ಸ್ಪರ್ಧೆಯು ಸಾಫಲ್ಯಕ್ಕೆ ಕೀಲಿ ಕೈಯಾಗಿದೆಯೇ?
“ಗೆಲ್ಲುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಇನ್ನೊಂದು ಸಂಗತಿಯಿಲ್ಲ.” ಅಮೆರಿಕನ್ ಫುಟ್ಬಾಲ್ ಶಿಕ್ಷಕನಾದ ವಿನ್ಸ್ ಲಾಂಬರ್ಡಿಗೆ ಸೇರಿದ್ದೆಂದು ಆಗಿಂದಾಗ್ಗೆ ಹೇಳುವ ಈ ಮಾತುಗಳಿಗನುಸಾರ ಇಂದು ಅನೇಕರು ಜೀವಿಸುತ್ತಾರೆ. ಈಗ, ಹಿಂದಿನ ಕಾಮ್ಯೂನಿಸ್ಟ್ ದೇಶಗಳು ಸ್ಪರ್ಧೆಯ ತತ್ವವನ್ನು ಅತಿಶಯವಾಗಿ ಹೊಗಳುವುದರಲ್ಲಿ ಜತೆಗೂಡಿದ್ದಾರೆ. ಅವರ ಮಾರುಕಟ್ಟೆಗಳಲ್ಲಿ ಸ್ಪರ್ಧೆಯನ್ನು ಪ್ರಸ್ತಾಪಿಸುವುದು ಸಮೃದ್ಧತೆಗೆ ಒಂದು ಟಿಕೇಟು ಎಂದು ಹೇಳಲಾಗುತ್ತದೆ. ಪ್ರಾಚ್ಯ ದೇಶಗಳಲ್ಲಿ ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಇತರರ ವಿರುದ್ಧ ಪ್ರತಿ ಸ್ಪರ್ಧಿಗಳಾಗಿ ನಿಲ್ಲಿಸುತ್ತಾರೆ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುವ ಯುಕ್ತಿಯನ್ನು ಅವರಿಗೆ ಕಲಿಸಲು ಪರೀಕೆಗ್ಷೆ ಅವಸರದಲ್ಲಿ ತಯಾರುಗೊಳಿಸುವ ಶಾಲೆಗಳಿಗೆ ಅವರನ್ನು ಕಳುಹಿಸುತ್ತಾರೆ. ಒಂದು ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶದೊರಕಿಸಿಕೊಳ್ಳುವುದು ಭವಿಷ್ಯದ ಅಭ್ಯುದಯಕ್ಕೆ ಒಂದು ಕೀಲಿ ಕೈಯೆಂದು ಭ್ರಾಂತಿಗೊಳಗಾದ ಆ ಹೆತ್ತವರು ದೃಢವಾಗಿ ನಂಬಿರುತ್ತಾರೆ.
ಸ್ಪರ್ಧೆಯು ಸಾಫಲ್ಯಕ್ಕೆ ಕೀಲಿ ಕೈ ಎಂದು ಅನೇಕರು ದೃಢವಾಗಿ ನಂಬುತ್ತಾರೆ. ಅವರ ನಂಬಿಕೆಗನುಸಾರ, ಒಬ್ಬರು ಇನ್ನೊಬ್ಬರೊಂದಿಗೆ ಸ್ಪರ್ಧಿಸುವುದರಿಂದ ಮಾನವರು ಪ್ರಗತಿಮಾಡಿರುತ್ತಾರೆ. “ಜಪಾನೀಯರ ಸಂಸ್ಥೆಗಳಲ್ಲಿ ಭಡ್ತಿಗಾಗಿ ಸ್ಪರ್ಧೆಯು ಜೀವಶಕ್ತಿಯ ಮೂಲವಾಗಿದೆ,” ಎಂದು ಜಪಾನಿನ ಫೆಡರೇಶನ್ ಆಫ್ ಇಕಾನೊಮಿಕ್ ಮಾಡಲ್ಪಟ್ಟ ಸಮೀಕ್ಷೆಯೊಂದರಲ್ಲಿ ಪ್ರಧಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರ 65.9 ಪ್ರತಿಶತದಷ್ಟು ಹೇಳಿದರು. ಮತ್ತು ಜಪಾನೀಯರ ಕಂಪನಿಗಳು ಕೆಲವು ಸಮಯದ ತನಕ ಸಾಫಲ್ಯಗೊಂಡಂತೆ ಭಾಸವಾಗುತ್ತದೆ. ಹಾಗಿದ್ದಾಗ್ಯೂ, ಸ್ಪರ್ಧೆಯು ಸಾಫಲ್ಯಕ್ಕೆ ನಿಜವಾಗಿಯೂ ಕೀಲಿ ಕೈಯಾಗಿದೆಯೇ?
ನಿಜವಾಗಿಯೂ ಪ್ರತಿಫಲದಾಯಕವೂ?
ಇತರರ ವಿರುದ್ಧ ಸ್ಪರ್ಧಿಸುವ ಜನರು ಒಂದು ಸ್ವಾರ್ಥ, ತಾನು-ಮೊದಲು ಎಂಬ ಮನೋಭಾವವನ್ನು ಪ್ರದರ್ಶಿಸುತ್ತಾರೆ. ಇತರರು ದೋಷಭರಿತವಾಗಿ ವರ್ತಿಸುವಾಗ, ಅವರ ಸ್ವಂತ ದರ್ಜೆಯು ಪ್ರತಿಯಾಗಿ ಏರಲ್ಪಡುತ್ತದೆ ಎಂದು ಊಹಿಸಿ, ಅವರು ಆನಂದಿಸುತ್ತಾರೆ. ಅವರ ಸ್ವಂತ ಸ್ವಾರ್ಥ ಲಾಭಕ್ಕೋಸ್ಕರ, ಅವರು ಇತರರಿಗೆ ಹಾನಿಕರವಾದ ತಂತ್ರಗಳನ್ನು ಬಳಸಬಹುದು. ಸ್ಪರ್ಧೆಯ ಮೂಲಕ ಅಂತಹ ಸಾಫಲ್ಯದ ಬೆನ್ನಟ್ಟುವಿಕೆಯು ಯಾವುದಕ್ಕೆ ನಡಿಸುವುದು? ತನ್ನ ಕಂಪನಿಯಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗುವ ಓಟದಲ್ಲಿ ತನ್ನನ್ನು ಮುಳುಗಿಸಿಕೊಂಡ ಯಾಸೂ, ಅವನ ಗತಕಾಲದ ಪಥವನ್ನು ನೆನಪಿಗೆ ತಂದುಕೊಂಡು, ಹೇಳುವುದು: “ಸ್ಪರ್ಧಾತ್ಮಕ ಆತ್ಮ ಮತ್ತು ಭಡ್ತಿ-ಮೂಲದ ವಿಚಾರದಿಂದ ತುಂಬಿದವನಾಗಿದ್ದು, ನನ್ನನ್ನು ಇತರರೊಂದಿಗೆ ಸ್ವತಃ ಹೋಲಿಸಿಕೊಂಡು, ಶ್ರೇಷ್ಠನೆಂಬ ಭಾವನೆಯುಳ್ಳವನಾಗುತ್ತಿದ್ದೆ. ಆ ಜನರನ್ನು ನನಗಿಂತಲೂ ಮೇಲಿನ ಹುದ್ದೆಯೊಳಗೆ ಇಟ್ಟಾಗ ನಾನು ರೇಗುತ್ತಿದ್ದೆ ಮತ್ತು ಕಂಪನಿಯ ಸಿಬ್ಬಂದಿ ನಿರ್ವಾಹಕ ಮಂಡಲಿಯ ಕುರಿತು ಪ್ರತಿದಿನ ದೂರುತ್ತಿದ್ದೆ. ಶಬ್ದದ ನಿಜಾರ್ಥಾನುಸಾರ ನನಗೆ ಮಿತ್ರರು ಇರಲಿಲ್ಲ.”
ಒಂದು ಸ್ಪರ್ಧಾತ್ಮಕ ಆತ್ಮವು ಅಕಾಲ ಮರಣಕ್ಕೂ ನಡಿಸಬಲ್ಲದು. ಹೇಗೆ? ಜಪಾನಿನ ಮೈನಿಶಿ ಡೈಲಿ ನ್ಯೂಸ್ ಕಾರೊಶಿ ಯನ್ನು, ಯಾ ಕೆಲಸಬಾಹುಳ್ಯದಿಂದ ಮೃತ್ಯುವನ್ನು, ಒಂದು ವಿಧ-ಎ ಚರ್ಯೆಗೆ ಜೋಡಿಸುತ್ತದೆ. ಸಮಯದ ಜರೂರಿಯಿಂದ, ಪೈಪೋಟಿತನದಿಂದ, ಮತ್ತು ವೈರತ್ವದಿಂದ ಉಂಟಾಗುವ ಒತ್ತರವನ್ನು ನಿಭಾಯಿಸುವ ಒಂದು ನಡಾವಳಿಯ ನಮೂನೆಯನ್ನು ವಿಧ-ಎ ವಿವರಿಸುತ್ತದೆ. ಅಮೆರಿಕನ್ ಹೃದಯತಜ್ಞರುಗಳಾದ ಫ್ರೆಡ್ಮ್ಯಾನ್ ಮತ್ತು ರೊಸಮ್ಯಾನ್, ವಿಧ-ಎ ಯನ್ನು ಪರಿಧಮನಿ ಹೃದಯ ರೋಗಕ್ಕೆ ಜೋಡಿಸುತ್ತಾರೆ. ಹೌದು, ಪೈಪೋಟಿತನದ ಒಂದು ಆತ್ಮವು ಮಾರಕವಾಗಿರಬಹುದು.
ಕೆಲಸದ ಸ್ಥಳದಲ್ಲಿ ಸ್ಪರ್ಧೆಯು ಇತರ ಶಾರೀರಿಕ ಮತ್ತು ಮಾನಸಿಕ ಅಕ್ರಮಗಳಿಗೆ ಕೂಡ ನಡಿಸಬಲ್ಲದು. ಒಂದು ಉದಾಹರಣೆಯಾಗಿ ಜಪಾನಿನ ಪ್ರಧಾನ ಕಾರು ವಿತರಣೆಗಾರರಲ್ಲಿ ಒಬ್ಬ ಅಗ್ರಸ್ಥಾನದ ಮಾರಾಟಗಾರನಾಗಿದ್ದ ಕಾನೊಸ್ಕಿ ಎಂಬಾತನಿದ್ದಾನೆ. ಅವನು 1,250 ಕಾರುಗಳನ್ನು ಮಾರಾಟಮಾಡುವುದರ ಮೂಲಕ ಒಂದು ದಾಖಲೆಯನ್ನು ಸ್ಥಾಪಿಸಿದನು. ಅವನ ಛಾಯಾಚಿತ್ರಕ್ಕೆ ಫ್ರೇಮ್ ಹಾಕಿಸಿ, ಕಂಪನಿಯ ಕೇಂದ್ರಾಲಯದಲ್ಲಿ ನಿರ್ದೇಶಕರ ಮಂಡಳಿಯಿಂದ ಬಳಸಲ್ಪಡುವ ಕೋಣೆಯಲ್ಲಿ ನೇತಾಡಿಸಲಾಯಿತು. ಭಡ್ತಿಯನ್ನು ಪಡೆಯಲು ತನ್ನ ಸಹೋದ್ಯೋಗಿಗಳನ್ನು ಏರುವ ಮೆಟ್ಟಲುಗಳನ್ನಾಗಿ ಬಳಸುವುದನ್ನು ಅವನು ಹೇಸಿದರೂ ಕೂಡ, ಸ್ಪರ್ಧಿಸುವಂತೆ ಕಂಪನಿಯು ಅವನನ್ನು ತಳ್ಳಿತು. ಇದರ ಫಲಿತಾಂಶವಾಗಿ, ಒಂದು ವರುಷದಲ್ಲಿ ಅವನು ಜಠರದ ಮತ್ತು ಮುಂಗರುಳಿನ ಎರಡರ ಹುಣ್ಣುಗಳನ್ನು ಹೊಂದಿದನು. ಅದೇ ವರ್ಷದಲ್ಲಿ, ಅವನ ಕಂಪನಿಯ 15 ಮಂದಿ ಕಾರ್ಯನಿರ್ವಾಹಕರು ಆಸ್ಪತ್ರೆಗೆ ಭರ್ತಿಮಾಡಲ್ಪಟ್ಟರು, ಮತ್ತು ಒಬ್ಬನು ಆತ್ಮಹತ್ಯಮಾಡಿಕೊಂಡನು.
ಮನೆಯಲ್ಲಿ, ನೆರೆಯವರಲ್ಲಿದ್ದದ್ದೆಲ್ಲಾ ತನ್ನಲ್ಲಿರಬೇಕೆಂಬ ಮನೋಭಾವವು ಜನರನ್ನು ಕೊನೆಮುಗಿಯದ ಮೇಲಾಟದಲ್ಲಿ ಬದುಕುಬಾಳಿನ ತಮ್ಮ ಡಂಭವನ್ನು ಪ್ರದರ್ಶಿಸಲು ನಡಿಸುತ್ತದೆ. (1 ಯೋಹಾನ 2:16) ಇದು ಕೇವಲ ವಾಣಿಜ್ಯಕ್ಕೆ ಲಾಭ ತಂದು, ಭೂಮಿಯ ವರ್ತಕರ ಕೈಗಳಲ್ಲಿ ಹಣವನ್ನು ಇಡುತ್ತದೆ.—ಹೋಲಿಸಿರಿ ಪ್ರಕಟನೆ 18:11.
ಮೇಲಾಟ ಮತ್ತು ಸ್ಪರ್ಧಾತ್ಮಕ ಭಾವವು ಕೆಲಸದಲ್ಲಿ ನಿಪುಣತೆಯನ್ನು ಉತ್ಪಾದಿಸಬಹುದಾದರೂ, ಅರಸ ಸೊಲೊಮೋನನು ಹೀಗೆ ಅವಲೋಕಿಸಿದರ್ದಲ್ಲಿ ಏನೂ ಆಶ್ಚರ್ಯವಿಲ್ಲ: “ಮತ್ತು ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.” (ಪ್ರಸಂಗಿ 4:4) ಹಾಗಾದರೆ, ಪೈಪೋಟಿತನದ ಲೋಕವೊಂದರಲ್ಲಿ ನಾವು ಜೀವಿಸುತ್ತಿರುವಾಗ, ನಾವು ಮನಶ್ಶಾಂತಿಯನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ಇದನ್ನು ಕಂಡುಕೊಳ್ಳಲು, ಸ್ಪರ್ಧೆಯ ಕಲ್ಪನೆಯು ಎಲ್ಲಿ ಆರಂಭಗೊಂಡಿತು ಎಂದು ನಾವು ಮೊದಲಾಗಿ ನೋಡೋಣ.