ಒಂದನೇ ಪೂರ್ವಕಾಲವೃತ್ತಾಂತ
16 ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+ 2 ದಾವೀದ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸಿದ ಮೇಲೆ ಯೆಹೋವನ ಹೆಸ್ರಲ್ಲಿ ಜನ್ರನ್ನ ಆಶೀರ್ವದಿಸಿದ. 3 ಇದಾದ್ಮೇಲೆ ಅವನು ಎಲ್ಲ ಇಸ್ರಾಯೇಲ್ಯರಿಗೆ, ಅಂದ್ರೆ ಇಸ್ರಾಯೇಲಿನ ಎಲ್ಲ ಸ್ತ್ರೀಪುರುಷರಿಗೆ ಒಂದೊಂದು ರೊಟ್ಟಿ, ಖರ್ಜೂರದ ಬಿಲ್ಲೆ, ಒಣದ್ರಾಕ್ಷಿ ಬಿಲ್ಲೆ ಕೊಟ್ಟ. 4 ಆಮೇಲೆ ಅವನು ಕೆಲವು ಲೇವಿಯರನ್ನ ಯೆಹೋವನ ಮಂಜೂಷದ ಮುಂದೆ ಸೇವೆ ಮಾಡೋಕೆ,+ ಇಸ್ರಾಯೇಲ್ ದೇವರಾದ ಯೆಹೋವನನ್ನ ಮಹಿಮೆ ಪಡಿಸೋಕೆ,* ಆತನಿಗೆ ಧನ್ಯವಾದ ಹೇಳೋಕೆ, ಹಾಡಿ ಹೊಗಳೋಕೆ ನೇಮಿಸಿದ. 5 ಅವ್ರಲ್ಲಿ ಆಸಾಫ+ ಮುಖ್ಯಸ್ಥ. ಜೆಕರ್ಯ ಎರಡನೆಯವನಾಗಿದ್ದ. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ, ಯೆಗೀಯೇಲ್+ ಇವ್ರೆಲ್ಲ ತಂತಿವಾದ್ಯ ನುಡಿಸ್ತಿದ್ರು.+ ಆಸಾಫ ಝಲ್ಲರಿಗಳನ್ನ ಬಾರಿಸ್ತಿದ್ದ.+ 6 ಪುರೋಹಿತರಾದ ಬೆನಾಯ, ಯಹಜೀಯೇಲ ಸತ್ಯ ದೇವರ ಒಪ್ಪಂದದ ಮಂಜೂಷದ ಮುಂದೆ ದಿನಾಲೂ ತುತ್ತೂರಿಗಳನ್ನ ಊದುತಿದ್ರು.
7 ಆ ದಿನ ದಾವೀದ ಮೊದಲ ಸಲ ಯೆಹೋವನಿಗಾಗಿ ಒಂದು ಧನ್ಯವಾದ ಗೀತೆ ರಚಿಸಿದ. ಅದನ್ನ ಹಾಡೋಕೆ ಆಸಾಫನಿಗೆ,+ ಅವನ ಸಹೋದರರಿಗೆ ಹೇಳಿದ. ಆ ಹಾಡು ಹೀಗಿತ್ತು:
10 ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+
ಯೆಹೋವನನ್ನ ಹುಡುಕುವವರು ಸಂತೋಷ ಪಡಲಿ.+
11 ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+
ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.+
12 ಆತನು ಮಾಡಿದ ಮಹತ್ಕಾರ್ಯಗಳನ್ನ,+
ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,
13 ಆತನ ಸೇವಕನಾದ ಇಸ್ರಾಯೇಲಿನ ಸಂತತಿಯೇ,+
ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ,+ ಅದನ್ನ ನೆನಪಿಸ್ಕೊಳ್ಳಿ.
14 ಆತನು ನಮ್ಮ ದೇವರಾದ ಯೆಹೋವ.+
ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+
15 ಆತನ ಒಪ್ಪಂದವನ್ನ ಯಾವಾಗ್ಲೂ ನೆನಪಿಸ್ಕೊಳ್ಳಿ,
ಆತನು ಕೊಟ್ಟ ಮಾತನ್ನ* ಸಾವಿರ ಪೀಳಿಗೆಗಳ ತನಕ ನೆನಪಿಸ್ಕೊಳ್ಳಿ,+
16 ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+
ಆತನು ಇಸಾಕನಿಗೆ ಕೊಟ್ಟ ಮಾತನ್ನ+
17 ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,+
ಇಸ್ರಾಯೇಲ್ಯರ ಜೊತೆ ಶಾಶ್ವತ ಒಪ್ಪಂದ ಮಾಡ್ಕೊಂಡ.
19 ಅವರು ಆಗ ಸ್ವಲ್ಪ ಜನ ಇದ್ರು,
ಹೌದು, ಕಡಿಮೆ ಜನ ಇದ್ರು. ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+
20 ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+
21 ಯಾರಿಂದನೂ ಅವ್ರಿಗೆ ಅನ್ಯಾಯ ಆಗದ ಹಾಗೆ ಆತನು ನೋಡ್ಕೊಂಡ,+
ಅವ್ರಿಗೋಸ್ಕರ ರಾಜರನ್ನೂ ಬೈದನು,+
22 ‘ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,
ನನ್ನ ಪ್ರವಾದಿಗಳಿಗೆ ಏನೂ ಕೆಟ್ಟದು ಮಾಡಬೇಡಿ’ ಅಂದನು.+
23 ಭೂಮಿಯಲ್ಲಿ ಇರುವವರೇ ಯೆಹೋವನಿಗೆ ಗೀತೆ ಹಾಡಿ!
ಆತನ ರಕ್ಷಣಾಕಾರ್ಯಗಳ ಬಗ್ಗೆ ಪ್ರತಿದಿನ ಹೇಳಿ!+
24 ದೇಶಗಳ ಮಧ್ಯ ಆತನ ಗೌರವದ ಬಗ್ಗೆ,
ಜನ್ರ ಮಧ್ಯದಲ್ಲಿ ಆತನ ಅದ್ಭುತಗಳ ಬಗ್ಗೆ ಹೇಳಿ.
25 ಯಾಕಂದ್ರೆ ಯೆಹೋವ ದೊಡ್ಡವನು, ಆತನು ಬೇರೆ ಎಲ್ರಿಗಿಂತ ಹೆಚ್ಚು ಹೊಗಳಿಕೆಗೆ ಯೋಗ್ಯ.
ಬೇರೆಲ್ಲ ದೇವರುಗಳಿಗಿಂತ ಆತನು ಭಯವಿಸ್ಮಯ.+
28 ದೇಶದೇಶದ ಎಲ್ಲ ಕುಲಗಳ ಜನ್ರೇ ಯೆಹೋವನಿಗೆ ಕೊಡಬೇಕಾಗಿರೋದನ್ನ ಕೊಡಿ,
ಯೆಹೋವನ ಮಹಿಮೆ, ಬಲಕ್ಕಾಗಿ ಆತನಿಗೆ ಕೊಡಬೇಕಾಗಿರೋದನ್ನ ಕೊಡಿ.+
30 ಜನ್ರೇ, ಆತನ ಮುಂದೆ ಗಡಗಡ ನಡುಗಿ!
ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ.+
32 ಸಮುದ್ರ, ಅದ್ರಲ್ಲಿರೋ ಎಲ್ಲ ಜೈಕಾರ ಹಾಕಲಿ,
ಬಯಲುಗಳು, ಅವುಗಳಲ್ಲಿರೋ ಎಲ್ಲ ಆನಂದಿಸಲಿ.
33 ಅದೇ ಸಮಯದಲ್ಲಿ ಕಾಡಲ್ಲಿರೋ ಮರಗಳು ಯೆಹೋವನ ಮುಂದೆ ಸಂತೋಷದಿಂದ ಕೂಗಾಡಲಿ,
ಯಾಕಂದ್ರೆ ಆತನು ಭೂಮಿಗೆ ತೀರ್ಪು ಮಾಡೋಕೆ ಬರ್ತಿದ್ದಾನೆ.*
34 ಯೆಹೋವನಿಗೆ ಧನ್ಯವಾದ ಹೇಳಿ, ಯಾಕಂದ್ರೆ ಆತನು ಒಳ್ಳೆಯವನು.+
ಆತನ ಪ್ರೀತಿ ಶಾಶ್ವತ.+
35 ಹೀಗೆ ಹೇಳಿ: ‘ನಮ್ಮನ್ನ ರಕ್ಷಿಸೋ ದೇವರೇ,+ ನಮ್ಮನ್ನ ಕಾಪಾಡು,
ಬೇರೆ ದೇಶಗಳಿಂದ ನಮ್ಮನ್ನ ಒಟ್ಟುಸೇರಿಸಿ ಅವ್ರ ಕೈಯಿಂದ ನಮ್ಮನ್ನ ಬಿಡಿಸು,
ಆಗ ನಿನ್ನನ್ನ ಪವಿತ್ರ ಹೆಸ್ರಿಂದ ಕೊಂಡಾಡ್ತೀವಿ,+
36 ಇಸ್ರಾಯೇಲ್ ದೇವರಾದ
ಯೆಹೋವನಿಗೆ ಶಾಶ್ವತವಾಗಿ ಹೊಗಳಿಕೆ ಸಿಗಲಿ.’”
ಆಗ ಜನ್ರೆಲ್ಲ “ಆಮೆನ್”* ಅಂದ್ರು, ಯೆಹೋವನನ್ನ ಹೊಗಳಿದ್ರು.
37 ಆಮೇಲೆ ದಾವೀದ ಯೆಹೋವನ ಒಪ್ಪಂದದ ಮಂಜೂಷದ ಮುಂದೆ+ ದಿನಾಲೂ+ ಸೇವೆ ಮಾಡೋಕೆ ಆಸಾಫನನ್ನ,+ ಅವನ ಸಹೋದರರನ್ನ ಅಲ್ಲೇ ಬಿಟ್ಟುಹೋದ. 38 ಅಷ್ಟೇ ಅಲ್ಲ ಓಬೇದೆದೋಮನನ್ನ ಮತ್ತು ಅವನ ಕುಟುಂಬದಲ್ಲಿ 68 ಜನ್ರನ್ನ ಬಿಟ್ಟುಹೋದ. ಅವನು ಯೆದುತೂನನ ಮಗ ಓಬೇದೆದೋಮನನ್ನ, ಹೋಸನನ್ನ ಬಾಗಿಲು ಕಾಯುವವರಾಗಿ ನೇಮಿಸಿದ. 39 ಅವನು ಪುರೋಹಿತನಾದ ಚಾದೋಕನನ್ನ,+ ಅವನ ಜೊತೆ ಪುರೋಹಿತರನ್ನ ಗಿಬ್ಯೋನಿನ ಎತ್ತರದ ಸ್ಥಳದಲ್ಲಿದ್ದ+ ಯೆಹೋವನ ಪವಿತ್ರ ಡೇರೆ ಮುಂದೆ ನೇಮಿಸಿದ. 40 ಅವರು ಸರ್ವಾಂಗಹೋಮ ಬಲಿ ಅರ್ಪಿಸೋ ಯಜ್ಞವೇದಿ ಮೇಲೆ ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕಿತ್ತು. ಯೆಹೋವ ತನ್ನ ನಿಯಮ ಪುಸ್ತಕದಲ್ಲಿ ಬರೆಸಿದ್ದ ಅಂದ್ರೆ ಇಸ್ರಾಯೇಲ್ಯರಿಗೆ ಹೇಳಿದ್ದ ಎಲ್ಲವನ್ನ ಅವರು ಮಾಡಬೇಕಿತ್ತು.+ 41 ಅವ್ರ ಜೊತೆ ಹೇಮಾನ್, ಯೆದುತೂನ್+ ಅನ್ನುವವರನ್ನ, ಹೆಸ್ರುಹೆಸ್ರಾಗಿ ಕರೆದು ನೇಮಿಸಿದ್ದ ಇನ್ನೂ ಕೆಲವ್ರನ್ನ ಯೆಹೋವನಿಗೆ ಧನ್ಯವಾದ ಹೇಳೋಕೆ+ ಆರಿಸ್ಕೊಂಡ್ರು. ಯಾಕಂದ್ರೆ “ಆತನ ಪ್ರೀತಿ ಶಾಶ್ವತ.”+ 42 ಅವನು ಇವ್ರ ಜೊತೆ ಹೇಮಾನನನ್ನ,+ ಯೆದುತೂನನನ್ನ ತುತ್ತೂರಿ ಊದೋಕೆ, ಝಲ್ಲರಿ ಬಾರಿಸೋಕೆ, ಸತ್ಯ ದೇವರನ್ನ ಹಾಡಿ ಹೊಗಳೋಕೆ ಬಳಸೋ ಸಾಧನಗಳನ್ನ ಬಾರಿಸೋಕೆ ನೇಮಿಸಿದ. ಯೆದುತೂನನ+ ಗಂಡು ಮಕ್ಕಳನ್ನ ಬಾಗಿಲು ಕಾಯುವವರಾಗಿ ನೇಮಿಸಿದ. 43 ಆಮೇಲೆ ಜನ್ರೆಲ್ಲ ಅವ್ರವ್ರ ಮನೆಗೆ ಹೋದ್ರು. ದಾವೀದ ತನ್ನ ಕುಟುಂಬದವ್ರನ್ನ ಆಶೀರ್ವದಿಸೋಕೆ ಹೋದ.