ಜ್ಞಾನೋಕ್ತಿ
16 ಮನುಷ್ಯ ಮಾತಾಡೋ ಮುಂಚೆ ತನ್ನ ಹೃದಯದ ಯೋಚ್ನೆಗಳನ್ನ ಸಿದ್ಧಮಾಡ್ತಾನೆ,
4 ಯೆಹೋವ ತನ್ನ ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ,
ಕೆಟ್ಟವನನ್ನ ಕೂಡ ಕಷ್ಟದ ದಿನದಲ್ಲಿ ಶಿಕ್ಷೆ ಅನುಭವಿಸೋಕೆ ಇಟ್ಟಿದ್ದಾನೆ.+
5 ಹೃದಯದಲ್ಲಿ ಅಹಂಕಾರ ಇರುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಆಗಲ್ಲ.+
ಅವ್ರಿಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ನಂಬಿಕೆ ಇರಲಿ.
6 ಶಾಶ್ವತ ಪ್ರೀತಿಯಿಂದಾಗಿ, ನಂಬಿಗಸ್ತಿಕೆಯಿಂದಾಗಿ ತಪ್ಪಿಗೆ ಕ್ಷಮೆ ಸಿಗುತ್ತೆ,+
ಯೆಹೋವನಿಗೆ ಭಯಪಡುವವನು ಕೆಟ್ಟದು ಮಾಡಲ್ಲ.+
9 ಮನುಷ್ಯ ತನ್ನ ಹೃದಯದಲ್ಲೇ ಯೋಜನೆ ಮಾಡಬಹುದು,
ಆದ್ರೆ ಯೆಹೋವ ಅವನ ಕಾಲಿಗೆ ದಾರಿ ತೋರಿಸ್ತಾನೆ.+
11 ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ,
ಚೀಲದೊಳಗೆ ಇಟ್ಟಿರೋ ತೂಕದ ಕಲ್ಲುಗಳನ್ನೆಲ್ಲ ಆತನೇ ಮಾಡಿದ್ದು.+
13 ರಾಜರಿಗೆ ನೀತಿ ಮಾತುಗಳೆಂದ್ರೆ ಇಷ್ಟ,
ಸತ್ಯ ಹೇಳೋರನ್ನ ಕಂಡ್ರೆ ಅವ್ರಿಗೆ ಇಷ್ಟ.+
15 ರಾಜ ದಯೆ ತೋರಿಸಿದ್ರೆ ಜೀವನ ಸಂತೋಷವಾಗಿ ಇರುತ್ತೆ,
ಅವನ ಅನುಗ್ರಹ ವಸಂತಕಾಲದ ಮಳೆಯ ಮೋಡದ ಹಾಗೆ ಇರುತ್ತೆ.+
17 ನೀತಿವಂತನ ದಾರಿ ಕೆಟ್ಟ ವಿಷ್ಯಗಳಿಂದ ದೂರ ಇರುತ್ತೆ.
ಸರಿಯಾದ ದಾರಿಯಲ್ಲಿ ನಡಿಯುವವನು ತನ್ನ ಪ್ರಾಣ ಕಾಪಾಡ್ಕೊಳ್ತಾನೆ.+
20 ಒಂದು ವಿಷ್ಯದ ಬಗ್ಗೆ ಸೂಕ್ಷ್ಮ ವಿವೇಚನೆ* ಇರುವವನು ಯಶಸ್ಸು ಪಡಿತಾನೆ,
ಯೆಹೋವನ ಮೇಲೆ ನಂಬಿಕೆ ಇಡುವವನು ಸಂತೋಷವಾಗಿ ಇರ್ತಾನೆ.
21 ವಿವೇಕ ಇರೋ ವ್ಯಕ್ತಿಗೆ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದೆ+ ಅಂತ ಜನ ಹೇಳ್ತಾರೆ,
ಪ್ರೀತಿಯಿಂದ ಮಾತಾಡೋ ವ್ಯಕ್ತಿ ಮನಸ್ಸು ಗೆಲ್ತಾನೆ.+
25 ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,
ಅದು ಸಾವಲ್ಲಿ ಕೊನೆ ಆಗುತ್ತೆ.+
26 ದುಡಿಯುವವನಿಗೆ ಹೊಟ್ಟೆನೇ ದುಡಿಯೋಕೆ ಹೇಳುತ್ತೆ,
ಅವನ ಹಸಿವು ಅವನನ್ನ ಒತ್ತಾಯಿಸುತ್ತೆ.+
29 ಕ್ರೂರಿ ಪಕ್ಕದ ಮನೆಯವನನ್ನ ಮರುಳು ಮಾಡಿ,
ತಪ್ಪು ದಾರಿಗೆ ನಡಿಸ್ತಾನೆ.
30 ಕೆಟ್ಟ ಯೋಜನೆ ಮಾಡ್ತಾ ಕಣ್ಣು ಹೊಡಿತಾನೆ,
ನಗೋ ತರ ನಟಿಸ್ತಾ ಕೆಟ್ಟದು ಮಾಡ್ತಾನೆ.
32 ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು+ ಶೂರ ಸೈನಿಕನಿಗಿಂತ ಶಕ್ತಿಶಾಲಿ,
ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.+
33 ಜನ್ರು ಯೆಹೋವನಿಗೆ ಪ್ರಶ್ನೆ ಕೇಳ್ತಾರೆ,*+ ಆತನು ಅವ್ರಿಗೆ ಉತ್ತರ ಕೊಡ್ತಾನೆ.+