಾಜ್ಯಗಳು* ನಿಂಗೆ ಮೋಸ ಮಾಡಿವೆ.
ನಿನ್ನ ಜೊತೆ ಶಾಂತಿಯಿಂದ ಇರುವವರು ನಿನ್ನನ್ನ ಸೋಲಿಸಿದ್ದಾರೆ.
ನಿನ್ನ ಜೊತೆ ಊಟ ಮಾಡುವವರು ನಿನ್ನನ್ನ ಹಿಡಿಯೋಕೆ ಬಲೆ ಬೀಸ್ತಾರೆ,
ಆದ್ರೆ ನಿಂಗೆ ಅದು ಗೊತ್ತಾಗೋದೇ ಇಲ್ಲ.”
8 ಯೆಹೋವ ಹೇಳೋದು ಏನಂದ್ರೆ
“ಆ ದಿನ ನಾನು ಎದೋಮಲ್ಲಿರೋ ವಿವೇಕಿಗಳನ್ನ,
ಏಸಾವನ ಬೆಟ್ಟ ಪ್ರದೇಶದಲ್ಲಿರೋ ವಿವೇಚನೆ ಇರೋ ಜನ್ರನ್ನ ನಾಶ ಮಾಡ್ತೀನಿ.+
9 ಏಸಾವನ ಬೆಟ್ಟ ಪ್ರದೇಶದಲ್ಲಿರೋ ಪ್ರತಿಯೊಬ್ಬನೂ ಸಂಹಾರ ಆಗ್ತಾನೆ,+
10 ನೀನು ನಿನ್ನ ತಮ್ಮ ಯಾಕೋಬನನ್ನ ಹಿಂಸಿಸಿದೆ,+
ಹಾಗಾಗಿ ಅವಮಾನ ನಿನ್ನನ್ನ ಆವರಿಸುತ್ತೆ,+
ನೀನು ಅಸ್ತಿತ್ವದಲ್ಲೇ ಇಲ್ಲದ ಹಾಗೆ ನಾಶವಾಗಿ ಹೋಗ್ತೀಯ.+
11 ಅಪರಿಚಿತರು ಅವನ ಸೈನ್ಯವನ್ನ ಸೆರೆಹಿಡ್ಕೊಂಡು ಹೋದ ದಿನ,+
ನೀನು ಸುಮ್ನೆ ನಿಂತು ನೋಡ್ತಿದ್ದೆ,
ವಿದೇಶಿಯರು ಅವನ ಪ್ರದೇಶದೊಳಗೆ ನುಗ್ಗಿ ಯೆರೂಸಲೇಮನ್ನ ಪಾಲು ಮಾಡ್ಕೊಳ್ಳೋಕೆ ಚೀಟುಹಾಕಿದ ದಿನ,+
ನೀನು ಕೂಡ ಅವ್ರಷ್ಟೇ ಕೆಟ್ಟವನಾಗಿ ನಡ್ಕೊಂಡೆ.
12 ನಿನ್ನ ತಮ್ಮನಿಗೆ ಕಷ್ಟ ಬಂದ ದಿನ ನೀನು ಹಿಗ್ಗಬಾರದಿತ್ತು,+
ಯೆಹೂದದ ಜನ್ರ ನಾಶನದ ದಿನ ನೀನು ಸಂಭ್ರಮ ಪಡಬಾರದಿತ್ತು,+
ಅವ್ರ ಸಂಕಷ್ಟದ ದಿನ ನೀನು ಸೊಕ್ಕಿಂದ ಮಾತಾಡಬಾರದಿತ್ತು.
13 ನನ್ನ ಜನ್ರ ಕಷ್ಟದ ದಿನ ಅವ್ರ ಪಟ್ಟಣದೊಳಗೆ ನೀನು ಬರಬಾರದಿತ್ತು,+
ಅವನ ಕಷ್ಟದ ದಿನ ಅವನಿಗಾದ ಕೇಡನ್ನ ನೋಡಿ ನೀನು ಹಿಗ್ಗಬಾರದಿತ್ತು,
ಅವನ ಕಷ್ಟದ ದಿನ ಅವನ ಸಿರಿಸಂಪತ್ತನ್ನ ನೀನು ದೋಚಬಾರದಿತ್ತು.+
14 ದಾರಿಗಳು ಕೂಡೋ ಸ್ಥಳದಲ್ಲಿ ನಿಂತು ತಪ್ಪಿಸ್ಕೊಂಡು ಓಡ್ತಾ ಇದ್ದವ್ರನ್ನ ಸಾಯಿಸಬಾರದಿತ್ತು,+
ಕಡುಕಷ್ಟದ ದಿನ ಬದುಕಿ ಉಳಿದವ್ರನ್ನ ನೀನು ಹಿಡಿದು ಶತ್ರುಗಳ ಕೈಗೆ ಒಪ್ಪಿಸಬಾರದಿತ್ತು.+
15 ಯೆಹೋವನ ದಿನ ಹತ್ರ ಆಗಿದೆ, ಆತನು ಎಲ್ಲ ಜನಾಂಗಗಳ ವಿರುದ್ಧ ಬರ್ತಾನೆ.+
ನೀನು ಬೇರೆಯವ್ರಿಗೆ ಮಾಡಿದ್ದನ್ನೇ ನಿನಗೂ ಮಾಡಲಾಗುತ್ತೆ.+
ನೀನು ಬೇರೆಯವ್ರ ಜೊತೆ ನಡ್ಕೊಂಡ ರೀತಿಯಲ್ಲೇ ನಿನ್ನ ಜೊತೆನೂ ನಡ್ಕೊಳ್ಳಲಾಗುತ್ತೆ.
16 ನೀವು ನನ್ನ ಪವಿತ್ರ ಬೆಟ್ಟದಲ್ಲಿ ದ್ರಾಕ್ಷಾಮದ್ಯ ಕುಡಿದ ಹಾಗೇ,
ಎಲ್ಲ ಜನಾಂಗಗಳು ನನ್ನ ಕೋಪ ಅನ್ನೋ ದ್ರಾಕ್ಷಾಮದ್ಯ ಕುಡಿತಾ ಇರ್ತವೆ.+
ಅವರು ಅದನ್ನ ಕುಡಿದು ನುಂಗಿಬಿಡ್ತಾರೆ.
ಅವರು ಅಸ್ತಿತ್ವದಲ್ಲೇ ಇರಲೇ ಇಲ್ಲವೇನೋ ಅನ್ನೋ ತರ ಕಣ್ಮರೆ ಆಗ್ತಾರೆ.
17 ಆದ್ರೆ ಪಾರಾದವರು ಚೀಯೋನ್ ಬೆಟ್ಟದ ಮೇಲೆ ಇರ್ತಾರೆ,+
ಆ ಬೆಟ್ಟ ಪವಿತ್ರವಾಗಿರುತ್ತೆ,+
ಯಾಕೋಬನ ವಂಶದವರು ತಮಗೆ ಸೇರಿದ ಸೊತ್ತನ್ನ ಮತ್ತೆ ತಮ್ಮದಾಗಿ ಮಾಡ್ಕೊಳ್ತಾರೆ.+
18 ಯಾಕೋಬನ ವಂಶದವರು ಬೆಂಕಿ ತರ ಆಗ್ತಾರೆ,
ಯೋಸೇಫನ ವಂಶದವರು ಜ್ವಾಲೆ ತರ ಆಗ್ತಾರೆ,
ಏಸಾವನ ವಂಶದವರು ಕೂಳೆ ತರ ಇರ್ತಾರೆ,
ಇವ್ರನ್ನ ಅವರು ಸುಟ್ಟು ಬೂದಿ ಮಾಡ್ತಾರೆ,
ಏಸಾವನ ವಂಶದಲ್ಲಿ ಯಾರೂ ಬದುಕಿ ಉಳಿಯಲ್ಲ.+
ಯಾಕಂದ್ರೆ ಯೆಹೋವನೇ ಇದನ್ನ ಹೇಳಿದ್ದಾನೆ.
ಅವರು ಎಫ್ರಾಯೀಮಿನ ಮತ್ತು ಸಮಾರ್ಯದ ಜಮೀನನ್ನೂ ತಮ್ಮದಾಗಿ ಮಾಡ್ಕೊಳ್ತಾರೆ,+
ಬೆನ್ಯಾಮೀನ ಗಿಲ್ಯಾದನ್ನ ಸ್ವಾಧೀನ ಮಾಡ್ಕೊಳ್ತಾನೆ.
ಯೆರೂಸಲೇಮಿಂದ ಕೈದಿಯಾಗಿ ಹೋಗಿ ಸೆಪಾರದಿನಲ್ಲಿ ಇದ್ದವರು ನೆಗೆಬಿನ ಪಟ್ಟಣಗಳನ್ನ ವಶ ಮಾಡ್ಕೊಳ್ತಾರೆ.+
21 ಏಸಾವನ ಬೆಟ್ಟ ಪ್ರದೇಶಕ್ಕೆ ತೀರ್ಪು ಕೊಡೋಕೆ+
ರಕ್ಷಕರು ಚೀಯೋನ್ ಬೆಟ್ಟದ ಮೇಲೆ ಹೋಗ್ತಾರೆ.
ಆಗ ಯೆಹೋವ ರಾಜನಾಗಿ ಆಳ್ತಾನೆ.”+