ಒಂದನೇ ಪೂರ್ವಕಾಲವೃತ್ತಾಂತ
23 ದಾವೀದನಿಗೆ ತುಂಬ ವಯಸ್ಸಾಗಿತ್ತು, ಸಾವು ಹತ್ರ ಇತ್ತು. ಆಗ ತನ್ನ ಮಗ ಸೊಲೊಮೋನನನ್ನ ಇಸ್ರಾಯೇಲಿನ ರಾಜನಾಗಿ ಮಾಡಿದ.+ 2 ಆಮೇಲೆ ಅವನು ಇಸ್ರಾಯೇಲಿನ ಎಲ್ಲ ಮುಖ್ಯಸ್ಥರನ್ನ, ಪುರೋಹಿತರನ್ನ,+ ಲೇವಿಯರನ್ನ+ ಸೇರಿಸಿದ. 3 ಲೇವಿಯರಲ್ಲಿ 30 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನವರ ಲೆಕ್ಕ ತಗೊಂಡ್ರು.+ ಆ ಎಲ್ಲ ಗಂಡಸರ ಒಟ್ಟು ಸಂಖ್ಯೆ 38,000. 4 ಇವ್ರಲ್ಲಿ 24,000 ಗಂಡಸ್ರು ಯೆಹೋವನ ಆಲಯ ಕೆಲಸವನ್ನ ಮೇಲ್ವಿಚಾರಣೆ ಮಾಡ್ತಿದ್ರು. 6,000 ಅಧಿಕಾರಿಗಳು, ನ್ಯಾಯಧೀಶರು ಇದ್ರು.+ 5 4,000 ಬಾಗಿಲು ಕಾಯವವರು ಇದ್ರು.+ 4,000 ಜನ ಸಂಗೀತ ಉಪಕರಣಗಳನ್ನ ಬಳಸಿ ಯೆಹೋವನನ್ನ ಹಾಡಿಹೊಗಳ್ತಾ ಇದ್ರು.+ ಆ ಉಪಕರಣಗಳ ಬಗ್ಗೆ ದಾವೀದ “ದೇವರನ್ನ ಹಾಡಿಹೊಗಳೋಕೆ ನಾನು ಇವುಗಳನ್ನ ಮಾಡಿಸಿದ್ದೀನಿ” ಅಂದ.
6 ಆಮೇಲೆ ದಾವೀದ ಅವ್ರನ್ನ ಲೇವಿಯರ ಗಂಡು ಮಕ್ಕಳಾದ ಗೇರ್ಷೋನ್, ಕೆಹಾತ್, ಮೆರಾರೀಯರ+ ವಂಶಗಳ ಪ್ರಕಾರ ಬೇರೆ ಬೇರೆ ದಳಗಳನ್ನ ಮಾಡಿದ.*+ 7 ಗೇರ್ಷೋನ್ಯರಲ್ಲಿ ಲದ್ದಾನ್, ಶಿಮ್ಮಿ. 8 ಲದ್ದಾನನಿಗೆ ಮೂರು ಗಂಡು ಮಕ್ಕಳು. ಅವರು ಯೆಹೀಯೇಲ್, ಜೇತಾಮ್, ಯೋವೇಲ್.+ ಯೆಹೀಯೇಲ್ ಪ್ರಧಾನನಾಗಿದ್ದ. 9 ಶಿಮ್ಮಿಗೆ ಮೂರು ಗಂಡು ಮಕ್ಕಳು. ಅವರು ಶೆಲೋಮೋತ್, ಹಜೀಯೇಲ್, ಹಾರಾನ್. ಇವರು ಲದ್ದಾನನ ಕುಲದ ಮುಖ್ಯಸ್ಥರು. 10 ಶಿಮ್ಮಿಗೆ ನಾಲ್ಕು ಗಂಡು ಮಕ್ಕಳು ಯಹತ್, ಜೀನ, ಯೆಗೂಷ್, ಬೆರೀಯ. 11 ಯಹತ ಮುಖ್ಯಸ್ಥನಾಗಿದ್ದ. ಜೀಜಾ ಎರಡನೆಯವ. ಆದ್ರೆ ಯೆಗೂಷನಿಗೆ, ಬೆರೀಯನಿಗೆ ಹೆಚ್ಚು ಗಂಡು ಮಕ್ಕಳು ಇಲ್ಲದ ಕಾರಣ ಅವರಿಬ್ರನ್ನ ಸೇರಿಸಿ ಒಂದೇ ಮನೆತನ ಅಂತ ಲೆಕ್ಕಮಾಡಿ, ಅವ್ರಿಗೆ ಒಂದೇ ಜವಾಬ್ದಾರಿ ಕೊಟ್ರು.
12 ಕೆಹಾತನಿಗೆ ನಾಲ್ಕು ಗಂಡು ಮಕ್ಕಳು ಅಮ್ರಾಮ್, ಇಚ್ಹಾರ್,+ ಹೆಬ್ರೋನ್, ಉಜ್ಜೀಯೇಲ್.+ 13 ಅಮ್ರಾಮನ ಗಂಡು ಮಕ್ಕಳು ಆರೋನ,+ ಮೋಶೆ.+ ಆದ್ರೆ ಅತಿ ಪವಿತ್ರ ಸ್ಥಳವನ್ನ ಪವಿತ್ರ ಮಾಡೋಕೆ, ಯೆಹೋವನ ಮುಂದೆ ಬಲಿ ಅರ್ಪಿಸೋಕೆ, ಆತನ ಸೇವೆ ಮಾಡೋಕೆ, ಆತನ ಹೆಸ್ರಲ್ಲಿ ಯಾವಾಗ್ಲೂ ಜನ್ರನ್ನ ಆಶೀರ್ವದಿಸೋಕೆ+ ಆರೋನ, ಅವನ ಗಂಡು ಮಕ್ಕಳು ಮೀಸಲಾಗಿದ್ರು.+ 14 ಸತ್ಯ ದೇವರ ಮನುಷ್ಯನಾದ ಮೋಶೆಯ ಗಂಡು ಮಕ್ಕಳನ್ನ ಲೇವಿ ಕುಲದ ಭಾಗವಾಗಿ ಲೆಕ್ಕಮಾಡಿದ್ರು. 15 ಗೇರ್ಷೋಮ್,+ ಎಲೀಯೆಜರ್+ ಮೋಶೆ ಗಂಡು ಮಕ್ಕಳು. 16 ಗೇರ್ಷೋಮನ ಗಂಡು ಮಕ್ಕಳಲ್ಲಿ ಶೆಬೂವೇಲ್+ ಮುಖ್ಯಸ್ಥನಾಗಿದ್ದ. 17 ಎಲೀಯೆಜರನ ವಂಶಜರಲ್ಲಿ* ರೆಹಬ್ಯ+ ಮುಖ್ಯಸ್ಥನಾಗಿದ್ದ. ಎಲೀಯೆಜರನಿಗೆ ಬೇರೆ ಗಂಡು ಮಕ್ಕಳು ಇರಲಿಲ್ಲ. ಆದ್ರೆ ರೆಹಬ್ಯನಿಗೆ ತುಂಬ ಗಂಡು ಮಕ್ಕಳು ಇದ್ರು. 18 ಇಚ್ಹಾರನ+ ಗಂಡು ಮಕ್ಕಳಲ್ಲಿ ಶೆಲೋಮೀತ್+ ಮುಖ್ಯಸ್ಥನಾಗಿದ್ದ. 19 ಹೆಬ್ರೋನನ ಗಂಡು ಮಕ್ಕಳಲ್ಲಿ ಯೆರೀಯ ಮುಖ್ಯಸ್ಥನಾಗಿದ್ದ. ಅಮರ್ಯ ಎರಡನೆಯವ, ಯಹಜೀಯೇಲ ಮೂರನೆಯವ, ಯೆಕಮ್ಮಾಮ್+ ನಾಲ್ಕನೆಯವ. 20 ಉಜ್ಜೀಯೇಲನ ಗಂಡು ಮಕ್ಕಳಲ್ಲಿ+ ಮೀಕ ಮುಖ್ಯಸ್ಥನಾಗಿದ್ದ. ಇಷ್ಷೀಯ ಎರಡನೆಯವ.
21 ಮೆರಾರೀಯ ಗಂಡು ಮಕ್ಕಳು ಮಹ್ಲಿ, ಮೂಷಿ.+ ಮಹ್ಲಿಯ ಗಂಡು ಮಕ್ಕಳು ಎಲ್ಲಾಜಾರ್, ಕೀಷ. 22 ಎಲ್ಲಾಜಾರ ತೀರಿಹೋದ. ಅವನಿಗೆ ಬರೀ ಹೆಣ್ಣುಮಕ್ಕಳು ಇದ್ರು, ಗಂಡು ಮಕ್ಕಳು ಇರ್ಲಿಲ್ಲ. ಹಾಗಾಗಿ ಅವರ ಸಂಬಂಧಿಕರಾದ* ಕೀಷನ ಗಂಡು ಮಕ್ಕಳು ಅವರನ್ನ ಮದುವೆ ಮಾಡ್ಕೊಂಡ್ರು. 23 ಮೂಷಿಗೆ ಮೂರು ಗಂಡು ಮಕ್ಕಳು. ಅವರು ಮಹ್ಲಿ, ಏದೆರ್, ಯೆರೇಮೋತ್.
24 ಇವ್ರೆಲ್ಲ ಲೇವಿ ವಂಶದವರಾಗಿದ್ರು. ಇವ್ರ ಹೆಸ್ರುಗಳನ್ನ ಕುಲಗಳ ಪ್ರಕಾರ, ಕುಲಗಳ ಮುಖ್ಯಸ್ಥರ ಪ್ರಕಾರ ಲೆಕ್ಕ ಮಾಡಿ ಪಟ್ಟಿ ಮಾಡಿದ್ರು. ಇವರು ಯೆಹೋವನ ಆಲಯದಲ್ಲಿ ಸೇವೆ ಮಾಡ್ತಾ ಅಲ್ಲಿನ ಕೆಲಸಗಳನ್ನ ಮಾಡ್ತಿದ್ರು. ಇವ್ರೆಲ್ಲ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನವರಾಗಿದ್ರು. 25 ದಾವೀದ “ಇಸ್ರಾಯೇಲ್ ದೇವರಾದ ಯೆಹೋವ ತನ್ನ ಜನ್ರಿಗೆ ವಿಶ್ರಾಂತಿ ಕೊಟ್ಟಿದ್ದಾನೆ.+ ಆತನು ಯೆರೂಸಲೇಮಲ್ಲಿ ಶಾಶ್ವತವಾಗಿ ಇರ್ತಾನೆ.+ 26 ಹಾಗಾಗಿ ಇನ್ನು ಮುಂದೆ ಲೇವಿಯರು ಪವಿತ್ರ ಡೇರೆಯನ್ನಾಗಲಿ, ಆರಾಧನೆಗಾಗಿ ಉಪಯೋಗಿಸ್ತಿದ್ದ ಯಾವುದೇ ಉಪಕರಣಗಳನ್ನಾಗಲಿ ಹೊರಬೇಕಾಗಿಲ್ಲ”+ ಅಂದ. 27 ದಾವೀದನ ಕೊನೆ ನಿರ್ದೇಶನದ ಪ್ರಕಾರ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಲೆಕ್ಕ ಮಾಡಿದ್ರು. 28 ಯೆಹೋವನ ಆಲಯದ ಸೇವೆಯಲ್ಲಿ ಆರೋನನ ಗಂಡು ಮಕ್ಕಳಿಗೆ ಸಹಾಯ ಮಾಡೋದು ಅವರ ಕೆಲಸ ಆಗಿತ್ತು.+ ಅಂಗಳಗಳನ್ನ,+ ಊಟದ ಕೋಣೆಗಳನ್ನ ನೋಡ್ಕೊಳ್ಳೋ, ಪ್ರತಿಯೊಂದು ಪವಿತ್ರ ವಸ್ತುಗಳನ್ನ ಶುದ್ಧೀಕರಿಸೋ, ಸತ್ಯ ದೇವರ ಆಲಯದಲ್ಲಿ ಯಾವುದೇ ಕೆಲಸ ಇದ್ರೂ ಅದನ್ನ ಮಾಡೋ ಜವಾಬ್ದಾರಿ ಅವ್ರಿಗೆ ಇತ್ತು. 29 ಅರ್ಪಣೆಯ ರೊಟ್ಟಿ,+ ಧಾನ್ಯ ಅರ್ಪಣೆಗಾಗಿ ನುಣ್ಣಗಿನ ಹಿಟ್ಟು, ಹುಳಿ ಇಲ್ಲದ ತೆಳುವಾದ ರೊಟ್ಟಿ,+ ಹೆಂಚಲ್ಲಿ ಸುಟ್ಟ ರೊಟ್ಟಿ, ಎಣ್ಣೆ ಮಿಶ್ರಿತ ಹಿಟ್ಟನ್ನ+ ಮಾಡೋಕೆ ಅವರು ಸಹಾಯ ಮಾಡ್ತಿದ್ರು. ಅಳತೆ ಮಾಡೋ, ತೂಕ ನೋಡೋ ಕೆಲಸದಲ್ಲಿ ಕೂಡ ನೆರವಾದ್ರು. 30 ಪ್ರತಿದಿನ ಬೆಳಿಗ್ಗೆ,+ ಸಾಯಂಕಾಲ ಎದ್ದು ಯೆಹೋವನಿಗೆ ಧನ್ಯವಾದ ಹೇಳ್ತಿದ್ರು, ಹೊಗಳ್ತಿದ್ರು.+ 31 ಸಬ್ಬತ್,+ ಅಮಾವಾಸ್ಯೆ,+ ಹಬ್ಬದ ಸಂದರ್ಭಗಳಲ್ಲಿ+ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಅವರು ಸಹಾಯ ಮಾಡ್ತಿದ್ರು. ಅವ್ರ ಬಗ್ಗೆ ಇದ್ದ ನಿಯಮದ ಪ್ರಕಾರ ಎಷ್ಟು ಜನ್ರ ಅಗತ್ಯ ಇತ್ತೋ ಅಷ್ಟು ಜನ ತಪ್ಪದೇ ಯೆಹೋವನ ಮುಂದೆ ಸೇವೆ ಮಾಡ್ತಿದ್ರು. 32 ದೇವದರ್ಶನದ ಡೇರೆ ಅಂದ್ರೆ ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳನ್ನ ಅವರು ಮಾಡ್ತಿದ್ರು. ತಮ್ಮ ಸಹೋದರರಾದ ಆರೋನನ ಗಂಡು ಮಕ್ಕಳಿಗೆ ಅವರು ಸಹಾಯ ಮಾಡ್ತಿದ್ರು. ಲೇವಿಯರಿಗೆ ಯೆಹೋವನ ಆಲಯದಲ್ಲಿ ಇಷ್ಟು ಜವಾಬ್ದಾರಿ ಇತ್ತು.