ನ್ಯಾಯಸ್ಥಾಪಕರು
5 ಆ ದಿನದಲ್ಲಿ ದೆಬೋರ+ ಅಬೀನೋವಮನ ಮಗ ಬಾರಾಕನ+ ಜೊತೆ ಹಾಡಿದ ಹಾಡು:+
3 ರಾಜರೇ ಕೇಳಿ! ಅಧಿಪತಿಗಳೇ ಕೇಳಿ!
ನಾನು ಯೆಹೋವನಿಗೆ ಹಾಡ್ತೀನಿ.
ಇಸ್ರಾಯೇಲಿನ ದೇವರಾದ+ ಯೆಹೋವನನ್ನ ಹಾಡಿಹೊಗಳ್ತೀನಿ.*+
4 ಯೆಹೋವ, ನೀನು ಸೇಯೀರಿನಿಂದ+ ಹೋದಾಗ,
ಎದೋಮ್ ಪ್ರದೇಶದಿಂದ ಹೊರಟಾಗ,
ಭೂಮಿ ನಡುಗ್ತು, ಆಕಾಶ ಮಳೆ ಸುರಿಸ್ತು,
ಮೋಡಗಳಿಂದ ನೀರು ಸುರೀತು.
7 ಇಸ್ರಾಯೇಲಿನ ಹಳ್ಳಿಗಳಲ್ಲಿ ಯಾರೂ ಇರಲಿಲ್ಲ,
ದೆಬೋರಳಾದ+ ನಾನು ಬರೋ ತನಕ,
ಇಸ್ರಾಯೇಲಿಗೆ ಒಬ್ಬ ತಾಯಿ ತರ ಬರೋ ತನಕ ಯಾರೂ ಇರಲಿಲ್ಲ.+
ಇಸ್ರಾಯೇಲ್ಯರ 40,000 ಗಂಡಸ್ರಲ್ಲಿ ಒಬ್ಬನ ಹತ್ರನೂ ಗುರಾಣಿ, ಈಟಿ ಕಾಣಲಿಲ್ಲ.
ಯೆಹೋವನನ್ನ ಕೊಂಡಾಡಿ!
10 ತಿಳಿಕಂದು ಬಣ್ಣದ ಕತ್ತೆ ಸವಾರರೇ,
ಶ್ರೇಷ್ಠ ರತ್ನಗಂಬಳಿಗಳ ಮೇಲೆ ಕೂತವ್ರೇ,
ದಾರಿಯಲ್ಲಿ ನಡೆದು ಹೋಗೋರೇ,
ದೇವರ ಕೆಲಸಗಳ ಬಗ್ಗೆ ಯೋಚಿಸಿ!
11 ಬಾವಿ ನೀರು ಸೇದಿಕೊಡೋರು ಮಾತಾಡ್ತಿದ್ದಾರೆ,
ಅವರು ಯೆಹೋವನ ಒಳ್ಳೇ ಕೆಲಸಗಳನ್ನ ಹೊಗಳ್ತಿದ್ದಾರೆ,
ಇಸ್ರಾಯೇಲಿನ ಹಳ್ಳಿಗಳಲ್ಲಿ ಇರೋ ಜನ್ರ ಒಳ್ಳೇ ಕೆಲಸಗಳ ಬಗ್ಗೆ ಗುಣಗಾನ ಮಾಡ್ತಿದ್ದಾರೆ.
ಆಗ ಯೆಹೋವನ ಜನ್ರು ಪಟ್ಟಣದ ಬಾಗಿಲುಗಳ ಹತ್ರ ಹೋದ್ರು.
12 ಎದ್ದೇಳು ದೆಬೋರಾ!+ ಎದ್ದೇಳು!
ಎದ್ದು, ಒಂದು ಹಾಡನ್ನ ಹಾಡು!+
ಅಬೀನೋವಮನ ಮಗ ಬಾರಾಕ+ ಎದ್ದೇಳು! ಕೈದಿಗಳನ್ನ ಕರ್ಕೊಂಡು ಹೋಗು!
13 ಆಗ ಉಳಿದವರು ಪ್ರಮುಖರ ಹತ್ರ ಬಂದ್ರು,
ಬಲಿಷ್ಠರ ವಿರುದ್ಧ ಹೋರಾಡೋಕೆ ಯೆಹೋವನ ಜನ ನನ್ನ ಹತ್ರ ಬಂದ್ರು.
14 ಕಣಿವೆಯಲ್ಲಿ ಇರೋರು ಎಫ್ರಾಯೀಮಿಂದ ಬಂದಿದ್ದಾರೆ,
ಓ ಬೆನ್ಯಾಮೀನನೇ, ಅವರು ನಿನ್ನ ಜನ್ರ ಜೊತೆ ನಿನ್ನ ಹಿಂದೆ ಬರ್ತಾ ಇದ್ದಾರೆ.
15 ಇಸ್ಸಾಕಾರಿನ ಅಧಿಕಾರಿಗಳು ದೆಬೋರ ಜೊತೆ ಇದ್ರು,
ಇಸ್ಸಾಕಾರನ ತರ ಬಾರಾಕ+ ಅವಳ ಜೊತೆ ಇದ್ದ.
ಅವನನ್ನ ಕಾಲುನಡಿಗೆಯಲ್ಲಿ ಕಣಿವೆ ಬಯಲಿಗೆ ಕಳಿಸಲಾಯ್ತು.+
ರೂಬೇನ್ ಕುಲದವ್ರ ಮನಸ್ಸು ಚಂಚಲ ಆಗಿತ್ತು.
16 ಕುರಿ ಮಂದೆಗಾಗಿ+ ಕೊಳಲು ಊದೋದನ್ನ ಕೇಳಿಸ್ಕೊಳ್ತಾ,
ಭಾರವಾದ ಎರಡು ತಡಿ ಚೀಲಗಳ ಮಧ್ಯ ನೀನ್ಯಾಕೆ ಕೂತಿದ್ದೀಯಾ?
ರೂಬೇನ್ ಕುಲದವ್ರ ಮನಸ್ಸು ಚಂಚಲ ಆಗಿತ್ತು.
19 ಮೆಗಿದ್ದೋವಿನ ಬುಗ್ಗೆ ಹತ್ರ ಇರೋ ತಾನಕಿಗೆ,+
ರಾಜರು ಬಂದು ಹೋರಾಡಿದ್ರು,
ಕಾನಾನಿನ ರಾಜರು ಹೋರಾಡಿದ್ರು,+
ಆದ್ರೆ, ಬೆಳ್ಳಿಯನ್ನ ಕೊಳ್ಳೆ ಹೊಡಿಲಿಲ್ಲ.+
20 ಆಕಾಶದಿಂದ ನಕ್ಷತ್ರಗಳು ಹೋರಾಡ್ತು,
ತಮ್ಮ ಕಕ್ಷೆಯಿಂದ ಸಿಸೆರನ ವಿರುದ್ಧ ಹೋರಾಡ್ತು.
ನನ್ನ ಪ್ರಾಣವೇ,* ನೀನು ಬಲಿಷ್ಠರನ್ನ ತುಳಿದುಹಾಕಿದ್ದೀ.
23 ಯೆಹೋವನ ದೂತ ‘ಮೇರೋಜನನ್ನ ಶಪಿಸು’ ಅಂದ,
‘ಹೌದು, ಅದ್ರ ಜನ್ರನ್ನ ಶಪಿಸು,
ಅವರು ಯೆಹೋವನ ಸಹಾಯಕ್ಕೆ ಬರಲಿಲ್ಲ,
ಅವ್ರಲ್ಲಿದ್ದ ಬಲಿಷ್ಠರ ಜೊತೆ ಯೆಹೋವನ ಸಹಾಯಕ್ಕೆ ಬರಲಿಲ್ಲ.’
ಡೇರೆಗಳಲ್ಲಿ ವಾಸಿಸೋ ಸ್ತ್ರೀಯರಲ್ಲೇ ಹೆಚ್ಚು ಆಶೀರ್ವಾದ ಸಿಕ್ತು!
26 ತನ್ನ ಕೈಚಾಚಿ ಡೇರೆಯ ಗೂಟವನ್ನೂ,
ಬಲಗೈಯಿಂದ ಕೆಲಸಗಾರನ ಸುತ್ತಿಗೆಯನ್ನೂ ತಗೊಂಡಳು.
ಸುತ್ತಿಗೆಯಿಂದ ಸಿಸೆರನಿಗೆ ಹೊಡೆದು ತಲೆ ಜಜ್ಜಿದಳು,
ಹಣೆಗೆ ತಿವಿದು ಛಿದ್ರಛಿದ್ರ ಮಾಡಿದಳು.+
27 ಅವಳ ಕಾಲಿಗೆ ಕುಸಿದು ಬಿದ್ದ, ಬಿದ್ದವನು ಅಲುಗಾಡ್ಲೇ ಇಲ್ಲ,
ಅವಳ ಕಾಲುಗಳ ಮಧ್ಯ ಕುಸಿದು ಬಿದ್ದ,
ಎಲ್ಲಿ ಕುಸಿದು ಬಿದ್ನೋ, ಅಲ್ಲೇ ಸತ್ತು ಬಿದ್ದ.
28 ಕಿಟಕಿಯಿಂದ ಸ್ತ್ರೀಯೊಬ್ಬಳು ಹೊರಗೆ ಇಣುಕಿ ನೋಡಿದಳು,
ಜಾಲರಿಯಿಂದ ಸಿಸೆರನ ತಾಯಿ ಹೊರಗೆ ಇಣುಕಿದಳು,
‘ರಥ ಬರೋಕೆ ಯಾಕಿಷ್ಟು ತಡ?
ರಥದ ಕುದುರೆಗಳ ಸದ್ದು ಇನ್ನೂ ಯಾಕೆ ಕೇಳಿಸ್ತಿಲ್ಲ?’+
29 ಅವಳ ಜೊತೆ ಇರೋ ಪ್ರಧಾನ ಸ್ತ್ರೀಯರಲ್ಲಿ ವಿವೇಕಿಗಳು ಹೀಗಂದ್ರು,
ಅವಳೂ ತನ್ನಲ್ಲೇ ಹೀಗೆ ಅಂದ್ಕೊಂಡಳು:
30 ‘ಅವರು ಸಿಕ್ಕಿದ ಕೊಳ್ಳೆಯನ್ನ ಪಾಲು ಮಾಡ್ಕೊಳ್ತಾ ಇರ್ಬೇಕು,
ಒಬ್ಬೊಬ್ಬ ಸೈನಿಕನಿಗೆ ಒಬ್ಬಳೋ ಇಬ್ಬರೋ ಹುಡುಗಿಯರನ್ನ ಹಂಚ್ಕೊಡ್ತಾ ಇರ್ಬೇಕು,
ಬಣ್ಣಬಣ್ಣದ ಬಟ್ಟೆಗಳನ್ನ ಸಿಸೆರನಿಗೆ ಕೊಡ್ತಾ ಇರಬೇಕು,
ಕಸೂತಿ ಹಾಕಿದ ಬಟ್ಟೆ, ಬಣ್ಣಬಣ್ಣದ ಬಟ್ಟೆ, ಕಸೂತಿ ಹಾಕಿದ ಎರಡು ಬಟ್ಟೆಗಳನ್ನ
ಕೊಳ್ಳೆ ಹೊಡೆದವ್ರ ಕುತ್ತಿಗೆಗೆ ಹಾಕ್ತಾ ಇರಬೇಕು.’
31 ಓ ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶ ಆಗ್ಲಿ,+
ನಿನ್ನನ್ನ ಪ್ರೀತಿಸೋರು ಉದಯಿಸೋ ಸೂರ್ಯನ ತರ ಪ್ರಕಾಶಿಸ್ಲಿ.”
ಆಮೇಲೆ ದೇಶದಲ್ಲಿ 40 ವರ್ಷ ತನಕ ಸಮಾಧಾನ ಇತ್ತು.+