ಕೀರ್ತನೆ
ದಾವೀದನ ಕೀರ್ತನೆ. ಮಸ್ಕಿಲ್.*
3 ನಾನು ಮೌನವಾಗಿದ್ದಾಗ, ಇಡೀ ದಿನ ನರಳ್ತಿದ್ದೆ. ಅದ್ರಿಂದ ನನ್ನ ಮೂಳೆ ಸವೆದುಹೋದ್ವು.+
4 ಯಾಕಂದ್ರೆ ಹಗಲೂರಾತ್ರಿ ನಿನ್ನ ಶಿಕ್ಷೆ* ನನಗೆ ಭಾರವಾಗಿತ್ತು.+
ಬಿಸಿಗೆ ಆವಿಯಾಗಿ ಹೋಗೋ ನೀರಿನ ತರ ನನ್ನ ಬಲ ಬತ್ತಿಹೋಯ್ತು.* (ಸೆಲಾ)
“ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ”+ ಅಂದೆ.
ಆಗ ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.+ (ಸೆಲಾ)
ಆಗ ಪ್ರವಾಹನೂ ಅವರ ಹತ್ರ ಬರೋಕೆ ಆಗಲ್ಲ.
ನೀನು ನನ್ನನ್ನ ಬಿಡಿಸಿ ನಾಲ್ಕೂ ದಿಕ್ಕಲ್ಲಿ ಖುಷಿಯನ್ನ ತುಂಬಿಸ್ತೀಯ.+ (ಸೆಲಾ)
8 “ನಾನು ನಿನಗೆ ತಿಳುವಳಿಕೆ ಕೊಡ್ತೀನಿ. ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ.+
ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ.+
9 ನೀನು ಬುದ್ಧಿ ಇಲ್ಲದ ಕುದುರೆ ತರ, ಹೇಸರಗತ್ತೆ ತರ ಆಗಬೇಡ,+
ಅದು ನಿನ್ನ ಹತ್ರ ಬರಬೇಕಂದ್ರೆ ನೀನು ಮೊದಲು ಅದಕ್ಕೆ ಕಡಿವಾಣ ಹಾಕಬೇಕು.”
11 ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ, ಉಲ್ಲಾಸಪಡಿ,
ಪ್ರಾಮಾಣಿಕ ಹೃದಯದವ್ರೇ, ಸಂತೋಷದಿಂದ ಜೈಕಾರ ಹಾಕಿ.