ಯೆಹೋಶುವ
3 ಯೆಹೋಶುವ ಮತ್ತು ಎಲ್ಲ ಇಸ್ರಾಯೇಲ್ಯರು* ಬೆಳಿಗ್ಗೆ ಬೇಗ ಎದ್ದು ಶಿಟ್ಟೀಮಿಂದ+ ಯೋರ್ದನ್ ನದಿ ಹತ್ರ ಬಂದ್ರು. ಆ ರಾತ್ರಿ ನದಿ ದಾಟದೆ ಅಲ್ಲೇ ಇದ್ರು.
2 ಮೂರು ದಿನ ಆದ್ಮೇಲೆ ಅಧಿಕಾರಿಗಳು+ ಪಾಳೆಯದ ಎಲ್ಲ ಕಡೆ ಹೋಗಿ 3 ಜನ್ರಿಗೆ ಹೀಗೆ ಹೇಳಿದ್ರು: “ಲೇವಿಯರಾದ ಪುರೋಹಿತರು ಯೆಹೋವ ದೇವರ ಒಪ್ಪಂದದ ಮಂಜೂಷ* ಹೊತ್ಕೊಂಡು+ ಹೋಗೋದನ್ನ ನೋಡಿದ ತಕ್ಷಣ ನಿಮ್ಮನಿಮ್ಮ ಜಾಗ ಬಿಟ್ಟು ಅದ್ರ ಹಿಂದೆ ಹೋಗಬೇಕು. 4 ಆದ್ರೆ ನೀವು ಅದ್ರಿಂದ ಸುಮಾರು 2,000 ಮೊಳ* ದೂರ ಇರಬೇಕು. ಮಂಜೂಷದ ಹತ್ರ ಹೋಗಬಾರದು. ಆಗ ಯಾವ ದಾರೀಲಿ ಹೋಗಬೇಕಂತ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ಇಲ್ಲಿ ತನಕ ನೀವು ಆ ದಾರೀಲಿ ಹೋಗಿಲ್ಲ.”
5 ಆಗ ಯೆಹೋಶುವ ಜನ್ರಿಗೆ “ತಯಾರಾಗಿ.*+ ಯಾಕಂದ್ರೆ ನಾಳೆ ಯೆಹೋವ ನಿಮ್ಮ ಮುಂದೆ ಅದ್ಭುತ ಮಾಡ್ತಾನೆ”+ ಅಂದ.
6 ಆಮೇಲೆ ಯೆಹೋಶುವ ಪುರೋಹಿತರಿಗೆ “ಒಪ್ಪಂದದ ಮಂಜೂಷ ಹೊತ್ಕೊಂಡು+ ಜನ್ರ ಮುಂದೆ ಹೋಗಿ” ಅಂದ. ಅವರು ಅದನ್ನ ಹೊತ್ಕೊಂಡು ಜನ್ರ ಮುಂದೆ ಹೋದ್ರು.
7 ಯೆಹೋವ ಯೆಹೋಶುವನಿಗೆ “ಇವತ್ತಿಂದ ಎಲ್ಲ ಇಸ್ರಾಯೇಲ್ಯರು ನಿನ್ನನ್ನ ಗೌರವಿಸೋ ತರ ಮಾಡ್ತೀನಿ.+ ನಾನು ಮೋಶೆ ಜೊತೆ ಇದ್ದ ಹಾಗೆ+ ನಿನ್ನ ಜೊತೆನೂ ಇದ್ದೀನಿ+ ಅಂತ ಅವ್ರಿಗೆ ಆಗ ಗೊತ್ತಾಗುತ್ತೆ. 8 ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರಿಗೆ ‘ನೀವು ಯೋರ್ದನ್ ನದಿ ತೀರಕ್ಕೆ ಹೋಗಿ ನೀರಲ್ಲಿ ಅಲ್ಲಾಡದೆ ನಿಲ್ಲಬೇಕು’ + ಅಂತ ಅಪ್ಪಣೆ ಕೊಡು” ಅಂದನು.
9 ಯೆಹೋಶುವ ಇಸ್ರಾಯೇಲ್ಯರಿಗೆ “ಇಲ್ಲಿ ಬನ್ನಿ, ನಿಮ್ಮ ದೇವರಾದ ಯೆಹೋವನ ಮಾತು ಕೇಳಿಸ್ಕೊಳ್ಳಿ” ಅಂದ. 10 ಆಮೇಲೆ ಯೆಹೋಶುವ “ಜೀವ ಇರೋ ದೇವರು ನಿಮ್ಮ ಜೊತೆ ಇದ್ದಾನೆ,+ ಆತನು ಕಾನಾನ್ಯರನ್ನ, ಹಿತ್ತಿಯರನ್ನ, ಹಿವ್ವಿಯರನ್ನ, ಪೆರಿಜೀಯರನ್ನ, ಗಿರ್ಗಾಷಿಯರನ್ನ, ಅಮೋರಿಯರನ್ನ, ಯೆಬೂಸಿಯರನ್ನ ಖಂಡಿತ ಓಡಿಸಿಬಿಡ್ತಾನೆ ಅಂತ ಇದ್ರಿಂದ ನಿಮಗೆ ಗೊತ್ತಾಗುತ್ತೆ.+ 11 ನೋಡಿ, ಇಡೀ ಭೂಮಿಯ ಒಡೆಯನ ಒಪ್ಪಂದದ ಮಂಜೂಷ ನಿಮ್ಮ ಮುಂದೆ ಯೋರ್ದನ್ ನದಿಯಲ್ಲಿ ಹೋಗ್ತಿದೆ. 12 ಈಗ ಇಸ್ರಾಯೇಲಿನ ಒಂದೊಂದು ಕುಲದಿಂದ ಒಬ್ಬೊಬ್ಬರಂತೆ 12 ಜನ್ರನ್ನ ಆರಿಸ್ಕೊಳ್ಳಿ.+ 13 ಇಡೀ ಭೂಮಿಯ ಒಡೆಯನಾದ ಯೆಹೋವನ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರು ಯೋರ್ದನ್ ನದಿ ನೀರಲ್ಲಿ ಕಾಲಿಟ್ಟ ಕೂಡ್ಲೇ ಹರಿದು ಬರೋ ನೀರು ಗೋಡೆ ತರ* ಅಲ್ಲೇ ನಿಂತುಬಿಡುತ್ತೆ”+ ಅಂದ.
14 ಜನ್ರು ಡೇರೆ ಹಾಕಿದ್ದ ಸ್ಥಳ ಬಿಟ್ಟು ಯೋರ್ದನ್ ನದಿ ದಾಟೋ ಮುಂಚೆ, ಒಪ್ಪಂದದ ಮಂಜೂಷ ಹೊತ್ಕೊಂಡು ಪುರೋಹಿತರು+ ಅವ್ರ ಮುಂದೆ ಹೋದ್ರು. 15 ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್ ನದಿ ತೀರಕ್ಕೆ ಬಂದು ನೀರಲ್ಲಿ ಕಾಲಿಟ್ಟ ಕೂಡ್ಲೇ, (ಕೊಯ್ಲಿನ ಎಲ್ಲ ದಿನ ಯೋರ್ದನ್ ನದಿ ದಡಮೀರಿ ಹರಿತಿತ್ತು)+ 16 ಮೇಲಿಂದ ಬರ್ತಿದ್ದ ನೀರು ದೂರದಲ್ಲಿ ಚಾರೆತಾನ್ ಹತ್ರ ಆದಾಮ್ ಅನ್ನೋ ಪಟ್ಟಣದಲ್ಲಿ ಗೋಡೆ ತರ* ನಿಂತುಬಿಡ್ತು. ಅಲ್ಲಿಂದ ಮುಂದೆ ಹರಿತಿದ್ದ ನೀರು ಅರಾಬಾ ಅನ್ನೋ ಲವಣ ಸಮುದ್ರದ* ಕಡೆ ಹರಿದು ಹೋಯ್ತು. ಹೀಗೆ ನದಿ ಹರಿಯದೆ ನಿಂತೋಯ್ತು. ಆಗ ಜನ ಯೆರಿಕೋ ಮುಂದೆ ನದಿ ದಾಟಿದ್ರು. 17 ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್ ನದಿ ಮಧ್ಯ ಒಣ ನೆಲದಲ್ಲಿ ಅಲ್ಲಾಡದೆ ನಿಂತಿದ್ದಾಗ,+ ಎಲ್ಲ ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡ್ಕೊಂಡು ಹೋದ್ರು.+ ಹೀಗೆ ಇಡೀ ಜನಾಂಗ ಯೋರ್ದನನ್ನ ದಾಟ್ತು.