ನೀವು ಆಮಂತಿಸಲ್ಪಟ್ಟಿದ್ದೀರಿ “ಸ್ವಾತಂತ್ರ್ಯ ಪ್ರಿಯರು” ಜಿಲ್ಲಾ ಅಧಿವೇಶನಕ್ಕೆ
ನವಂಬರ 1989 ರಿಂದ ಹಿಂದೆಂದೂ ಇಲ್ಲದಿರುವಷ್ಟು ಅಧಿಕವಾಗಿ ಸ್ವಾತಂತ್ರ್ಯದ ವಿಷಯವು ಪ್ರಾಧಾನ್ಯತೆಯದ್ದಾಗಿ ಮಾಡಲ್ಪಟ್ಟಿದೆ. ಪೌರಾತ್ಯ ಯೂರೋಪಿನ ದೇಶಗಳು ವಿಶೇಷವಾಗಿ ಈ ಹಿಂದೆ 40 ಯಾ ಹೆಚ್ಚು ವರ್ಷಗಳಲ್ಲಿ ಅನುಭವಿಸಿದ್ದಕ್ಕಿಂತಲೂ ಹೆಚ್ಚು ರಾಜಕೀಯ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಿದ್ದಾರೆ.
ಆದರೆ ಯಾವುದೇ ರಾಜಕೀಯ ಸ್ವಾತಂತ್ರ್ಯಕ್ಕಿಂತಲು ಅಧಿಕ ಪ್ರಾಮುಖ್ಯತೆಯ ಒಂದು ಸ್ವಾತಂತ್ರ್ಯವಿದೆ. ಇದನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನಾವು ಓದಬಲ್ಲೆವು. ಒಮ್ಮೆ ಯೇಸು ಕ್ರಿಸ್ತನು ಅಂದದ್ದು: “ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು.” (ಯೋಹಾನ 8:32) ಹೌದು, ಸಮರ್ಪಿತ ಕ್ರೈಸ್ತರು ಮನುಷ್ಯ ಭಯದಿಂದ, ಪಾಪ ಮತ್ತು ಮರಣದ ಬಂಧನದಿಂದ ಸ್ವತಂತ್ರಗೊಳಿಸಲ್ಪಟ್ಟಿದ್ದಾರೆ, ನಾವದನ್ನು ರೋಮಾಪುರ 6:18, 22 ರಲ್ಲಿ ಓದುತ್ತೇವೆ. ನಾವು ಇದನ್ನು ಸಹ ಓದುತ್ತೇವೆ, “ಎಲ್ಲಿ ಯೆಹೋವನ ಆತ್ಮವು ಇದೆಯೋ, ಅಲ್ಲಿ ಸ್ವಾತಂತ್ರ್ಯ ಇರುತ್ತದೆ.” (2 ಕೊರಿಂಥ 3:17, NW) ವಾಸ್ತವದಲ್ಲಿ ದೇವರ ವಾಕ್ಯವು ಒಂದು ಶುಭ್ರ ಪ್ರತೀಕ್ಷೆಯನ್ನು ಎತ್ತಿ ಹಿಡಿಯುತ್ತದೆ, ಏನಂದರೆ “ಸೃಷ್ಟಿಯು ಕೂಡಾ ಭೃಷ್ಟತೆಯ ದಾಸತ್ವದಿಂದ ಬಿಡುಗಡೆಯಾಗಿ, ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.”—ರೋಮಾಪುರ 8:21 NW.
ಸದ್ಯದ ಸಮಯಗಳಲ್ಲಿ ಕ್ರೈಸ್ತ ಸ್ವಾತಂತ್ರ್ಯವನ್ನು ಪಡೆಯಲು ಯಾವನೇ ಒಬ್ಬನು ಬಯಸುವುದಾದರೆ, ಅವನು ನಿಜವಾದ ಪ್ರಯತ್ನವನ್ನು ಮಾಡಬೇಕಾಗಿದೆ. ಯಾವುದೇ ರೀತಿಯಲ್ಲಿ ಇದು ತೀರ ಕಡಿಮೆ ಕಷ್ಟದ ಮಾರ್ಗವನ್ನು ಅನುಸರಿಸುವಷ್ಟು ಸರಳವಾಗಿದೆ ಎಂಬರ್ಥವಲ್ಲ. ಮತ್ತು ಈ ಸ್ವಾತಂತ್ರ್ಯವನ್ನು ನಮ್ಮಿಂದ ಅಪಹರಿಸುವ ಶಕ್ತಿಗಳ ನೋಟದಲ್ಲಿ, ಇದರಲ್ಲಿ ಆನಂದಿಸುವುದನ್ನು ಮುಂದುವರಿಸಲು ಇನ್ನು ಹೆಚ್ಚಿನ ಪ್ರಯತ್ನ ಬೇಕಾಗಿದೆ: ಪಿಶಾಚನಾದ ಸೈತಾನನು, ಅವನ ದುಷ್ಟ ಲೋಕ, ಮತ್ತು ನಮ್ಮ ಸ್ವಂತ ಬಾಧ್ಯತೆಯಾಗಿ ಬಂದ ಪಾಪಮಯ ಮನೋಪ್ರವೃತ್ತಿಗಳು. ಯೆಹೋವ ದೇವರು ತನ್ನ ಪ್ರೇರಿತ ವಾಕ್ಯದ ಮೂಲಕ, ತನ್ನ ಪವಿತ್ರ ಆತ್ಮದ ಮೂಲಕ ಮತ್ತು ತನ್ನ ದೃಶ್ಯ ಸಂಸ್ಥಾಪನೆಯ ಮೂಲಕ ಸಹಾಯವನ್ನು ಒದಗಿಸಿದ್ದಾನೆ.—ಲೂಕ 11:13.
ಸ್ವಾತಂತ್ರ್ಯದ ಮೇಲೆ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು, ಸ್ವಾತಂತ್ರ್ಯ ಪ್ರಿಯರೆಲ್ಲರಿಗೆ ಸಹಾಯ ನೀಡಲು, ಈ ವರ್ಷದ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳು “ಸ್ವಾತಂತ್ರ್ಯ ಪ್ರಿಯರು” ಎಂಬ ವಿಷಯಕ್ಕೆ ಒಪ್ಪುವಂತೆ ಕೆಲಸ ಮಾಡಲಿರುವವು. ಈ ಅಧಿವೇಶನಗಳು ಮೂರು ದಿವಸಗಳದ್ದಾಗಿದ್ದು, ಶುಕ್ರವಾರ ಬೆಳಿಗ್ಯೆ 10:20ಕ್ಕೆ ಪ್ರಾರಂಭವಾಗಿ, ಭಾನುವಾರ ಅಪರಾಹ್ನ 4:00 ಗಂಟೆಯ ತನಕ ಜರಗಲಿರುವವು. ಬರುವವರೆಲ್ಲರೂ ಪ್ರಚೋದಕ ಭಾಷಣಗಳು, ಆಸಕ್ತಿಕರ ಸಾಕ್ಷತ್ ಸಂದರ್ಶನ (ಇಂಟರ್ವ್ಯೂ)ಗಳು, ಪರಿಣಾಮಕಾರಿ ಪ್ರದರ್ಶನಗಳು ಮತ್ತು ಮನತಾಕಿಸುವ ಒಂದು ಬೈಬಲಾಧರಿತ ನಾಟಕ, ಇವುಗಳಿಂದ ಆತ್ಮಿಕವಾಗಿ ಪುನರ್ಚೇತನಗೊಳಿಸಲ್ಪಡುವರು ಮತ್ತು ಕಟ್ಟಲ್ಪಡುವರು; ಹಳೆಯ, ಹಾಗೂ ಹೊಸ ಮಿತ್ರರುಗಳೊಂದಿಗಿನ ಹೃದಯ ಬೆಚ್ಚಗೆ ಮಾಡುವ ಸಹವಾಸದ ಸಂತೋಷಗಳನ್ನು, ನಮ್ಮ ರಾಜ್ಯ ಸಂಗೀತಗಳನ್ನು ಇತರ ಸಾವಿರಾರು ಮಂದಿಯೊಟ್ಟಿಗೆ ಹಾಡುವ ಆನಂದ ಮತ್ತು ಹೃದಯಪೂರ್ವಕ ಬಹಿರಂಗ ಪ್ರಾರ್ಥನೆಗಳಲ್ಲಿ ಪಾಲಿಗರಾಗುವುದು, ಇವೆಲ್ಲವನ್ನು ನಾವು ನಗಣ್ಯ ಮಾಡಸಾಧ್ಯವಿಲ್ಲ.
ಶುಕ್ರವಾರ ಬೆಳಿಗ್ಯೆ ಈ ಅಧಿವೇಶನಗಳು ಆರಂಭಗೊಳ್ಳುವಾಗ, ಅಲ್ಲಿ ಹಾಜರಿರಲು, ಯಾವುದೇ ಸಂಗತಿಯು ಅಡ್ಡ ಬಾರದಂತೆ ಎಲ್ಲಾ ಸಮರ್ಪಿತ ಯೆಹೋವನ ಸೇವಕರು ಖಂಡಿತ ಮಾಡಿ ಕೊಳ್ಳಲಿ. ಬೈಬಲ್ ಮತ್ತು ಸಂಗೀತ ಪುಸ್ತಕದೊಂದಿಗೆ ಮಾತ್ರವಲ್ಲ, ಟಿಪ್ಪಣಿ ಮಾಡಿಕೊಳ್ಳಲು ಒಂದು ಪೆನ್ಸಿಲ್ ಮತ್ತು ನೋಟ್ಸ್ಪುಸ್ತಕವನ್ನು ತರಲು ಖಚಿತ ಮಾಡಿರಿ. ಸ್ವತಂತ್ರ ಜನರ ಒಂದು ಭಾಗವಾಗಿ ನಿಮ್ಮ ಆತ್ಮಿಕ ಆವಶ್ಯಕತೆಯ ಜರೂರಿಯ ನೈಜ ಪ್ರಜ್ಞೆಯುಳ್ಳವರಾಗಿ ಕೂಡಾ ಬನ್ನಿರಿ.—ಮತ್ತಾಯ 5:3. (w91 2/15)