ಸುವಾರ್ತೆಯನ್ನು ನೀಡುವದು—ಜನರೊಂದಿಗೆ ಸಂಭಾಷಿಸುವ ಮೂಲಕ
1 ಒಂದು ಶಬ್ದಕೋಶಕ್ಕನುಸಾರವಾಗಿ ಸಂಭಾಷಣೆಯು, “ಭಾವೋದ್ರೇಕ, ಅವಲೋಕನೆ, ಅಭಿಪ್ರಾಯಗಳು ಅಥವಾ ವಿಚಾರಗಳ ಬಾಯಿಮಾತಿನ ವಿನಿಮಯ” ವಾಗಿದೆ. ಆದರೆ ನಾವು ಭೇಟಿಯಾಗುವ ಜನರು ಧಾರ್ಮಿಕವಾಗಿ ವಿರೋಧಿಗಳಾಗಿದ್ದರೆ ಮತ್ತು ತಮ್ಮ ಸ್ವಂತ ಕಾರ್ಯಗಳಲ್ಲಿ ಮಗ್ನರಾಗಿದ್ದರೆ ಅವರೊಂದಿಗೆ ಬೈಬಲಿನ ಸಂದೇಶವನ್ನು ಆರಂಭಿಸುವುದಾದರೂ ಹೇಗೆ? ಕಿವಿಗೊಡುವವರನ್ನು ಮಾತಿನಲ್ಲಿ ಒಳಗೂಡಿಸಲು ಯೇಸು ಪ್ರಶ್ನೆಗಳನ್ನು ಕೇಳಿದ್ದನು.—ಯೋಹಾ. 4:9-15, 41, 42.
2 ಪ್ರಾಮಾಣಿಕ ಹೃದಯದ ಜನರನ್ನು ಕಂಡುಹಿಡಿಯುವಂತೆ ಮತ್ತು ಅವರೊಂದಿಗೆ ಸಂಭಾಷಿಸುವಂತೆ ದಾರಿ ತೆರೆಯಲು ನಾವು ದೇವರಿಗೆ ಯಥಾರ್ಥತೆಯಿಂದ ಪ್ರಾರ್ಥಿಸಬೇಕು. ಪ್ರತಿ ಮನೆಯವನನ್ನು ಯೆಹೋವನ ಭಾವೀ ಸೇವಕನಾಗಿ ನಾವು ನೋಡುವುದಾದರೆ, ಸಾಕ್ಷಿ ಕಾರ್ಯವು ಸುಲಭವಾಗಿ ಪರಿಣಮಿಸುವುದು. ಇಂಥಾ ಮನೋಭಾವವು ಆಸಕ್ತರನ್ನು ಆಕರ್ಷಿಸುವಂಥ ರೀತಿಯಲ್ಲಿ ಬೆಚ್ಚಗಾಗಿ, ಪ್ರಾಮಾಣಿಕತೆಯಿಂದ ಸತ್ಯವನ್ನು ನೀಡುವರೆ ನಮಗೆ ಸಹಾಯ ಮಾಡುವುದು.
ನಮ್ಮಲ್ಲಿರುವುದನ್ನು ಉಪಯೋಗಿಸಿರಿ
3 ರೀಸನಿಂಗ್ ಪುಸ್ತಕ ತನ್ನ 9-15 ನೇ ಪುಟಗಳಲ್ಲಿ ಅನೇಕ ಅತ್ಯುತ್ತಮ ಪೀಠಿಕೆಗಳನ್ನು ನೀಡುತ್ತದೆ. ಅವುಗಳಲ್ಲಿ ಹೆಚ್ಚಿನವು ಪ್ರಶ್ನೆಗಳ ಪರಿಣಾಮಕಾರಕ ಉಪಯೋಗವನ್ನು ಮಾಡುತ್ತವೆ. ಮನೆಯವನು ಒಂದು ಪ್ರಶ್ನೆಗೆ ಪ್ರತಿಕ್ರಿಯೆ ತೋರಿಸುವಾಗ ಆದರದಿಂದ ಕಿವಿಗೊಡಿರಿ, ಮತ್ತು ಅವನಂದ ಮಾತುಗಳನ್ನು ನಾವು ಪರಿಗಣಿಸಿದ್ದೇವೆಂದು ತೋರುವ ರೀತಿಯಲ್ಲಿ ಮನೆಯವನಿಗೆ ಉತ್ತರ ಕೊಡಿರಿ.—ಕೊಲೊ. 4:6.
4 ನಿಶ್ಚಯವಾಗಿ ನೀವೊಂದು ಪ್ರಶ್ನೆಯನ್ನು ಹಾಕುವಾಗ ಮನೆಯವನು ಅದನ್ನು ಹೇಗೆ ಉತ್ತರಿಸುವನೆಂದು ನಿಮಗೆ ಗೊತ್ತಿರುವುದಿಲ್ಲ. ನಿಮ್ಮ ಚರ್ಚೆಯನ್ನು ಅದಕ್ಕನುಸಾರವಾಗಿ ಬದಲಾಯಿಸಲು ಸಿದ್ಧರಾಗಿರ್ರಿ. ಅವನ ಆಸಕ್ತಿಗನುಸಾರ ಬೈಬಲಿನಿಂದ ಅಧಿಕ ಸಮಾಚಾರವನ್ನು ಮುಂತಂದು ಮತ್ತು ಹೆಚ್ಚು ವಿಚಾರಪ್ರೇರಕ ಪ್ರಶ್ನೆಗಳನ್ನು ಹಾಕಿ ಸಂಭಾಷಣೆಯನ್ನು ಮುಂದರಿಸಿರಿ.
ಮುಂದಾಗಿ ತಯಾರಿಸಿರಿ
5 ನಿಮ್ಮ ಕ್ಷೇತ್ರದ ಜನರಲ್ಲಿ ಇರುವ ಸಾಮಾನ್ಯ ಭಾವನೆ ಏನೆಂದು ನಿಮಗೆ ಈ ಮೊದಲೇ ತಿಳಿದಿರಬಹುದು. ಆದ್ದರಿಂದ ನಿರ್ದಿಷ್ಟ ಕ್ಷೇತ್ರಕ್ಕೆ ಅತ್ಯಂತ ಪರಿಣಾಮಕಾರಕ ಪೀಠಿಕೆಯನ್ನು ರೀಸನಿಂಗ್ ಪುಸ್ತಕದಿಂದ ಆಯ್ದು ಕೊಳ್ಳಿರಿ. ಆ ಪೀಠಿಕೆಗಳಲ್ಲೊಂದನ್ನು ಸದ್ಯದ ಸಂಭಾಷಣೆಯ ವಿಷಯಕ್ಕೆ ಅಳವಡಿಸಿ ಕೊಳ್ಳುವದೇ ನಿಮಗೆ ಬೇಕಾದ ಸಂಗತಿ. ಮನೆಯವನಿಗೆ ಯಾವ ವಿಷಯದಲ್ಲಿ ಚಿಂತೆ ಇರಬಹುದೆಂದು ನೀವು ನಂಬುತ್ತೀರೋ ಅದರೊಂದಿಗೆ ನಿಮ್ಮ ಸಂಭಾಷಣೆ ಆರಂಭಿಸಿ, ಸಮಸ್ಯೆಯನ್ನು ಸಂಕ್ಷೇಪವಾಗಿ ನೀಡಿ, ಅನಂತರ ಬೈಬಲು ನೀಡುವ ಪರಿಹಾರವನ್ನು ತಿಳಿಸಿರಿ. ಅವನು ತನ್ನ ಅಭಿಪ್ರಾಯವನ್ನು ಹೇಳುವಾಗ ಸಕಾರಾತ್ಮಕವಾಗಿ ಹೇಳಿಕೆ ನೀಡಿರಿ, ಠೀಕೆ ಮಾಡಿ ಅಲ್ಲ. ಅವನ ವಿಚಾರ ಮತ್ತು ಭಾವನೆಗಳಲ್ಲಿ ನೀವು ತೋರಿಸುವ ಆಸಕ್ತಿಯು, ಅವನನ್ನು ತನ್ನ ಸಂಭಾಷಣೆ ಮುಂದರಿಸುವಂತೆ ಉತ್ತೇಜಿಸಬೇಕು. ಸಹಮತವಾದ ವಿಚಾರಗಳನ್ನು ಮುಂತರಲು ಪ್ರಯತ್ನಿಸಿ, ಹೇಳಿಕೆ ನೀಡಿರಿ. ಮನುಷ್ಯನ ಸಮಸ್ಯೆಗೆ ಬೈಬಲಿನ ಪರಿಹಾರವು ದೇವರ ರಾಜ್ಯ ಮಾತ್ರವೇ ಎಂದು ಒತ್ತಿ ಹೇಳುವ ಮೂಲಕ ಸಂಭಾಷಣೆಯನ್ನು ಸಕಾರಾತ್ಮಕವಾಗಿ ಇಡಿರಿ.
6 ವಿವಿಧ ದೃಷ್ಟಿಕೋನವನ್ನು ಮುಂದಿಡುವ ಮೂಲಕ ಸಂಭಾಷಣೆ ಮುಂದರಿಸಬಹುದು. ಮನೆಯವನು ವಿವೇಚಿಸಲು ಸಿದ್ಧನಿದ್ದರೆ, “ಈ ದೃಷ್ಟಿಕೋನದಿಂದ ನೀವೆಂದಾದರೂ ಅದನ್ನು ಯೋಚಿಸಿದ್ದೀರೋ?” ಎಂದು ಕೇಳಿರಿ. ಆ ವ್ಯಕ್ತಿಯು ಕೇಳಸಿದ್ಧನಿಲ್ಲದಿದ್ದರೆ ನೀವಂದದ್ದನ್ನು ಅವನು ಸ್ವೀಕರಿಸಲೇ ಬೇಕೆಂದು ಒತ್ತಾಯಿಸಬೇಡಿ. ಬದಲಿಗೆ ಸ್ನೇಹದ ಮಾತಿನಿಂದ ಕೊನೆಗೊಳಿಸಿ ಮುಂದಿನ ಸಂದರ್ಭಕ್ಕೆ ದಾರಿ ತೆರೆದಿಟ್ಟು ಹೋಗಿರಿ.—ಜ್ಞಾನೋ. 12:8, 18.
7 ಅನೌಪಚಾರಿಕವಾಗಿ ಅವರನ್ನು ಭೇಟಿಯಾಗುವಾಗ ಕೆಲವು ಜನರು ಸಂಭಾಷಿಸಲು ಹೆಚ್ಚು ಪ್ರವೃತ್ತಿ ತೋರಿಸುತ್ತಾರೆ. ದಾರಿಯಲ್ಲಿ ನಿಮಗೆ ಭೇಟಿಯಾಗುವ ಅಥವಾ ತಮ್ಮ ತೋಟದಲ್ಲಿ ಕೆಲಸಮಾಡುತ್ತಿರುವ ಯಾ ವಿರಮಿಸುತ್ತಿರುವ ಜನರೊಂದಿಗೆ ಸಂಭಾಷಣೆ ಆರಂಭಿಸಲು ಹಿಂಜರಿಯಬೇಡಿ. ಅವರ ಚಟುವಟಿಕೆಯಲ್ಲಿ ನಿಮ್ಮ ನಿಜಾಸಕ್ತಿಯನ್ನು ಅವರು ಸ್ವಾಗತಿಸಬಹುದು, ಮತ್ತು ಭೂಮಿಯು ಪ್ರಮೋದವನವಾಗಿ ಮಾರ್ಪಡುವ ಬೈಬಲಿನ ವಾಗ್ದಾನದ ಚರ್ಚೆಗೆ ನಿಮ್ಮ ಸಂಭಾಷಣೆಯನ್ನು ತಿರುಗಿಸಲು ನೀವು ಶಕ್ತರಾಗಬಹುದು. ಸಂಭಾಷಣೆ ಆರಂಭಿಸುವಾಗ ಅದನ್ನು ಮನೆಯವನಿಗೆ ಉಲ್ಲಾಸಕರವಾಗಿ ಅನಿಸುವಂತೆ ಮಾಡಿರಿ. ಆ ವ್ಯಕ್ತಿಯನ್ನು ದೇವರ, ಆತನ ವಾಕ್ಯದ ಮತ್ತು ಆತನ ಸೇವಕರ ಕಡೆಗೆ ಅಧಿಕ ಉತ್ತಮ ಭಾವನೆಯಿಂದ ಬಿಟ್ಟು ಹೋಗುವದು ನಿಮ್ಮ ಮೇಲೆ ಹೊಂದಿಕೊಂಡಿದೆ. ಈ ರೀತಿ, ಆರಂಭದಲ್ಲಿ ನೀವವನ ಹೃದಯವನ್ನು ತಲಪಲು ಶಕ್ತರಾಗದಿದ್ದರೂ ಇನ್ನೊಂದು ಸಮಯ ಸಾಕ್ಷಿಗಳು ಸಂದರ್ಶಿಸುವಾಗ, ಅವನು ಹೆಚ್ಚು ಪ್ರತಿವರ್ತನೆ ತೋರಿಸ್ಯಾನು.