ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ಯೆಹೋವನ ಸೇವಕ ದಾವೀದನ ಕೀರ್ತನೆ.
3 ಅವನ ಬಾಯಲ್ಲಿ ಬರೋ ಮಾತು ಹಾನಿಕರ, ಮೋಸಕರ,
ಒಳ್ಳೇದನ್ನ ಮಾಡೋಕೆ ಅವನಲ್ಲಿ ಸ್ವಲ್ಪನೂ ಬುದ್ಧಿ ಇಲ್ಲ.
4 ಹಾಸಿಗೆ ಮೇಲೆ ಇರೋವಾಗ್ಲೂ ಅವನು ಸಂಚು ಮಾಡ್ತಾನೆ.
ಅವನು ಹೋಗ್ತಿರೋ ದಾರಿ ಒಳ್ಳೇದಲ್ಲ,
ಅವನು ಕೆಟ್ಟದ್ದನ್ನ ಬಿಡೋದೇ ಇಲ್ಲ.
5 ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ಆಕಾಶವನ್ನ,+
ನಿನ್ನ ನಂಬಿಗಸ್ತಿಕೆ ಮೋಡಗಳನ್ನ ಮುಟ್ಟುತ್ತೆ.
ಯೆಹೋವನೇ, ನೀನು ಮನುಷ್ಯನನ್ನೂ ಮೃಗಗಳನ್ನೂ ಕಾಪಾಡ್ತೀಯ.+
7 ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!+
ನಿನ್ನ ರೆಕ್ಕೆಯ ನೆರಳಲ್ಲಿ, ಮನುಷ್ಯರು ಆಶ್ರಯ ಪಡ್ಕೊತಾರೆ.+
8 ಅವರು ನಿನ್ನ ಆಲಯದಲ್ಲಿರೋ ಒಳ್ಳೇದನ್ನ* ತೃಪ್ತಿಯಾಗೋ ತನಕ ಕುಡಿತಾರೆ.+
ನೀನು ನಿನ್ನ ಒಳ್ಳೇತನದ ನದಿಯ ನೀರನ್ನ ಅವರಿಗೆ ಕುಡಿಸ್ತೀಯ.+
10 ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+
ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+
11 ದುರಹಂಕಾರಿಯ ಕಾಲು ನನ್ನನ್ನ ತುಳಿಯೋಕೆ ಬಿಡಬೇಡ,
ಕೆಟ್ಟವನ ಕೈ ನನ್ನನ್ನ ಓಡಿಸದ ಹಾಗೆ ನೋಡ್ಕೊ.
12 ನೋಡು! ಅಪರಾಧಿಗಳು ಬಿದ್ದುಹೋಗಿದ್ದಾರೆ,
ಅವರಿಗೆ ಮೇಲೆ ಎದ್ದೇಳೋಕೆ ಆಗಲ್ಲ.+