ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 1-5 ಯೆಹೆಜ್ಕೇಲ ದೇವರ ಸಂದೇಶವನ್ನು ಸಂತೋಷದಿಂದ ಸಾರಿದನು ಯೆಹೋವನು ದರ್ಶನವೊಂದರಲ್ಲಿ ಯೆಹೆಜ್ಕೇಲನಿಗೆ ಸುರುಳಿಯೊಂದನ್ನು ಕೊಟ್ಟು ಅದನ್ನು ತಿನ್ನುವಂತೆ ಹೇಳಿದನು. ಈ ದರ್ಶನದ ಪ್ರಾಮುಖ್ಯತೆ ಏನು? 2:9–3:2 ಯೆಹೆಜ್ಕೇಲನು ದೇವರ ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಿತ್ತು. ಯೆಹೆಜ್ಕೇಲನು ಸುರುಳಿಯಲ್ಲಿರುವ ಮಾತುಗಳನ್ನು ಧ್ಯಾನಿಸಿದಾಗ ಅದು ಅವನ ಆಳವಾದ ಭಾವನೆಗಳನ್ನು ಪ್ರಭಾವಿಸಿ, ಮಾತಾಡುವಂತೆ ಪ್ರಚೋದಿಸಿತು 3:3 ಯೆಹೆಜ್ಕೇಲ ತನ್ನ ನೇಮಕದ ಕಡೆಗೆ ಒಳ್ಳೇ ಮನೋಭಾವವನ್ನು ಕಾಪಾಡಿಕೊಂಡಿದ್ದರಿಂದ ಆ ಸುರುಳಿ ಸಿಹಿಯಾಗಿತ್ತು ಪ್ರಾರ್ಥನಾಪೂರ್ವಕವಾದ ಬೈಬಲ್ ಅಧ್ಯಯನ ಮತ್ತು ಧ್ಯಾನ ಹೇಗೆ ನನ್ನನ್ನು ಪ್ರಭಾವಿಸುತ್ತದೆ? ಸಾರುವ ಕೆಲಸದ ಕಡೆಗೆ ನಾನು ಹೇಗೆ ಒಳ್ಳೇ ಮನೋಭಾವವನ್ನು ಬೆಳೆಸಿಕೊಳ್ಳಬಹುದು?