ಜೆಕರ್ಯ
4 ನನ್ನ ಜೊತೆ ಮಾತಾಡ್ತಿದ್ದ ದೇವದೂತ ವಾಪಸ್ ಬಂದ. ಮಲಗಿರುವವ್ರನ್ನ ಎಬ್ಬಿಸೋ ತರ ನನ್ನನ್ನ ಎಬ್ಬಿಸಿದ. 2 ಆಮೇಲೆ ಅವನು “ನಿನಗೆ ಏನು ಕಾಣಿಸ್ತಿದೆ?” ಅಂತ ಕೇಳಿದ.
ಅದಕ್ಕೆ ನಾನು: “ನನಗೆ ಸಂಪೂರ್ಣವಾಗಿ ಚಿನ್ನದಿಂದ ಮಾಡಿರೋ ಒಂದು ದೀಪಸ್ತಂಭ+ ಕಾಣಿಸ್ತಿದೆ. ಅದ್ರ ಮೇಲೆ ಒಂದು ಬಟ್ಟಲಿದೆ. ಆ ದೀಪಸ್ತಂಭದಲ್ಲಿ ಏಳು ದೀಪಗಳಿವೆ.+ ಹೌದು ಏಳು ದೀಪಗಳಿವೆ. ಆ ದೀಪಗಳಿಗೆ ಏಳು ಕೊಳವೆಗಳಿವೆ. ಅವುಗಳನ್ನ ಆ ಬಟ್ಟಲಿಗೆ ಜೋಡಿಸಲಾಗಿದೆ. 3 ದೀಪಸ್ತಂಭದ ಹತ್ರ ಎರಡು ಆಲಿವ್ ಮರಗಳಿವೆ.+ ಒಂದು ಬಟ್ಟಲಿನ ಬಲಗಡೆ ಇದ್ರೆ, ಇನ್ನೊಂದು ಎಡಗಡೆ ಇದೆ” ಅಂದೆ.
4 ಆಮೇಲೆ ನಾನು ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ “ನನ್ನ ಒಡೆಯ, ಇವುಗಳ ಅರ್ಥ ಏನು?” ಅಂದೆ. 5 ಆಗ ಆ ದೇವದೂತ “ನಿನಗೆ ಇವುಗಳ ಅರ್ಥ ಏನಂತ ಗೊತ್ತಿಲ್ವಾ?” ಅಂತ ಕೇಳಿದ.
ಅದಕ್ಕೆ ನಾನು “ಇಲ್ಲ, ನನ್ನ ಒಡೆಯ” ಅಂದೆ.
6 ಆಮೇಲೆ ಅವನು ನನಗೆ ಹೀಗಂದ: “ಜೆರುಬ್ಬಾಬೆಲನಿಗೆ ಯೆಹೋವ ಕೊಟ್ಟ ಸಂದೇಶ ಏನಂದ್ರೆ ‘“ಇವೆಲ್ಲ ನಡಿಯೋದು ಯಾವುದೇ ಸೈನ್ಯದಿಂದಲ್ಲ, ಯಾವುದೇ ಶಕ್ತಿಯಿಂದಲ್ಲ.+ ಬದಲಿಗೆ ನನ್ನ ಪವಿತ್ರಶಕ್ತಿಯಿಂದಾನೇ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. 7 ಮಹಾ ಬೆಟ್ಟವೇ, ನೀನ್ಯಾರು? ನೀನು ಜೆರುಬ್ಬಾಬೆಲಿನ+ ಮುಂದೆ ಬಯಲು ಪ್ರದೇಶವಾಗ್ತೀಯ.+ ಅವನು ಮೇಲಿನ ಕಲ್ಲನ್ನ ತಗೊಂಡು ಬರುವಾಗ “ಎಷ್ಟು ಸುಂದರ! ಎಷ್ಟು ಸುಂದರ!” ಅನ್ನೋ ಕೂಗು ಕೇಳಿಬರುತ್ತೆ.’”
8 ಇನ್ನೊಮ್ಮೆ ಯೆಹೋವ ನನಗೆ ಒಂದು ಸಂದೇಶ ಕೊಟ್ಟನು. ಅದೇನಂದ್ರೆ: 9 “ಜೆರುಬ್ಬಾಬೆಲನ ಕೈಗಳು ಈ ಮನೆಗೆ ಅಡಿಪಾಯ ಹಾಕಿದ್ದವು.+ ಆ ಕೈಗಳೇ ಈ ಮನೆಯನ್ನ ಕಟ್ಟಿ ಮುಗಿಸುತ್ತೆ.+ ಸೈನ್ಯಗಳ ದೇವರಾದ ಯೆಹೋವ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ ಅಂತ ಆಗ ನಿಮಗೆ ಗೊತ್ತಾಗುತ್ತೆ. 10 ಚಿಕ್ಕದಾಗಿ ಆರಂಭವಾದದ್ದನ್ನ* ಯಾರೂ ಕೀಳಾಗಿ ನೋಡಬಾರದು.+ ಜೆರುಬ್ಬಾಬೆಲನ ಕೈಯಲ್ಲಿ ಜನ ತೂಗುಗುಂಡನ್ನ ನೋಡ್ತಾರೆ, ಖಂಡಿತ ಸಂಭ್ರಮಿಸ್ತಾರೆ. ಆ ಏಳು ಕಣ್ಣುಗಳು ಯೆಹೋವನ ಕಣ್ಣುಗಳಾಗಿವೆ. ಅವು ಇಡೀ ಭೂಮಿ ಸಂಚರಿಸುತ್ತೆ.”+
11 ಆಮೇಲೆ ನಾನು ಅವನಿಗೆ “ದೀಪಸ್ತಂಭದ ಬಲಕ್ಕೆ ಮತ್ತು ಎಡಕ್ಕೆ ಇರೋ ಈ ಎರಡು ಆಲಿವ್ ಮರಗಳ ಅರ್ಥ ಏನು?” ಅಂತ ಕೇಳಿದೆ.+ 12 ಆಮೇಲೆ “ಎರಡು ಚಿನ್ನದ ನಾಳಗಳಿಂದ ಚಿನ್ನದ ದ್ರವವನ್ನ ಬಟ್ಟಲಿಗೆ ಹರಿಸ್ತಿರೋ ಆಲಿವ್ ಮರಗಳ ಆ ಚಿಕ್ಕ ಕೊಂಬೆಗಳ* ಅರ್ಥ ಏನು?” ಅಂತ ಕೇಳಿದೆ.
13 ಆಗ ಅವನು “ಇವುಗಳ ಅರ್ಥ ಏನಂತ ನಿನಗೆ ಗೊತ್ತಿಲ್ವಾ?” ಅಂತ ಕೇಳಿದ.
ಅದಕ್ಕೆ ನಾನು “ಇಲ್ಲ, ನನ್ನ ಒಡೆಯ” ಅಂದೆ.
14 ಆಗ ಅವನು “ಇವು ಇಡೀ ಭೂಮಿಯ ಒಡೆಯನ ಅಕ್ಕಪಕ್ಕದಲ್ಲಿ ನಿಂತಿರೋ ಇಬ್ರು ಅಭಿಷಿಕ್ತರನ್ನ ಸೂಚಿಸುತ್ತೆ”+ ಅಂದ.