ಚೆಫನ್ಯ
3 ದಂಗೆಕೋರತನ, ಭ್ರಷ್ಟತೆ ಮತ್ತು ದಬ್ಬಾಳಿಕೆಯಿಂದ ತುಂಬಿರೋ ಪಟ್ಟಣದ ಗತಿಯನ್ನ ಏನು ಹೇಳೋದು!+
2 ಅದು ಯಾರ ಮಾತನ್ನೂ ಕೇಳಲಿಲ್ಲ,+ ತಿದ್ದಿದಾಗ ಸರಿಮಾಡ್ಕೊಳಲಿಲ್ಲ.+
ಅದು ಯೆಹೋವನಲ್ಲಿ ಭರವಸೆ ಇಡಲಿಲ್ಲ.+ ತನ್ನ ದೇವರ ಹತ್ರ ಬರಲಿಲ್ಲ.+
3 ಅದ್ರ ಅಧಿಕಾರಿಗಳು ಗರ್ಜಿಸೋ ಸಿಂಹಗಳು.+
ಅದ್ರ ನ್ಯಾಯಾಧೀಶರು ರಾತ್ರಿ ಭೇಟೆಯಾಡೋ ತೋಳಗಳು,
ಬೆಳಿಗಾಗೋ ಹೊತ್ತಿಗೆ ಒಂದು ಮೂಳೆನೂ ಅವು ಉಳಿಸಲ್ಲ.
4 ಅದ್ರ ಪ್ರವಾದಿಗಳು ಗರ್ವಿಷ್ಠರು, ಮೋಸಗಾರರು.+
5 ಅದ್ರ ಮಧ್ಯ ಇರೋ ಯೆಹೋವ ನೀತಿವಂತ,+ ಆತನು ಯಾವ ತಪ್ಪನ್ನೂ ಮಾಡಲ್ಲ.
ಬೆಳಕಾಗೋದು ಎಷ್ಟು ನಿಜಾನೋ,
ದಿನಾ ಬೆಳಿಗ್ಗೆ ಆತನು ತನ್ನ ತೀರ್ಪುಗಳನ್ನ ಹೇಳೋದೂ ಅಷ್ಟೇ ನಿಜ.+
ಆದ್ರೆ ಅನೀತಿವಂತರಿಗೆ ನಾಚಿಕೆ ಅಂದ್ರೆ ಏನಂತ ಗೊತ್ತೇ ಇಲ್ಲ.+
6 “ನಾನು ಜನಾಂಗಗಳನ್ನ ನಾಶಮಾಡಿದೆ, ಮೂಲೆಯಲ್ಲಿರೋ ಅವ್ರ ಗೋಪುರಗಳಲ್ಲಿ ಜನ್ರೇ ಇಲ್ಲದ ಹಾಗೆ ಮಾಡಿದೆ.
ಅವ್ರ ಬೀದಿಗಳಲ್ಲಿ ಯಾರೂ ನಡಿಯದ ಹಾಗೆ ಅವನ್ನ ಹಾಳುಮಾಡಿದೆ.
ಅವ್ರ ಪಟ್ಟಣಗಳು ಹಾಳುಬಿದ್ದಿವೆ, ಅಲ್ಲಿ ಯಾರೂ ಇಲ್ಲ.+
ಅದೆಲ್ಲದಕ್ಕೂ ಲೆಕ್ಕ ಕೇಳ್ತೀನಿ.*
ಆದ್ರೆ ಅವರು ಕೆಟ್ಟ ಕೆಲಸಗಳನ್ನ ಮಾಡೋಕೆ ಇನ್ನೂ ಆತುರಪಡ್ತಿದ್ದಾರೆ.+
ಯಾಕಂದ್ರೆ ದೇಶಗಳನ್ನ, ಸಾಮ್ರಾಜ್ಯಗಳನ್ನ ಒಟ್ಟುಸೇರಿಸೋದು ನನ್ನ ತೀರ್ಪು.
ನನ್ನ ಉಗ್ರ ಕೋಪವನ್ನ, ಕ್ರೋಧವನ್ನ ಅವುಗಳ ಮೇಲೆ ಸುರಿಸೋಕೆ ನಾನು ತೀರ್ಪು ಕೊಡ್ತೀನಿ.+
ನನ್ನ ಕೋಪ ಬೆಂಕಿ ತರ ಇದೆ. ಅದು ಇಡೀ ಭೂಮಿ ಸುಟ್ಟುಬಿಡುತ್ತೆ.+
9 ಆಗ ನಾನು, ದೇಶಗಳ ಜನ್ರೆಲ್ಲ ಯೆಹೋವ ಅನ್ನೋ ನನ್ನ ಹೆಸ್ರನ್ನ ಹೊಗಳೋಕೆ ಆಗೋ ಹಾಗೆ,
ಹೆಗಲಿಗೆ ಹೆಗಲು ಕೊಟ್ಟು ಅವರು ನನ್ನ ಸೇವೆ ಮಾಡೋ ತರ,*
ಅವ್ರಿಗೆಲ್ಲ ಒಂದು ಶುದ್ಧ ಭಾಷೆ ಕಲಿಸ್ತೀನಿ.’+
10 ನನ್ನನ್ನ ಬೇಡ್ಕೊಳ್ಳೋ ಅಂದ್ರೆ ಚೆಲ್ಲಾಪಿಲ್ಲಿ ಆಗಿರೋ ನನ್ನ ಜನ್ರು,
ಇಥಿಯೋಪ್ಯದ ನದಿ ಪ್ರದೇಶಗಳಿಂದ ನನಗಾಗಿ ಉಡುಗೊರೆ ತಗೊಂಡು ಬರ್ತಾರೆ.+
ಯಾಕಂದ್ರೆ ಜಂಬದಿಂದ ಕೊಚ್ಕೊಳ್ಳೋರನ್ನ ನಿನ್ನ ಮಧ್ಯದಿಂದ ತೆಗೆದುಹಾಕ್ತೀನಿ.
ಆಗ ನೀನು ನನ್ನ ಪವಿತ್ರ ಬೆಟ್ಟದಲ್ಲಿ ಜಂಬ ತೋರಿಸಲ್ಲ.+
12 ದೀನರು ಮತ್ತು ಜಂಬ ಇಲ್ಲದವರು ನಿನ್ನ ಮಧ್ಯದಲ್ಲಿ ಇರೋ ತರ ಮಾಡ್ತೀನಿ.+
ಅವರು ಯೆಹೋವ ಅನ್ನೋ ನನ್ನ ಹೆಸ್ರಲ್ಲಿ ಆಶ್ರಯ ಪಡೀತಾರೆ.
13 ಇಸ್ರಾಯೇಲ್ಯರಲ್ಲಿ ಉಳಿದವರು+ ಯಾವ ಕೆಟ್ಟ ಕೆಲಸಗಳನ್ನೂ ಮಾಡಲ್ಲ.+
ಅವರು ಸುಳ್ಳು ಹೇಳಲ್ಲ, ಅವ್ರ ಬಾಯಲ್ಲಿ ಮೋಸದ ನಾಲಿಗೆ ಸಿಗಲ್ಲ.
ಅವರು ತಿಂದು ಅರಾಮಾಗಿ ಇರ್ತಾರೆ, ಯಾರೂ ಅವ್ರನ್ನ ಹೆದರಿಸಲ್ಲ.”+
14 ಚೀಯೋನಿನ ಮಗಳೇ, ಸಂತೋಷದಿಂದ ಜೈಕಾರ ಹಾಕು!
ಇಸ್ರಾಯೇಲೇ, ವಿಜಯಗೀತೆ ಹಾಡಿ ಕೂಗಾಡು!+
ಯೆರೂಸಲೇಮಿನ ಮಗಳೇ, ಪೂರ್ಣ ಹೃದಯದಿಂದ ಆನಂದಿಸು, ಖುಷಿಪಡು!+
15 ಯೆಹೋವ ನಿನಗೆ ಕೊಟ್ಟ ಶಿಕ್ಷೆಯನ್ನ ವಾಪಸ್ ತಗೊಂಡಿದ್ದಾನೆ.+
ಆತನು ನಿನ್ನ ಶತ್ರುವನ್ನ ದೂರ ತಳ್ಳಿದ್ದಾನೆ.+
ಇಸ್ರಾಯೇಲಿನ ರಾಜ ಯೆಹೋವ ನಿನ್ನ ಮಧ್ಯ ಇದ್ದಾನೆ.+
ಹಾಗಾಗಿ ವಿಪತ್ತಿನ ಭಯ ಇನ್ಮುಂದೆ ನಿನಗಿರಲ್ಲ.+
16 ಆ ದಿನ ಯೆರೂಸಲೇಮಿಗೆ ಈ ಸಂದೇಶ ಸಿಗುತ್ತೆ:
17 ನಿನ್ನ ದೇವರಾದ ಯೆಹೋವ ನಿನ್ನ ಮಧ್ಯ ಇದ್ದಾನೆ.+
ಬಲಿಷ್ಠ ವೀರ ಸೈನಿಕರ ತರ ಆತನು ನಿನ್ನನ್ನ ಕಾಪಾಡ್ತಾನೆ.
ನಿನ್ನನ್ನ ನೋಡಿ ತುಂಬ ಖುಷಿಪಡ್ತಾನೆ.+
ನಿನ್ನ ಮೇಲಿನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರ್ತಾನೆ.*
ಆತನು ನಿನ್ನನ್ನ ನೋಡಿ ಖುಷಿಯಿಂದ ಆನಂದದಿಂದ ಕೂಗ್ತಾನೆ.
18 ನಿನ್ನ ಹಬ್ಬಗಳಿಗೆ ಬರೋಕೆ ಆಗದೆ ಬೇಜಾರಾಗಿ ಇರುವವ್ರನ್ನ ನಾನು ಒಟ್ಟುಸೇರಿಸ್ತೀನಿ,+
ಜೈಲಲ್ಲಿ ಅವಮಾನ ಆಗ್ತಿದ್ರಿಂದ ಅವ್ರಿಗೆ ಬರಕ್ಕಾಗಲಿಲ್ಲ.+
19 ನೋಡು! ಆ ದಿನ ನಾನು ನಿನ್ನ ಮೇಲೆ ದಬ್ಬಾಳಿಕೆ ಮಾಡ್ತಿದ್ದವ್ರ ವಿರುದ್ಧ ಕ್ರಮ ತಗೊಳ್ತೀನಿ.+
ಅವ್ರಿಗೆ ಅವಮಾನ ಆದ ದೇಶಗಳಲ್ಲೇ,
ಅವ್ರಿಗೆ ಹೊಗಳಿಕೆ ಸಿಗೋ ಹಾಗೆ ಮಾಡ್ತೀನಿ, ಅವರು ಪ್ರಸಿದ್ಧರಾಗೋ ಹಾಗೆ ಮಾಡ್ತೀನಿ.
20 ಆ ಸಮಯದಲ್ಲಿ ನಾನು ನಿಮ್ಮನ್ನ ಸ್ವದೇಶಕ್ಕೆ ಕರ್ಕೊಂಡು ಬರ್ತಿನಿ,
ನಾನು ನಿಮ್ಮನ್ನ ಒಟ್ಟುಸೇರಿಸ್ತೀನಿ.