ಎರಡನೇ ಪೂರ್ವಕಾಲವೃತ್ತಾಂತ
10 ರೆಹಬ್ಬಾಮ ಶೆಕೆಮಿಗೆ+ ಹೋದ, ಯಾಕಂದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ರಾಜನಾಗಿ ಮಾಡೋಕೆ ಅಲ್ಲಿಗೆ ಬಂದಿದ್ರು.+ 2 ಈ ಸುದ್ದಿ ನೆಬಾಟನ ಮಗ ಯಾರೊಬ್ಬಾಮನಿಗೆ+ ಗೊತ್ತಾದ ತಕ್ಷಣ ಅವನು ಈಜಿಪ್ಟಿಂದ ವಾಪಸ್ ಬಂದ. (ಯಾರೊಬ್ಬಾಮ ಇನ್ನೂ ಈಜಿಪ್ಟಲ್ಲೇ ಇದ್ದ. ಯಾಕಂದ್ರೆ ಅವನು ರಾಜ ಸೊಲೊಮೋನನಿಗೆ ಹೆದರಿ ಈಜಿಪ್ಟಿಗೆ ಓಡಿಹೋಗಿದ್ದ)+ 3 ಜನ್ರು ಅವನನ್ನ ಈಜಿಪ್ಟಿಂದ ಬರೋಕೆ ಹೇಳಿದ್ರು. ಆಮೇಲೆ ಯಾರೊಬ್ಬಾಮ ಮತ್ತು ಎಲ್ಲ ಇಸ್ರಾಯೇಲ್ಯರು ರೆಹಬ್ಬಾಮನ ಹತ್ರ ಬಂದು 4 “ನಿನ್ನ ಅಪ್ಪ ನಮ್ಮಿಂದ ಕಷ್ಟದ ಕೆಲಸ ಮಾಡಿಸ್ಕೊಂಡು ನಮ್ಮ ಮೇಲೆ ಭಾರವಾದ ನೊಗ ಹೊರಿಸಿದ್ದ.+ ನೀನು ಆ ಕಷ್ಟದ ಕೆಲಸನ ಸುಲಭಮಾಡಿದ್ರೆ ಮತ್ತು ನಿನ್ನ ಅಪ್ಪ ನಮ್ಮ ಮೇಲೆ ಹೊರಿಸಿದ ಭಾರವನ್ನ* ಹಗುರಮಾಡಿದ್ರೆ ನಾವು ನಿನ್ನ ಸೇವೆ ಮಾಡ್ತೀವಿ” ಅಂದ್ರು.
5 ಅದಕ್ಕೆ ಅವನು “ಮೂರು ದಿನ ಆದಮೇಲೆ ನನ್ನ ಹತ್ರ ವಾಪಸ್ ಬನ್ನಿ” ಅಂದ. ಆಗ ಜನ ಅಲ್ಲಿಂದ ಹೋದ್ರು.+ 6 ಆಗ ರಾಜ ರೆಹಬ್ಬಾಮ ಅವನ ಅಪ್ಪ ಸೊಲೊಮೋನ ಬದುಕಿದ್ದಾಗ ಅವನಿಗೆ ಸೇವೆಮಾಡಿದ ಹಿರಿಯರ* ಹತ್ರ “ಈ ಜನ್ರಿಗೆ ಏನು ಹೇಳಬೇಕು ಅಂತ ಸಲಹೆ ಕೊಡಿ” ಅಂತ ಕೇಳಿದ. 7 ಅದಕ್ಕೆ ಅವರು “ಒಂದುವೇಳೆ ನೀನು ಆ ಜನ್ರಿಗೆ ದಯೆತೋರಿಸಿ ಅವರು ಕೇಳಿದ್ದಕ್ಕೆ ಒಪ್ಪಿ ಅವ್ರಿಗೆ ಇಷ್ಟ ಆಗೋ ತರ ಉತ್ತರ ಕೊಟ್ರೆ ಅವರು ಯಾವಾಗ್ಲೂ ನಿನ್ನ ಸೇವಕರಾಗಿ ಇರ್ತಾರೆ” ಅಂದ್ರು.
8 ಆದ್ರೆ ಅವನು ಆ ಹಿರಿಯರ* ಸಲಹೆನ ಗಾಳಿಗೆ ತೂರಿ ತನ್ನ ಜೊತೆ ಬೆಳೆದು ಈಗ ತನ್ನ ಸೇವಕರಾಗಿದ್ದ ಯುವಕರ ಸಲಹೆ ಕೇಳಿದ.+ 9 ಅವನು ಅವ್ರಿಗೆ “ಈ ಜನ್ರು, ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರನ ಹಗುರಮಾಡು’ ಅಂತ ಕೇಳ್ತಿದ್ದಾರೆ. ಇವ್ರಿಗೆ ನಾನು ಏನು ಉತ್ರ ಕೊಡ್ಲಿ” ಅಂತ ಕೇಳಿದ. 10 ಅದಕ್ಕೆ ಆ ಯುವಕರು “ಯಾವ ಜನ್ರು ನಿನಗೆ, ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರನ ನೀನು ಹಗುರಮಾಡು’ ಅಂತ ಕೇಳ್ತಿದ್ದಾರೋ ಅವ್ರಿಗೆ ಹೀಗೆ ಹೇಳು ‘ನನ್ನ ಕಿರುಬೆರಳು ನನ್ನ ಅಪ್ಪನ ಸೊಂಟಕ್ಕಿಂತ ದಪ್ಪ ಇರುತ್ತೆ. 11 ನನ್ನ ಅಪ್ಪ ನಿಮ್ಮ ಮೇಲೆ ಭಾರವಾದ ನೊಗ ಅಷ್ಟೇ ಹೊರಿಸಿದ. ಆದ್ರೆ ನಾನು ಅದ್ರ ಮೇಲೆ ಇನ್ನೂ ಭಾರ ಹಾಕ್ತೀನಿ. ನನ್ನ ಅಪ್ಪ ನಿಮ್ಮನ್ನ ಕೊರಡೆಯಿಂದ ಹೊಡಿಸಿದ. ನಾನು ನಿಮ್ಮನ್ನ ಮುಳ್ಳಿನ ಕೊರಡೆಯಿಂದ ಹೊಡಿಸ್ತೀನಿ’” ಅಂತ ಸಲಹೆ ಕೊಟ್ರು.
12 ‘ಮೂರು ದಿನ ಆದ ಮೇಲೆ ಬನ್ನಿ’ ಅಂತ ರೆಹಬ್ಬಾಮ ಹೇಳಿದ ಹಾಗೇ ಯಾರೊಬ್ಬಾಮ ಮತ್ತು ಎಲ್ಲ ಜನ್ರು ಮೂರು ದಿನ ಆದಮೇಲೆ ರಾಜನ ಹತ್ರ ಬಂದ್ರು.+ 13 ಆದ್ರೆ ಹಿರಿಯರ* ಸಲಹೆನ ಗಾಳಿಗೆ ತೂರಿದ ರಾಜ ಆ ಜನ್ರ ಜೊತೆ ಒರಟಾಗಿ ಮಾತಾಡಿದ. 14 ಯುವಕರು ಕೊಟ್ಟ ಸಲಹೆ ಪ್ರಕಾರ ಅವನು ಅವ್ರಿಗೆ “ನಾನು ನಿಮ್ಮ ನೊಗ ಭಾರ ಆಗೋ ತರ ಮಾಡ್ತೀನಿ. ಅದಕ್ಕೆ ಇನ್ನೂ ಭಾರ ಕೂಡಿಸ್ತೀನಿ. ನನ್ನ ಅಪ್ಪ ನಿಮ್ಮನ್ನ ಕೊರಡೆಯಿಂದ ಹೊಡಿಸಿದ. ನಾನು ನಿಮ್ಮನ್ನ ಮುಳ್ಳಿನ ಕೊರಡೆಯಿಂದ ಹೊಡಿಸ್ತೀನಿ” ಅಂದ. 15 ಹೀಗೆ ರಾಜ ಜನ್ರ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗೆ ಆಗೋ ತರ ಸತ್ಯ ದೇವರೇ ಮಾಡಿದ್ದನು.+ ಯೆಹೋವ ಪ್ರವಾದಿ ಅಹೀಯನ ಮೂಲಕ ನೆಬಾಟನ ಮಗ ಯಾರೊಬ್ಬಾಮನಿಗೆ ಹೇಳಿದ್ದ ಮಾತು ನಿಜ ಮಾಡೋಕೆ ಹೀಗೆ ಮಾಡಿದನು.+
16 ರಾಜ ತಮ್ಮ ಮಾತನ್ನ ತಳ್ಳಿಹಾಕಿದ್ರಿಂದ ಎಲ್ಲ ಇಸ್ರಾಯೇಲ್ಯರು ರಾಜನಿಗೆ “ದಾವೀದನಿಗೂ ನಮಗೂ ಈಗ ಯಾವ ಸಂಬಂಧನೂ ಇಲ್ಲ! ಅವನಿಂದ ನಮಗೆ ಯಾವ ಪ್ರಯೋಜನನೂ ಇಲ್ಲ. ಇಷಯನ ಮಗ ದಾವೀದನ ಆಸ್ತಿ ಅವನ ಹತ್ರಾನೇ ಇರಲಿ. ಇಸ್ರಾಯೇಲ್ಯರೇ ನೀವೆಲ್ಲ ನಿಮ್ಮನಿಮ್ಮ ದೇವರುಗಳ ಹತ್ರ ವಾಪಸ್ ಹೋಗಿ. ದಾವೀದನ ವಂಶದವರೇ! ನಿಮ್ಮನ್ನ ನೀವೇ ನೋಡ್ಕೊಳ್ಳಿ”+ ಅಂತ ಹೇಳಿ ತಮ್ಮತಮ್ಮ ಮನೆಗೆ* ವಾಪಸ್ ಹೋದ್ರು.+
17 ಆದ್ರೆ ರೆಹಬ್ಬಾಮ ಯೆಹೂದದ ಪಟ್ಟಣಗಳಲ್ಲಿದ್ದ ಇಸ್ರಾಯೇಲ್ಯರನ್ನ ಇನ್ನೂ ಆಳ್ತಿದ್ದ.+
18 ಆಮೇಲೆ ರಾಜ ರೆಹಬ್ಬಾಮ ಬಿಟ್ಟಿಕೆಲಸಗಾರರ ಮೇಲೆ ಮೇಲ್ವಿಚಾರಣೆ ಮಾಡುತ್ತಿದ್ದ ಹದೋರಾಮನನ್ನ+ ಇಸ್ರಾಯೇಲ್ಯರ ಹತ್ರ ಕಳಿಸಿದ. ಆದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲೊಡೆದು ಸಾಯಿಸಿದ್ರು. ಹೇಗೋ ಮಾಡಿ ರಾಜ ರೆಹಬ್ಬಾಮ ತನ್ನ ರಥ ಹತ್ತಿ ಯೆರೂಸಲೇಮಿಗೆ ಓಡಿಹೋದ.+ 19 ಅವತ್ತಿಂದ ಇವತ್ತಿನ ತನಕ ಇಸ್ರಾಯೇಲ್ಯರು ದಾವೀದನ ಮನೆತನದ ವಿರುದ್ಧ ದಂಗೆ ಏಳ್ತಾನೇ ಇದ್ದಾರೆ.