ಜ್ಞಾನೋಕ್ತಿ
4 ವಿವೇಕವನ್ನ “ಅಕ್ಕಾ” ಅಂತ ಕರಿ,
ಬುದ್ಧಿಗೆ “ನೀನು ನನ್ನ ಸಂಬಂಧಿ” ಅಂತ ಹೇಳು.
5 ಆಗ ಅವು ನಡತೆಗೆಟ್ಟ* ಹೆಂಗಸಿಂದ ನಿನ್ನನ್ನ ಕಾಪಾಡುತ್ತೆ,+
ನಾಚಿಕೆಗೆಟ್ಟ* ಹೆಂಗಸಿನ ಜೇನಿನಂತ* ಮಾತಿಗೆ ಮರುಳಾಗದ ಹಾಗೆ ನೋಡ್ಕೊಳ್ಳುತ್ತೆ.+
6 ಒಂದುಸಾರಿ ನನ್ನ ಮನೆ ಕಿಟಕಿ ಹತ್ರ ನಿಂತು,
ಜಾಲರಿಯಿಂದ ಕೆಳಗೆ ನೋಡಿದೆ.
8 ಅವನು ಆ ಹೆಂಗಸು ಇರೋ ಬೀದಿಗೆ ಹೋದ,
ಅವಳ ಮನೆ ಕಡೆ ಹೆಜ್ಜೆ ಹಾಕಿದ.
10 ನಾನು ನೋಡ್ತಾ ಇದ್ದೆ, ಒಬ್ಬಳು ಆ ಯುವಕನ ಹತ್ರ ಬಂದಳು,
ಅವಳು ವೇಶ್ಯೆ ತರ ಬಟ್ಟೆ ಹಾಕೊಂಡಿದ್ದಳು,+ ಅವಳ ಹೃದಯದಲ್ಲಿ ಮೋಸ ತುಂಬಿತ್ತು.
11 ಅವಳು ಬಾಯಿಬಡಕಿ, ಮನಸ್ಸಿಗೆ ಬಂದ ಹಾಗೆ ನಡಿಯೋ ಹಟಮಾರಿ.+
ಅವಳ ಕಾಲು ಮನೆಯಲ್ಲಿ ನಿಲ್ಲಲ್ಲ.
12 ಒಂದು ಕ್ಷಣ ಮನೆ ಹೊರಗಿದ್ರೆ, ಇನ್ನೊಂದು ಕ್ಷಣ ಪಟ್ಟಣದ ಮುಖ್ಯಸ್ಥಳದಲ್ಲಿ* ಇರ್ತಾಳೆ,
ಮೂಲೆಮೂಲೆಯಲ್ಲಿ ಅಡಗಿಕೊಂಡು ಹೊಂಚು ಹಾಕೋದೇ ಅವಳ ಕೆಲಸ.+
13 ಅವಳು ಅವನನ್ನ ಎಳೆದು ಮುತ್ತು ಕೊಟ್ಟಳು,
ಒಂಚೂರೂ ನಾಚಿಕೆ ಇಲ್ಲದೆ ಹೀಗಂದಳು:
14 “ನಾನು ಸಮಾಧಾನ ಬಲಿಗಳನ್ನ ಅರ್ಪಿಸಬೇಕಿತ್ತು.+
ಈ ದಿನಾನೇ ನನ್ನ ಹರಕೆಗಳನ್ನ ತೀರಿಸ್ತೀನಿ.
15 ಅದಕ್ಕೆ ನಿನ್ನನ್ನ ನೋಡೋಕೆ ಬಂದೆ,
ನಿನ್ನನ್ನ ಹುಡುಕಿದೆ, ನೀನು ನಂಗೆ ಸಿಕ್ಕಿಬಿಟ್ಟೆ!
17 ಹಾಸಿಗೆಗೆ ಗಂಧರಸ, ಅಗರು,* ದಾಲ್ಚಿನ್ನಿ ಚಿಮಿಕಿಸಿದ್ದೀನಿ.+
18 ಬಾ, ಬೆಳಗಾಗೋ ತನಕ ನಾವಿಬ್ರೂ ಪ್ರೀತಿಯಲ್ಲಿ ತೇಲಾಡೋಣ,
ಕಾಮದ ಸುಖ ಅನುಭವಿಸೋಣ.
19 ನನ್ನ ಗಂಡ ಮನೆಲಿಲ್ಲ,
ತುಂಬ ದೂರ ಹೋಗಿದ್ದಾನೆ.
20 ಅವನು ಹಣದ ಗಂಟು ತಗೊಂಡು ಹೋಗಿದ್ದಾನೆ,
ಹುಣ್ಣಿಮೆ ತನಕ ಬರಲ್ಲ.”
21 ಹೀಗೆ ಮನ ಒಲಿಸೋ ಮಾತಿಂದ ಅವನನ್ನ ತಪ್ಪುದಾರಿಗೆ ಎಳೆದಳು.+
ನಯವಾದ ಮಾತುಗಳಿಂದ ಬುಟ್ಟಿಗೆ ಹಾಕೊಂಡಳು.
22 ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ, ಬೇಡಿ* ಹಾಕೋಕೆ ಕರ್ಕೊಂಡು ಹೋಗ್ತಿರೋ ಮೂರ್ಖನ ತರ,
ತಕ್ಷಣ ಅವನು ಅವಳ ಹಿಂದೆ ಹೋದ.+
23 ಕೊನೆಗೆ ಒಂದು ಬಾಣ ಅವನ ಪಿತ್ತಜನಕಾಂಗ ತೂರಿಹೋಗುತ್ತೆ,
ಬಲೆ ಕಡೆಗೆ ಜೋರಾಗಿ ಹಾರಿಹೋಗೋ ಹಕ್ಕಿ ತರ,
ಅದ್ರಿಂದ ತನ್ನ ಪ್ರಾಣ ಕಳ್ಕೊಳ್ತಾನೆ ಅಂತ ಗೊತ್ತಾಗದೆ ಹೋಗ್ತಾನೆ.+
24 ಹಾಗಾಗಿ ನನ್ನ ಮಗನೇ, ನಾನು ಹೇಳೋದನ್ನ ಕೇಳು,
ನನ್ನ ಮಾತುಗಳಿಗೆ ಗಮನಕೊಡು.
25 ನಿನ್ನ ಹೃದಯ ಅವಳ ದಾರಿ ಹಿಡಿಯೋಕೆ ಬಿಡಬೇಡ.
ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ.+
27 ಅವಳ ಮನೆ ನಿನ್ನನ್ನ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.
ಸಾವಿನ ಕತ್ತಲೆ ಕೋಣೆಗೆ ಕಳಿಸುತ್ತೆ.