ಒಂದನೇ ಪೂರ್ವಕಾಲವೃತ್ತಾಂತ
6 ಲೇವಿಯ+ ಗಂಡು ಮಕ್ಕಳು ಗೇರ್ಷೋನ್, ಕೆಹಾತ್,+ ಮೆರಾರಿ.+ 2 ಕೆಹಾತನ ಗಂಡು ಮಕ್ಕಳು ಅಮ್ರಾಮ್, ಇಚ್ಹಾರ್,+ ಹೆಬ್ರೋನ್, ಉಜ್ಜೀಯೇಲ್.+ 3 ಅಮ್ರಾಮನ+ ಮಕ್ಕಳು ಆರೋನ,+ ಮೋಶೆ,+ ಮಿರ್ಯಾಮ.+ ಆರೋನನ ಗಂಡು ಮಕ್ಕಳು ನಾದಾಬ್, ಅಬೀಹೂ,+ ಎಲ್ಲಾಜಾರ್,+ ಈತಾಮಾರ್.+ 4 ಎಲ್ಲಾಜಾರನ ಮಗ ಫೀನೆಹಾಸ,+ ಫೀನೆಹಾಸನ ಮಗ ಅಬೀಷೂವ. 5 ಅಬೀಷೂವನ ಮಗ ಬುಕ್ಕೀಯ, ಬುಕ್ಕೀಯನ ಮಗ ಉಜ್ಜೀಯ. 6 ಉಜ್ಜೀಯನ ಮಗ ಜೆರಹ್ಯ, ಜೆರಹ್ಯನ ಮಗ ಮೆರಾಯೋತ್. 7 ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ.+ 8 ಅಹೀಟೂಬನ ಮಗ ಚಾದೋಕ,+ ಚಾದೋಕನ ಮಗ ಅಹೀಮಾಚ.+ 9 ಅಹೀಮಾಚನ ಮಗ ಅಜರ್ಯ, ಅಜರ್ಯನ ಮಗ ಯೋಹಾನಾನ. 10 ಯೋಹಾನಾನನ ಮಗ ಅಜರ್ಯ. ಸೊಲೊಮೋನ ಕಟ್ಟಿಸಿದ ಯೆರೂಸಲೇಮ್ ದೇವಾಲಯದಲ್ಲಿ ಅವನು ಪುರೋಹಿತನಾಗಿದ್ದ.
11 ಅಜರ್ಯನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ. 12 ಅಹೀಟೂಬನ ಮಗ ಚಾದೋಕ.+ ಚಾದೋಕನ ಮಗ ಶಲ್ಲೂಮ. 13 ಶಲ್ಲೂಮನ ಮಗ ಹಿಲ್ಕೀಯ.+ ಹಿಲ್ಕೀಯನ ಮಗ ಅಜರ್ಯ. 14 ಅಜರ್ಯನ ಮಗ ಸೆರಾಯ,+ ಸೆರಾಯನ ಮಗ ಯೆಹೋಚಾದಾಕ.+ 15 ಯೆಹೋವ ನೆಬೂಕದ್ನೆಚ್ಚರನ ಮೂಲಕ ಯೆಹೂದದ, ಯೆರೂಸಲೇಮಿನ ಜನರನ್ನ ಕೈದಿಗಳಾಗಿ ಕರ್ಕೊಂಡು ಹೋದಾಗ ಯೆಹೋಚಾದಾಕ ಸಹ ಅವ್ರ ಜೊತೆ ಇದ್ದ.
16 ಲೇವಿಯರ ಗಂಡು ಮಕ್ಕಳು ಗೇರ್ಷೋಮ್,* ಕೆಹಾತ್, ಮೆರಾರಿ. 17 ಗೇರ್ಷೋಮನ ಗಂಡು ಮಕ್ಕಳು ಲಿಬ್ನಿ, ಶಿಮ್ಮಿ.+ 18 ಕೆಹಾತನ ಗಂಡು ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.+ 19 ಮೆರಾರೀಯ ಗಂಡು ಮಕ್ಕಳು ಮಹ್ಲಿ, ಮುಷಿ.
ಲೇವಿಯರ ಪೂರ್ವಜರಿಂದ ಬಂದ ಮನೆತನಗಳು:+ 20 ಗೇರ್ಷೋಮನ+ ಮಗ ಲಿಬ್ನಿ, ಲಿಬ್ನಿಯ ಮಗ ಯಹತ್, ಯಹತನ ಮಗ ಜಿಮ್ಮ, 21 ಜಿಮ್ಮನ ಮಗ ಯೋವ, ಯೋವನ ಮಗ ಇದ್ದೋ, ಇದ್ದೋನ ಮಗ ಜೆರಹ, ಜೆರಹನ ಮಗ ಯೆವತ್ರೈ, 22 ಕೆಹಾತನ ವಂಶದವರು: ಕೆಹಾತನ ಮಗ ಅಮ್ಮೀನಾದಾಬ, ಅಮ್ಮೀನಾದಾಬನ ಮಗ ಕೋರಹ,+ ಕೋರಹನ ಮಗ ಅಸ್ಸೀರ್, 23 ಅಸ್ಸೀರನ ಮಗ ಎಲ್ಕಾನ, ಎಲ್ಕಾನನ ಮಗ ಎಬ್ಯಾಸಾಫ,+ ಎಬ್ಯಾಸಾಫನ ಮಗ ಅಸ್ಸೀರ್, 24 ಅಸ್ಸೀರನ ಮಗ ತಹತ್, ತಹತನ ಮಗ ಊರೀಯೇಲ್, ಊರೀಯೇಲನ ಮಗ ಉಜ್ಜೀಯ, ಉಜ್ಜೀಯನ ಮಗ ಶೌಲ. 25 ಎಲ್ಕಾನನ ಗಂಡು ಮಕ್ಕಳು ಅಮಾಸೈ, ಅಹೀಮೋತ್. 26 ಇನ್ನೊಬ್ಬ ಎಲ್ಕಾನನ ವಂಶದವರು: ಎಲ್ಕಾನನ ಮಗ ಚೋಫೈ, ಚೋಫೈಯ ಮಗ ನಹತ್, 27 ನಹತನ ಮಗ ಎಲೀಯಾಬ್, ಎಲೀಯಾಬನ ಮಗ ಯೆರೋಹಾಮ, ಯೆರೋಹಾಮನ ಮಗ ಎಲ್ಕಾನ.+ 28 ಸಮುವೇಲನ+ ಗಂಡು ಮಕ್ಕಳು: ಮೊದಲ್ನೇ ಮಗ ಯೋವೇಲ, ಎರಡ್ನೇ ಮಗ ಅಬೀಯ.+ 29 ಮೆರಾರೀಯ ವಂಶದವರು: ಮೆರಾರೀಯ ಮಗ ಮಹ್ಲಿ,+ ಮಹ್ಲಿಯ ಮಗ ಲಿಬ್ನಿ, ಲಿಬ್ನಿಯ ಮಗ ಶಿಮ್ಮಿ, ಶಿಮ್ಮಿಯ ಮಗ ಉಜ್ಜ, 30 ಉಜ್ಜನ ಮಗ ಶಿಮ್ಮ, ಶಿಮ್ಮನ ಮಗ ಹಗ್ಗೀಯ, ಹಗ್ಗೀಯನ ಮಗ ಅಸಾಯ.
31 ಮಂಜೂಷವನ್ನ ಯೆಹೋವನ ಆಲಯದಲ್ಲಿ ಇಟ್ಟ ಮೇಲೆ ಹಾಡುಗಾರರನ್ನ ನಿರ್ದೇಶಿಸೋಕೆ ದಾವೀದ ಇವ್ರನ್ನ ನೇಮಿಸಿದ.+ 32 ಸೊಲೊಮೋನ ಯೆರೂಸಲೇಮಲ್ಲಿ ಯೆಹೋವನ ಆಲಯ ಕಟ್ಟೋ ತನಕ+ ಪವಿತ್ರ ಡೇರೆ ಹತ್ರ ಅಂದ್ರೆ ದೇವದರ್ಶನದ ಡೇರೆ ಹತ್ರ ಹಾಡೋ ಜವಾಬ್ದಾರಿ ಇವ್ರಿಗಿತ್ತು. ತಮಗೆ ಕೊಟ್ಟ ನಿರ್ದೇಶನದ ಪ್ರಕಾರ ಇವರು ತಮ್ಮ ಸೇವೆ ಮಾಡಿದ್ರು.+ 33 ತಮ್ಮ ಗಂಡು ಮಕ್ಕಳ ಜೊತೆ ಸೇರಿ ಈ ಸೇವೆ ಮಾಡಿದ ಗಂಡಸ್ರು ಕೆಹಾತ್ಯರ ಗಾಯಕ ಹೇಮಾನ್.+ ಇವನು ಯೋವೇಲನ+ ಮಗ, ಯೋವೇಲ ಸಮುವೇಲನ ಮಗ. 34 ಸಮುವೇಲ ಎಲ್ಕಾನನ+ ಮಗ, ಎಲ್ಕಾನ ಯೆರೋಹಾಮನ ಮಗ, ಯೆರೋಹಾಮ ಎಲೀಯೇಲನ ಮಗ, ಎಲೀಯೇಲ್ ತೋಹನ ಮಗ, 35 ತೋಹ ಚೂಫನ ಮಗ, ಚೂಫ ಎಲ್ಕಾನನ ಮಗ, ಎಲ್ಕಾನ ಮಹತನ ಮಗ, ಮಹತ್ ಅಮಾಸೈಯ ಮಗ, 36 ಅಮಾಸೈ ಎಲ್ಕಾನನ ಮಗ, ಎಲ್ಕಾನ ಯೋವೇಲನ ಮಗ, ಯೋವೇಲ ಅಜರ್ಯನ ಮಗ, ಅಜರ್ಯ ಚೆಫನ್ಯನ ಮಗ, 37 ಚೆಫನ್ಯ ತಹತನ ಮಗ, ತಹತ್ ಅಸ್ಸೀರನ ಮಗ, ಅಸ್ಸೀರ್ ಎಬ್ಯಾಸಾಫನ ಮಗ, ಎಬ್ಯಾಸಾಫ ಕೋರಹನ ಮಗ, 38 ಕೋರಹ ಇಚ್ಹಾರನ ಮಗ, ಇಚ್ಹಾರ್ ಕೆಹಾತನ ಮಗ, ಕೆಹಾತ್ ಲೇವಿಯ ಮಗ, ಲೇವಿ ಇಸ್ರಾಯೇಲನ ಮಗ.
39 ಹೇಮಾನನ ಸಹೋದರ ಆಸಾಫ+ ಅವನ ಬಲಗಡೆ ನಿಂತ್ಕೊಳ್ತಿದ್ದ. ಆಸಾಫ ಬೆರೆಕ್ಯನ ಮಗ, ಬೆರೆಕ್ಯ ಶಿಮ್ಮನ ಮಗ, 40 ಶಿಮ್ಮ ಮೀಕಾಯೇಲನ ಮಗ, ಮೀಕಾಯೇಲ ಬಾಸೇಯನ ಮಗ, ಬಾಸೇಯ ಮಲ್ಕೀಯನ ಮಗ, 41 ಮಲ್ಕೀಯ ಎತ್ನಿಯ ಮಗ, ಎತ್ನಿ ಜೆರಹನ ಮಗ, ಜೆರಹ ಅದಾಯನ ಮಗ, 42 ಅದಾಯ ಏತಾನನ ಮಗ, ಏತಾನ ಜಿಮ್ಮನ ಮಗ, ಜಿಮ್ಮ ಶಿಮ್ಮಿಯ ಮಗ, 43 ಶಿಮ್ಮಿ ಯಹತನ ಮಗ, ಯಹತ್ ಗೇರ್ಷೋಮನ ಮಗ, ಗೇರ್ಷೋಮ್ ಲೇವಿಯ ಮಗ.
44 ಅವ್ರ ಸಹೋದರರು ಅಂದ್ರೆ ಮೆರಾರೀಯ ವಂಶದವರು+ ಹೇಮಾನನ ಎಡಗಡೆ ನಿಲ್ತಿದ್ರು. ಅವ್ರಲ್ಲಿ ಏತಾನ+ ಇದ್ದ. ಅವನು ಕೀಷಿಯ ಮಗ. ಕೀಷಿ ಅಬ್ದಿಯ ಮಗ, ಅಬ್ದಿ ಮಲ್ಲೂಕನ ಮಗ, 45 ಮಲ್ಲೂಕ ಹಷಬ್ಯನ ಮಗ, ಹಷಬ್ಯ ಅಮಚ್ಯನ ಮಗ, ಅಮಚ್ಯ ಹಿಲ್ಕೀಯನ ಮಗ, 46 ಹಿಲ್ಕೀಯ ಅಮ್ಚಿಯ ಮಗ, ಅಮ್ಚಿ ಬಾನಿಯ ಮಗ, ಬಾನಿ ಶೆಮೆರನ ಮಗ, 47 ಶೆಮೆರ ಮಹ್ಲಿಯ ಮಗ, ಮಹ್ಲಿ ಮೂಷಿಯ ಮಗ, ಮೂಷಿ ಮೆರಾರೀಯ ಮಗ, ಮೆರಾರಿ ಲೇವಿಯ ಮಗ.
48 ಅವ್ರ ಸಹೋದರರಾದ ಬೇರೆ ಲೇವಿಯರನ್ನ ಪವಿತ್ರ ಡೇರೆಯ ಅಂದ್ರೆ ಸತ್ಯ ದೇವರ ಆಲಯದ ಎಲ್ಲ ಸೇವೆ ಮಾಡೋಕೆ ನೇಮಿಸಲಾಗಿತ್ತು.+ 49 ಆರೋನ ಮತ್ತು ಅವನ ಮಕ್ಕಳು+ ಸತ್ಯ ದೇವರ ಸೇವಕನಾದ ಮೋಶೆ ಹೇಳಿದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋ ಯಜ್ಞವೇದಿ ಮೇಲೆ+ ಬಲಿಗಳನ್ನ ಅರ್ಪಿಸಿ, ಧೂಪವೇದಿ ಮೇಲೆ+ ಧೂಪ ಹಾಕಿ ಹೊಗೆ ಏರೋ ತರ ಮಾಡ್ತಿದ್ರು. ಇಸ್ರಾಯೇಲ್ಯರ ಪ್ರಾಯಶ್ಚಿತ್ತಕ್ಕಾಗಿ ಅತೀ ಪವಿತ್ರ ವಿಷ್ಯಗಳಿಗೆ ಸಂಬಂಧಿಸಿದ ಕೆಲಸಗಳನ್ನೆಲ್ಲ ಮಾಡ್ತಿದ್ರು.+ 50 ಆರೋನನ ವಂಶದವರು+ ಯಾರಂದ್ರೆ, ಆರೋನನ ಮಗ ಎಲ್ಲಾಜಾರ್,+ ಎಲ್ಲಾಜಾರನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ, 51 ಅಬೀಷೂವನ ಮಗ ಬುಕ್ಕಿ, ಬುಕ್ಕಿಯ ಮಗ ಉಜ್ಜಿ, ಉಜ್ಜಿಯ ಮಗ ಜೆರಹ್ಯ, 52 ಜೆರಹ್ಯನ ಮಗ ಮೆರಾಯೋತ, ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ,+ 53 ಅಹೀಟೂಬನ ಮಗ ಚಾದೋಕ್,+ ಚಾದೋಕನ ಮಗ ಅಹೀಮಾಚ.
54 ಲೇವಿಯರು ತಮ್ಮ ಪ್ರಾಂತ್ಯಗಳಲ್ಲಿ ವಾಸಕ್ಕಾಗಿ ಪಾಳೆಯ* ಹೂಡಿದ ಜಾಗಗಳು: ಆರೋನನ ವಂಶದವ್ರಿಗೆ ಸೇರಿದ ಕೆಹಾತ್ಯರ ಮನೆತನಕ್ಕೆ ಮೊದಲ ಚೀಟು ಬಿದ್ದದ್ರಿಂದ, 55 ಅವ್ರಿಗೆ ಯೆಹೂದ ಪ್ರದೇಶದ ಹೆಬ್ರೋನನ್ನ,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು ಸಿಕ್ತು. 56 ಆದ್ರೆ ಪಟ್ಟಣದ ಹೊಲಗಳು, ಪಟ್ಟಣಕ್ಕೆ ಸೇರಿದ ಹಳ್ಳಿಗಳು ಯೆಫುನ್ನೆಯ ಮಗ ಕಾಲೇಬನಿಗೆ+ ಸಿಕ್ತು. 57 ಆರೋನನ ವಂಶದವ್ರಿಗೆ ಆಶ್ರಯ ನಗರಗಳಾಗಿದ್ದ*+ ಹೆಬ್ರೋನ್,+ ಲಿಬ್ನ,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು, ಯತ್ತೀರ್,+ ಎಷ್ಟೆಮೋವ, ಅದಕ್ಕೆ ಸೇರಿದ ಹುಲ್ಲುಗಾವಲುಗಳು+ 58 ಹೀಲೇನ್, ಅದಕ್ಕೆ ಸೇರಿದ ಹುಲ್ಲುಗಾವಲುಗಳು, ದೆಬೀರ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು, 59 ಆಷಾನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು, ಬೇತ್-ಷೆಮೆಷ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು ಸಿಕ್ತು. 60 ಬೆನ್ಯಾಮೀನ್ ಕುಲದಿಂದ ಗೆಬ,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು, ಆಲೆಮೆತ್, ಅದಕ್ಕೆ ಸೇರಿದ ಹುಲ್ಲುಗಾವಲುಗಳು, ಅನಾತೋತ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳು ಸಿಕ್ತು. ಹೀಗೆ ಅವ್ರ ಮನೆತನಗಳಿಗೆ ಒಟ್ಟು 13 ಪಟ್ಟಣಗಳು ಸಿಕ್ಕಿದ್ವು.+
61 ಉಳಿದ ಕೆಹಾತ್ಯರಿಗೆ ಚೀಟುಹಾಕಿದಾಗ ಹತ್ತು ಪಟ್ಟಣ ಸಿಕ್ತು. ಆ ಪಟ್ಟಣಗಳು ಬೇರೆ ಕುಲಗಳ ಮನೆತನಗಳಿಂದ, ಮನಸ್ಸೆಯ ಅರ್ಧ ಕುಲದಿಂದ ಸಿಕ್ತು.+
62 ಗೇರ್ಷೋಮ್ಯರಿಗೆ ಅವ್ರವ್ರ ಮನೆತನಗಳ ಪ್ರಕಾರ 13 ಪಟ್ಟಣ ಸಿಕ್ತು. ಅವು ಇಸ್ಸಾಕಾರ್, ಅಶೇರ್, ನಫ್ತಾಲಿ, ಬಾಷಾನಿನಲ್ಲಿ ವಾಸವಿದ್ದ ಮನಸ್ಸೆ ಕುಲಗಳಿಗೆ ಸೇರಿದ ಪಟ್ಟಣಗಳು.+
63 ಮೆರಾರೀಯರಿಗೆ ಅವ್ರವ್ರ ಮನೆತನಗಳ ಪ್ರಕಾರ 12 ಪಟ್ಟಣ ಚೀಟುಹಾಕಿ ಸಿಕ್ತು. ಅವು ರೂಬೇನ್, ಗಾದ್, ಜೆಬುಲೂನ್ ಕುಲಗಳಿಗೆ ಸೇರಿದ ಪಟ್ಟಣಗಳು.+
64 ಹೀಗೆ ಇಸ್ರಾಯೇಲ್ಯರು ಲೇವಿಯರಿಗೆ ಈ ಪಟ್ಟಣಗಳನ್ನ, ಅವುಗಳಿಗೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು.+ 65 ಅಷ್ಟೇ ಅಲ್ಲ ಯೆಹೂದ, ಸಿಮೆಯೋನ್, ಬೆನ್ಯಾಮೀನ್ ಕುಲಗಳಿಗೆ ಸೇರಿದ ಪಟ್ಟಣಗಳನ್ನ ಚೀಟುಹಾಕಿ ಕೊಟ್ರು. ಆ ಪಟ್ಟಣಗಳಿಗೆ ಅವ್ರವ್ರ ಹೆಸ್ರುಗಳನ್ನೇ ಇಟ್ರು.
66 ಇನ್ನೂ ಕೆಲವು ಕೆಹಾತ್ಯರ ಮನೆತನಗಳಿಗೆ ಎಫ್ರಾಯೀಮ್ ಕುಲಕ್ಕೆ ಸೇರಿದ ಪಟ್ಟಣಗಳು ಸಿಕ್ತು.+ 67 ಆ ಮನೆತನಗಳಿಗೆ ಆಶ್ರಯ ನಗರಗಳನ್ನ* ಅಂದ್ರೆ ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿದ್ದ ಶೆಕೆಮ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಗೆಜೆರ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 68 ಯೊಕ್ಮೆಯಾಮ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಬೇತ್-ಹೋರೋನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 69 ಅಯ್ಯಾಲೋನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಗತ್-ರಿಮ್ಮೋನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು. 70 ಉಳಿದ ಕೆಹಾತ್ಯರ ಮನೆತನಗಳಿಗೆ ಮನಸ್ಸೆಯ ಅರ್ಧ ಕುಲದಿಂದ ಆನೇರ, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಬಿಳ್ಳಾಮ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು.
71 ಗೇರ್ಷೋಮ್ಯರಿಗೆ ಮನಸ್ಸೆಯ ಅರ್ಧ ಕುಲದ ಮನೆತನಕ್ಕೆ ಸೇರಿದ ಪ್ರಾಂತ್ಯಗಳಿಂದ ಬಾಷಾನಿನಲ್ಲಿರೋ ಗೋಲಾನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಅಷ್ಟರೋತ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ,+ 72 ಇಸ್ಸಾಕಾರ್ ಕುಲದಿಂದ ಕೆದೆಷ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ದಾಬೆರತ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ,+ 73 ರಾಮೋತ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಆನೇಮ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 74 ಅಶೇರ್ ಕುಲದಿಂದ ಮಾಷಾಲ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಅಬ್ದೋನ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ,+ 75 ಹೂಕೋಕ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ರೆಹೋಬ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 76 ನಫ್ತಾಲಿ ಕುಲದಿಂದ ಗಲಿಲಾಯದ+ ಕೆದೆಷ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಹಮ್ಮೋನ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಕಿರ್ಯಾತಯಿಮ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು.
77 ಉಳಿದ ಮೆರಾರೀಯರಿಗೆ ಜೆಬುಲೂನ್+ ಕುಲದಿಂದ ರಿಮ್ಮೋನೋ, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ತಾಬೋರ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು. 78 ಯೆರಿಕೋವಿನ ಹತ್ರ ಹರಿಯೋ ಯೋರ್ದನ್ ನದಿಯ ಪೂರ್ವ ದಿಕ್ಕಲ್ಲಿರೋ ರೂಬೇನ್ ಕುಲದಿಂದ ಕಾಡಲ್ಲಿರೋ ಬೆಚೆರ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಯಹಜ,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 79 ಕೆದೇಮೋತ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಮೇಫಾಯತ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು. 80 ಗಾದ್ ಕುಲದಿಂದ ಗಿಲ್ಯಾದಿನ ರಾಮೋತ್, ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಮಹನಯಿಮ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, 81 ಹೆಷ್ಬೋನ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ, ಯಜ್ಜೇರ್,+ ಅದಕ್ಕೆ ಸೇರಿದ ಹುಲ್ಲುಗಾವಲುಗಳನ್ನ ಕೊಟ್ರು.