ನೆಹೆಮೀಯ
3 ಆಗ ಮಹಾ ಪುರೋಹಿತ ಎಲ್ಯಾಷೀಬ,+ ಪುರೋಹಿತರಾಗಿದ್ದ ಅವನ ಸಹೋದರರು ಎದ್ದು ‘ಕುರಿ ಬಾಗಿಲನ್ನ’+ ಕಟ್ಟೋಕೆ ಶುರು ಮಾಡಿದ್ರು. ಅದನ್ನ ಪ್ರತಿಷ್ಠೆ ಮಾಡಿ*+ ಬಾಗಿಲುಗಳನ್ನ ಇಟ್ರು. ‘ಹಮ್ಮೆಯಾ ಕೋಟೆ+ ತನಕ’ ಮತ್ತು ‘ಹನನೇಲ್ ಕೋಟೆ+ ತನಕ’ ಕಟ್ಟಿ ಪ್ರತಿಷ್ಠೆ ಮಾಡಿದ್ರು. 2 ಅವ್ರ ಪಕ್ಕದ ಭಾಗವನ್ನ ಯೆರಿಕೋವಿನ+ ಗಂಡಸ್ರು ಕಟ್ತಿದ್ರು. ಅವ್ರ ಪಕ್ಕದಲ್ಲಿ ಇಮ್ರಿಯ ಮಗ ಜಕ್ಕೂರ ಕಟ್ತಿದ್ದ.
3 ಹಸ್ಸೆನಾಹನ ಗಂಡು ಮಕ್ಕಳು ‘ಮೀನುಬಾಗಿಲನ್ನ’+ ಕಟ್ಟಿದ್ರು. ಅದಕ್ಕೆ ಕಂಬಗಳನ್ನ ಇಟ್ಟು+ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. 4 ಅವ್ರ ಪಕ್ಕದಲ್ಲಿ ಹಕ್ಕೋಚನ ಮೊಮ್ಮಗನೂ ಊರೀಯಾನ ಮಗನೂ ಆದ ಮೆರೇಮೋತ+ ಕಟ್ಟಿದ. ಅಲ್ಲಿಂದ ಮುಂದೆ ಮೆಷೇಜಬೇಲನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಮೆಷುಲ್ಲಾಮ+ ಕಟ್ಟಿದ. ಅಲ್ಲಿಂದ ಮುಂದೆ ಬಾನನ ಮಗ ಚಾದೋಕ ಕಟ್ಟಿದ. 5 ಅಲ್ಲಿಂದ ಮುಂದೆ ತೆಕೋವದವರು+ ಕಟ್ಟಿದ್ರು. ಆದ್ರೆ ತೆಕೋವದ ಪ್ರಮುಖರು ಕೈಜೋಡಿಸಲಿಲ್ಲ. ಇನ್ನೊಬ್ಬನ ಅಧಿಕಾರದ ಕೆಳಗೆ ಕೆಲಸ ಮಾಡೋಕೆ ಅವ್ರಿಗೆ ದೀನತೆ ಇರಲಿಲ್ಲ.*
6 ಪಾಸೇಹನ ಮಗ ಯೋಯಾದ, ಬೆಸೋದ್ಯನ ಮಗ ಮೆಷುಲ್ಲಾಮ ‘ಹಳೇ ಪಟ್ಟಣದ ಬಾಗಿಲನ್ನ’+ ಕಟ್ಟಿದ್ರು. ಅದಕ್ಕೆ ಕಂಬಗಳನ್ನ ಇಟ್ಟು ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. 7 ಅವ್ರ ಪಕ್ಕದ ಭಾಗವನ್ನ ಗಿಬ್ಯೋನ್ಯನಾಗಿದ್ದ+ ಮೆಲೆಟ್ಯ, ಮೇರೊನೋತ್ಯನಾದ ಯಾದೋನ ಕಟ್ಟಿದ್ರು. ಇವರು ಗಿಬ್ಯೋನಿನ ಮತ್ತು ಮಿಚ್ಪಾದ+ ಜನ್ರಾಗಿದ್ರು. ಇವರು ನದಿಯ ಈಕಡೆ ಪ್ರದೇಶದಲ್ಲಿದ್ದ*+ ರಾಜ್ಯಪಾಲನ ಅಧಿಕಾರದ ಕೆಳಗಿದ್ರು. 8 ಅವ್ರ ಪಕ್ಕದ ಭಾಗವನ್ನ ಹರ್ಹಯನ ಮಗ ಉಜ್ಜೀಯೇಲ ಕಟ್ಟಿದ. ಇವನು ಅಕ್ಕಸಾಲಿಗ. ಅವನ ಪಕ್ಕದ ಭಾಗವನ್ನ ಸುಗಂಧದ್ರವ್ಯಗಳನ್ನ ಮಾಡ್ತಿದ್ದ ಹನನ್ಯ ಕಟ್ಟಿದ. ಇವರು ಯೆರೂಸಲೇಮಿನ ‘ಅಗಲ ಗೋಡೆ ತನಕ’+ ನೆಲಕ್ಕೆ ಚಪ್ಪಡಿ ಕಲ್ಲುಗಳನ್ನ ಹಾಕಿ ದಾರಿಮಾಡಿದ್ರು. 9 ಅವ್ರ ಪಕ್ಕದ ಭಾಗವನ್ನ ಹೂರನ ಮಗ ರೆಫಾಯ ಕಟ್ಟಿದ. ಇವನು ಯೆರೂಸಲೇಮಿನ ಅರ್ಧ ಜಿಲ್ಲೆಗೆ ನಾಯಕನಾಗಿದ್ದ. 10 ಅಲ್ಲಿಂದ ಮುಂದೆ ಹರೂಮಫನ ಮಗ ಯೆದಾಯ ತನ್ನ ಮನೆ ಮುಂದೆಯಿದ್ದ ಭಾಗವನ್ನ ಕಟ್ಟಿದ. ಅವನ ಪಕ್ಕದ ಭಾಗವನ್ನ ಹಷಬ್ನೆಯನ ಮಗ ಹಟ್ಟೂಷ ಕಟ್ಟಿದ.
11 ಹಾರಿಮನ+ ಮಗ ಮಲ್ಕೀಯ, ಪಹತ್-ಮೋವಾಬನ+ ಮಗ ಹಷ್ಷೂಬ ಇನ್ನೊಂದು ಭಾಗ* ಕಟ್ಟಿದ್ರು. ಜೊತೆಗೆ ‘ಒಲೆಗಳ ಕೋಟೆಯನ್ನ’+ ಕೂಡ ಕಟ್ಟಿದ್ರು. 12 ಅವ್ರ ಪಕ್ಕದ ಭಾಗವನ್ನ ಹಲೋಹೇಷನ ಮಗ ಶಲ್ಲೂಮ ತನ್ನ ಹೆಣ್ಣು ಮಕ್ಕಳ ಜೊತೆ ಸೇರಿ ಕಟ್ಟಿದ. ಇವನು ಯೆರೂಸಲೇಮಿನ ಅರ್ಧ ಜಿಲ್ಲೆಗೆ ನಾಯಕನಾಗಿದ್ದ.
13 ಹಾನೂನನು ಜಾನೋಹ+ ಪಟ್ಟಣದ ಜನ್ರ ಜೊತೆ ಸೇರಿ ‘ತಗ್ಗಿನ ಬಾಗಿಲನ್ನ’+ ಕಟ್ಟಿದ. ಅದನ್ನ ಮತ್ತೆ ಕಟ್ಟಿ ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. ಅವರು ‘ಬೂದಿ ರಾಶಿಯ ಬಾಗಿಲಿನ+ ತನಕ’ 1,000 ಮೊಳದಷ್ಟು* ಗೋಡೆಯನ್ನ ಕಟ್ಟಿದ್ರು. 14 ಬೇತ್-ಹಕ್ಕೆರೆಮ್+ ಜಿಲ್ಲೆಯ ನಾಯಕನೂ ರೇಕಾಬನ ಮಗನೂ ಆದ ಮಲ್ಕೀಯ ‘ಬೂದಿ ರಾಶಿಯ ಬಾಗಿಲು’ ಕಟ್ಟಿದ. ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ.
15 ಕೊಲ್ಹೋಜೆಯ ಮಗನೂ ಮಿಚ್ಪಾ+ ಜಿಲ್ಲೆಯ ನಾಯಕನೂ ಆದ ಶಲ್ಲೂನ ‘ಬುಗ್ಗೆ ಬಾಗಿಲನ್ನ’+ ಕಟ್ಟಿದ. ಅದನ್ನ, ಅದ್ರ ಚಾವಣಿಯನ್ನ ಕಟ್ಟಿ ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ. ಅವನು ರಾಜನ ಉದ್ಯಾನವನಕ್ಕೆ+ ಹೋಗೋ ಕಾಲುವೆ ಹತ್ರ ಇರೋ ಕೊಳದ ಗೋಡೆಯನ್ನ+ ಸಹ ದಾವೀದ ಪಟ್ಟಣದ+ ಕೆಳಗಿನ ಮೆಟ್ಟಿಲುಗಳ+ ತನಕ ಕಟ್ಟಿದ.
16 ಅಲ್ಲಿಂದ ಮುಂದೆ ಅಜ್ಬೂಕನ ಮಗನೂ ಬೇತ್-ಚೂರಿನ+ ಅರ್ಧ ಜಿಲ್ಲೆಗೆ ನಾಯಕನೂ ಆದ ನೆಹೆಮೀಯ ಕಟ್ಟಿದ. ಅವನು ‘ದಾವೀದನ ರಾಜಮನೆತನದ ಸಮಾಧಿಯ’+ ಮುಂದಿಂದ ಅಗೆದಿದ್ದ ಕೊಳದ+ ತನಕ, ‘ವೀರ ಸೈನಿಕರ ಮನೆ ತನಕ’ ಕಟ್ಟಿದ.
17 ಅವನ ಪಕ್ಕದಲ್ಲಿ ಲೇವಿಯರು ಕೆಲಸ ಮಾಡಿದ್ರು. ಒಂದು ಭಾಗವನ್ನ ಬಾನಿಯ ಮಗ ರೆಹೂಮ ಮಾಡಿದ್ರೆ, ಇನ್ನೊಂದನ್ನ ಕೆಯೀಲಾದ+ ಅರ್ಧ ಜಿಲ್ಲೆಗೆ ನಾಯಕನಾಗಿದ್ದ ಹಷಬ್ಯ ಮಾಡಿದ. ಅವನು ತನ್ನ ಜಿಲ್ಲೆಯನ್ನ ಪ್ರತಿನಿಧಿಸ್ತಾ ಕೆಲಸ ಮಾಡಿದ. 18 ಅವನ ಪಕ್ಕದ ಭಾಗದಲ್ಲಿ ಅವ್ರ ಸಹೋದರರು ಕೆಲಸ ಮಾಡಿದ್ರು. ಹೇನಾದಾದನ ಮಗ ಬವೈ ಅವ್ರ ಮೇಲ್ವಿಚಾರಕನಾಗಿದ್ದ. ಇವನು ಕೆಯೀಲಾದ ಅರ್ಧ ಜಿಲ್ಲೆಗೆ ನಾಯಕನಾಗಿದ್ದ.
19 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಯೆಷೂವನ+ ಮಗನೂ ಮಿಚ್ಪಾದ ನಾಯಕನೂ ಆಗಿದ್ದ ಏಚೆರ ಕಟ್ಟಿದ. ಆ ಭಾಗ ‘ಆಧಾರ ಗೋಡೆ’+ ಹತ್ರ ಇದ್ದ ‘ಆಯುಧಶಾಲೆಗೆ’ ಹೋಗೋ ದಿಬ್ಬದ ಮುಂದೆ ಇತ್ತು.
20 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಜಬೈಯ+ ಮಗ ಬಾರೂಕ ತುಂಬ ಉತ್ಸಾಹದಿಂದ ಕಟ್ಟಿದ. ಅದು ‘ಆಧಾರ ಗೋಡೆಯಿಂದ’ ಮಹಾ ಪುರೋಹಿತ ಎಲ್ಯಾಷೀಬನ+ ಮನೆ ಬಾಗಿಲ ತನಕ ಇತ್ತು.
21 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಹಕ್ಕೋಚನ ಮೊಮ್ಮಗನೂ ಊರೀಯಾನ ಮಗನೂ ಆದ ಮೆರೇಮೋತ+ ಕಟ್ಟಿದ. ಅದು ಎಲ್ಯಾಷೀಬನ ಮನೆ ಬಾಗಿಲಿಂದ ಆ ಮನೆಯ ಕೊನೆ ತನಕ ಇತ್ತು.
22 ಅಲ್ಲಿಂದ ಮುಂದೆ ಯೋರ್ದನ್+ ಜಿಲ್ಲೆಯ* ಪುರೋಹಿತರು ಕಟ್ಟಿದ್ರು. 23 ಅವ್ರ ಪಕ್ಕದಲ್ಲಿ ಬೆನ್ಯಾಮೀನ, ಹಷ್ಷೂಬ ತಮ್ಮತಮ್ಮ ಮನೆ ಮುಂದೆ ಇದ್ದ ಭಾಗವನ್ನ ಕಟ್ಟಿದ್ರು. ಅವ್ರ ಪಕ್ಕದಲ್ಲಿ ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ ತನ್ನ ಮನೆ ಹತ್ರ ಇದ್ದ ಭಾಗವನ್ನ ಕಟ್ಟಿದ. 24 ಆಮೇಲೆ ಇನ್ನೊಂದು ಭಾಗವನ್ನ ಹೇನಾದಾದನ ಮಗ ಬಿನ್ನೂಯ ಕಟ್ಟಿದ. ಅದು ಅಜರ್ಯನ ಮನೆಯಿಂದ ‘ಆಧಾರ ಗೋಡೆ’+ ಮೂಲೆ ತನಕ ಇತ್ತು.
25 ಅವನ ಪಕ್ಕದಲ್ಲಿ ಊಜೈಯ ಮಗ ಪಾಲಾಲ ‘ಆಧಾರ ಗೋಡೆಯ’ ಮುಂದೆ ಇರೋ, ರಾಜನ ಅರಮನೆಯ+ ಪಕ್ಕದಲ್ಲೇ ಇದ್ದ ಕೋಟೆ ಮುಂದೆ ಇರೋ ಭಾಗವನ್ನ ಕಟ್ಟಿದ. ಅದು ‘ಕಾವಲುಗಾರರ ಅಂಗಳದಲ್ಲಿ’+ ಇತ್ತು. ಆಮೇಲೆ ಪರೋಷನ ಮಗ+ ಪೆದಾಯ ಕಟ್ಟಿದ.
26 ಓಫೇಲ್+ ಬೆಟ್ಟದಲ್ಲಿ ವಾಸವಿದ್ದ ದೇವಾಲಯದ ಸೇವಕರು*+ ಪೂರ್ವಕ್ಕಿದ್ದ ‘ನೀರು ಬಾಗಿಲ’+ ಮುಂದಿನ ತನಕ, ಚಾಚ್ಕೊಂಡಿರೋ ಕೋಟೆ ತನಕ ಕಟ್ಟಿದ್ರು.
27 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ತೆಕೋವದವರು+ ಕಟ್ಟಿದ್ರು. ಅದು ಚಾಚ್ಕೊಂಡಿರೋ ದೊಡ್ಡ ಕೋಟೆಯಿಂದ ಓಫೇಲಿನ ಗೋಡೆ ತನಕ ಇತ್ತು.
28 ಪುರೋಹಿತರು ತಮ್ಮತಮ್ಮ ಮನೆ ಮುಂದೆ ಇದ್ದ ಭಾಗವನ್ನ ಅಂದ್ರೆ ‘ಕುದುರೆ ಬಾಗಿಲಿಂದ’+ ಮುಂದೆ ಇದ್ದ ಭಾಗವನ್ನ ಕಟ್ಟಿದ್ರು.
29 ಅವರ ಪಕ್ಕದ ಭಾಗವನ್ನ ಇಮ್ಮೇರನ ಮಗ ಚಾದೋಕ+ ಕಟ್ಟಿದ. ಅದು ಅವನ ಮನೆಯ ಮುಂದಿನ ಭಾಗವಾಗಿತ್ತು.
ಅವನ ಪಕ್ಕದಲ್ಲಿ ಶೆಕನ್ಯನ ಮಗನೂ ಪೂರ್ವದಿಕ್ಕಿನ ಬಾಗಿಲು+ ಕಾಯೋನೂ ಆಗಿದ್ದ ಶೆಮಾಯ ಕಟ್ಟಿದ.
30 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಶೆಲೆಮ್ಯನ ಮಗ ಹನನ್ಯ, ಚಾಲಾಫನ ಆರನೇ ಮಗ ಹಾನೂನ ಕಟ್ಟಿದ್ರು.
ಅಲ್ಲಿಂದ ಮುಂದೆ ಬೆರೆಕ್ಯನ ಮಗ ಮೆಷುಲ್ಲಾಮ+ ತನ್ನ ದೊಡ್ಡ ಕೋಣೆಯ ಮುಂದೆ ಇದ್ದ ಭಾಗವನ್ನ ಕಟ್ಟಿದ.
31 ಅವನ ಪಕ್ಕದಲ್ಲಿ ಅಕ್ಕಸಾಲಿಗನಾಗಿದ್ದ ಮಲ್ಕೀಯ ‘ತನಿಖೆಯ ಬಾಗಿಲ’ ಮುಂದೆ ಇದ್ದ ದೇವಾಲಯದ ಸೇವಕರ,*+ ವರ್ತಕರ ಮನೆ ತನಕ ಮೂಲೆಯಲ್ಲಿರೋ ಚಾವಣಿ ಮೇಲಿನ ಕೋಣೆ ತನಕ ಕಟ್ಟಿದ.
32 ಮೂಲೆಯಲ್ಲಿರೋ ಚಾವಣಿ ಮೇಲಿನ ಕೋಣೆ ಮತ್ತು ‘ಕುರಿ ಬಾಗಿಲಿನ’+ ಮಧ್ಯದ ಭಾಗವನ್ನ ಅಕ್ಕಸಾಲಿಗರು, ವರ್ತಕರು ಕಟ್ಟಿದ್ರು.