ಯೆರೆಮೀಯ
ನಾನು ನಿನ್ನ ಹತ್ರ ದೂರು ಕೊಟ್ಟಾಗ್ಲೂ ನಿನ್ನ ತೀರ್ಪಿನ ಬಗ್ಗೆ ಮಾತಾಡಿದಾಗ್ಲೂ
ನೀನು ನೀತಿಯಿಂದಾನೇ ನಡ್ಕೊಳ್ತೀಯ.
ಆದ್ರೆ ಕೆಟ್ಟವರು ಏನೇ ಮಾಡಿದ್ರೂ ಗೆಲ್ತಾರಲ್ಲಾ, ಯಾಕೆ?+
ಮೋಸ ಮಾಡೋರು ಯಾಕೆ ಇನ್ನೂ ಆರಾಮವಾಗಿ ಬದುಕ್ತಿದ್ದಾರೆ?
2 ನೀನು ಅವ್ರನ್ನ ನೆಟ್ಟೆ, ಅವರು ಬೇರು ಬಿಟ್ರು,
ಅವರು ಬೆಳೆದು ಹಣ್ಣು ಕೊಟ್ರು.
ಅವರು ನಿನ್ನ ಬಗ್ಗೆ ಬಾಯಿ ತುಂಬ ಮಾತಾಡ್ತಾರೆ, ಆದ್ರೆ ಅವ್ರ ಅಂತರಾಳದ ಯೋಚನೆಗಳಲ್ಲಿ* ನೀನಿಲ್ಲ.+
3 ಆದ್ರೆ ಯೆಹೋವನೇ, ನೀನು ನನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀಯ,+ ನೀನು ನನ್ನನ್ನ ನೋಡ್ತಿದ್ದೀಯ,
ನನ್ನ ಹೃದಯ ಪರೀಕ್ಷಿಸ್ತಾ ಇದ್ದೀಯ, ನಿನ್ನ ಮೇಲೆ ನನಗೆ ಎಷ್ಟು ಭಕ್ತಿ ಇದೆ ಅಂತ ತಿಳ್ಕೊಂಡಿದ್ದಿಯ.+
ಬಲಿಕೊಡೋಕೆ ತಗೊಂಡು ಹೋಗೋ ಕುರಿಗಳ ತರ ನೀನು ಅವ್ರನ್ನ ಬೇರೆ ಮಾಡು,
ಕೊಲ್ಲೋ ದಿನಕ್ಕಾಗಿ ಅವ್ರನ್ನ ಬೇರೆ ಇಡು.
4 ಇನ್ನೆಷ್ಟು ಸಮಯದ ತನಕ ದೇಶ ಬರಡಾಗಿರಬೇಕು?
ಎಲ್ಲ ಹೊಲದ ಬೆಳೆಗಳು ಒಣಗಿರಬೇಕು?+
ಆ ದೇಶದ ಜನ್ರು ಕೆಟ್ಟ ಕೆಲಸಗಳನ್ನ ಮಾಡಿರೋದ್ರಿಂದ
ಪ್ರಾಣಿಪಕ್ಷಿಗಳು ಅಲ್ಲಿಂದ ಕಣ್ಮರೆ ಆಗಿವೆ.
“ನಮಗೆ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ಆತನಿಗೆ ಆಗಲ್ಲ” ಅಂತ ಅವರು ಹೇಳಿದ್ದಾರೆ.
ಶಾಂತಿ ಸಮಾಧಾನ ಇರೋ ದೇಶದಲ್ಲಿ ಆರಾಮಾಗಿ ಜೀವಿಸೋದು ನಿನಗೆ ರೂಢಿಯಾಗಿ ಇರೋದಾದ್ರೆ
ಯೋರ್ದನಿನ ಉದ್ದಕ್ಕೂ ಇರೋ ದಟ್ಟ ಪೊದೆಗಳ ಮಧ್ಯ ಅಪಾಯ ಬಂದಾಗ ನೀನೇನು ಮಾಡ್ತೀಯ?
6 ಯಾಕಂದ್ರೆ ನಿನ್ನ ಸ್ವಂತ ಅಣ್ಣತಮ್ಮಂದಿರು,
ನಿನ್ನನ್ನ ಹೆತ್ತ ತಂದೆಯ ಮನೆಯವರು ಸಹ ನಿನಗೆ ದ್ರೋಹ ಮಾಡಿದ್ದಾರೆ.+
ಅವರು ನಿನ್ನ ಮೇಲೆ ಅರಚಿದ್ದಾರೆ.
ಅವರು ನಿನ್ನ ಹತ್ರ ಒಳ್ಳೇ ವಿಷ್ಯಗಳ ಬಗ್ಗೆ ಮಾತಾಡಿದ್ರೂ
ಅವ್ರನ್ನ ನಂಬಬೇಡ.
7 “ನಾನು ನನ್ನ ಮನೆ ಬಿಟ್ಟು ಬಂದಿದ್ದೀನಿ,+ ನನ್ನ ಆಸ್ತಿಯನ್ನ ಬಿಟ್ಟುಕೊಟ್ಟಿದ್ದೀನಿ.+
ನನ್ನ ಪ್ರಾಣಪ್ರಿಯಳನ್ನ ಅವಳ ಶತ್ರುಗಳ ಕೈಗೆ ಕೊಟ್ಟಿದ್ದೀನಿ.+
8 ನನ್ನ ಆಸ್ತಿ ನನಗೀಗ ಕಾಡಲ್ಲಿರೋ ಸಿಂಹದ ತರ ಆಗಿದೆ.
ಅವಳು ನನ್ನನ್ನ ನೋಡಿ ಗರ್ಜಿಸಿದ್ದಾಳೆ.
ಹಾಗಾಗಿ ನನಗೆ ಅವಳ ಮೇಲೆ ದ್ವೇಷ ಹುಟ್ಟಿದೆ.
ಎಲ್ಲ ಕಾಡು ಪ್ರಾಣಿಗಳೇ ಬನ್ನಿ,
ಎಲ್ರೂ ಸೇರ್ಕೊಂಡು ತಿನ್ನಿ.+
10 ತುಂಬ ಕುರುಬರು ಬಂದು ನನ್ನ ದ್ರಾಕ್ಷಿತೋಟ ನಾಶ ಮಾಡಿದ್ದಾರೆ,+
ಅವರು ನನ್ನ ಪಾಲಿನ ಜಮೀನನ್ನ ತುಳಿದು ಹಾಳು ಮಾಡಿದ್ದಾರೆ.+
ನನ್ನ ಅಚ್ಚುಮೆಚ್ಚಿನ ಆ ಜಮೀನನ್ನ ಅವರು ನಿರ್ಜನ ಕಾಡಿನ ತರ ಮಾಡಿದ್ದಾರೆ.
11 ಅದೀಗ ಬಂಜರುಭೂಮಿ ಆಗಿಬಿಟ್ಟಿದೆ.
ಇಡೀ ದೇಶವನ್ನ ಹಾಳುಮಾಡಿದ್ದಾರೆ,
ಆದ್ರೆ ಯಾರೂ ಈ ವಿಷ್ಯವನ್ನ ಮನಸ್ಸಿಗೆ ತಗೊಳ್ತಿಲ್ಲ.+
12 ನಾಶ ಮಾಡೋರು ಕಾಡಿನ ಎಲ್ಲ ಕಾಲುದಾರಿಗಳಿಂದ ಬಂದಿದ್ದಾರೆ,
ಯೆಹೋವನ ಕತ್ತಿ ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ಜನ್ರನ್ನ ಕೊಂದು ಬಿಟ್ಟಿದೆ.+
ಯಾರಿಗೂ ನೆಮ್ಮದಿ ಇಲ್ಲ.
13 ಅವರು ಗೋದಿ ಬಿತ್ತಿದ್ರೂ ಮುಳ್ಳುಗಳನ್ನ ಕೊಯ್ದಿದ್ದಾರೆ.+
ಸುಸ್ತಾಗುವಷ್ಟು ದುಡಿದ್ರೂ ಅವ್ರಿಗೆ ಏನೂ ಸಿಗಲಿಲ್ಲ.
ಯೆಹೋವನಿಗೆ ಅವ್ರ ಮೇಲೆ ಕೋಪ ಬಂದಿದ್ರಿಂದ ಅವ್ರಿಗೆ ಸ್ವಲ್ಪನೂ ಬೆಳೆ ಸಿಗಲ್ಲ,
ಹಾಗಾಗಿ ಅವರು ಅವಮಾನ ಅನುಭವಿಸಬೇಕಾಗುತ್ತೆ.”
14 ಯೆಹೋವ ಹೇಳೋದು ಏನಂದ್ರೆ “ನನ್ನ ಜನ್ರಾದ ಇಸ್ರಾಯೇಲ್ಯರಿಗೆ ವಾಸ ಮಾಡೋಕಂತ ನಾನು ಕೊಟ್ಟ ದೇಶಕ್ಕೆ ನನ್ನ ಕೆಟ್ಟ ನೆರೆಯವರು ಕೈಹಾಕ್ತಾ ಇದ್ದಾರೆ.+ ನಾನು ಅವ್ರನ್ನೆಲ್ಲ ಅವ್ರ ದೇಶದಿಂದ ಕಿತ್ತು ಹಾಕ್ತೀನಿ.+ ಅವ್ರ ಮಧ್ಯ ಇರೋ ಯೆಹೂದದ ಜನ್ರನ್ನ ಸಹ ಕಿತ್ತು ಹಾಕ್ತೀನಿ. 15 ಆದ್ರೆ ಅವ್ರನ್ನೆಲ್ಲ ಕಿತ್ತು ಹಾಕಿದ ಮೇಲೆ ನಾನು ಮತ್ತೆ ಕರುಣೆ ತೋರಿಸಿ ಪ್ರತಿಯೊಬ್ಬರನ್ನ ಅವರವ್ರ ಆಸ್ತಿ ಆಗಿರೋ ಅವ್ರ ದೇಶಕ್ಕೆ ವಾಪಸ್ ಕರ್ಕೊಂಡು ಬರ್ತಿನಿ.”
16 “ಆ ದೇಶದ ಜನ್ರು ನನ್ನ ಜನ್ರ ಹಾಗೆ ನಡ್ಕೊಳ್ಳೋಕೆ ಕಲಿಬೇಕು. ನನ್ನ ಜನ್ರಿಗೆ ಬಾಳನ ಮೇಲೆ ಆಣೆ ಇಡೋಕೆ ಅವರು ಕಲಿಸಿದ ಹಾಗೆ ‘ಜೀವ ಇರೋ ದೇವರಾದ ಯೆಹೋವನಾಣೆ’ ಅಂತ ನನ್ನ ಹೆಸ್ರಲ್ಲಿ ಆಣೆ ಮಾಡೋಕೆ ಅವರು ಕಲಿಬೇಕು. ಹಾಗೆ ಮಾಡಿದ್ರೆ, ನನ್ನ ಜನ್ರ ಜೊತೆ ಅವರು ಸಹ ಬದುಕಿಬಾಳೋ ತರ ನಾನು ಮಾಡ್ತೀನಿ. 17 ಆದ್ರೆ ನನ್ನ ಮಾತು ಕೇಳದ ಜನರನ್ನ ಅವರು ಯಾವ ದೇಶದವರಾದ್ರೂ ಕಿತ್ತು ಹಾಕಿ ನಾಶಮಾಡ್ತೀನಿ” ಅಂತ ಯೆಹೋವ ಹೇಳ್ತಾನೆ.+