ಕೀರ್ತನೆ
ದಾವೀದನ ಮಧುರ ಗೀತೆ. ದಾವೀದ ಯೆಹೂದದ ಕಾಡಲ್ಲಿದ್ದಾಗ ಇದನ್ನ ರಚಿಸಿದ.+
63 ದೇವರೇ, ನೀನು ನನ್ನ ದೇವರು. ನಾನು ನಿನಗಾಗಿ ಹುಡುಕ್ತಾ ಇದ್ದೀನಿ.+
ನನ್ನ ಪ್ರಾಣ ನಿನಗಾಗಿ ಬಾಯಾರಿದೆ.+
ಒಣಗಿ ಹೋಗಿರೋ, ಬತ್ತಿ ಹೋಗಿರೋ ಈ ನೀರಿಲ್ಲದ ಜಾಗದಲ್ಲಿ ನಾನು* ನಿನಗಾಗಿ ಎಷ್ಟು ಹಾತೊರಿತಾ ಇದ್ದೀನಿ ಅಂದ್ರೆ ಇನ್ನೇನು ಪ್ರಜ್ಞೆ ತಪ್ಪಿ ಬಿದ್ದುಬಿಡ್ತೀನಿ.+
2 ಹಾಗಾಗಿ ನಿನ್ನನ್ನ ನೋಡೋಕೆ ನಾನು ನಿನ್ನ ಪವಿತ್ರ ಸ್ಥಳದಲ್ಲಿ ಹುಡುಕಿದೆ,
ನಿನ್ನ ಬಲ, ನಿನ್ನ ಮಹಿಮೆಯನ್ನ ನೋಡಿದೆ.+
4 ಹಾಗಾಗಿ ನಾನು ಸಾಯೋ ತನಕ ನಿನ್ನನ್ನ ಕೊಂಡಾಡ್ತೀನಿ,
ನನ್ನ ಕೈಗಳನ್ನ ಎತ್ತಿ ನಿನ್ನ ಹೆಸ್ರನ್ನ ಕೂಗ್ತೀನಿ.
5 ಒಳ್ಳೇ ಭಾಗನ ಮತ್ತು ದೊಡ್ಡ ಭಾಗನ ಪಡ್ಕೊಂಡು ನಾನು ತೃಪ್ತಿಯಾಗಿ ಇದ್ದೀನಿ,
ಹಾಗಾಗಿ ನನ್ನ ಬಾಯಿ ಸಂತೋಷದಿಂದ ನಿನ್ನನ್ನ ಹೊಗಳುತ್ತೆ.+
8 ನಾನು ನಿನಗೆ ಅಂಟ್ಕೊಂಡು ಇರ್ತಿನಿ,
ನಿನ್ನ ಬಲಗೈ ನನ್ನನ್ನ ಗಟ್ಟಿಯಾಗಿ ಹಿಡ್ಕೊಂಡಿರುತ್ತೆ.+
9 ಆದ್ರೆ ಯಾರು ನನ್ನ ಪ್ರಾಣ ತೆಗೀಬೇಕು ಅಂತಿದ್ದಾರೋ,
ಅವರು ಭೂಮಿಯ ಆಳಕ್ಕೆ ಇಳಿದು ಹೋಗ್ತಾರೆ.
10 ಅವರು ಕತ್ತಿಯಿಂದ ನಾಶ ಆಗ್ತಾರೆ,
ಅವರು ಗುಳ್ಳೆನರಿಗಳಿಗೆ* ಆಹಾರ ಆಗ್ತಾರೆ.
11 ಆದ್ರೆ ರಾಜ ದೇವರಲ್ಲಿ ಖುಷಿಪಡ್ತಾನೆ.
ಸುಳ್ಳು ಹೇಳೋರ ಬಾಯನ್ನ ಮುಚ್ಚೊದ್ರಿಂದ,
ದೇವರ ಮೇಲೆ ಆಣೆ ಇಡೋರೆಲ್ಲ ತುಂಬ ಖುಷಿಪಡ್ತಾರೆ.*