ನ್ಯಾಯಸ್ಥಾಪಕರು
4 ಏಹೂದ ತೀರಿಹೋದ ಮೇಲೆ ಇಸ್ರಾಯೇಲ್ಯರು ಮತ್ತೆ ಯೆಹೋವನಿಗೆ ಇಷ್ಟ ಇಲ್ಲದ್ದನ್ನೇ ಮಾಡಿದ್ರು.+ 2 ಹಾಗಾಗಿ ಯೆಹೋವ ಅವ್ರನ್ನ ಹಾಚೋರಿನಲ್ಲಿ ಆಳ್ತಿದ್ದ ಕಾನಾನಿನ ರಾಜ ಯಾಬೀನನ ಕೈಗೆ ಕೊಟ್ಟುಬಿಟ್ಟ.+ ಹರೋಷೆತ್-ಹಗೊಯಿಮಿನಲ್ಲಿ+ ವಾಸವಾಗಿದ್ದ ಸಿಸೆರ ಅವನ ಸೇನಾಪತಿ. 3 ಯಾಬೀನನ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ 900 ಯುದ್ಧ ರಥ* ಇತ್ತು.+ ಅವನು ಇಸ್ರಾಯೇಲ್ಯರ ಮೇಲೆ 20 ವರ್ಷ ಕ್ರೂರವಾಗಿ ದಬ್ಬಾಳಿಕೆ ಮಾಡಿದ.+ ಹಾಗಾಗಿ ಇಸ್ರಾಯೇಲ್ಯರು ಯೆಹೋವನ ಹತ್ರ ಸಹಾಯಕ್ಕಾಗಿ ಬೇಡ್ಕೊಂಡ್ರು.+
4 ಆ ಸಮಯದಲ್ಲಿ ದೆಬೋರ ಅನ್ನೋ ಪ್ರವಾದಿನಿ+ ಇಸ್ರಾಯೇಲಲ್ಲಿ ನ್ಯಾಯತೀರಿಸ್ತಾ ಇದ್ದಳು. ಅವಳು ಲಪ್ಪೀದೋತನ ಹೆಂಡತಿ. 5 ಅವಳು ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿದ್ದ ರಾಮ+ ಮತ್ತು ಬೆತೆಲ್+ ಮಧ್ಯ ಇರೋ ಖರ್ಜೂರ ಮರದ* ಕೆಳಗೆ ಕೂತ್ಕೊಳ್ತಿದ್ದಳು. ಇಸ್ರಾಯೇಲ್ಯರು ಅವಳ ಹತ್ರ ದೇವರ ತೀರ್ಪು ತಿಳಿಯೋಕೆ ಬರ್ತಾ ಇದ್ರು. 6 ಅವಳು ಕೆದೆಷ್-ನಫ್ತಾಲಿಯಲ್ಲಿದ್ದ+ ಅಬೀನೋವಮನ ಮಗ ಬಾರಾಕನಿಗೆ+ ಬರೋಕೆ ಹೇಳಿ ಹೀಗಂದಳು: “ಇಸ್ರಾಯೇಲ್ ದೇವರಾದ ಯೆಹೋವ ನಿನಗೆ ಈ ಅಪ್ಪಣೆ ಕೊಟ್ಟಿದ್ದಾನೆ ‘ನೀನು ತಾಬೋರ್ ಬೆಟ್ಟಕ್ಕೆ ಹೋಗು. ನಿನ್ನ ಜೊತೆ ನಫ್ತಾಲಿ, ಜೆಬುಲೂನ್ ಕುಲದಿಂದ 10,000 ಗಂಡಸ್ರನ್ನ ಕರ್ಕೊಂಡು ಹೋಗು. 7 ನಾನು ಯಾಬೀನನ ಸೇನಾಪತಿ ಸಿಸೆರನನ್ನ ಅವನ ಯುದ್ಧ ರಥಗಳನ್ನ ಸೈನ್ಯವನ್ನ ನಿನ್ನ ಹತ್ರ ಕೀಷೋನ್ ಕಣಿವೆಗೆ*+ ಬರೋ ಹಾಗೆ ಮಾಡ್ತೀನಿ, ನಿನ್ನ ಕೈಗೆ ಒಪ್ಪಿಸ್ತೀನಿ.’”+
8 ಅದಕ್ಕೆ ಬಾರಾಕ “ನೀನೂ ಜೊತೆಗೆ ಬಂದ್ರೆ ಹೋಗ್ತೀನಿ. ನೀನು ಬರದಿದ್ರೆ ನಾನು ಹೋಗಲ್ಲ” ಅಂದ. 9 ಅದಕ್ಕೆ ಅವಳು “ನಿನ್ನ ಜೊತೆ ಬರ್ತಿನಿ. ಆದ್ರೆ ಸಿಸೆರ ಒಬ್ಬ ಸ್ತ್ರೀಯ ಕೈಯಿಂದ ಸಾಯೋ ತರ ಯೆಹೋವ ಮಾಡೋದ್ರಿಂದ ಈ ಯುದ್ಧದ ಕೀರ್ತಿ ನಿನಗೆ ಸಿಗಲ್ಲ”+ ಅಂದಳು. ಆಮೇಲೆ ದೆಬೋರ ಬಾರಾಕ ಜೊತೆ ಕೆದೆಷಿಗೆ+ ಹೋದಳು. 10 ಬಾರಾಕ ಜೆಬುಲೂನ್ಯರನ್ನ ನಫ್ತಾಲ್ಯರನ್ನ+ ಕೆದೆಷಿನಲ್ಲಿ ಸೇರಿಸಿದ. 10,000 ಗಂಡಸ್ರು ಅವನ ಜೊತೆ ಹೋದ್ರು. ದೆಬೋರ ಕೂಡ ಹೋದಳು.
11 ಅದೇ ಸಮಯದಲ್ಲಿ, ಕೇನ್ಯನಾಗಿದ್ದ ಹೆಬೆರ ಕೇನ್ಯರಿಂದ+ ಬೇರೆಯಾಗಿದ್ದ. ಕೇನ್ಯರು ಮೋಶೆ ಮಾವನಾಗಿದ್ದ ಹೋಬಾಬನ+ ವಂಶದವರು. ಹೆಬೆರ ಕೆದೆಷಿನ ಚಾನನ್ನೀಮಿನಲ್ಲಿದ್ದ ಒಂದು ದೊಡ್ಡ ಮರ ಹತ್ರ ಡೇರೆ ಹಾಕೊಂಡಿದ್ದ.
12 ಅಬೀನೋವಮನ ಮಗ ಬಾರಾಕ ತಾಬೋರ್ ಬೆಟ್ಟಕ್ಕೆ+ ಬಂದಿದ್ದಾನೆ ಅಂತ ಸಿಸೆರನಿಗೆ ಸುದ್ದಿ ಸಿಕ್ತು. 13 ಕೂಡ್ಲೇ ಸಿಸೆರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಎಲ್ಲ 900 ಯುದ್ಧ ರಥಗಳನ್ನ* ಇಡೀ ಸೈನ್ಯವನ್ನ ಕರ್ಕೊಂಡು ಹರೋಷೆತ್-ಹಗೊಯಿಮಿನಿಂದ ಕೀಷೋನ್+ ಕಣಿವೆ* ಕಡೆ ಹೊರಟ. 14 ಆಗ ದೆಬೋರ ಬಾರಾಕನಿಗೆ “ತಯಾರಾಗು! ಯೆಹೋವ ಈ ದಿನ ಸಿಸೆರನನ್ನ ನಿನ್ನ ಕೈಗೆ ಒಪ್ಪಿಸ್ತಾನೆ. ಯೆಹೋವನೇ ನಿನ್ನ ಮುಂದೆ ಹೋಗ್ತಾ ಇದ್ದಾನೆ” ಅಂದಾಗ ಬಾರಾಕ ತಾಬೋರ್ ಬೆಟ್ಟದಿಂದ ಕೆಳಗೆ ಇಳಿದ. 10,000 ಗಂಡಸ್ರು ಅವನ ಹಿಂದೆ ಹೋದ್ರು. 15 ಯೆಹೋವ ಸಿಸೆರನನ್ನ ಅವನ ಎಲ್ಲ ಯುದ್ಧ ರಥಗಳನ್ನ ಸೈನ್ಯವನ್ನ ಗಲಿಬಿಲಿ ಮಾಡಿದನು.+ ಬಾರಾಕನ ಕತ್ತಿಯಿಂದ ಅವ್ರೆಲ್ಲ ನಾಶ ಆಗೋ ಹಾಗೆ ಮಾಡಿದನು. ಕೊನೆಗೆ ಸಿಸೆರ ರಥದಿಂದ ಕೆಳಗೆ ಇಳಿದು ಓಡಿಹೋದ. 16 ಅವನ ಯುದ್ಧ ರಥಗಳನ್ನ ಸೈನ್ಯವನ್ನ ಬಾರಾಕ ಹರೋಷೆತ್-ಹಗೊಯಿಮಿನ ತನಕ ಅಟ್ಟಿಸ್ಕೊಂಡು ಹೋದ. ಸಿಸೆರನ ಇಡೀ ಸೈನ್ಯ ಕತ್ತಿಯಿಂದ ನಾಶ ಆಯ್ತು. ಒಬ್ಬ ಸೈನಿಕನೂ ಉಳಿಲಿಲ್ಲ.+
17 ಸಿಸೆರ ಓಡಿ ಓಡಿ ಕೇನ್ಯನಾಗಿದ್ದ ಹೆಬೆರನ+ ಹೆಂಡತಿ ಯಾಯೇಲಳ+ ಡೇರೆ ಹತ್ರ ಬಂದ. ಯಾಕಂದ್ರೆ ಹಾಚೋರಿನ ರಾಜ ಯಾಬೀನನ+ ಮತ್ತು ಕೇನ್ಯನಾಗಿದ್ದ ಹೆಬೆರನ ಮನೆಯವ್ರ ಮಧ್ಯ ಶಾಂತಿ ಇತ್ತು. 18 ಯಾಯೇಲ ಡೇರೆ ಹೊರಗೆ ಬಂದು ಸಿಸೆರನಿಗೆ “ಒಳಗೆ ಬಾ ನನ್ನೊಡೆಯ, ಒಳಗೆ ಬಾ. ಭಯಪಡಬೇಡ” ಅಂತ ಕರೆದಾಗ ಒಳಗೆ ಹೋದ. ಅವನಿಗೆ ಕಂಬಳಿ ಹೊದಿಸಿದಳು. 19 ಅವನು “ಬಾಯಾರಿಕೆ ಆಗ್ತಿದೆ, ಕುಡಿಯೋಕೆ ಸ್ವಲ್ಪ ನೀರು ಕೊಡು” ಅಂದ. ಚರ್ಮದ ಬುದ್ದಲಿಯಲ್ಲಿದ್ದ ಹಾಲನ್ನ ಕುಡಿಯೋಕೆ ಕೊಟ್ಟಳು.+ ಆಮೇಲೆ ಅವನಿಗೆ ಮತ್ತೆ ಕಂಬಳಿ ಹೊದಿಸಿದಳು. 20 ಅವನು ಆಕೆಗೆ “ಡೇರೆ ಬಾಗಿಲಲ್ಲೇ ನಿಂತ್ಕೊ. ಯಾರಾದ್ರೂ ಬಂದು ‘ಇಲ್ಲಿ ಒಬ್ಬ ವ್ಯಕ್ತಿ ಬಂದ್ನಾ?’ ಅಂತ ಕೇಳಿದ್ರೆ ‘ಇಲ್ಲ’ ಅಂತೇಳು” ಅಂದ.
21 ಹೆಬೆರನ ಹೆಂಡತಿ ಯಾಯೇಲ ಡೇರೆಗೆ ಹಾಕೋ ಗೂಟ ಮತ್ತೆ ಸುತ್ತಿಗೆ ತಗೊಂಡಳು. ಸಿಸೆರ ಆಯಾಸದಿಂದ ಗಾಢನಿದ್ರೆ ಮಾಡ್ತಿದ್ದಾಗ ಮೆಲ್ಲನೆ ಹತ್ರ ಹೋಗಿ ಅವನ ತಲೆಗೆ* ಗೂಟ ಹೊಡೆದಳು. ಅದು ತಲೆಯನ್ನ ತೂರಿ ನೆಲಕ್ಕೆ ನಾಟ್ಕೊಳ್ತು. ಅವನು ಸತ್ತು ಹೋದ.+
22 ಬಾರಾಕ ಸಿಸೆರನನ್ನ ಹುಡುಕ್ತಾ ಅಲ್ಲಿಗೆ ಬಂದ. ಆಗ ಯಾಯೇಲ ಡೇರೆ ಹೊರಗೆ ಬಂದು “ಒಳಗೆ ಬಾ, ನೀನು ಹುಡುಕ್ತಾ ಇರೋ ಮನುಷ್ಯನನ್ನ ತೋರಿಸ್ತೀನಿ” ಅಂದಳು. ಅವನು ಡೇರೆ ಒಳಗೆ ಹೋದಾಗ ತಲೆಗೆ ಗೂಟ ನಾಟ್ಕೊಂಡು ಸತ್ತು ಬಿದ್ದಿದ್ದ ಸಿಸೆರನನ್ನ ನೋಡಿದ.
23 ದೇವರು ಆ ದಿನ ಕಾನಾನಿನ ರಾಜ ಯಾಬೀನನನ್ನ ಇಸ್ರಾಯೇಲ್ಯರ ಕೈಗೆ ಕೊಟ್ಟನು.+ 24 ಕಾನಾನಿನ+ ರಾಜ ಯಾಬೀನನ ಮೇಲೆ ಇಸ್ರಾಯೇಲ್ಯರ ಬಲ ಜಾಸ್ತಿ ಆಗ್ತಾ ಹೋಯ್ತು. ಕೊನೆಗೆ ಅವರು ಕಾನಾನಿನ ರಾಜ ಯಾಬೀನನ್ನ ಕೊಂದ್ರು.+