ಒಂದನೇ ಸಮುವೇಲ
18 ದಾವೀದ ಸೌಲನ ಹತ್ರ ಹೇಳಿದ ಮಾತುಗಳನ್ನ ಯೋನಾತಾನ+ ಕೇಳಿಸ್ಕೊಂಡಾಗ ಯೋನಾತಾನ ಮತ್ತು ದಾವೀದನ ಮಧ್ಯ ಗಾಢ ಸ್ನೇಹ ಬೆಳಿತು. ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸೋಕೆ ಶುರು ಮಾಡಿದ.+ 2 ಅವತ್ತಿಂದ ಸೌಲ ದಾವೀದನನ್ನ ತನ್ನ ಜೊತೆ ಉಳಿಸ್ಕೊಂಡ. ದಾವೀದನನ್ನ ಅವನ ತಂದೆಯ ಮನೆಗೆ ವಾಪಸ್ ಹೋಗೋಕೆ ಬಿಡಲಿಲ್ಲ.+ 3 ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸ್ತಿದ್ದ+ ಕಾರಣ ಅವನ ಜೊತೆ ಒಂದು ಒಪ್ಪಂದ ಮಾಡ್ಕೊಂಡ.+ 4 ಯೋನಾತಾನ ತಾನು ಹಾಕಿದ್ದ ತೋಳಿಲ್ಲದ ಅಂಗಿಯನ್ನ ತೆಗೆದು ದಾವೀದನಿಗೆ ಕೊಟ್ಟ. ಅದ್ರ ಜೊತೆ ತನ್ನ ಯುದ್ಧದ ಬಟ್ಟೆ, ಕತ್ತಿ, ಬಿಲ್ಲು, ಸೊಂಟಪಟ್ಟಿಯನ್ನ ದಾವೀದನಿಗೆ ಕೊಟ್ಟ. 5 ಸೌಲ ದಾವೀದನನ್ನ ಯುದ್ಧಕ್ಕೆ ಕಳಿಸಿದಾಗೆಲ್ಲಾ ಅವನು ಸಫಲನಾಗಿ*+ ವಾಪಸ್ ಬರ್ತಿದ್ದ. ಹಾಗಾಗಿ ಸೌಲ ಅವನನ್ನ ಸೈನಿಕರ ಮೇಲೆ ಸೇನಾಪತಿಯಾಗಿ ನೇಮಿಸಿದ.+ ಹೀಗೆ ಮಾಡಿದ್ರಿಂದ ಎಲ್ಲ ಜನ್ರಿಗೂ ಸೌಲನ ಸೇವಕರಿಗೂ ತುಂಬ ಸಂತೋಷ ಆಯ್ತು.
6 ದಾವೀದ ಮತ್ತು ಬೇರೆಯವರು ಫಿಲಿಷ್ಟಿಯರನ್ನ ಸಾಯಿಸಿ ವಾಪಸ್ ಬರುವಾಗ ಹೆಂಗಸ್ರು ಇಸ್ರಾಯೇಲಿನ ಎಲ್ಲ ಪಟ್ಟಣಗಳಿಂದ ದಮ್ಮಡಿ,+ ತಂತಿವಾದ್ಯಗಳನ್ನ ಹಿಡಿದು ಹಾಡ್ತಾ+ ಕುಣಿತಾ ರಾಜ ಸೌಲನನ್ನ ನೋಡೋಕೆ ಸಂತೋಷದಿಂದ ಬರ್ತಿದ್ರು. 7 ಆ ಹೆಂಗಸ್ರು
“ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಕೊಂದ,
ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಕೊಂದ”+ ಅಂತ ಹಾಡ್ತಾ ಕುಣಿದಾಡಿದ್ರು.
8 ಸೌಲನಿಗೆ ಆ ಹಾಡು ಇಷ್ಟ ಆಗಲಿಲ್ಲ. ಅವನಿಗೆ ತುಂಬ ಕೋಪ ಬಂತು.+ ಅದಕ್ಕೆ ಸೌಲ “ಅವರು ದಾವೀದನಿಗೆ ಹತ್ತು ಸಾವಿರಗಟ್ಟಲೆ ಕೊಂದ ಅಂತ ಹೊಗಳಿದ್ರು. ಆದ್ರೆ ನನಗೆ ಸಾವಿರಗಟ್ಟಲೆ ಕೊಂದ ಅಂತ ಹೊಗಳಿದ್ರು. ಇನ್ನು ಅವನು ರಾಜ ಆಗೋದೊಂದೆ ಬಾಕಿ!”+ ಅಂದ್ಕೊಂಡ. 9 ಅವತ್ತಿಂದ ಸೌಲ ದಾವೀದನನ್ನ ಯಾವಾಗ್ಲೂ ಅನುಮಾನದಿಂದ ನೋಡ್ತಿದ್ದ.
10 ಮಾರನೇ ದಿನ ಸೌಲನಿಗೆ ಕೆಟ್ಟ ಮನಸ್ಥಿತಿ ಬರೋ ತರ ದೇವರು ಅನುಮತಿಸಿದ.+ ಆಗ ಅವನು ಮನೆ ಒಳಗೆ ವಿಚಿತ್ರವಾಗಿ* ವರ್ತಿಸೋಕೆ ಶುರುಮಾಡಿದ. ಯಾವಾಗ್ಲೂ ಮಾಡೋ ತರ ಈಗ್ಲೂ ದಾವೀದ ತಂತಿವಾದ್ಯವನ್ನ ನುಡಿಸ್ತಿದ್ದ.+ ಸೌಲನ ಕೈಯಲ್ಲಿ ಒಂದು ಈಟಿ ಇತ್ತು.+ 11 ‘ದಾವೀದ ಗೋಡೆಗೆ ನಾಟ್ಕೊಳ್ಳೋ ತರ ಹೊಡಿತೀನಿ!’ ಅಂತ ಸೌಲ ಮನಸ್ಸಲ್ಲೇ ಅಂದ್ಕೊಳ್ತಾ ಈಟಿಯನ್ನ ಎಸೆದ.+ ಆದ್ರೆ ದಾವೀದ ಅವನಿಂದ ಎರಡು ಸಲ ತಪ್ಪಿಸ್ಕೊಂಡ. 12 ಯೆಹೋವ ಸೌಲನನ್ನ ಬಿಟ್ಟು+ ದಾವೀದನ ಜೊತೆ ಇದ್ದಿದ್ರಿಂದ+ ಸೌಲ ದಾವೀದನಿಗೆ ಭಯಪಡ್ತಿದ್ದ.13 ಹಾಗಾಗಿ ಸೌಲ ದಾವೀದನನ್ನ ತನ್ನ ಹತ್ರದಿಂದ ಕಳಿಸಿಬಿಟ್ಟು, ಸಾವಿರ ಸೈನಿಕರ ಮೇಲೆ ಅವನನ್ನ ಮುಖ್ಯಸ್ಥನಾಗಿ ನೇಮಿಸಿದ. ದಾವೀದ ಸೈನ್ಯವನ್ನ ಯುದ್ಧಕ್ಕಾಗಿ ಮುನ್ನಡೆಸ್ತಿದ್ದ.*+ 14 ದಾವೀದ ತನ್ನ ಎಲ್ಲ ಕೆಲಸಗಳಲ್ಲಿ ಸಫಲನಾಗ್ತಾ* ಇದ್ದ.+ ಯೆಹೋವ ಅವನ ಜೊತೆ ಇದ್ದನು.+ 15 ದಾವೀದ ತುಂಬ ಸಫಲನಾಗ್ತಿರೋದನ್ನ ನೋಡಿದಾಗ ಸೌಲ ಅವನಿಗೆ ಭಯಪಟ್ಟ. 16 ಆದ್ರೆ ಇಸ್ರಾಯೇಲ್ಯರು ಮತ್ತು ಯೆಹೂದ್ಯರು ದಾವೀದನನ್ನ ಪ್ರೀತಿಸ್ತಿದ್ರು. ಯಾಕಂದ್ರೆ ದಾವೀದ ಅವ್ರ ಯುದ್ಧಗಳಲ್ಲಿ ಮುಂದಾಳತ್ವ ವಹಿಸ್ತಿದ್ದ.
17 ಆಮೇಲೆ ಸೌಲ ದಾವೀದನಿಗೆ “ಇಗೋ ನನ್ನ ಹಿರೀ ಮಗಳಾದ ಮೇರಬಳನ್ನ+ ನಿನಗೆ ಕೊಟ್ಟು ಮದುವೆ ಮಾಡ್ತೀನಿ.+ ಆದ್ರೆ ನೀನು ನನಗೋಸ್ಕರ ನಿನ್ನ ಧೈರ್ಯವನ್ನ ತೋರಿಸ್ತಾ, ಯೆಹೋವನ ಯುದ್ಧಗಳನ್ನ ಮಾಡ್ತಾ ಇರಬೇಕು”+ ಅಂತ ಹೇಳಿ ತನ್ನ ಮನಸ್ಸೊಳಗೆ ‘ಇವನು ನನ್ನ ಕೈಯಿಂದ ಸಾಯೋದು ಬೇಡ, ಫಿಲಿಷ್ಟಿಯರ ಕೈಯಿಂದಾನೇ ಸಾಯ್ಲಿ’+ ಅಂದ್ಕೊಂಡ. 18 ಅದಕ್ಕೆ ದಾವೀದ ಸೌಲನಿಗೆ “ರಾಜನ ಅಳಿಯನಾಗೋಕೆ ನನಗೆ, ಇಸ್ರಾಯೇಲಿನಲ್ಲಿರೋ ನನ್ನ ಸಂಬಂಧಿಕರಿಗೆ, ನನ್ನ ತಂದೆಯ ಮನೆಯವ್ರಿಗೆ ಏನು ಯೋಗ್ಯತೆ ಇದೆ?”+ ಅಂದ. 19 ಸೌಲನ ಮಗಳಾದ ಮೇರಬಳನ್ನ ದಾವೀದನಿಗೆ ಮದುವೆ ಮಾಡ್ಕೊಡಬೇಕಾದ ಸಮಯ ಬಂತು. ಆದ್ರೆ ಈಗಾಗ್ಲೇ ಅವಳಿಗೆ ಮೆಹೋಲದ ಅದ್ರೀಯೇಲನ ಜೊತೆ+ ಮದುವೆ ಆಗಿತ್ತು.
20 ಸೌಲನ ಮಗಳಾದ ಮೀಕಲ+ ದಾವೀದನನ್ನ ಪ್ರೀತಿಸ್ತಿದ್ದಳು. ಈ ವಿಷ್ಯ ಸೌಲನ ಕಿವಿಗೆ ಬಿದ್ದಾಗ ಅವನಿಗೆ ತುಂಬ ಸಂತೋಷ ಆಯ್ತು. 21 ಹಾಗಾಗಿ ಸೌಲ “ದಾವೀದನನ್ನ ಹಿಡಿಯೋಕೆ ಇದೇ ಒಳ್ಳೇ ಅವಕಾಶ. ನನ್ನ ಮಗಳನ್ನ ಅವನಿಗೆ ಮದುವೆ ಮಾಡ್ಕೊಟ್ರೆ ಫಿಲಿಷ್ಟಿಯರ ಕೈಯಿಂದ ಅವನು ಸಾಯೋ ತರ ಮಾಡಬಹುದು”+ ಅಂದ್ಕೊಂಡ. ಸೌಲ ದಾವೀದನಿಗೆ ಎರಡನೇ ಸಾರಿ “ಇವತ್ತು ನೀನು ನನ್ನ ಸಂಬಂಧಿ ಆಗಬೇಕು”* ಅಂದ. 22 ಸೌಲ ತನ್ನ ಸೇವಕರಿಗೆ “ನೀವು ದಾವೀದನಿಗೆ ಗುಟ್ಟಾಗಿ ‘ನೋಡು! ರಾಜನಿಗೆ ನೀನಂದ್ರೆ ತುಂಬ ಇಷ್ಟ, ಅವನ ಸೇವಕರಿಗೂ ನೀನಂದ್ರೆ ಅಚ್ಚುಮೆಚ್ಚು. ಹಾಗಾಗಿ ರಾಜನ ಅಳಿಯ ಆಗು’ ಅಂತ ಹೇಳಿ” ಅಂದ. 23 ಸೌಲ ಹೇಳಿದ ಹಾಗೇ ಅವನ ಸೇವಕರು ದಾವೀದನ ಜೊತೆ ಮಾತಾಡಿದಾಗ ದಾವೀದ ಅವ್ರಿಗೆ “ನಾನೊಬ್ಬ ಬಡವ, ಸಾಧಾರಣ ಮನುಷ್ಯ. ನನ್ನಂಥವನು ರಾಜನ ಅಳಿಯನಾಗೋದು ಸಣ್ಣ ವಿಷ್ಯ ಅಂತ ಅಂದ್ಕೊಂಡಿದ್ದೀರಾ?”+ ಅಂದ. 24 ಸೌಲನ ಸೇವಕರು ದಾವೀದ ಹೇಳಿದ ಮಾತುಗಳನ್ನ ಸೌಲನಿಗೆ ಹೇಳಿದ್ರು.
25 ಆಗ ಸೌಲ ಅವ್ರಿಗೆ “ನೀವು ದಾವೀದನ ಹತ್ರ ಹೋಗಿ ‘ರಾಜನಿಗೆ ಯಾವುದೇ ವಧುದಕ್ಷಿಣೆ ಬೇಡ.+ ಕೇವಲ ರಾಜನ ಶತ್ರುಗಳ ಮೇಲೆ ಸೇಡು ತೀರಿಸೋಕೆ ಫಿಲಿಷ್ಟಿಯರ 100 ಜನ್ರ ಮುಂದೊಗಲನ್ನ*+ ನೀನು ತಂದ್ಕೊಟ್ರೆ ಸಾಕು’ ಅಂತ ಹೇಳಬೇಕು” ಅಂದ. ದಾವೀದ ಫಿಲಿಷ್ಟಿಯರ ಕೈಯಲ್ಲಿ ಸಾಯಬೇಕು ಅನ್ನೋದು ಸೌಲನ ಕೆಟ್ಟ ಉದ್ದೇಶ ಆಗಿತ್ತು. 26 ಹಾಗಾಗಿ ಅವನ ಸೇವಕರು ಈ ಮಾತುಗಳನ್ನ ದಾವೀದನಿಗೆ ಹೇಳಿದ್ರು. ಇದನ್ನ ಕೇಳಿದ ದಾವೀದನಿಗೆ ರಾಜನ ಅಳಿಯನಾಗೋಕೆ ತುಂಬ ಸಂತೋಷ ಆಯ್ತು.+ ಹೇಳಿದ ಸಮಯ ಮುಗಿಯೋ ಮುಂಚೆ 27 ದಾವೀದ ತನ್ನ ಗಂಡಸ್ರ ಜೊತೆ ಹೋಗಿ 200 ಫಿಲಿಷ್ಟಿಯ ಗಂಡಸ್ರನ್ನ ಸಾಯಿಸಿದ, ರಾಜನ ಅಳಿಯನಾಗೋಕೆ ಅವ್ರೆಲ್ಲರ ಮುಂದೊಗಲನ್ನ ರಾಜನ ಹತ್ರ ತಗೊಂಡು ಬಂದ. ಹಾಗಾಗಿ ಸೌಲ ತನ್ನ ಮಗಳಾದ ಮೀಕಲಳನ್ನ ದಾವೀದನಿಗೆ ಮದುವೆ ಮಾಡ್ಕೊಟ್ಟ.+ 28 ಯೆಹೋವ ದಾವೀದನ ಜೊತೆ ಇದ್ದಾನೆ,+ ತನ್ನ ಮಗಳಾದ ಮೀಕಲ ಅವನನ್ನ ತುಂಬ ಪ್ರೀತಿಸ್ತಾಳೆ+ ಅಂತ ಸೌಲನಿಗೆ ಗೊತ್ತಾಯ್ತು. 29 ಇದು ದಾವೀದನ ಬಗ್ಗೆ ಸೌಲನಿಗಿದ್ದ ಭಯವನ್ನ ಇನ್ನೂ ಜಾಸ್ತಿ ಮಾಡ್ತು. ಹಾಗಾಗಿ ಸೌಲ ತನ್ನ ಉಳಿದ ಜೀವಮಾನದಲ್ಲೆಲ್ಲ ದಾವೀದನಿಗೆ ಶತ್ರುವಾಗೇ ಇದ್ದ.+
30 ಫಿಲಿಷ್ಟಿಯರ ನಾಯಕರು ಯುದ್ಧ ಮಾಡೋಕೆ ಬರ್ತಿದ್ರು. ಆದ್ರೆ ಅವರು ಬಂದಾಗೆಲ್ಲ ಸೌಲನ ಎಲ್ಲ ಸೇವಕರಿಗಿಂತ ದಾವೀದ ಹೆಚ್ಚು ಸಫಲನಾಗ್ತಿದ್ದ.*+ ಅವನಿಗೆ ಒಳ್ಳೇ ಹೆಸ್ರು ಬಂತು.+