ಕೀರ್ತನೆ
136 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+
ಆತನ ಪ್ರೀತಿ ಶಾಶ್ವತ.+
3 ಎಲ್ಲ ಒಡೆಯರಿಗಿಂತ ಮಹೋನ್ನತ ಒಡೆಯನಿಗೆ ಧನ್ಯವಾದ ಹೇಳಿ,
ಆತನ ಪ್ರೀತಿ ಶಾಶ್ವತ.
5 ಆತನು ತುಂಬ ನಿಪುಣತೆಯಿಂದ ಆಕಾಶ ರಚಿಸಿದ,+
ಆತನ ಪ್ರೀತಿ ಶಾಶ್ವತ.
6 ಆತನು ನೀರಿನ ಮೇಲೆ ಭೂಮಿಯನ್ನ ಹರಡಿದ,+
ಆತನ ಪ್ರೀತಿ ಶಾಶ್ವತ.
7 ಆತನು ದೊಡ್ಡದೊಡ್ಡ ಬೆಳಕುಗಳನ್ನ ಮಾಡಿದ,+
ಆತನ ಪ್ರೀತಿ ಶಾಶ್ವತ.
8 ಹಗಲಿನ ಮೇಲೆ ಅಧಿಕಾರ ಮಾಡೋಕೆ ಸೂರ್ಯನನ್ನ ಮಾಡಿದ,+
ಆತನ ಪ್ರೀತಿ ಶಾಶ್ವತ.
9 ರಾತ್ರಿ ಮೇಲೆ ಅಧಿಕಾರ ಮಾಡೋಕೆ ಚಂದ್ರ, ನಕ್ಷತ್ರಗಳನ್ನ ಮಾಡಿದ,+
ಆತನ ಪ್ರೀತಿ ಶಾಶ್ವತ.
10 ಆತನು ಈಜಿಪ್ಟಿನ ಮೊದಲ ಮಕ್ಕಳನ್ನ ಸಂಹರಿಸಿದ,+
ಆತನ ಪ್ರೀತಿ ಶಾಶ್ವತ.
11 ಇಸ್ರಾಯೇಲ್ಯರನ್ನ ಅವ್ರ ಮಧ್ಯದಿಂದ ಕರ್ಕೊಂಡು ಬಂದ,+
ಆತನ ಪ್ರೀತಿ ಶಾಶ್ವತ.
12 ತನ್ನ ಬಲಿಷ್ಠ ಕೈಯಿಂದ,+ ಚಾಚಿದ ತೋಳುಗಳಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ,
ಆತನ ಪ್ರೀತಿ ಶಾಶ್ವತ.
13 ಕೆಂಪು ಸಮುದ್ರವನ್ನ ಎರಡು ಭಾಗ* ಮಾಡಿದ.+
ಆತನ ಪ್ರೀತಿ ಶಾಶ್ವತ.
14 ಅದ್ರ ಮಧ್ಯ ಇಸ್ರಾಯೇಲ್ಯರು ನಡ್ಕೊಂಡು ಹೋಗೋ ಹಾಗೆ ಮಾಡಿದ,+
ಆತನ ಪ್ರೀತಿ ಶಾಶ್ವತ.
15 ಫರೋಹನನ್ನ, ಅವನ ಸೈನ್ಯವನ್ನ ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟ.+
ಆತನ ಪ್ರೀತಿ ಶಾಶ್ವತ.
16 ಕಾಡಲ್ಲಿ ದಾರಿತೋರಿಸ್ತಾ ಆತನು ತನ್ನ ಜನ್ರನ್ನ ನಡೆಸಿದ,+
ಆತನ ಪ್ರೀತಿ ಶಾಶ್ವತ.
17 ಆತನು ದೊಡ್ಡದೊಡ್ಡ ರಾಜರನ್ನ ನಾಶಮಾಡಿದ,+
ಆತನ ಪ್ರೀತಿ ಶಾಶ್ವತ.
18 ಆತನು ಬಲಿಷ್ಠ ರಾಜರನ್ನ ಕೊಂದುಹಾಕಿದ,
ಆತನ ಪ್ರೀತಿ ಶಾಶ್ವತ.
19 ಅಮೋರಿಯರ ರಾಜ ಸೀಹೋನನನ್ನ+ ಕೊಂದುಹಾಕಿದ,
ಆತನ ಪ್ರೀತಿ ಶಾಶ್ವತ.
20 ಬಾಷಾನಿನ ರಾಜ ಓಗನನ್ನ+ ಸಾಯಿಸಿಬಿಟ್ಟ,
ಆತನ ಪ್ರೀತಿ ಶಾಶ್ವತ.
21 ಆತನು ಅವ್ರ ದೇಶವನ್ನ ತನ್ನ ಜನ್ರಿಗೆ ಆಸ್ತಿಯಾಗಿ ಕೊಟ್ಟ,+
ಆತನ ಪ್ರೀತಿ ಶಾಶ್ವತ.
22 ತನ್ನ ಸೇವಕ ಇಸ್ರಾಯೇಲನಿಗೆ ಅದನ್ನ ಸೊತ್ತಾಗಿ ಕೊಟ್ಟ,
ಆತನ ಪ್ರೀತಿ ಶಾಶ್ವತ.
24 ನಮ್ಮ ಶತ್ರುಗಳಿಂದ ನಮ್ಮನ್ನ ರಕ್ಷಿಸ್ತಾನೇ ಬಂದ,+
ಆತನ ಪ್ರೀತಿ ಶಾಶ್ವತ.
25 ಆತನು ತನ್ನ ಎಲ್ಲ ಸೃಷ್ಟಿಗೆ ಆಹಾರ ಕೊಡ್ತಾನೆ,+
ಆತನ ಪ್ರೀತಿ ಶಾಶ್ವತ.
26 ಸ್ವರ್ಗದ ದೇವರಿಗೆ ಧನ್ಯವಾದ ಹೇಳಿ,
ಆತನ ಪ್ರೀತಿ ಶಾಶ್ವತ.