ಯೆಶಾಯ
ನಾನು ಹುಟ್ಟೋದಕ್ಕಿಂತ* ಮುಂಚೆನೇ ಯೆಹೋವ ನನ್ನನ್ನ ಕರೆದನು.+
ನಾನು ನನ್ನ ತಾಯಿಯ ಗರ್ಭದಲ್ಲಿ ಇರುವಾಗಲೇ ಆತನು ನನ್ನ ಹೆಸ್ರು ಹೇಳಿದನು.
ಆತನು ನನ್ನನ್ನ ಚೂಪಾದ ಬಾಣವನ್ನಾಗಿ ಮಾಡಿದನು,
ಆತನು ನನ್ನನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟನು.
4 ಆದ್ರೆ ನಾನು ಹೀಗೆ ಹೇಳಿದೆ “ನನ್ನ ಪರಿಶ್ರಮವೆಲ್ಲ ವ್ಯರ್ಥ.
ಸುಳ್ಳು ವಿಷ್ಯಗಳಿಗೆ ನಾನು ನನ್ನ ಬಲವನ್ನೆಲ್ಲಾ ವ್ಯರ್ಥವಾಗಿ ವ್ಯಯಿಸಿದೆ.
5 ನನ್ನನ್ನ ನನ್ನ ತಾಯಿಯ ಗರ್ಭದಿಂದಲೇ ತನ್ನ ಸೇವಕನಾಗೋ ತರ ಮಾಡಿದ ಯೆಹೋವ,
ಯಾಕೋಬನನ್ನ ತನ್ನ ಹತ್ರ ವಾಪಸ್ ಕರ್ಕೊಂಡು ಬರೋಕೆ ಈಗ ನನಗೆ ಹೇಳಿದ್ದಾನೆ,
ಇಸ್ರಾಯೇಲ್ ತನ್ನ ಹತ್ರ ಒಟ್ಟುಗೂಡಬೇಕಂತ ಹೀಗೆ ಹೇಳಿದ್ದಾನೆ.+
ನನಗೆ ಯೆಹೋವನ ಮುಂದೆ ಘನತೆ ಸಿಗುತ್ತೆ,
ನನ್ನ ದೇವರೇ ನನಗೆ ಬಲವಾಗ್ತಾನೆ.
6 ಆತನು ನನಗೆ ಹೀಗೆ ಹೇಳಿದನು “ಯಾಕೋಬನ ಕುಲಗಳನ್ನ ಉನ್ನತಕ್ಕೇರಿಸೋಕೆ,
ಇಸ್ರಾಯೇಲ್ಯರಲ್ಲಿ ರಕ್ಷಿಸಿದವ್ರನ್ನ ವಾಪಸ್ ಕರ್ಕೊಂಡು ಬರೋಕೆ,
ನಾನು ನಿನ್ನನ್ನ ಕೇವಲ ನನ್ನ ಸೇವಕನನ್ನಾಗಿ ನೇಮಿಸಲಿಲ್ಲ.
7 ಯಾರನ್ನ ತಿರಸ್ಕಾರದಿಂದ ನೋಡಲಾಯ್ತೋ,+ ಜನಾಂಗ ಯಾರನ್ನ ಅಸಹ್ಯವಾಗಿ ನೋಡ್ತೋ, ಅಧಿಕಾರಿಗಳಿಗೆ ಯಾರು ಸೇವಕನಾಗಿದ್ದನೋ ಅವನಿಗೆ, ಇಸ್ರಾಯೇಲನ್ನ ಬಿಡಿಸಿದವನೂ ಪವಿತ್ರ ದೇವರೂ ಆಗಿರೋ ಯೆಹೋವ+ ಹೀಗೆ ಹೇಳ್ತಿದ್ದಾನೆ
“ನಿನ್ನನ್ನ ಆರಿಸ್ಕೊಂಡ ಇಸ್ರಾಯೇಲ್ಯರ ಪವಿತ್ರ ದೇವರ ಸಲುವಾಗಿ,+
ನಂಬಿಗಸ್ತನಾಗಿರೋ ಯೆಹೋವನ ನಿಮಿತ್ತ+
ರಾಜರು ನಿನ್ನನ್ನ ನೋಡಿ ಎದ್ದು ನಿಲ್ತಾರೆ,
ಅಧಿಕಾರಿಗಳು ನಿನಗೆ ಬಾಗಿ ನಮಸ್ಕರಿಸ್ತಾರೆ.”
8 ಯೆಹೋವ ಹೀಗೆ ಹೇಳ್ತಾನೆ,
“ನಾನು ನನ್ನ ಪ್ರಸನ್ನತೆಯ ಸಮ್ಯದಲ್ಲಿ ನಿನಗೆ ಉತ್ರ ಕೊಟ್ಟೆ,+
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆ.+
ನಾನು ಜನ್ರ ಜೊತೆ ಮಾಡ್ಕೊಂಡ ಒಪ್ಪಂದಕ್ಕೆ ನಿನ್ನನ್ನ ಗುರುತಾಗಿ ಕೊಡೋಕೆ,
ದೇಶವನ್ನ ಮತ್ತೆ ಸುವ್ಯವಸ್ಥೆಗೆ ತರೋಕೆ,
ನಿರ್ಜನವಾಗಿದ್ದ ಸೊತ್ತನ್ನ ನನ್ನ ಜನ ಮತ್ತೆ ಪಡಿಯೋಕೆ,+
ನಾನು ನಿನ್ನನ್ನ ಸಂರಕ್ಷಿಸ್ತಾ ಬಂದೆ.+
ಅವರು ದಾರಿ ಬದಿಯಲ್ಲಿ ಕುರಿಗಳ ತರ ಮೇಯ್ತಾರೆ,
ಅನೇಕರು ಹಾದು ಹೋಗೋ ದಾರಿಗಳ ಅಕ್ಕ-ಪಕ್ಕದಲ್ಲಿ* ಅವ್ರ ಹುಲ್ಲುಗಾವಲು ಆಗುತ್ತೆ.
ಯಾಕಂದ್ರೆ ಅವ್ರಿಗೆ ಕರುಣೆ ತೋರಿಸೋ ದೇವರು ಅವ್ರನ್ನ ನಡಿಸ್ತಾನೆ,+
ನೀರಿನ ತೊರೆಗಳ ಹತ್ರಕ್ಕೆ ಆತನು ಅವ್ರನ್ನ ಮಾರ್ಗದರ್ಶಿಸ್ತಾನೆ.+
11 ನಾನು ನನ್ನ ಎಲ್ಲ ಬೆಟ್ಟಗಳನ್ನ ರಸ್ತೆಯನ್ನಾಗಿ ಮಾಡ್ತೀನಿ,
ನನ್ನ ಹೆದ್ದಾರಿಗಳನ್ನ ಮೇಲಕ್ಕೆ ಏರಿಸ್ತೀನಿ.+
12 ನೋಡಿ! ಅವರು ತುಂಬ ದೂರದಿಂದ ಬರ್ತಿದ್ದಾರೆ,+
ಇಗೋ! ಅವರು ಉತ್ತರದಿಂದ ಮತ್ತು ಪಶ್ಚಿಮದಿಂದ ಬರ್ತಿದ್ದಾರೆ,
ಇವರು ಸೀನೀಮ್ ದೇಶದಿಂದ ಬರ್ತಿದ್ದಾರೆ.”+
13 ಆಕಾಶವೇ, ಸಂತೋಷದಿಂದ ಜೈಕಾರ ಹಾಕು. ಭೂಮಿಯೇ, ಸಂಭ್ರಮಿಸು.+
ಬೆಟ್ಟಗಳು ಸಂತೋಷದಿಂದ ಹರ್ಷಧ್ವನಿಗೈಲಿ.+
ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ.+
ಕಷ್ಟ ಅನುಭವಿಸ್ತಿರೋ ತನ್ನ ಜನ್ರಿಗೆ ಕರುಣೆ ತೋರಿಸ್ತಾನೆ.+
15 ತನ್ನ ಹೊಟ್ಟೆಯಲ್ಲಿ ಹುಟ್ಟಿದ ಹಾಲು ಕುಡಿಯೋ ಮಗು ಮೇಲೆ ಅವಳಿಗೆ ಕನಿಕರ ಇರಲ್ವಾ?
ಹಾಲು ಕುಡಿಯೋ ತನ್ನ ಪುಟ್ಟ ಕಂದನನ್ನ ಒಬ್ಬ ಸ್ತ್ರೀ ಮರಿತಾಳಾ?
ಅವಳು ಮರೆತ್ರೂ ನಾನು ನಿನ್ನನ್ನ ಯಾವತ್ತೂ ಮರಿಯಲ್ಲ.+
16 ಇಗೋ! ನಾನು ನಿನ್ನ ಹೆಸ್ರನ್ನ ನನ್ನ ಅಂಗೈಗಳಲ್ಲಿ ಕೆತ್ತಿದ್ದೀನಿ.
ನಿನ್ನ ಪೌಳಿಗೋಡೆಗಳು ಯಾವಾಗ್ಲೂ ನನ್ನ ಎದುರೇ ಇರ್ತವೆ.
17 ನಿನ್ನ ಗಂಡುಮಕ್ಕಳು ಬೇಗಬೇಗ ವಾಪಸ್ ಬರ್ತಿದ್ದಾರೆ.
ನಿನ್ನನ್ನ ಕೆಡವಿ ನಾಶಮಾಡಿರುವವರು ನಿನ್ನ ಹತ್ರದಿಂದ ಹೊರಟು ಹೋಗ್ತಾರೆ.
18 ನಿನ್ನ ಕಣ್ಣೆತ್ತಿ ಸುತ್ತ ನೋಡು.
ಅವ್ರೆಲ್ಲ ಒಟ್ಟಾಗಿ ಸೇರಿಬರ್ತಿದ್ದಾರೆ.+
ನಿನ್ನ ಹತ್ರ ಬರ್ತಿದ್ದಾರೆ.
ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಜೀವದಾಣೆ,
ಆಭರಣಗಳನ್ನ ಹಾಕೋ ಹಾಗೆ ನೀನು ಅವ್ರನ್ನೆಲ್ಲ ಹಾಕ್ತೀಯ,
ಮದುಮಗಳು ಒಡ್ಯಾಣ ತೊಟ್ಕೊಳ್ಳೋ ಹಾಗೆ ನೀನು ಅವ್ರನ್ನ ತೊಟ್ಕೊಳ್ತೀಯ.
19 ನಿನ್ನ ಸ್ಥಳಗಳು ನಾಶವಾಗಿ ಹೋಗಿದ್ರೂ, ನಿರ್ಜನವಾಗಿದ್ರೂ, ನಿನ್ನ ದೇಶ ಹಾಳುದಿಬ್ಬವಾಗಿ ಬದಲಾಗಿದ್ರೂ,+
ಈಗ ಅಲ್ಲಿರೋ ನಿವಾಸಿಗಳಿಗೆ ಅದು ಇಕ್ಕಟ್ಟಾಗುತ್ತೆ.+
ನಿನ್ನನ್ನ ನುಂಗಿಹಾಕಿದವರು+ ತುಂಬ ದೂರ ಹೋಗ್ತಾರೆ.+
20 ನೀನು ಪುತ್ರಶೋಕದಲ್ಲಿ ಇರುವಾಗ ನಿನಗೆ ಹುಟ್ಟಿದ ಮಕ್ಕಳು ನೀನು ಕೇಳಿಸ್ಕೊಳ್ಳೋ ಹಾಗೆ ಈ ಮಾತುಗಳನ್ನಾಡ್ತಾರೆ:
‘ಈ ಸ್ಥಳ ನಮಗೆ ತುಂಬಾ ಇಕ್ಕಟ್ಟಾಗಿದೆ.
ನಮ್ಮ ವಾಸಕ್ಕಾಗಿ ಇನ್ನೂ ಸ್ವಲ್ಪ ಸ್ಥಳ ಮಾಡ್ಕೊಡು.’+
21 ಆಗ ನೀನು ನಿನ್ನ ಹೃದಯದಲ್ಲಿ ಹೀಗೆ ಅಂದ್ಕೊಳ್ತೀಯ
‘ನಾನು ಪುತ್ರಶೋಕದಲ್ಲಿದ್ದೆ, ಬಂಜೆಯಾಗಿದ್ದೆ,
ಕೈದಿಯಾಗಿ ಬಂಧಿವಾಸದಲ್ಲಿದ್ದೆ,
ಅಂಥದ್ರಲ್ಲಿ ನನಗೆ ಕೊಟ್ಟ ಈ ಮಕ್ಕಳ ತಂದೆ ಯಾರು?
ಇವ್ರನ್ನ ಬೆಳೆಸಿದವರು ಯಾರು?+
22 ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ
“ನೋಡು! ನಾನು ನನ್ನ ಕೈಗಳನ್ನ ಎತ್ತಿ ಜನಾಂಗಗಳಿಗೆ ಸೂಚನೆ ಕೊಡ್ತೀನಿ,
ಆಗ ಅವರು ನಿನ್ನ ಗಂಡು ಮಕ್ಕಳನ್ನ ಕಂಕುಳಲ್ಲಿ* ಎತ್ಕೊಂಡು ಬರ್ತಾರೆ,
ನಿನ್ನ ಹೆಣ್ಣು ಮಕ್ಕಳನ್ನ ಭುಜದ ಮೇಲೆ ಹೊತ್ಕೊಂಡು ಬರ್ತಾರೆ.+
ಅವರು ತಮ್ಮ ತಲೆ ಬಗ್ಗಿಸಿ ನಿನಗೆ ನಮಸ್ಕಾರ ಮಾಡ್ತಾರೆ,+
ನಿನ್ನ ಪಾದದ ಧೂಳನ್ನ ನೆಕ್ತಾರೆ,+
ಆಗ ನಾನೇ ಯೆಹೋವ ಅಂತ ನೀನು ಒಪ್ಕೊಳ್ಳಲೇಬೇಕು.
ನನ್ನಲ್ಲಿ ನಿರೀಕ್ಷೆ ಇಡುವವರು ಅವಮಾನಕ್ಕೆ ಗುರಿಯಾಗಲ್ಲ.”+
24 ಬಲಿಷ್ಠ ವ್ಯಕ್ತಿಯೊಬ್ಬನ ಹಿಡಿತದಲ್ಲಿ ಇರುವವ್ರನ್ನ ಬಿಡಿಸ್ಕೊಳ್ಳೋಕಾಗುತ್ತಾ?
ನಿರಂಕುಶ ಅಧಿಕಾರಿಗಳ ಸೆರೆಯಲ್ಲಿ ಇರುವವ್ರನ್ನ ಸಂರಕ್ಷಿಸೋಕಾಗುತ್ತಾ?
25 ಆದ್ರೆ ಯೆಹೋವ ಹೀಗೆ ಹೇಳ್ತಿದ್ದಾನೆ
“ಬಲಿಷ್ಠ ವ್ಯಕ್ತಿಯೊಬ್ಬನ ಹಿಡಿತದಲ್ಲಿ ಇರುವವ್ರನ್ನ ಸಹ ಬಿಡಿಸ್ಕೊಳ್ಳಲಾಗುತ್ತೆ.+
ನಿರಂಕುಶ ಅಧಿಕಾರಿಗಳ ಸೆರೆಯಲ್ಲಿ ಇರುವವ್ರನ್ನ ಸಹ ಸಂರಕ್ಷಿಸಲಾಗುತ್ತೆ.+
ನಿನ್ನನ್ನ ವಿರೋಧಿಸುವವ್ರನ್ನ ನಾನು ವಿರೋಧಿಸ್ತೀನಿ,+
ನಾನು ನಿನ್ನ ಗಂಡು ಮಕ್ಕಳನ್ನ ಕಾಪಾಡ್ತೀನಿ.
26 ನಿನ್ನನ್ನ ಅಯೋಗ್ಯವಾಗಿ ನಡೆಸ್ಕೊಳ್ಳುವವರು ತಮ್ಮ ಮಾಂಸವನ್ನ ತಾವೇ ತಿನ್ನೋ ಹಾಗೆ ನಾನು ಮಾಡ್ತೀನಿ,
ಸಿಹಿ ದ್ರಾಕ್ಷಾಮದ್ಯದ ಹಾಗೆ ಅವರು ತಮ್ಮ ರಕ್ತವನ್ನ ತಾವೇ ಕುಡಿದು ಮತ್ತರಾಗ್ತಾರೆ.