ಯೆಶಾಯ
48 ಯಾಕೋಬನ ಮನೆತನದವರೇ,
ತಮ್ಮನ್ನೇ ತಾವು ಇಸ್ರಾಯೇಲನ ಹೆಸ್ರಿಂದ ಕರೆದ್ಕೊಳ್ಳುವವ್ರೇ,+
ಯೆಹೂದದ ವಂಶದಿಂದ ಬಂದಿರುವವ್ರೇ ಇದನ್ನ ಕೇಳಿ.+
ನೀವು ಯೆಹೋವನ ಹೆಸ್ರಲ್ಲಿ ಆಣೆ ಮಾಡ್ತೀರ,
ಇಸ್ರಾಯೇಲಿನ ದೇವರನ್ನ ಆರಾಧಿಸ್ತೀರ,
ಆದ್ರೆ ಅದನ್ನ ಸತ್ಯದಿಂದಲೂ ನೀತಿಯಿಂದಲೂ ಮಾಡಲ್ಲ.+
2 ನಾವು ಪವಿತ್ರ ಪಟ್ಟಣದಲ್ಲಿ ವಾಸಿಸ್ತೀವಿ ಅಂತ ಅವರು ಹೇಳ್ಕೊಳ್ತಾರೆ,+
ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ
ಇಸ್ರಾಯೇಲ್ ದೇವರನ್ನ ಆಶ್ರಯಿಸಿದ್ದಾರೆ.+
3 “ತುಂಬ ಹಿಂದೆನೇ ನಾನು ಹಳೇ* ವಿಷ್ಯಗಳ ಬಗ್ಗೆ ತಿಳಿಸಿದೆ.
ಅವು ನನ್ನ ಬಾಯಿಂದನೇ ಹೊರಟಿದ್ದವು,
ನಾನು ಅವುಗಳನ್ನ ತಿಳಿಸಿದೆ.+
ತಕ್ಷಣ ಕ್ರಿಯೆಗೈದೆ, ಅವು ನೆರವೇರಿದವು.+
5 ಅದಕ್ಕೇ ನಾನು ತುಂಬ ಮುಂಚೆನೇ ನಿನಗೆ ಹೇಳಿದ್ದೆ.
ಅದು ನೆರವೇರೋ ಮುಂಚೆನೇ ನೀನು ಅದನ್ನ ಕೇಳಿಸ್ಕೊಳ್ಳೋ ತರ ನಾನು ಮಾಡಿದ್ದೆ,
ಯಾಕಂದ್ರೆ ‘ಅದನ್ನ ಮಾಡಿದ್ದು ನನ್ನ ಮೂರ್ತಿನೇ,
ಅದನ್ನ ಆಜ್ಞಾಪಿಸಿದ್ದು ನನ್ನ ಕೆತ್ತಿದ ಮೂರ್ತಿನೇ, ನನ್ನ ಲೋಹದ ಪ್ರತಿಮೆನೇ’* ಅಂತ ನೀನು ಹೇಳಬಾರದಂತ ನಾನು ಹೀಗೆ ಮಾಡಿದ್ದೆ.
6 ನೀನು ಇವುಗಳನ್ನೆಲ್ಲ ಕೇಳಿಸ್ಕೊಂಡಿದ್ದೀಯ, ನೋಡಿದ್ದೀಯ.
ಈಗಿಂದ ನಾನು ನಿನಗೆ ಹೊಸ ವಿಷ್ಯಗಳನ್ನ ಹೇಳ್ತೀನಿ,+
ನಿನಗೆ ಗೊತ್ತಿಲ್ಲದ ರಹಸ್ಯಗಳನ್ನ ನಾನು ತಿಳಿಸ್ತೀನಿ. ಅವುಗಳನ್ನ ನಾನು ಜೋಪಾನವಾಗಿ ಮರೆಮಾಡಿದ್ದೆ.
7 ‘ಅವುಗಳ ಬಗ್ಗೆ ನನಗೆ ಈಗಾಗಲೇ ಗೊತ್ತಿತ್ತು’ ಅಂತ ನೀನು ಹೇಳದ ಹಾಗೆ
ನಾನು ಅವುಗಳನ್ನ ತುಂಬ ಹಿಂದೆನೇ ಸೃಷ್ಟಿಸದೆ ಈಗ ಸೃಷ್ಟಿಸ್ತಿದ್ದೀನಿ,
ನೀನು ಅವುಗಳ ಬಗ್ಗೆ ಕೇಳಿಸ್ಕೊಳ್ತಿರೋದು ಇವತ್ತೇ, ಈ ಮುಂಚೆ ನಿನಗೆ ಅವುಗಳ ಬಗ್ಗೆ ಗೊತ್ತಿರಲಿಲ್ಲ.
8 ನೀನು ಅವುಗಳನ್ನ ಕೇಳಿಸ್ಕೊಳ್ಳೋಕಾಗಲಿ+ ಅರ್ಥ ಮಾಡ್ಕೊಳ್ಳೋಕಾಗಲಿ ಇಷ್ಟಪಡಲಿಲ್ಲ.
ಮುಂಚಿನಿಂದಾನೇ ನೀನು ಕಿವಿಗಳನ್ನ ಮುಚ್ಕೊಂಡಿದ್ದೀಯ.
9 ಆದ್ರೆ ನಾನು ನನ್ನ ಹೆಸ್ರಿಗಾಗಿ ನನ್ನ ಕೋಪವನ್ನ ಹಿಡಿದಿಡ್ತೀನಿ,+
ನಾನು ನಿನ್ನನ್ನ ನಾಶಮಾಡದೆ,
ನನ್ನ ಮಹಿಮೆಗಾಗಿ ನನ್ನನ್ನೇ ನಾನು ತಡೆಹಿಡಿತೀನಿ.+
10 ನೋಡು! ನಾನು ನಿನ್ನನ್ನ ಪರಿಷ್ಕರಿಸಿದೆ, ಆದ್ರೆ ಬೆಳ್ಳಿ ತರ ಅಲ್ಲ.+
ನಾನು ನಿನ್ನನ್ನ ಕಷ್ಟದ ಕುಲುಮೆಯಲ್ಲಿ ಪರೀಕ್ಷಿಸಿದೆ.*+
11 ನನಗಾಗಿ, ಹೌದು, ನನ್ನ ಹೆಸ್ರಿಗಾಗಿ ನಾನು ಕ್ರಿಯೆಗೈತೀನಿ,+
ನನ್ನ ಹೆಸ್ರು ಅಪವಿತ್ರವಾಗೋಕೆ ನಾನು ಹೇಗೆ ತಾನೇ ಬಿಡಲಿ?+
ನಾನು ನನ್ನ ಮಹಿಮೆಯನ್ನ ಯಾರ ಜೊತೆನೂ ಹಂಚ್ಕೊಳ್ಳಲ್ಲ.*
ನಾನು ಅವುಗಳನ್ನ ಕರೆದಾಗ ಅವೆರಡು ಒಟ್ಟಾಗಿ ಬಂದು ನನ್ನ ಮುಂದೆ ಹಾಜರಾಗ್ತವೆ.
14 ನೀವೆಲ್ಲ ಒಟ್ಟಾಗಿ ಸೇರಿಬಂದು ಕೇಳಿಸ್ಕೊಳ್ಳಿ.
ಈ ಮಾತುಗಳನ್ನ ನಿಮ್ಮ ದೇವರುಗಳಲ್ಲಿ ಯಾರು ಹೇಳೋಕಾಗುತ್ತೆ?
ಯೆಹೋವ ಯಾರನ್ನ ಪ್ರೀತಿಸ್ತಾನೋ,+
ಅವನು ಬಾಬೆಲಿನ ವಿರುದ್ಧ ಆತನ ಇಷ್ಟವನ್ನ ನೆರವೇರಿಸ್ತಾನೆ,+
ಅವನು ತನ್ನ ತೋಳುಗಳನ್ನ ಕಸ್ದೀಯರ ವಿರುದ್ಧ ಎತ್ತುತ್ತಾನೆ.+
15 ಸ್ವತಃ ನಾನೇ ಇದನ್ನ ಹೇಳಿದ್ದೀನಿ, ನಾನೇ ಅವನನ್ನ ಕರೆದಿದ್ದೀನಿ.+
ನಾನೇ ಅವನನ್ನ ಕರ್ಕೊಂಡು ಬಂದಿದ್ದೀನಿ, ಅವನು ಮಾಡೋ ಪ್ರತಿಯೊಂದು ಕೆಲಸ ಸಫಲ ಆಗುತ್ತೆ.+
16 ಜನ್ರೇ, ನನ್ನ ಹತ್ರ ಬಂದು ಇದನ್ನ ಕೇಳಿಸ್ಕೊಳ್ಳಿ.
ಆರಂಭದಿಂದಾನೇ ನಾನು ರಹಸ್ಯವಾಗಿ ಮಾತಾಡ್ಲಿಲ್ಲ.+
ಅದು ನೆರವೇರೋಕೆ ಶುರು ಆದಾಗ ನಾನು ಅಲ್ಲೇ ಇದ್ದೆ.”
ಈಗ ವಿಶ್ವದ ರಾಜನಾದ ಯೆಹೋವನೇ ನನ್ನನ್ನ ಕಳಿಸಿದ್ದಾನೆ, ಆತನ ಪವಿತ್ರ ಶಕ್ತಿಯನ್ನ ನನಗೆ ಕೊಟ್ಟಿದ್ದಾನೆ.
17 ನಿನ್ನನ್ನ ಬಿಡುಗಡೆ ಮಾಡಿದ ಇಸ್ರಾಯೇಲ್ಯರ ಪವಿತ್ರ ದೇವರಾಗಿರೋ ಯೆಹೋವ+ ಹೀಗೆ ಹೇಳ್ತಿದ್ದಾನೆ
“ಯೆಹೋವನಾದ ನಾನೇ ನಿನ್ನ ದೇವರು.
18 ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ!+
19 ನಿನ್ನ ಸಂತತಿಯವರೂ ನಿನ್ನ ವಂಶಸ್ಥರೂ ಮರಳಿನ ತರ ಅಸಂಖ್ಯಾತರಾಗ್ತಾರೆ.+
ಅವ್ರ ಹೆಸ್ರನ್ನ ಯಾವತ್ತೂ ನನ್ನ ಮುಂದಿನಿಂದ ತೆಗೆದುಹಾಕಲಾಗಲ್ಲ ಅಥವಾ ಅಳಿಸಿಹಾಕಲಾಗಲ್ಲ.”
ಕಸ್ದೀಯರಿಂದ ಓಡಿಹೋಗಿ!
ಸಂತೋಷದಿಂದ ಅದನ್ನ ಹೇಳಿ! ತಿಳಿಸಿ!+
ಭೂಮಿಯ ಕಟ್ಟಕಡೆ ತನಕ ಈ ಸುದ್ದಿ ಮುಟ್ಟೋ ತರ ಮಾಡಿ.+
ಹೀಗೆ ಹೇಳಿ “ಯೆಹೋವ ತನ್ನ ಸೇವಕ ಯಾಕೋಬನನ್ನ ಬಿಡುಗಡೆ ಮಾಡಿದನು.+
21 ಆತನು ಅವ್ರನ್ನ ಮರುಭೂಮಿಗಳ ಮೂಲಕ ನಡೆಸುವಾಗ ಅವ್ರಿಗೆ ಬಾಯಾರಿಕೆ ಆಗಲಿಲ್ಲ.+
ಆತನು ಅವ್ರಿಗಾಗಿ ಬಂಡೆಯಿಂದ ನೀರು ಹರಿಯೋ ತರ ಮಾಡಿದನು,
ಆತನು ಬಂಡೆ ಸೀಳಿ ನೀರನ್ನ ಪ್ರವಾಹದ ಹಾಗೆ ಹರಿಸಿದನು.”+