ಹೋಶೇಯ
6 “ಬನ್ನಿ, ಯೆಹೋವನ ಹತ್ರ ವಾಪಸ್ ಹೋಗೋಣ,
ಯಾಕಂದ್ರೆ ಆತನು ಸಿಂಹದ ತರ ನಮ್ಮನ್ನ ಸೀಳಿ ತುಂಡುತುಂಡು ಮಾಡಿರೋದಾದ್ರೂ+ ನಮ್ಮನ್ನ ವಾಸಿಮಾಡ್ತಾನೆ.
ಆತನು ನಮ್ಮನ್ನ ಹೊಡೆದಿರೋದಾದ್ರೂ ನಮ್ಮ ಗಾಯಗಳಿಗೆ ಪಟ್ಟಿ ಕಟ್ತಾನೆ.
2 ಎರಡು ದಿನಗಳಾದ ಮೇಲೆ ನಮ್ಮನ್ನ ಮತ್ತೆ ಬದುಕಿಸ್ತಾನೆ.
ಮೂರನೇ ದಿನ ನಮ್ಮನ್ನ ಎಬ್ಬಿಸ್ತಾನೆ,
ನಾವು ಆತನ ಮುಂದೆ ಬಾಳ್ತೀವಿ.
3 ನಾವು ಯೆಹೋವನನ್ನ ತಿಳ್ಕೊತೀವಿ,
ಆತನನ್ನ ತಿಳ್ಕೊಳ್ಳೋಕೆ ನಾವು ಶ್ರದ್ಧೆಯಿಂದ ಪ್ರಯತ್ನಿಸ್ತೀವಿ.
ಆತನ ಆಗಮನ ಸೂರ್ಯೋದಯದ ತರ ನಿಶ್ಚಯ.
ಆತನು ಸುರಿಯೋ ಮಳೆ ತರ,
ನೆಲವನ್ನ ತೋಯಿಸೋ ವಸಂತಕಾಲದ ಮಳೆ ತರ ನಮ್ಮ ಹತ್ರ ಬರ್ತಾನೆ.”
4 “ಎಫ್ರಾಯೀಮೇ, ನಾನು ನಿನಗೆ ಇನ್ನೇನು ಮಾಡ್ಲಿ?
ಯೆಹೂದವೇ, ನಾನು ನಿನಗೆ ಇನ್ನೇನು ಮಾಡ್ಲಿ?
ನಿಮ್ಮಲ್ಲಿ ಶಾಶ್ವತ ಪ್ರೀತಿಯಿದೆ ಅಂತ ಹೇಳ್ಕೊಳ್ತಿದ್ದೀರ. ಆದ್ರೆ ಅದು ಬೆಳಗ್ಗಿನ ಮೋಡದ ತರ ಕಣ್ಮರೆಯಾಗುತ್ತೆ,
ಇಬ್ಬನಿ ತರ ಬೇಗ ಕರಗಿಹೋಗುತ್ತೆ.
ನಿಮ್ಮ ಮೇಲೆ ಬರೋ ಆ ತೀರ್ಪುಗಳು ಬೆಳಕಿನ ತರ ಸ್ಪಷ್ಟವಾಗಿ ಕಾಣಿಸುತ್ತೆ.+
6 ನಾನು ನಿಮ್ಮ ಬಲಿಗಳನ್ನ ಇಷ್ಟಪಡದೆ, ನೀವು ಶಾಶ್ವತ ಪ್ರೀತಿ* ತೋರಿಸಬೇಕಂತಾನೇ ಇಷ್ಟಪಡ್ತೀನಿ,
ನಾನು ನಿಮ್ಮ ಸರ್ವಾಂಗಹೋಮಗಳನ್ನ ಇಷ್ಟಪಡದೆ, ನೀವು ನನ್ನ ಬಗ್ಗೆ ತಿಳ್ಕೋಬೇಕಂತನೇ ಇಷ್ಟಪಡ್ತೀನಿ.+
7 ಆದ್ರೆ ನೀವು ಕೇವಲ ಮನುಷ್ಯರ ತರ ಒಪ್ಪಂದವನ್ನ ಮುರಿದುಬಿಟ್ಟಿದ್ದೀರ.+
ನೀವು ನಿಮ್ಮ ದೇಶದಲ್ಲಿ ನನಗೆ ನಂಬಿಕೆದ್ರೋಹ ಮಾಡಿದ್ದೀರ.
9 ಲೂಟಿಗಾರರ ಗುಂಪು ಒಬ್ಬನಿಗೆ ಹೊಂಚುಹಾಕೋ ತರ ಪುರೋಹಿತರು ಗುಂಪಾಗಿ ದಾರಿಯಲ್ಲಿ ಹೊಂಚು ಹಾಕ್ತಿದ್ದಾರೆ.
ಶೆಕೆಮಿನ+ ರಸ್ತೆಯಲ್ಲಿ ಕೊಲೆ ಮಾಡ್ತಿದ್ದಾರೆ,
ನಾಚಿಕೆಗೆಟ್ಟವರಾಗಿ ನಡ್ಕೊಳ್ತಿದ್ದಾರೆ.
10 ಇಸ್ರಾಯೇಲ್ ಜನ್ರು ಮಾಡೋ ನೀಚ ಕೆಲಸವನ್ನ ನಾನು ನೋಡಿದ್ದೀನಿ.
11 ಯೆಹೂದವೇ, ನಿನಗೆ ಕೊಯ್ಲಿನ ಸಮಯವನ್ನ ನಿಶ್ಚಯಿಸಿದ್ದೀನಿ.
ಸೆರೆಹೋದ ನನ್ನ ಜನ್ರನ್ನ ಹಿಂದೆ ಕರ್ಕೊಂಡು ಬರ್ತಿನಿ.”+