ಧರ್ಮೋಪದೇಶಕಾಂಡ
29 ದೇವರು ಇಸ್ರಾಯೇಲ್ಯರ ಜೊತೆ ಹೋರೇಬಲ್ಲಿ ಒಂದು ಒಪ್ಪಂದ ಮಾಡ್ಕೊಂಡಿದ್ದನು. ಮೋವಾಬ್ ದೇಶದಲ್ಲಿದ್ದಾಗ ಅವ್ರ ಜೊತೆ ಇನ್ನೊಂದು ಒಪ್ಪಂದ ಮಾಡ್ಕೊಳ್ಳಬೇಕು ಅಂತ ಯೆಹೋವ ಮೋಶೆಗೆ ಹೇಳಿದನು. ಆ ಒಪ್ಪಂದದ ಮಾತುಗಳು ಹೀಗಿತ್ತು.+
2 ಮೋಶೆ ಇಸ್ರಾಯೇಲ್ ಜನ್ರನ್ನೆಲ್ಲ ಕರೆದು ಹೀಗಂದ: “ಯೆಹೋವ ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಮುಂದೆನೇ ಫರೋಹನಿಗೆ, ಅವನ ಎಲ್ಲ ಸೇವಕರಿಗೆ, ಇಡೀ ದೇಶಕ್ಕೆ ಏನೆಲ್ಲ ಮಾಡಿದನು ಅಂತ ನೀವೇ ನೋಡಿದ್ರಿ.+ 3 ಅವ್ರಿಗೆ ಕಠಿಣ ಶಿಕ್ಷೆ* ಕೊಟ್ಟದ್ದನ್ನ, ಅಲ್ಲಿ ಆತನು ಮಾಡಿದ ದೊಡ್ಡ ಸೂಚಕಕೆಲಸ, ಅದ್ಭುತಗಳನ್ನ ನೋಡಿದ್ರಿ.+ 4 ಆದ್ರೆ ಕಣ್ಣಿಂದ ನೋಡಿದ್ದನ್ನಾಗ್ಲಿ, ಕಿವಿಯಿಂದ ಕೇಳಿದ್ದನ್ನಾಗ್ಲಿ ಅರ್ಥ ಮಾಡ್ಕೊಳ್ಳೋ ಶಕ್ತಿಯನ್ನ* ಯೆಹೋವ ನಿಮಗೆ ಇವತ್ತಿನ ತನಕ ಕೊಟ್ಟಿಲ್ಲ.+ 5 ಆತನು ನಿಮಗೆ ಹೀಗಂದ: ‘ನಾನು 40 ವರ್ಷ ನಿಮ್ಮನ್ನ ಕಾಡಲ್ಲಿ ನಡಿಸ್ಕೊಂಡು ಬರ್ತಾ+ ಇದ್ದಾಗ ನಿಮ್ಮ ಮೈಮೇಲಿದ್ದ ಬಟ್ಟೆ ಹಳೆದಾಗಿ ಹರಿದುಹೋಗಲಿಲ್ಲ, ನಿಮ್ಮ ಚಪ್ಪಲಿ ಸವೆದು ಹೋಗಲಿಲ್ಲ.+ 6 ನಿಮಗೆ ತಿನ್ನೋಕೆ ರೊಟ್ಟಿ ಇಲ್ಲದಿದ್ರೂ ಕುಡಿಯೋಕೆ ದ್ರಾಕ್ಷಾಮದ್ಯ, ಬೇರೆ ಮದ್ಯ ಇಲ್ಲದಿದ್ರೂ ನಿಮ್ಮನ್ನ ನೋಡ್ಕೊಂಡೆ. ನಾನು ನಿಮ್ಮ ದೇವರಾದ ಯೆಹೋವ ಅಂತ ನೀವು ತಿಳ್ಕೊಳ್ಳಬೇಕು ಅಂತ ನಾನು ನಿಮ್ಮನ್ನ ಚೆನ್ನಾಗಿ ನೋಡ್ಕೊಂಡೆ.’ 7 ನೀವು ಪ್ರಯಾಣ ಮಾಡ್ತಾ ಮಾಡ್ತಾ ಈ ಜಾಗಕ್ಕೆ ಬಂದು ತಲುಪಿದಾಗ ಹೆಷ್ಬೋನಿನ+ ರಾಜ ಸೀಹೋನ, ಬಾಷಾನಿನ ರಾಜ ಓಗ+ ನಮ್ಮ ಮೇಲೆ ಯುದ್ಧಕ್ಕೆ ಬಂದ್ರು. ಆದ್ರೆ ಅವ್ರನ್ನ ಸೋಲಿಸಿದ್ವಿ.+ 8 ಆಮೇಲೆ ಅವ್ರ ದೇಶ ವಶ ಮಾಡ್ಕೊಂಡು ಅದನ್ನ ರೂಬೇನ್ಯರಿಗೆ, ಗಾದ್ಯರಿಗೆ ಮತ್ತು ಮನಸ್ಸೆ ಕುಲದ ಅರ್ಧ ಜನ್ರಿಗೆ ಆಸ್ತಿಯಾಗಿ ಕೊಟ್ವಿ.+ 9 ಹಾಗಾಗಿ ಈ ಒಪ್ಪಂದದ ನಿಯಮಗಳನ್ನ ಪಾಲಿಸಿ. ಆಗ ನೀವು ಮಾಡೋ ಎಲ್ಲ ಕೆಲಸದಲ್ಲಿ ಯಶಸ್ಸು ಸಿಗುತ್ತೆ.+
10 ಇವತ್ತು ನೀವೆಲ್ಲ ನಿಮ್ಮ ದೇವರಾದ ಯೆಹೋವನ ಮುಂದೆ ಬಂದಿದ್ದೀರ. ಕುಲಗಳ ಮುಖ್ಯಸ್ಥರು, ಹಿರಿಯರು, ಅಧಿಕಾರಿಗಳು, ಇಸ್ರಾಯೇಲಿನ ಎಲ್ಲ ಗಂಡಸರು, 11 ಅವರ ಹೆಂಡತಿ,+ ಮಕ್ಕಳು, ಕಟ್ಟಿಗೆ ಕೂಡಿಸೋ ವಿದೇಶಿಯರಿಂದ+ ಹಿಡಿದು ನೀರು ಸೇದೋ ವಿದೇಶಿಯರ ತನಕ ನಿಮ್ಮ ಪಾಳೆಯದಲ್ಲಿರೋ ಎಲ್ಲ ವಿದೇಶಿಯರು ಸೇರಿ ಬಂದಿದ್ದೀರ. 12 ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆ ಮಾಡ್ಕೊಳ್ಳೋ ಒಪ್ಪಂದದಲ್ಲಿ ಸೇರೋಕೆ ನೀವಿಲ್ಲಿ ಬಂದಿದ್ದೀರ. ಇವತ್ತು ನಿಮ್ಮ ದೇವರಾದ ಯೆಹೋವ ಆಣೆ ಮಾಡಿ ಈ ಒಪ್ಪಂದ ಮಾಡ್ಕೊಳ್ತಾನೆ.+ 13 ನಿಮಗೆ, ನಿಮ್ಮ ಪೂರ್ವಜರಾದ ಅಬ್ರಹಾಮ,+ ಇಸಾಕ,+ ಯಾಕೋಬರಿಗೆ+ ಆತನು ಮಾತು ಕೊಟ್ಟ ಹಾಗೆ ನೀವು ಆತನ ಜನ್ರಾಗಿ ಇರೋಕೆ,+ ಆತನು ನಿಮ್ಮ ದೇವರಾಗಿ ಇರೋಕೆ+ ಈ ಒಪ್ಪಂದ ಮಾಡ್ಕೊಳ್ತಾ ಇದ್ದಾನೆ.
14 ನಾನು ಆಣೆ ಮಾಡಿ ಈ ಒಪ್ಪಂದ ಮಾಡ್ಕೊಳ್ತಾ ಇರೋದು ನಿಮ್ಮ ಜೊತೆ ಮಾತ್ರ ಅಲ್ಲ. 15 ಇವತ್ತು ನಮ್ಮ ದೇವರಾದ ಯೆಹೋವನ ಮುಂದೆ ನಿಂತಿರೋ ನಿಮ್ಮ ಜೊತೆ, ಮುಂದೆ ಬರೋ ನಿಮ್ಮ ವಂಶದವರ ಜೊತೆ* ನಾನು ಇದನ್ನ ಮಾಡ್ಕೊಳ್ತಾ ಇದ್ದೀನಿ. 16 (ನಾವು ಈಜಿಪ್ಟ್ ದೇಶದಲ್ಲಿ ಹೇಗಿದ್ವಿ, ಬೇರೆ ಬೇರೆ ಜನ್ರ ಮಧ್ಯ ಹೇಗೆ ಆಣೆ ಮಾಡಿ ಬಂದ್ವಿ+ ಅಂತ ನಿಮಗೆ ಚೆನ್ನಾಗಿ ಗೊತ್ತು. 17 ಅವರು ಮಾಡ್ತಿದ್ದ ಕೆಟ್ಟ ವಿಷ್ಯಗಳನ್ನ ಅಂದ್ರೆ ಮರ, ಕಲ್ಲು, ಬೆಳ್ಳಿ, ಚಿನ್ನದಿಂದ ಮಾಡ್ತಿದ್ದ ಅಸಹ್ಯ ಮೂರ್ತಿಗಳನ್ನ*+ ನೀವು ನೋಡಿದ್ದೀರ.) 18 ಆ ದೇವರುಗಳ ಸೇವೆ ಮಾಡೋಕೆ ಮನಸ್ಸಿರೋ, ನಮ್ಮ ದೇವರಾದ ಯೆಹೋವನಿಂದ ದೂರ ಹೋಗಬೇಕು ಅಂತ ಮನಸ್ಸಿರೋ* ಯಾವ ವ್ಯಕ್ತಿನೂ ಇವತ್ತು ನಿಮ್ಮ ಮಧ್ಯ ಇರಬಾರದು.+ ಅಂಥವನು ಕಹಿಯಾದ,* ವಿಷ ಇರೋ ಹಣ್ಣು ಕೊಡೋ ಗಿಡದ ಬೇರು ತರ ಇದ್ದಾನೆ.+ ಅಂಥ ಒಬ್ಬ ಗಂಡಸು, ಸ್ತ್ರೀ, ಒಂದು ಕುಟುಂಬ, ಒಂದು ಕುಲನೇ ಇರಲಿ ಇವತ್ತು ನಿಮ್ಮ ಮಧ್ಯ ಇರಬಾರದು, ಎಚ್ಚರಿಕೆ!
19 ಆದ್ರೆ ಯಾರಾದ್ರೂ ಈ ನಿಯಮಗಳನ್ನ ಕೇಳಿಸ್ಕೊಂಡು ಮನಸ್ಸಲ್ಲಿ ‘ನಾನು ಇಷ್ಟಬಂದ ಹಾಗೆ ನಡ್ಕೊಂಡ್ರೂ ನನಗೆ ಒಳ್ಳೇದೇ ಆಗುತ್ತೆ’ ಅಂತ ಅಹಂಕಾರದಿಂದ ಅಂದ್ಕೊಂಡ್ರೆ ಅವನು ನಾಶ ಆಗೋದು ಮಾತ್ರ ಅಲ್ಲ ಬೇರೆ ಎಲ್ರನ್ನ ನಾಶ ಮಾಡ್ತಾನೆ. 20 ಅವನನ್ನ ಯೆಹೋವ ಕ್ಷಮಿಸಲ್ಲ.+ ಅವನ ಮೇಲೆ ಯೆಹೋವನ ಕೋಪಾಗ್ನಿ ಹೊತ್ತಿ ಉರಿಯುತ್ತೆ. ಈ ಪುಸ್ತಕದಲ್ಲಿ ಬರೆದಿರೋ ಎಲ್ಲ ಶಾಪ ಅವನ ಮೇಲೆ ಬಂದೇ ಬರುತ್ತೆ.+ ಯೆಹೋವ ಅವನ ಹೆಸ್ರನ್ನ ಭೂಮಿ ಮೇಲಿಂದ ಅಳಿಸಿ ಹಾಕ್ತಾನೆ. 21 ಯೆಹೋವ ಅವನನ್ನ ಇಸ್ರಾಯೇಲಿನ ಎಲ್ಲ ಕುಲಗಳಿಂದ ಬೇರೆ ಮಾಡಿ ಅವನಿಗೆ ಕಷ್ಟಗಳು ಬರೋ ತರ ಅಂದ್ರೆ ನಿಯಮ ಪುಸ್ತಕದಲ್ಲಿರೋ ಒಪ್ಪಂದದ ಪ್ರಕಾರ ಎಲ್ಲ ಶಾಪಗಳು ತಟ್ಟೋ ಹಾಗೆ ಮಾಡ್ತಾನೆ.
22 ನಿಮ್ಮ ಮಕ್ಕಳ ಪೀಳಿಗೆಯವರು, ದೂರದ ದೇಶದಿಂದ ಬಂದ ವಿದೇಶಿಯರು ನಿಮ್ಮ ದೇಶದಲ್ಲಿ ಯೆಹೋವ ತಂದಿರೋ ಬಾಧೆ, ಕಷ್ಟಗಳನ್ನ ನೋಡ್ತಾರೆ. ಅಂದ್ರೆ 23 ಯೆಹೋವ ತನ್ನ ಕೋಪಾಗ್ನಿಯಿಂದ ಸೊದೋಮ್, ಗೊಮೋರ,+ ಅದ್ಮಾ, ಚೆಬೋಯೀಮನ್ನ+ ನಾಶ ಮಾಡುವಾಗ ಮಾಡಿದ ಹಾಗೆ ನಿಮ್ಮ ದೇಶದಲ್ಲಿ ಸಹ ಗಂಧಕ, ಉಪ್ಪು, ಬೆಂಕಿ ಸುರಿಸಿ ಇಡೀ ದೇಶದಲ್ಲಿ ಬೀಜ ಬಿತ್ತೋಕೆ, ಮೊಳಕೆ ಒಡಿಯೋಕೆ ಆಗದ ಹಾಗೆ, ಯಾವುದೇ ಗಿಡ ಬೆಳೆಯದ ಹಾಗೆ ಮಾಡಿದ್ದನ್ನ ನೋಡ್ತಾರೆ. 24 ಆಗ ಅವರು, ಎಲ್ಲ ಜನ್ರೂ ‘ಯೆಹೋವ ಈ ದೇಶಕ್ಕೆ ಯಾಕೆ ಇಂಥಾ ಗತಿ ತಂದನು?+ ಆತನು ಇಷ್ಟು ಕೋಪದಿಂದ ಕೆಂಡಾಮಂಡಲ ಆಗೋಕೆ ಕಾರಣ ಏನು?’ ಅಂತ ಕೇಳ್ತಾರೆ. 25 ಅದಕ್ಕೆ ಜನ್ರು ‘ಆ ಜನ್ರ ಪೂರ್ವಜರ ದೇವರಾದ ಯೆಹೋವ ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ+ ಮೇಲೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮೀರಿ ನಡೆದ್ರು.+ 26 ತಮಗೆ ಗೊತ್ತಿಲ್ಲದ ದೇವರುಗಳಿಗೆ, ಆರಾಧನೆ ಮಾಡಬಾರದು ಅಂತ ಹೇಳಿದ್ದ ದೇವರುಗಳಿಗೆ ಅಡ್ಡಬಿದ್ದು ಅವುಗಳ ಸೇವೆ ಮಾಡಿದ್ರು.+ 27 ಹಾಗಾಗಿ ಯೆಹೋವನ ಕೋಪಾಗ್ನಿ ಹೊತ್ತಿ ಉರಿತು, ನಿಯಮ ಪುಸ್ತಕದಲ್ಲಿರೋ ಎಲ್ಲ ಶಾಪ+ ಆ ದೇಶದ ಮೇಲೆ ಬಂತು. 28 ಯೆಹೋವ ಕೋಪ, ಕ್ರೋಧ, ರೋಷದಿಂದ ಅವ್ರನ್ನ ಆ ದೇಶದಿಂದ ಕಿತ್ತುಹಾಕಿ ಬೇರೆ ದೇಶಕ್ಕೆ ಗಡೀಪಾರು ಮಾಡಿದನು.+ ಅವರು ಇವತ್ತಿಗೂ ಅಲ್ಲೇ ಇದ್ದಾರೆ’ + ಅಂದ್ರು.
29 “ನಮ್ಮ ದೇವರಾದ ಯೆಹೋವನಿಗೆ ಎಲ್ಲ ಗುಟ್ಟು ಗೊತ್ತು.+ ಆದ್ರೆ ಆತನು ಹೇಳೋಕೆ ಬಯಸೋ ವಿಷ್ಯಗಳನ್ನ ನಮಗೆ, ನಮ್ಮ ವಂಶದವರಿಗೆ ಹೇಳಿದ್ದಾನೆ. ನಿಯಮ ಪುಸ್ತಕದಲ್ಲಿರೋ ಎಲ್ಲ ವಿಷ್ಯಗಳನ್ನ ನಾವು ಯಾವಾಗ್ಲೂ ಪಾಲಿಸಬೇಕು+ ಅಂತ ಅವುಗಳನ್ನ ನಮಗೆ ಹೇಳಿದ್ದಾನೆ.