ಯೆಶಾಯ
64 ಆಕಾಶವನ್ನ ಸೀಳಿ ನೀನು ಕೆಳಗಿಳಿದು ಬಂದ್ರೆ,
ಬೆಟ್ಟಗಳು ನಿನ್ನ ಮುಂದೆ ಕಂಪಿಸೋ ತರ ಮಾಡಿದ್ರೆ,
2 ಅದು, ಅಗ್ನಿ ಕುರುಚಲು ಗಿಡಗಳನ್ನ ಸುಡೋ ತರ ಇರುತ್ತೆ,
ಬೆಂಕಿಯು ನೀರನ್ನ ಕುದಿಯೋ ಹಾಗೆ ಮಾಡೋ ತರ ಇರುತ್ತೆ.
ಆಗ ನಿನ್ನ ಶತ್ರುಗಳಿಗೆ ನಿನ್ನ ಹೆಸ್ರು ತಿಳಿದುಬರುತ್ತೆ,
ಜನಾಂಗಗಳು ನಿನ್ನ ಮುಂದೆ ನಡುಗ್ತವೆ!
3 ನಾವು ನಿರೀಕ್ಷಿಸೋಕೆ ಸಹ ಭಯಪಡುವಂಥ ಭಯವಿಸ್ಮಯಕಾರಿ ವಿಷ್ಯಗಳನ್ನ ನೀನು ಮಾಡಿದೆ,+
ನೀನು ಕೆಳಗಿಳಿದು ಬಂದೆ, ನಿನ್ನ ಮುಂದೆ ಬೆಟ್ಟಗಳು ಕಂಪಿಸಿದವು.+
4 ತನ್ನನ್ನ ಕಾತುರದಿಂದ ಕಾದಿರುವವರ* ಪರವಾಗಿ ಕ್ರಿಯೆಗೈಯೋ
ನಿನ್ನಂಥ ದೇವರು ಮತ್ತೊಬ್ಬನಿದ್ದಾನೆ ಅಂತ ಹಿಂದಿನ ಕಾಲದಿಂದನೂ
ಯಾರೂ ಕೇಳಿಸ್ಕೊಂಡಿಲ್ಲ, ಯಾರೂ ಗಮನಿಸಿಲ್ಲ, ಯಾರೂ ನೋಡಿಲ್ಲ.+
5 ನಿನ್ನನ್ನ ನೆನಪಲ್ಲಿಟ್ಕೊಂಡು, ನಿನ್ನ ಮಾರ್ಗಗಳನ್ನ ಅನುಸರಿಸ್ತಾ,
ಸಂತೋಷದಿಂದ ಒಳ್ಳೇ ಕೆಲಸವನ್ನ ಮಾಡುವವರ ಸಹಾಯಕ್ಕಾಗಿ ನೀನು ಬಂದೆ.+
ಆದ್ರೆ ನಿನಗೆ ನಮ್ಮ ಮೇಲೆ ಕೋಪ ಬಂತು. ಯಾಕಂದ್ರೆ ನಾವು ಪಾಪ ಮಾಡ್ತಾ ಬಂದ್ವಿ,+
ತುಂಬ ಸಮ್ಯದಿಂದ ಅದ್ರಲ್ಲೇ ಮುಳುಗಿ ಹೋಗಿದ್ವಿ.
ಹೀಗಿರುವಾಗ ರಕ್ಷಣೆಯನ್ನ ಪಡೆಯೋಕೆ ನಾವು ಅರ್ಹರಾ?
ನಾವೆಲ್ಲ ಎಲೆಗಳ ತರ ಒಣಗಿ ಹೋಗ್ತೀವಿ,
ನಮ್ಮ ತಪ್ಪುಗಳು ಗಾಳಿ ತರ ನಮ್ಮನ್ನ ಹೊಡ್ಕೊಂಡು ಹೋಗ್ತವೆ.
7 ನಿನ್ನ ಹೆಸ್ರನ್ನೆತ್ತಿ ಪ್ರಾರ್ಥಿಸುವವರು ಯಾರೂ ಇಲ್ಲ,
ನಿನ್ನನ್ನು ಗಟ್ಟಿಯಾಗಿ ಹಿಡ್ಕೊಳ್ಳೋಕೆ ಯಾರೂ ಹಂಬಲಿಸ್ತಿಲ್ಲ,
ಯಾಕಂದ್ರೆ ನೀನು ನಮ್ಮಿಂದ ನಿನ್ನ ಮುಖವನ್ನ ಮರೆಮಾಡ್ಕೊಂಡೆ,+
ನಮ್ಮ ತಪ್ಪುಗಳಿಂದಾಗಿ ನಾವು ಸೊರಗಿ ಸಾಯೋ ಸ್ಥಿತಿಗೆ ಬರೋ ತರ* ಮಾಡಿದೆ.
8 ಆದ್ರೂ ಯೆಹೋವನೇ, ನೀನು ನಮ್ಮ ತಂದೆ.+
ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರ.*+
ನಾವೆಲ್ಲ ನಿನ್ನ ಕೈಕೆಲಸವಾಗಿದ್ದೀವಿ.
ದಯವಿಟ್ಟು ನಮ್ಮ ಕಡೆ ನೋಡು, ನಾವೆಲ್ಲ ನಿನ್ನ ಜನ್ರಲ್ವಾ.
10 ನಿನ್ನ ಪವಿತ್ರ ಪಟ್ಟಣಗಳು ಕಾಡು ಪ್ರದೇಶವಾಗಿವೆ.
ಚೀಯೋನ್ ಮರುಳುಗಾಡಾಗಿದೆ,
ಯೆರೂಸಲೇಮ್ ಪಾಳುಬಿದ್ದಿದೆ.+
11 ನಮ್ಮ ಪೂರ್ವಜರು ನಿನ್ನನ್ನ ಸ್ತುತಿಸ್ತಿದ್ದ
ನಮ್ಮ ಆ ಪವಿತ್ರ, ವೈಭವಯುತ* ಆಲಯವನ್ನ
ಬೆಂಕಿಯಿಂದ ಸುಡಲಾಗಿದೆ,+
ನಾವು ಇಷ್ಟಪಟ್ಟ ಎಲ್ಲ ವಸ್ತುಗಳು ಈಗ ಹಾಳಾಗಿ ಹೋಗಿವೆ.
12 ಯೆಹೋವನೇ, ಇದನ್ನೆಲ್ಲ ನೋಡಿನೂ ನೀನು ನಮಗೆ ಸಹಾಯ ಮಾಡೋಕೆ ನಿರಾಕರಿಸ್ತಾ ಇರ್ತಿಯಾ?
ತೀವ್ರ ಕಷ್ಟಗಳನ್ನ ನಾವು ಅನುಭವಿಸ್ತಿರೋವಾಗ ನೀನು ಮೌನವಾಗಿ ಇರ್ತಿಯಾ?+