ಒಂದನೇ ಪೂರ್ವಕಾಲವೃತ್ತಾಂತ
14 ತೂರಿನ ರಾಜ ಹೀರಾಮ+ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿದ. ಜೊತೆಗೆ ದೇವದಾರು ಮರಗಳನ್ನ, ಕಲ್ಲಿನ ಕೆಲಸಗಾರರನ್ನ,* ಬಡಗಿಗಳನ್ನ ದಾವೀದನಿಗಾಗಿ ಒಂದು ಅರಮನೆ ಕಟ್ಟೋಕೆ ಕಳಿಸ್ಕೊಟ್ಟ.+ 2 ಯೆಹೋವ ಇಸ್ರಾಯೇಲಲ್ಲಿ ತನ್ನ ರಾಜ್ಯವನ್ನ ಸ್ಥಿರಪಡಿಸಿದ್ದಾನೆ,+ ಆತನ ಜನ್ರಾದ ಇಸ್ರಾಯೇಲ್ಯರಿಗಾಗಿ ತನ್ನ ರಾಜ್ಯಾಧಿಕಾರವನ್ನ ಘನತೆಗೆ ಏರಿಸಿದ್ದಾನೆ ಅಂತ ದಾವೀದನಿಗೆ ಅರ್ಥ ಆಯ್ತು.+
3 ದಾವೀದ ಯೆರೂಸಲೇಮಲ್ಲಿ ತುಂಬ ಸ್ತ್ರೀಯರನ್ನ ಹೆಂಡತಿಯರಾಗಿ ಮಾಡ್ಕೊಂಡ,+ ಅವನಿಗೆ ತುಂಬ ಮಕ್ಕಳು ಹುಟ್ಟಿದ್ರು.+ 4 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳು:+ ಶಮ್ಮೂವ, ಶೋಬಾಬ್, ನಾತಾನ್,+ ಸೊಲೊಮೋನ,+ 5 ಇಬ್ಹಾರ್, ಎಲೀಷೂವ, ಎಲ್ಪೆಲೆಟ್, 6 ನೋಗ, ನೆಫೆಗ್, ಯಾಫೀಯ, 7 ಎಲೀಷಾಮ, ಬೇಲ್ಯಾದ, ಎಲೀಫೆಲೆಟ್.
8 ದಾವೀದನನ್ನ ಇಡೀ ಇಸ್ರಾಯೇಲಿನ ರಾಜನಾಗಿ ಅಭಿಷೇಕ ಮಾಡಿರೋ+ ವಿಷ್ಯವನ್ನ ಫಿಲಿಷ್ಟಿಯರು ಕೇಳಿಸ್ಕೊಂಡಾಗ ಎಲ್ಲಾ ಫಿಲಿಷ್ಟಿಯರು ದಾವೀದನ ವಿರುದ್ಧ ಯುದ್ಧಕ್ಕೆ ಬಂದ್ರು.+ ಈ ವಿಷ್ಯ ದಾವೀದನಿಗೆ ಗೊತ್ತಾದಾಗ ಅವ್ರ ವಿರುದ್ಧ ಯುದ್ಧಕ್ಕೆ ಹೋದ. 9 ಆಮೇಲೆ ಫಿಲಿಷ್ಟಿಯರು ಬಂದು ರೆಫಾಯಿಮ್ ಕಣಿವೆಯಲ್ಲಿ+ ದಾಳಿ ಮಾಡ್ತಾ ಇದ್ರು. 10 ಆಗ ದಾವೀದ ದೇವರ ಹತ್ರ “ನಾನು ಫಿಲಿಷ್ಟಿಯರ ವಿರುದ್ಧ ಯುದ್ಧ ಮಾಡ್ಲಾ? ಅವ್ರನ್ನ ನೀನು ನನ್ನ ಕೈಗೆ ಒಪ್ಪಿಸ್ತೀಯಾ?” ಅಂತ ಕೇಳಿದ. ಅದಕ್ಕೆ ಯೆಹೋವ “ಹೋಗು, ನಾನು ಅವ್ರನ್ನ ನಿನ್ನ ಕೈಗೆ ಒಪ್ಪಿಸ್ತೀನಿ” ಅಂದನು.+ 11 ಹಾಗಾಗಿ ದಾವೀದ ಬಾಳ್-ಪೆರಾಚೀಮಿಗೆ+ ಹೋಗಿ ಅಲ್ಲಿ ಫಿಲಿಷ್ಟಿಯರನ್ನ ಕೊಂದುಹಾಕಿದ. ಆಗ ದಾವೀದ “ಸತ್ಯ ದೇವರು ನನ್ನ ಮುಂದೆಮುಂದೆ ಹೋಗ್ತಾ ನೀರಿನ ಪ್ರವಾಹ ತರ ನನ್ನ ಶತ್ರುಗಳ ಮೇಲೆ ದಾಳಿ ಮಾಡಿದ್ದಾನೆ. ನನ್ನ ಕೈಯಿಂದ ಅವ್ರನ್ನ ನಾಶ ಮಾಡಿದ್ದಾನೆ” ಅಂದ. ಹಾಗಾಗಿ ಆ ಜಾಗಕ್ಕೆ ಬಾಳ್-ಪೆರಾಚೀಮ್* ಅಂತ ಹೆಸ್ರಿಟ್ರು. 12 ಫಿಲಿಷ್ಟಿಯರು ತಮ್ಮ ಮೂರ್ತಿಗಳನ್ನ ಅಲ್ಲೇ ಬಿಟ್ಟುಹೋದ್ರು. ದಾವೀದ ಆಜ್ಞೆ ಕೊಟ್ಟಾಗ ಆ ಮೂರ್ತಿಗಳನ್ನ ಬೆಂಕಿಯಲ್ಲಿ ಸುಟ್ಟುಹಾಕಿದ್ರು.+
13 ಫಿಲಿಷ್ಟಿಯರು ಇನ್ನೊಂದು ಸಲ ಅದೇ ಕಣಿವೆಗೆ ಬಂದು ದಾಳಿ ಮಾಡಿದ್ರು.+ 14 ದಾವೀದ ಸತ್ಯ ದೇವರ ಹತ್ರ ಮತ್ತೆ ವಿಚಾರಿಸಿದಾಗ “ನೇರವಾಗಿ ಯುದ್ಧಕ್ಕೆ ಹೋಗಬೇಡ. ಸುತ್ತುಹಾಕೊಂಡು ಅವರ ಹಿಂದಿಂದ ಹೋಗಿ ಬಾಕಾ ಪೊದೆಗಳ ಮುಂದೆ ಅವ್ರ ಮೇಲೆ ದಾಳಿ ಮಾಡು.+ 15 ಬಾಕಾ ಪೊದೆಗಳ ಮೇಲೆ ಸೈನ್ಯ ನಡಿಯೋ ಸದ್ದು ಕೇಳಿಸ್ಕೊಂಡಾಗ ತಕ್ಷಣ ಅವ್ರ ಮೇಲೆ ದಾಳಿಮಾಡು. ಸತ್ಯ ದೇವರೇ ನಿನಗಿಂತ ಮುಂಚೆ ಹೋಗಿ ಫಿಲಿಷ್ಟಿಯರ ಸೈನ್ಯವನ್ನ ನಾಶಮಾಡ್ತಾನೆ”+ ಅಂದನು. 16 ಹಾಗಾಗಿ ದಾವೀದ ಸತ್ಯ ದೇವರು ಹೇಳಿದ ಹಾಗೇ ಮಾಡಿದ.+ ಗಿಬ್ಯೋನಿಂದ ಗೆಜೆರಿನ+ ತನಕ ಫಿಲಿಷ್ಟಿಯರನ್ನ ಕೊಲ್ತಾ ಹೋದ. 17 ಆಗ ದಾವೀದನ ಕೀರ್ತಿ ದೇಶದಲ್ಲೆಲ್ಲ ಹಬ್ಬಿತು. ಎಲ್ಲ ಜನ್ರು ದಾವೀದನಿಗೆ ಹೆದರೋ ತರ ಯೆಹೋವ ಮಾಡಿದನು.+