ಯೆಶಾಯ
2 ಬಡವ್ರಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕನ್ನ ಕೊಡೋಕೆ ಒಪ್ಪದವರ,
ನನ್ನ ಜನ್ರಲ್ಲಿರೋ ದೀನರಿಗೆ ನ್ಯಾಯ ಸಿಗದ ಹಾಗೆ ಮಾಡುವವರ,+
ವಿಧವೆಯರ ಆಸ್ತಿ ನುಂಗಿ, ತಂದೆಯಿಲ್ಲದ ಮಕ್ಕಳನ್ನ* ಕೊಳ್ಳೆ ಹೊಡೆಯುವವರ+ ಗತಿಯನ್ನ ಏನು ಹೇಳಲಿ.
3 ನಿಮ್ಮ ಹತ್ರ ಲೆಕ್ಕ ಕೇಳೋ* ದಿನ ನೀವು ಏನು ಮಾಡ್ತೀರ?+
ದೂರದಿಂದ ನಿಮ್ಮ ಮೇಲೆ ನಾಶನ ಬರುವಾಗ ಏನು ಮಾಡ್ತೀರ?+
ಸಹಾಯಕ್ಕಾಗಿ ಯಾರ ಹತ್ರ ಓಡಿ ಹೋಗ್ತೀರ?+
ನಿಮ್ಮ ಆಸ್ತಿಪಾಸ್ತಿ* ಎಲ್ಲಿ ಬಿಟ್ಟು ಹೋಗ್ತೀರ?
4 ಒಂದೋ ನೀವು ಜೈಲಲ್ಲಿ ಇರುವವರ ಮಧ್ಯ ಬಚ್ಚಿಟ್ಕೊಬೇಕು,
ಇಲ್ಲಾಂದ್ರೆ ಕೊಲೆಯಾಗಿರುವವರ ಮಧ್ಯ ಸತ್ತು ಬೀಳಬೇಕು. ಇದನ್ನ ಬಿಟ್ಟು ನಿಮಗೆ ಬೇರೆ ದಾರಿನೇ ಇಲ್ಲ.
ಇಷ್ಟೆಲ್ಲ ಆದ್ರೂ ಆತನ ಕೋಪ ತಣ್ಣಗಾಗಲ್ಲ,
ಅವ್ರನ್ನ ಶಿಕ್ಷಿಸೋಕೆ ಆತನು ತನ್ನ ಕೈ ಎತ್ತುತ್ತಾನೆ.+
5 ಆತನು ಹೀಗೆ ಹೇಳ್ತಾನೆ “ಅಲ್ಲಿ ನೋಡಿ ಅಶ್ಶೂರ್!*+
ಅದು ನನ್ನ ಕೋಪ ತೋರಿಸೋಕೆ ನಾನು ಬಳಸೋ ಕೋಲು.+
ಅದ್ರ ಕೈಯಲ್ಲಿರೋ ಕೋಲನ್ನ ಬಳಸಿ ನಾನು ಶಿಕ್ಷೆ ಕೊಡ್ತೀನಿ!
ತುಂಬ ಆಸ್ತಿ ಮತ್ತು ಕೊಳ್ಳೆಯನ್ನ ತಗೊಂಡು ಹೋಗೋಕೆ
ಬೀದಿಗಳಲ್ಲಿನ ಮಣ್ಣನ್ನ ತುಳಿಯೋ ಹಾಗೆ ಅವ್ರನ್ನ ತುಳಿಯೋಕೆ ನಾನು ಅದಕ್ಕೆ ಆಜ್ಞೆ ಕೊಡ್ತೀನಿ.+
7 ಆದ್ರೆ ಅದ್ರ ಮನಸ್ಸು ಬೇರೊಂದು ವಿಷ್ಯದ ಕಡೆಗಿರುತ್ತೆ
ಅದ್ರ ಹೃದಯದ ಉದ್ದೇಶ ಬೇರೆನೇ ಆಗಿರುತ್ತೆ.
ಸ್ವಲ್ಪ ಜನಾಂಗಗಳನ್ನಲ್ಲ ತುಂಬ ಜನಾಂಗಗಳನ್ನ ನಾಶ ಮಾಡಿ,
ಅವುಗಳನ್ನ ಅಳಿಸಿ ಹಾಕಬೇಕನ್ನೋದೇ ಅದ್ರ ಹೃದಯದ ಬಯಕೆ.
9 ಕರ್ಕೆಮೀಷಿನ+ ತರ ಕಲ್ನೋ+ ಅಲ್ವಾ?
10 ಕೆಲಸಕ್ಕೆ ಬಾರದ ದೇವರುಗಳ ರಾಜ್ಯಗಳನ್ನ ನನ್ನ ಕೈ ಜಪ್ತಿ ಮಾಡ್ತು,
ಯೆರೂಸಲೇಮಲ್ಲಿ ಮತ್ತು ಸಮಾರ್ಯದಲ್ಲಿ ಇರೋದಕ್ಕಿಂತ ಹೆಚ್ಚು ಕೆತ್ತಿದ ಮೂರ್ತಿಗಳು ಅವುಗಳಲ್ಲಿ ಇವೆ!+
12 “ಚೀಯೋನ್ ಬೆಟ್ಟದಲ್ಲಿ ಮತ್ತು ಯೆರೂಸಲೇಮಲ್ಲಿ ಯೆಹೋವ ತನ್ನ ಕೆಲಸಗಳನ್ನೆಲ್ಲ ಮಾಡಿಮುಗಿಸ್ತಾನೆ. ಆತನು* ಅಶ್ಶೂರ್ಯರ ರಾಜನನ್ನ ಶಿಕ್ಷಿಸ್ತಾನೆ. ಆ ರಾಜನಿಗೆ ಸೊಕ್ಕಿನ ಹೃದಯ, ಹೆಮ್ಮೆ ಮತ್ತು ದುರಹಂಕಾರದ ನೋಟ ಇರೋದ್ರಿಂದ ಹಾಗೆ ಮಾಡ್ತಾನೆ.+ 13 ಯಾಕಂದ್ರೆ ಅಶ್ಶೂರ್ಯರ ರಾಜ ಹೀಗೆ ಹೇಳ್ತಾನೆ
‘ನಾನು ವಿವೇಕಿ ಆಗಿರೋದ್ರಿಂದ ನಾನು ನನ್ನ ಸ್ವಂತ ಬಲದ
ಮತ್ತು ವಿವೇಕದ ಮೂಲಕ ಇದನ್ನ ಮಾಡ್ತೀನಿ.
ನಾನು ದೇಶಗಳ ಗಡಿಗಳನ್ನ ಕಿತ್ತು,+
ಅವುಗಳ ಸಂಪತ್ತನ್ನ ಸೂರೆ ಮಾಡ್ತೀನಿ,+
ಒಬ್ಬ ಬಲಿಷ್ಠನ ತರ ಅಲ್ಲಿನ ಜನ್ರನ್ನ ವಶಮಾಡ್ಕೊಳ್ತೀನಿ.+
14 ಒಬ್ಬ ವ್ಯಕ್ತಿ ಪಕ್ಷಿಯ ಗೂಡಿಗೆ ಕೈಹಾಕೋ ತರ
ನಾನು ಜನಾಂಗಗಳ ಜನ್ರ ಆಸ್ತಿಪಾಸ್ತಿಗೆ ಕೈಹಾಕ್ತೀನಿ.
ಬಿಟ್ಟುಹೋಗಿರೋ ಮೊಟ್ಟೆಗಳನ್ನ ಒಬ್ಬನು ಕೂಡಿಸ್ಕೊಳ್ಳೋ ತರ
ನಾನು ಇಡೀ ಭೂಮಿಯನ್ನ ಕೂಡಿಸ್ಕೊಳ್ತೀನಿ!
ಯಾರು ಸಹ ತಮ್ಮ ರೆಕ್ಕೆ ಬಡಿಯಲ್ಲ, ಬಾಯಿ ಬಿಚ್ಚಲ್ಲ, ಕಿಚಿಕಿಚಿ ಅನ್ನಲ್ಲ.’”
15 ಕೊಡಲಿ, ಕಡಿಯುವವನಿಗಿಂತ ತಾನೇ ದೊಡ್ಡವನು ಅಂತ ಅಂದ್ಕೊಳ್ಳುತ್ತಾ?
ಗರಗಸ, ಕೊಯ್ಯುವವನಿಗಿಂತ ತಾನೇ ದೊಡ್ಡವನು ಅಂತ ನೆನಸುತ್ತಾ?
ದೊಣ್ಣೆ,+ ಬೀಸುವವನನ್ನೇ ಅಲ್ಲಾಡಿಸೋಕಾಗುತ್ತಾ?
ಕೋಲು, ತನ್ನನ್ನ ಎತ್ತುವವನನ್ನೇ ಮೇಲಕ್ಕೆ ಎತ್ತೋಕಾಗುತ್ತಾ?
16 ಹಾಗಾಗಿ ನಿಜವಾದ ಒಡೆಯ, ಸೈನ್ಯಗಳ ದೇವರಾದ ಯೆಹೋವ
ತನ್ನ ದಷ್ಟಪುಷ್ಟ ಜನ್ರನ್ನ ಶಿಕ್ಷಿಸಿ ಅವರು ಸೊರಗಿ ಹೋಗೋ ತರ ಮಾಡ್ತಾನೆ,+
ಹೊತ್ತಿ ಉರಿತಿರೋ ಬೆಂಕಿಯಿಂದ ಆತನು ಅಶ್ಶೂರಿನ ಮಹಿಮೆಯನ್ನ ಸುಟ್ಟು ಭಸ್ಮ ಮಾಡ್ತಾನೆ.+
17 ಇಸ್ರಾಯೇಲ್ಯರ ಬೆಳಕು+ ಬೆಂಕಿಯಾಗುತ್ತೆ,+
ಅವ್ರ ಪವಿತ್ರನಾದ ದೇವರು ಜ್ವಾಲೆಯಾಗ್ತಾನೆ,
ಆ ಜ್ವಾಲೆ ಒಂದೇ ದಿನದಲ್ಲಿ ಅಶ್ಶೂರಿನ ಕಳೆಗಳನ್ನ ಮತ್ತು ಮುಳ್ಳುಪೊದೆಗಳನ್ನ ಸುಟ್ಟುಹಾಕುತ್ತೆ.
18 ದೇವರು ಅಶ್ಶೂರಿನ ಕಾಡು ಮತ್ತು ಹಣ್ಣಿನ ತೋಟದ ವೈಭವವನ್ನ ಮಣ್ಣುಪಾಲು ಮಾಡ್ತಾನೆ.
ಆ ವೈಭವ ಒಬ್ಬ ರೋಗಿ ತರ ಕ್ಷೀಣಿಸಿ ಹೋಗುತ್ತೆ.+
19 ಅದ್ರ ಕಾಡಲ್ಲಿ ಉಳಿಯೋ ಮರಗಳು
ಎಷ್ಟು ಕಡಿಮೆ ಇರುತ್ತಂದ್ರೆ ಒಂದು ಚಿಕ್ಕ ಮಗು ಅದನ್ನ ಎಣಿಸಿ ಸಂಖ್ಯೆಯನ್ನ ಬರೆದಿಡಬಹುದು.
20 ಆ ದಿನ ಇಸ್ರಾಯೇಲಲ್ಲಿ ಬದುಕಿ ಉಳಿಯುವವರು,
ಯಾಕೋಬನ ಮನೆತನದವರಲ್ಲಿ ತಪ್ಪಿಸ್ಕೊಳ್ಳುವವರು,
ತಮ್ಮ ಮೇಲೆ ದಾಳಿ ಮಾಡಿದವ್ರಿಗೆ ಮುಂದೆ ಯಾವತ್ತೂ ಬೆಂಬಲ ಕೊಡಲ್ಲ.+
ಅದ್ರ ಬದಲಿಗೆ ಅವರು ಇಸ್ರಾಯೇಲ್ಯರ ಪವಿತ್ರ ದೇವರಿಗೆ,
ಹೌದು, ಯೆಹೋವನಿಗೆ ನಂಬಿಗಸ್ತಿಕೆಯಿಂದ ಬೆಂಬಲ ಕೊಡ್ತಾರೆ.
21 ಬರೀ ಸ್ವಲ್ಪ ಜನ, ಯಾಕೋಬನ ವಂಶದವರಲ್ಲಿ ಉಳ್ಕೊಂಡಿರುವವರು ಮಾತ್ರ ಬಲಿಷ್ಠ ದೇವರ ಹತ್ರ ವಾಪಸ್ ಹೋಗ್ತಾರೆ.+
24 ಹಾಗಾಗಿ ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ “ಚೀಯೋನಿನ ನಿವಾಸಿಗಳೇ, ನನ್ನ ಜನ್ರೇ, ಈಜಿಪ್ಟಿನ ತರ+ ನಿಮ್ಮನ್ನ ಕೋಲಿಂದ ಹೊಡಿಯೋ,+ ನಿಮ್ಮ ವಿರುದ್ಧ ಕೋಲನ್ನ ಎತ್ತೋ ಅಶ್ಶೂರ್ಯರಿಗೆ ಹೆದರಬೇಡಿ. 25 ಯಾಕಂದ್ರೆ ಇನ್ನು ಸ್ವಲ್ಪ ಸಮಯದಲ್ಲೇ ನನ್ನ ಉಗ್ರ ಕೋಪ ತೀರುತ್ತೆ. ನನ್ನ ಕ್ರೋಧವನ್ನ ಅವ್ರ ಮೇಲೆ ತೋರಿಸಿ ನಾನು ಅವ್ರನ್ನ ನಾಶ ಮಾಡಿಬಿಡ್ತೀನಿ.+ 26 ಸೈನ್ಯಗಳ ದೇವರಾದ ಯೆಹೋವ ಓರೇಬ್ ಬಂಡೆ+ ಹತ್ರ ಮಿದ್ಯಾನ್ಯರನ್ನ ಸೋಲಿಸಿದಾಗ ಮಾಡಿದ ಹಾಗೇ ಅಶ್ಶೂರ್ಯರ ಮೇಲೆ ಕೊರಡೆಯನ್ನ ಬೀಸ್ತಾನೆ.+ ಆತನು ತನ್ನ ಕೋಲನ್ನ ಈಜಿಪ್ಟಿನ ವಿರುದ್ಧ ಎತ್ತಿದ ಹಾಗೆ ಸಮುದ್ರದ ಮೇಲೆ ಎತ್ತುತ್ತಾನೆ.+
27 ಆ ದಿನ ಅಶ್ಶೂರ್ಯರ ರಾಜನ ಹೊರೆಯನ್ನ ನಿನ್ನ ಭುಜದ ಮೇಲಿಂದ,+
ಅವನ ನೊಗವನ್ನ ನಿನ್ನ ಕುತ್ತಿಗೆ ಮೇಲಿಂದ ಎತ್ತಲಾಗುತ್ತೆ.+
ತೈಲದ ಕಾರಣದಿಂದ ನೊಗವನ್ನ ಮುರಿದು ಹಾಕಲಾಗುತ್ತೆ.+
28 ಅವನು ಅಯ್ಯಾಥಿನ+ ಮೇಲೆ ಆಕ್ರಮಣ ಮಾಡಿದ್ದಾನೆ,
ಮಿಗ್ರೋನನ್ನ ಹಾದು ಹೋಗಿ
ಮಿಕ್ಮಾಷಿನಲ್ಲಿ+ ತನ್ನ ಸಾಮಾನುಗಳನ್ನ ಇಟ್ಟಿದ್ದಾನೆ.
29 ಅವನು ನದಿ ತೀರವನ್ನ ಹಾದು
ಗೆಬದಲ್ಲಿ ರಾತ್ರಿ ಕಳೆದಿದ್ದಾನೆ,+
30 ಗಲ್ಲೀಮಿನ ಜನ್ರೇ, ಜೋರಾಗಿ ಅಳಿ, ಕಿರುಚಿ!
ಲಯೆಷೇ, ಗಮನಕೊಡು!
ಅನಾತೋತೇ,+ ಜೋರಾಗಿ ಅಳು!
31 ಮದ್ಮೇನ ಓಡಿಹೋಗಿದೆ.
ಗೇಬೀಮಿನ ಜನ ಆಶ್ರಯಕ್ಕಾಗಿ ಹುಡುಕಾಡಿದ್ದಾರೆ.
32 ಈ ದಿನ ಅವನು ನೋಬಿನಲ್ಲಿ+ ತಂಗುತ್ತಾನೆ.
ಚೀಯೋನಿನ ಮಗಳ ಬೆಟ್ಟದ ಕಡೆ,
ಯೆರೂಸಲೇಮಿನ ಬೆಟ್ಟದ ಕಡೆ ಮುಷ್ಟಿ ತೋರಿಸಿ* ಬೆದರಿಸ್ತಾನೆ.
33 ನೋಡಿ! ನಿಜವಾದ ಒಡೆಯನೂ ಸೈನ್ಯಗಳ ದೇವರೂ ಆದ ಯೆಹೋವ ಕೊಂಬೆಗಳನ್ನ ಭಯಂಕರ ಶಬ್ದದಿಂದ ಕಡಿದು ಹಾಕ್ತಿದ್ದಾನೆ.+
ಎತ್ರವಾದ ಮರಗಳನ್ನ ಕಡಿದು ಹಾಕಲಾಗ್ತಿದೆ,
ಎತ್ರವಾಗಿರೋದನ್ನ ನೆಲಸಮ ಮಾಡಲಾಗ್ತಿದೆ.
34 ಕಾಡಿನ ಪೊದೆಗಳನ್ನ ಆತನು ಕಬ್ಬಿಣದ ಆಯುಧದಿಂದ* ಕಡಿದುಹಾಕ್ತಾನೆ,
ಲೆಬನೋನ್ ಒಬ್ಬ ಬಲಿಷ್ಠನ ಕೈಯಿಂದ ಬಿದ್ದು ಹೋಗುತ್ತೆ.