‘ಆ ಪುಸ್ತಕ ಮಾಯವಾಗುತ್ತಾ ಇರುತ್ತದೆ’
ಇದನ್ನು ಹೇಳುತ್ತಿರುವದು ಅಮೆರಿಕದ ದಕ್ಷಿಣ ಕ್ಯಾಲಿಫೊರ್ನಿಯದ ಒಬ್ಬಾಕೆ ಹೈಸ್ಕೂಲ್ ಅಧ್ಯಾಪಿಕೆ, ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಪುಸ್ತಕದ ಕುರಿತು. ವಿದ್ಯಾರ್ಥಿಗಳು ತಮಗೆ ಇಷ್ಟೈಸಬಹುದಾದ ಯಾವುದೇ ಪುಸ್ತಕವನ್ನು ಓದಬಹುದಾದ ಒಂದು ನಿತ್ಯದ ವಾಚನಾವಧಿಯನ್ನು ಶಾಲೆಯು ಸ್ಥಾಪಿಸಿತ್ತು. ಏನನ್ನೂ ವಚನಕ್ಕಾಗಿ ತಾರದ ವಿದ್ಯಾರ್ಥಿಗಳಿಗಾಗಿ ಆಕೆ, ಯಂಗ್ ಪೀಪಲ್ ಆಸ್ಕ್ ಪುಸ್ತಕವೂ ಸೇರಿದ್ದ ಸಾಹಿತ್ಯಗಳನ್ನು ಹರಡಿಸಿಟ್ಟಳು.
“ಆ ಪುಸ್ತಕವು ವರ್ಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ” ವಿವರಿಸುತ್ತಾಳೆ ಆಕೆ. “ಅದು ಒಮ್ಮೊಮ್ಮೆ ಹಲವಾರು ತಾಸುಗಳ ತನಕ, ಅಥವಾ ಒಂದೆರಡು ದಿನಗಳ ತನಕವೂ ಮಾಯವಾಗುತ್ತದೆ, ಅನಂತರ ಹಿಂದೆ ಬರುತ್ತದೆ. ವಿದ್ಯಾರ್ಥಿಗಳು ತಮ್ಮ ಮಿತ್ರರನ್ನು, ‘ನೀವಿದನ್ನು ಓದಿದ್ದೀರೋ?’ ಎಂದು ಕೇಳುತ್ತಾರೆ ಇಲ್ಲವೇ ‘ಅದೊಂದು ಒಳ್ಳೆ ಪುಸ್ತಕ’ ಅನ್ನುತ್ತಾರೆ. ತಮ್ಮ ಸ್ನೇಹಿತರಿಗೆ ವಿಷಯಗಳನ್ನು ತೋರಿಸಿದ ನಂತರ, ಅವರು ಹಿಂದೆ ಹೋಗಿ ಹೆಚ್ಚು ವಾಚನವನ್ನು ನಡಿಸುತ್ತಾರೆ.
“ಪುಟಗಳು ಮಾಸಿವೆ ಮತ್ತು ಪುಸ್ತಕವು ಹರಕಾಗ ತೊಡಗಿದೆ. ಹೆಚ್ಚು ಹರಕಾದದ್ದು 23ನೇ ಅಧ್ಯಾಯ, ‘ವಿವಾಹಕ್ಕೆ ಮುಂಚೆ ಲೈಂಗಿಕ ಸಂಬಂಧದ ಕುರಿತೇನು?’ ಎಂಬದು. ಚಿತ್ರಗಳನ್ನು ವಿದ್ಯಾರ್ಥಿಗಳು ಮೆಚ್ಚಿದ್ದಾರೆ, ಮತ್ತು ಮೇಲ್ಬರಹಗಳ ಗುರುತು ಅವರಿಗಾಗುತ್ತದೆ. ‘ಅಮ್ಮ ಮತ್ತು ಅಪ್ಪ ಪ್ರತ್ಯೇಕವಾದದೇಕ್ದೆ? ಎಂಬ ಅಧ್ಯಾಯವನ್ನು ಒಬ್ಬ ವಿದ್ಯಾರ್ಥಿ ಓದುವುದನ್ನು ನಾನು ಕಂಡೆನು.’
“ಮೊದಲನೆ ಪುಸ್ತಕ ಮಾಯವಾದ ತುಸು ನಂತರ, ನಾನು ಇನ್ನೊಂದು ಪುಸ್ತಕವನ್ನು ಇಟ್ಟೆನು. ಅನಂತರ ಮೊದಲ ಪುಸ್ತಕ ಮರಳಿ ಬಂತು, ಹೀಗೆ ಈಗ ಅಲ್ಲಿ ಎರಡಿವೆ. ನಾನು ಮೊದಲ ಪುಸ್ತಕವನ್ನಿಟ್ಟು ಮೂರು ನಾಲ್ಕು ತಿಂಗಳು ದಾಟಿದರೂ, ಅವು ಇನ್ನೂ ಓದಲ್ಪಡುತ್ತಾ ಇವೆ.”
ಪುಸ್ತಕದಲ್ಲಿರುವ 39 ಅಧ್ಯಾಯಗಳಲ್ಲಿ ಇತರ ಅಧ್ಯಾಯಗಳು, “ನಿಜ ಸ್ನೇಹಿತರನ್ನು ನಾನು ಹೇಗೆ ಮಾಡಬಲ್ಲೆನು,?” “ರೂಪಕ್ಕೆಷ್ಟು ಮಹತ್ವ?” ಮತ್ತು “ಅದು ನಿಜ ಪ್ರೀತಿಯೆಂದು ನನಗೆ ತಿಳಿಯುವದು ಹೇಗೆ?” ಮುಂತಾದವುಗಳು. ಈ ಆಕರ್ಷಕ ಚಿತ್ರಗಳಿರುವ ಪುಸ್ತಕದ ಪ್ರತಿಯು ನಿಮಗೆ ಬೇಕಿದ್ದರೆ, ದಯವಿಟ್ಟು ಈ ಕೂಪನನ್ನು ತುಂಬಿಸಿ ಟಪ್ಪಾಲಿಗೆ ಹಾಕಿರಿ.
ನಾನು ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಎಂಬ 320 ಪುಟಗಳ ಪುಸ್ತಕವನ್ನು ಪಡೆಯಲು ಬಯಸುತ್ತೇನೆ.