ಎಸ್ತೇರ್
3 ಇದಾದ ಮೇಲೆ ರಾಜ ಅಹಷ್ವೇರೋಷ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಪದವಿ ಕೊಟ್ಟು ತನ್ನ ಹತ್ರ ಇದ್ದ ಬೇರೆಲ್ಲ ಅಧಿಕಾರಿಗಳಿಗಿಂತ ಅವನನ್ನ ದೊಡ್ಡ ಸ್ಥಾನಕ್ಕೆ ಏರಿಸಿದ.+ 2 ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರೆಲ್ಲ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ರು. ಯಾಕಂದ್ರೆ ಅವನನ್ನ ಗೌರವಿಸೋಕೆ ಹೀಗೆ ಮಾಡಬೇಕಂತ ರಾಜ ಆಜ್ಞೆ ಕೊಟ್ಟಿದ್ದ. ಆದ್ರೆ ಮೊರ್ದೆಕೈ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡೋಕೆ ಅಥವಾ ಅಡ್ಡಬೀಳೋಕೆ ಒಪ್ಪಲಿಲ್ಲ. 3 ಹಾಗಾಗಿ ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರು ಮೊರ್ದೆಕೈಗೆ “ನೀನ್ಯಾಕೆ ರಾಜಾಜ್ಞೆ ಮೀರ್ತಾ ಇದ್ದೀಯ?” ಅಂತ ಕೇಳಿದ್ರು. 4 ದಿನಾಲೂ ಇದನ್ನೇ ಕೇಳ್ತಿದ್ರು. ಆದ್ರೆ ಅವನು ಅವ್ರ ಮಾತನ್ನ ಕಿವಿಗೆ ಹಾಕೊಳ್ತಾನೇ ಇರ್ಲಿಲ್ಲ. ಆಗ ಅವರು ಈ ವಿಷ್ಯ ಹಾಮಾನನಿಗೆ ಹೇಳಿದ್ರು. ಮೊರ್ದೆಕೈಗೆ ಶಿಕ್ಷೆ ಆಗುತ್ತಾ ಇಲ್ವಾ ಅಂತ ನೋಡೋಕೆ ಹಾಗೆ ಮಾಡಿದ್ರು.+ ಯಾಕಂದ್ರೆ ತಾನೊಬ್ಬ ಯೆಹೂದಿ+ ಅಂತ ಮೊರ್ದೆಕೈ ಅವ್ರಿಗೆ ಹೇಳಿದ್ದ.
5 ಮೊರ್ದೆಕೈ ತನಗೆ ಬಗ್ಗಿ ನಮಸ್ಕಾರ ಮಾಡದೇ ಇರೋದನ್ನ ನೋಡಿದಾಗ ಹಾಮಾನನ ಕೋಪ ನೆತ್ತಿಗೇರಿತು.+ 6 ಆದ್ರೆ ಮೊರ್ದೆಕೈ ಮೇಲೆ ಮಾತ್ರ ಕೈಹಾಕೋದು* ಹಾಮಾನನ ದೃಷ್ಟಿಯಲ್ಲಿ ತುಂಬ ಚಿಕ್ಕ ವಿಷ್ಯ ಆಗಿತ್ತು. ಯಾಕಂದ್ರೆ ಮೊರ್ದೆಕೈಯ ಜನ್ರ ಬಗ್ಗೆನೂ ಅವನಿಗೆ ಹೇಳಿದ್ರು. ಹಾಗಾಗಿ ಹಾಮಾನ ಅಹಷ್ವೇರೋಷನ ಸಾಮ್ರಾಜ್ಯದಲ್ಲಿದ್ದ ಮೊರ್ದೆಕೈಯ ಜನ್ರನ್ನ ಅಂದ್ರೆ ಎಲ್ಲ ಯೆಹೂದ್ಯರನ್ನ ನಾಶ ಮಾಡೋಕೆ ದಾರಿ ಹುಡುಕ್ತಿದ್ದ.
7 ಅವ್ರನ್ನ ಯಾವ ತಿಂಗಳ ಯಾವ ದಿನದಲ್ಲಿ ನಾಶ ಮಾಡಬೇಕಂತ ತೀರ್ಮಾನ ಮಾಡೋಕೆ ರಾಜ ಅಹಷ್ವೇರೋಷ ಆಳ್ತಿದ್ದ 12ನೇ ವರ್ಷದ+ ಮೊದಲ್ನೇ ತಿಂಗಳಲ್ಲಿ ಅಂದ್ರೆ ನೈಸಾನ್* ತಿಂಗಳಲ್ಲಿ ಹಾಮಾನನ ಮುಂದೆ ಪೂರನ್ನ (ಅಂದ್ರೆ ಚೀಟು) ಹಾಕಿದ್ರು.+ ಅದು 12ನೇ ತಿಂಗಳಿನ ಅಂದ್ರೆ ಅದಾರ್*+ ತಿಂಗಳಿನ ಮೇಲೆ ಬಿತ್ತು. 8 ಹಾಮಾನ ರಾಜ ಅಹಷ್ವೇರೋಷನಿಗೆ “ನಿನ್ನ ಸಾಮ್ರಾಜ್ಯದಲ್ಲಿ ಒಂದು ಜನಾಂಗ ಇದೆ. ಅವರು ಎಲ್ಲ ಪ್ರಾಂತ್ಯಗಳಲ್ಲಿ*+ ಚದರಿಕೊಂಡಿದ್ದಾರೆ.+ ಅವ್ರ ನಿಯಮಗಳು ಬೇರೆ ಜನಾಂಗಗಳ ನಿಯಮಗಳ ತರ ಅಲ್ಲ. ಅವರು ರಾಜನ ನಿಯಮಗಳನ್ನೂ ಪಾಲಿಸಲ್ಲ. ಅವ್ರನ್ನ ಹಾಗೇ ಬಿಟ್ಟುಬಿಡೋದು ರಾಜನಿಗೆ ಒಳ್ಳೇದಲ್ಲ. 9 ರಾಜನಿಗೆ ಇಷ್ಟ ಆಗೋದಾದ್ರೆ ಅವ್ರನ್ನ ನಾಶ ಮಾಡೋಕೆ ಒಂದು ಆಜ್ಞೆ ಬರೆದು ಕೊಡು. ಹಾಗೆ ಮಾಡಿದ್ರೆ ರಾಜನ ಖಜಾನೆಯಲ್ಲಿ ಇಡೋಕೆ ನಾನು 10,000 ಬೆಳ್ಳಿ ತಲಾಂತುಗಳನ್ನ* ಅಧಿಕಾರಿಗಳಿಗೆ ಕೊಡ್ತೀನಿ”* ಅಂದ.
10 ಅದನ್ನ ಕೇಳಿ ರಾಜ ತನ್ನ ಕೈಯಲ್ಲಿದ್ದ ಮುದ್ರೆ ಉಂಗುರ+ ತೆಗೆದು ಯೆಹೂದ್ಯರ ಶತ್ರುವಾಗಿದ್ದ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಕೊಟ್ಟ. 11 ರಾಜನು ಹಾಮಾನನಿಗೆ “ಬೆಳ್ಳಿಯನ್ನೂ ಜನ್ರನ್ನೂ ನಿನ್ನ ಕೈಗೆ ಒಪ್ಪಿಸ್ತಿದ್ದೀನಿ. ನಿನಗೆ ಇಷ್ಟಬಂದ ಹಾಗೆ ಮಾಡು” ಅಂದ. 12 ಹಾಗಾಗಿ ಮೊದಲ್ನೇ ತಿಂಗಳ 13ನೇ ದಿನ ರಾಜನ ಕಾರ್ಯದರ್ಶಿಗಳನ್ನ+ ಕರೆಸಲಾಯ್ತು. ಅವರು ಬಂದು ರಾಜನ ದೇಶಾಧಿಪತಿಗಳಿಗೆ, ಪ್ರಾಂತ್ಯಗಳ ರಾಜ್ಯಪಾಲರಿಗೆ, ಎಲ್ಲ ಜನ್ರ ಅಧಿಕಾರಿಗಳಿಗೆ ಹಾಮಾನನ ಆಜ್ಞೆಗಳನ್ನೆಲ್ಲ ಬರೆದ್ರು.+ ಅವುಗಳನ್ನ ಎಲ್ಲ ಪ್ರಾಂತ್ಯಗಳಲ್ಲಿರೋ ಜನ್ರ ಭಾಷೆಗಳಲ್ಲಿ, ಲಿಪಿಗಳಲ್ಲಿ* ಬರೆದ್ರು. ಅವುಗಳನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ರಾಜನ ಮುದ್ರೆ ಉಂಗುರವನ್ನ ಒತ್ತಿದ್ರು.+
13 ಸಂದೇಶವಾಹಕರ ಮೂಲಕ ಈ ಪತ್ರಗಳನ್ನ ರಾಜನ ಆಳ್ವಿಕೆ ಕೆಳಗಿದ್ದ ಎಲ್ಲ ಪ್ರಾಂತ್ಯಗಳಿಗೆ ಕಳಿಸಿದ್ರು. ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್+ ತಿಂಗಳ 13ನೇ ದಿನ ಎಲ್ಲ ಯೆಹೂದ್ಯರನ್ನ ಅಂದ್ರೆ ಅವ್ರಲ್ಲಿದ್ದ ಯುವಕರನ್ನ, ವೃದ್ಧರನ್ನ, ಮಕ್ಕಳನ್ನ, ಸ್ತ್ರೀಯರನ್ನ ಹೀಗೆ ಎಲ್ರನ್ನ ಕೊಂದು ಅವ್ರನ್ನ ಪೂರ್ತಿ ನಾಶಮಾಡಿ ಅವ್ರ ಆಸ್ತಿಪಾಸ್ತಿನ ಸ್ವಾಧೀನ ಮಾಡ್ಕೊಳ್ಳಬೇಕಂತ ಅದ್ರಲ್ಲಿ ಹೇಳಿತ್ತು.+ 14 ಅಷ್ಟೇ ಅಲ್ಲ ಎಲ್ಲ ಜನ ಆ ದಿನಕ್ಕಾಗಿ ಸಿದ್ಧರಾಗಿರೋಕೆ ಎಲ್ಲ ಪ್ರಾಂತ್ಯಗಳಲ್ಲಿ ಆ ಪ್ರತಿಯನ್ನ ನಿಯಮದ ಹಾಗೆ ಜಾರಿ ಮಾಡಿ, ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 15 ರಾಜ ಆಜ್ಞೆ ಕೊಟ್ಟ ಹಾಗೇ ಸಂದೇಶವಾಹಕರು ತಕ್ಷಣ ಅಲ್ಲಿಂದ ಹೊರಟ್ರು.+ ಹೀಗೆ ಆ ನಿಯಮ ಶೂಷನಿನ*+ ಕೋಟೆಯಲ್ಲಿ* ಜಾರಿಗೆ ಬಂತು. ಆಗ ಶೂಷನ್* ಪಟ್ಟಣದ ಜನ್ರಿಗೆ ಗಲಿಬಿಲಿ ಆಯ್ತು. ಆದ್ರೆ ರಾಜ ಮತ್ತು ಹಾಮಾನ ಕೂತು ದ್ರಾಕ್ಷಾಮದ್ಯ ಕುಡಿತಿದ್ರು.