ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್* ರಾಗದಲ್ಲಿ ಹಾಡಬೇಕು. ಆಸಾಫನ+ ಮಧುರ ಗೀತೆ.
77 ನಾನು ಜೋರಾಗಿ ದೇವರಿಗೆ ಮೊರೆ ಇಡ್ತೀನಿ,
ನಾನು ದೇವರಿಗೆ ಪ್ರಾರ್ಥಿಸ್ತೀನಿ, ಆತನು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊತಾನೆ.+
2 ಕಷ್ಟಕಾಲದಲ್ಲಿ ನಾನು ಯೆಹೋವನಿಗಾಗಿ ಹುಡುಕ್ತೀನಿ.+
ಇಡೀ ರಾತ್ರಿ ನಾನು ನನ್ನ ಕೈಗಳನ್ನ ಆತನ ಕಡೆಗೆ ಚಾಚ್ಕೊಂಡೇ ಇರ್ತಿನಿ.
ಆದ್ರೂ ನನಗೆ ನೆಮ್ಮದಿ ಸಿಗ್ತಿಲ್ಲ.
3 ದೇವರು ಮಾಡಿದ್ದನ್ನೆಲ್ಲ ನೆನಪಿಸ್ಕೊಂಡು ಆತನಿಗಾಗಿ ಹಾತೊರಿತಾ ಇದ್ದೀನಿ,+
ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ, ನನ್ನ ಶಕ್ತಿ ಇಳಿದುಹೋಗಿದೆ.+ (ಸೆಲಾ)
4 ನನ್ನ ಕಣ್ಣಿನ ರೆಪ್ಪೆ ಮುಚ್ಚಿಹೋಗದೆ ಇರೋ ತರ ನೀನು ಹಿಡ್ಕೊತೀಯ,
ನಾನು ಚಿಂತೆಯಲ್ಲೇ ಮುಳುಗಿದ್ದೀನಿ, ನನ್ನಿಂದ ಮಾತಾಡೋಕೆ ಆಗ್ತಿಲ್ಲ.
5 ಮುಗಿದು ಹೋದ ದಿನಗಳ ಬಗ್ಗೆ ನಾನು ಆಲೋಚಿಸ್ತೀನಿ,+
ಉರುಳಿ ಹೋದ ವರ್ಷಗಳ ಬಗ್ಗೆ ನಾನು ನೆನಪಿಸ್ಕೊಳ್ತೀನಿ.
6 ರಾತ್ರಿ ಹೊತ್ತು ನಾನು ನನ್ನ ಹಾಡನ್ನ* ನೆನಪಿಸ್ಕೊತೀನಿ,+
ನನ್ನ ಮನಸ್ಸಲ್ಲಿ ಧ್ಯಾನಿಸ್ತೀನಿ,+
ಈ ಪ್ರಶ್ನೆಗಳಿಗೆ ಶ್ರದ್ಧೆಯಿಂದ ಉತ್ರ ಹುಡುಕ್ತೀನಿ.
7 ಯೆಹೋವ ನಮ್ಮನ್ನ ಶಾಶ್ವತಕ್ಕೂ ಬಿಟ್ಟುಬಿಡ್ತಾನಾ?+
ಆತನು ತನ್ನ ಕೃಪೆನ ಇನ್ಯಾವತ್ತೂ ತೋರಿಸಲ್ವಾ?+
8 ಆತನು ತನ್ನ ಪ್ರೀತಿಯನ್ನ ಶಾಶ್ವತವಾಗಿ ತೋರಿಸದೆ ಇರ್ತಾನಾ?
ಆತನು ಕೊಟ್ಟ ಮಾತು ನಿಜ ಆಗೋದನ್ನ ಯಾವ ಪೀಳಿಗೆನೂ ನೋಡಲ್ವಾ?
9 ದೇವರು ತನ್ನ ಕೃಪೆ ತೋರಿಸೋದನ್ನ ಮರೆತುಬಿಟ್ಟಿದ್ದಾನಾ?+
ಅಥವಾ ಆತನು ತನ್ನ ಕೋಪದಿಂದ ಕರುಣೆ ತೋರಿಸೋದನ್ನ ನಿಲ್ಲಿಸಿಬಿಟ್ಟಿದ್ದಾನಾ? (ಸೆಲಾ)
10 “ಸರ್ವೋನ್ನತನು ನಮಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾನೆ
ಅನ್ನೋ ಚಿಂತೆ ನನ್ನನ್ನ ಕಿತ್ತುತಿಂತಿದೆ”+ ಅಂತ ನಾನು ಹೇಳ್ತಾ ಇರಬೇಕಾ?
11 ಯಾಹುವಿನ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ,
ನೀನು ತುಂಬ ಹಿಂದೆ ಮಾಡಿದ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ.
13 ದೇವರೇ, ನಿನ್ನ ದಾರಿಗಳು ಪವಿತ್ರ.
ದೇವರೇ, ನಿನ್ನಂಥ ಮಹಾ ದೇವರು ಬೇರೆ ಯಾರಾದ್ರೂ ಇದ್ದಾರಾ?+
14 ನೀನೇ ಸತ್ಯ ದೇವರು, ನಿನ್ನ ಕೆಲಸಗಳೆಲ್ಲ ಅದ್ಭುತ.+
ನೀನು ನಿನ್ನ ಬಲವನ್ನ ಜನಾಂಗಗಳಿಗೆ ತೋರಿಸಿದೆ.+
16 ದೇವರೇ, ಸಮುದ್ರ ನಿನ್ನನ್ನ ನೋಡ್ತು,
ಅದು ನಿನ್ನನ್ನ ನೋಡಿ ಭಯಪಡ್ತು.+
ಆಳವಾದ ನೀರು ಅಲ್ಲೋಲಕಲ್ಲೋಲ ಆಯ್ತು.
17 ಮೋಡಗಳು ನೀರು ಸುರಿಸಿದ್ವು.
ಮೇಘಗಳಿಂದ ತುಂಬಿದ ಆಕಾಶ ಗುಡುಗಿತು,
ನಿನ್ನ ಮಿಂಚಿನ ಬಾಣಗಳು ಎಲ್ಲ ಕಡೆ ಹೊಳೆದ್ವು.+
ಭೂಮಿ ನಡುಗಿ, ಕಂಪಿಸ್ತು.+
19 ನಿನ್ನ ದಾರಿ ಸಮುದ್ರದ ಒಳಗಿಂದ ಹೋಯ್ತು,+
ನಿನ್ನ ಮಾರ್ಗ ಎಷ್ಟೋ ಜಲರಾಶಿಗಳ ಮಧ್ಯದಿಂದ ಹೋಯ್ತು,
ಆದ್ರೆ ನಿನ್ನ ಹೆಜ್ಜೆ ಗುರುತನ್ನ ಕಂಡುಹಿಡಿಯೋಕೆ ಆಗಲಿಲ್ಲ.