147 ಯಾಹುವನ್ನ ಸ್ತುತಿಸಿ!
ನಮ್ಮ ದೇವರನ್ನ ಹಾಡಿ ಹೊಗಳೋದು ಒಳ್ಳೇದು,
ಆತನನ್ನ ಸ್ತುತಿಸೋದು ಎಷ್ಟು ಮನೋಹರ! ಎಷ್ಟು ಉತ್ತಮ!+
2 ಯೆಹೋವ ಯೆರೂಸಲೇಮನ್ನ ಕಟ್ತಾನೆ,+
ಚೆದರಿಹೋಗಿರೋ ಇಸ್ರಾಯೇಲ್ಯರನ್ನ ಒಟ್ಟುಸೇರಿಸ್ತಾನೆ.+
3 ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ,
ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.
4 ಆತನು ನಕ್ಷತ್ರಗಳನ್ನ ಎಣಿಸ್ತಾನೆ,
ಅವುಗಳಲ್ಲಿ ಒಂದೊಂದನ್ನೂ ಹೆಸರಿಡಿದು ಕರೀತಾನೆ.+
5 ನಮ್ಮ ಒಡೆಯ ಮಹೋನ್ನತ, ಆತನು ಮಹಾ ಶಕ್ತಿಶಾಲಿ,+
ಆತನಿಗಿರೋ ಜ್ಞಾನಕ್ಕೆ ಮಿತಿನೇ ಇಲ್ಲ.+
6 ಯೆಹೋವ ದೀನ ಜನ್ರನ್ನ ಮೇಲೆ ಎತ್ತುತ್ತಾನೆ,+
ಆದ್ರೆ ಕೆಟ್ಟವರನ್ನ ನೆಲಕ್ಕೆ ತಳ್ತಾನೆ.
7 ಯೆಹೋವನಿಗೆ ಧನ್ಯವಾದ ಹೇಳಿ,
ತಂತಿವಾದ್ಯವನ್ನ ನುಡಿಸ್ತಾ ನಮ್ಮ ದೇವರನ್ನ ಹಾಡಿ ಹೊಗಳಿ.
8 ಆತನು ಆಕಾಶವನ್ನ ಮೋಡಗಳಿಂದ ಮುಚ್ತಾನೆ,
ಭೂಮಿಗೆ ಮಳೆ ಕೊಡ್ತಾನೆ,+
ಬೆಟ್ಟಗಳ ಮೇಲೆ ಹುಲ್ಲು ಮೊಳಕೆ ಒಡೆಯೋ ಹಾಗೆ ಮಾಡ್ತಾನೆ.+
9 ಆತನು ಪ್ರಾಣಿಗಳಿಗೆ ಊಟ ಕೊಡ್ತಾನೆ,+
ಆಹಾರಕ್ಕಾಗಿ ಕೂಗೋ ಕಾಗೆ ಮರಿಗಳಿಗೂ ಊಟ ಕೊಡ್ತಾನೆ.+
10 ಕುದುರೆ ಶಕ್ತಿಯಲ್ಲಿ ಆತನು ಖುಷಿಪಡಲ್ಲ,+
ಮನುಷ್ಯರ ಬಲವಾದ ಕಾಲುಗಳು ಆತನ ದೃಷ್ಟಿಯಲ್ಲಿ ಏನೇನೂ ಅಲ್ಲ.+
11 ಯೆಹೋವ ತನಗೆ ಭಯಪಡೋರಲ್ಲಿ,+
ತನ್ನ ಶಾಶ್ವತ ಪ್ರೀತಿಗಾಗಿ ಕಾಯೋರನ್ನ ಇಷ್ಟಪಡ್ತಾನೆ.+
12 ಯೆರೂಸಲೇಮೇ, ಯೆಹೋವನನ್ನ ಗೌರವಿಸು,
ಚೀಯೋನೇ, ನಿನ್ನ ದೇವರನ್ನ ಹೊಗಳು.
13 ಆತನು ನಿನ್ನ ಪಟ್ಟಣದ ಬಾಗಿಲಿನ ಪಟ್ಟಿಗಳನ್ನ ಭದ್ರ ಮಾಡ್ತಾನೆ,
ಆತನು ನಿನ್ನ ಮಕ್ಕಳಿಗೆ ಆಶೀರ್ವಾದ ಮಾಡ್ತಾನೆ.
14 ಆತನು ನಿನ್ನ ಪ್ರದೇಶಕ್ಕೆ ಶಾಂತಿ ತರ್ತಾನೆ,+
ಆತನು ನಿನ್ನನ್ನ ಒಳ್ಳೇ ಗೋದಿಯಿಂದ ತೃಪ್ತಿಪಡಿಸ್ತಾನೆ.+
15 ಆತನು ತನ್ನ ಆಜ್ಞೆಯನ್ನ ಭೂಮಿಗೆ ಕಳಿಸ್ತಾನೆ,
ಆತನ ಮಾತು ಸಂದೇಶವಾಹಕನ ತರ ಚುರುಕಾಗಿ ಓಡುತ್ತೆ.
16 ಆತನು ಭೂಮಿಯನ್ನ ಬಿಳಿ ಮಂಜಿನಿಂದ ಹೊದಿಸ್ತಾನೆ,+
ಬೂದಿ ಹಾಗೆ ಹಿಮದ ಗಡ್ಡೆಯನ್ನ ಉದುರಿಸ್ತಾನೆ.+
17 ರೊಟ್ಟಿಯ ತುಂಡುಗಳ ಹಾಗೆ ಆತನು ಆಲಿಕಲ್ಲುಗಳನ್ನ ಎಸೀತಾನೆ.+
ಆತನು ಹುಟ್ಟಿಸೋ ಚಳಿನ ಯಾರು ತಡ್ಕೊಳ್ಳೋಕೆ ಆಗುತ್ತೆ?+
18 ಆತನು ಆಜ್ಞೆ ಕೊಟ್ಟಾಗ ಹಿಮ ಕರಗುತ್ತೆ.
ಆತನು ಗಾಳಿ ಬೀಸೋ ತರ ಮಾಡ್ತಾನೆ,+ ನೀರು ಹರಿಯೋ ತರ ಮಾಡ್ತಾನೆ.
19 ಆತನು ತನ್ನ ಮಾತನ್ನ ಯಾಕೋಬನಿಗೆ ಹೇಳ್ತಾನೆ,
ತನ್ನ ನಿಯಮಗಳನ್ನ ಮತ್ತು ತೀರ್ಪುಗಳನ್ನ ಇಸ್ರಾಯೇಲಿಗೆ ಕೂಗಿ ಹೇಳ್ತಾನೆ.+
20 ಈ ತರ ಆತನು ಬೇರೆ ಯಾವ ಜನಾಂಗದ ಜೊತೆನೂ ನಡ್ಕೊಂಡಿಲ್ಲ,+
ಅವ್ರಲ್ಲಿ ಯಾರಿಗೂ ಆತನ ತೀರ್ಪುಗಳ ಬಗ್ಗೆ ಗೊತ್ತಿಲ್ಲ.
ಯಾಹುವನ್ನ ಸ್ತುತಿಸಿ!+