ವಾಚಕರಿಂದ ಪ್ರಶ್ನೆಗಳು
▪ಲೂಕ 3:1ರಲ್ಲಿ ತಿಳಿಸಲ್ಪಟ್ಟ ಕೈಸರ ತಿಬೇರಿಯನು, ತನ್ನ ಆಳಿಕೆಯನ್ನು ಪ್ರಾರಂಭಿಸಿದ್ದ ಸಾ.ಶ. 14ನೇ ತಾರೀಕಿನ ಬದಲಿಗೆ, ಬೈಬಲ್ ಇತಿಹಾಸದಲ್ಲಿ ಸಾ.ಶ. 29ನ್ನು ಪ್ರಧಾನ ತಾರೀಕಾಗಿ ಪರಿಗಣಿಸುವದೇಕೆ?
ತಿಬೇರಿಯನ ಆಳಿಕೆಯ ಪ್ರಾರಂಭವು ಬೈಬಲಿನಲ್ಲಿ ತಿಳಿಸಲ್ಪಟ್ಟಿರುವುದಿಲ್ಲ, ಆದರೆ ಅವನ 15ನೇ ವರ್ಷದ ಆಳಿಕೆಯ ಉತ್ತರಾರ್ಧದಲ್ಲಿ ನಡೆದ ಒಂದು ಘಟನೆಯು ತಿಳಿಸಲ್ಪಟ್ಟಿದೆ. ಇದು ಬೈಬಲ್ ವಿದ್ಯಾರ್ಥಿಗಳಿಗೆ ಅದನ್ನು ಸಾ.ಶ. 29ರಲ್ಲಿ ನಡೆದ ಘಟನೆಯಾಗಿ ತಾರೀಕನ್ನು ನಿಷ್ಕರ್ಷಿಸಲು ಶಕ್ಯಮಾಡುತ್ತದೆ, ಇದನ್ನು ಬೈಬಲ್ ದೃಷ್ಟಿಕೋನದಿಂದ ಒಂದು ಪ್ರಧಾನ ತಾರೀಕಾಗಿ ವೀಕ್ಷಿಸ ಸಾಧ್ಯವಿದೆ.
ರೋಮಿನ ಎರಡನೆಯ ಸಮ್ರಾಟನಾದ ಕೈಸರ ತಿಬೇರಿಯನ ಆಳಿಕೆಯನ್ನು ಚರಿತ್ರೆಯು ಚೆನ್ನಾಗಿ ಸ್ವೀಕರಿಸಿದೆ. ದಿ ನ್ಯೂ ಎನ್ಸೈಕ್ಲೊಪೀಡಿಯ ಬಿಟಾನಿಕ ಹೇಳುವದು: “ಸಾ.ಶ. 14ರ ಆಗಸ್ಟ್ 19ರಲ್ಲಿ ಅಗಸಸ್ಟ್ [ಮೊದಲನೆಯ ಸಮ್ರಾಟ] ಮೃತನಾದನು. ಈಗ ಶ್ರೇಷ್ಠತ್ವದ ಹಿರಿಮೆ ಪಡೆದ ತಿಬೇರಿಯನು ಸೆನೆಟನ್ನು ತನ್ನ ಸ್ವಂತ ಪ್ರಯೋಜನಕ್ಕಾಗಿ ಯುಕ್ತಿಯಿಂದ ನಿರ್ವಹಿಸಿ ಸುಮಾರು ಒಂದು ತಿಂಗಳ ತನಕವೂ ಅದು ತನ್ನನ್ನು ಸಮ್ರಾಟನಾಗಿ ಹೆಸರಿಸುವಂತೆ ಬಿಡಲಿಲ್ಲ. ಹೀಗೆ ಆ ಮುಖ್ಯಪದಕ್ಕೆ ಅವನು ವಾರಸುದಾರನಾದದ್ದು ಸಪ್ಟಂಬರ 17ರಂದು.a
ಇದು ತಿಬೇರಿಯನ ಆಳಿಕೆಯ ಪ್ರಾರಂಭವನ್ನು ಬೈಬಲಿಗೆ ಸಂಬಂಧಿಸಿದ ತಾರೀಕಾಗಿ ಗೊತ್ತುಮಾಡುತ್ತದೆ ಯಾಕಂದರೆ ಲೂಕ 3:1-3 ಸ್ನಾನಿಕನಾದ ಯೋಹಾನನ ಶುಶ್ರೂಷೆಯ ಕುರಿತಾಗಿ ಹೀಗೆ ತಿಳಿಸುತ್ತದೆ: “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಆಗಿದ್ದ ಕಾಲದಲ್ಲಿ . . . ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು. ಅವನು ಯೊರ್ದನ್ ಹೊಳೆಯ ಸುತ್ತಲಿನ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ—ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುವವನಾದನು.”
ಯೋಹಾನನು ತನ್ನ ಸಾರುವಿಕೆ ಮತ್ತು ಸ್ನಾನಮಾಡಿಸುವಿಕೆಯನ್ನು ತಿಬೇರಿಯನು ಸಮ್ರಾಟನಾಗಿ ಪಟ್ಟಕ್ಕೆ ಬಂದಾಗ ಪ್ರಾರಂಭಿಸಲಿಲ್ಲ ಬದಲಾಗಿ “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ” ಸುರುಮಾಡಿದ್ದನು. ಆ 15ನೇ ವರುಷವು ಸಾ.ಶ. 28ನೇ ಶರತ್ಕಾಲದಿಂದ ಸಾ.ಶ. 29ರ ಶರತ್ಕಾಲದ ತನಕ ವ್ಯಾಪಿಸಿತ್ತು. ಆದರೂ ಇದರ ತಿಳುವಳಿಕೆಯು ಒಬ್ಬನನ್ನು ಯೋಹಾನನ ಶುಶ್ರೂಷೆಯು ಆ ವರ್ಷದಲ್ಲಿ ಯಾವಾಗ ಪ್ರಾರಂಭಿಸಿತು ಯಾ ಸಂಬಂಧಿತ ಘಟನೆಗಳನ್ನು ಹೇಗೆ ಲೆಕ್ಕಿಸಬೇಕು ಎಂಬ ವಿಷಯದಲ್ಲಿ ಖಚಿತವಾಗಿ ನಿರ್ಧರಿಸಲು ಶಕ್ತರಾಗಿ ಮಾಡುವದಿಲ್ಲ.
ಆದರೆ ಬೈಬಲು ನಮಗೆ ಸಹಾಯಕಾರಿಯಾದ ಪ್ರಾಮುಖ್ಯ ಮಾಹಿತಿಯನ್ನು ಕೊಡುತ್ತದೆ. ದೃಷ್ಟಾಂತಕ್ಕಾಗಿ, ದಾನಿಯೇಲನ “ಎಪ್ಪತ್ತು ವಾರಗಳ” ಪ್ರವಾದನೆಯು ಮೆಸ್ಸೀಯನ ಆಗಮನಕ್ಕಾಗಿ ಸಾ.ಶ. 29ಕ್ಕೆ ಕೈತೋರಿಸಿತ್ತು. ಯೇಸುವಿನ ಶುಶ್ರೂಷೆಯು ಮೂರುವರೆ ವರ್ಷದ್ದೆಂದೂ ಅದು ಸೂಚಿಸಿತ್ತು. (ದಾನಿಯೇಲ 9:24-27) ಇದಕ್ಕೆ ಈ ಬೈಬಲ್ ಸವಿವರಗಳನ್ನು ಕೂಡಿಸಿರಿ: ಯೋಹಾನನು ಹುಟ್ಟಿದ ಆರು ತಿಂಗಳ ಮೇಲೆ ಯೇಸು ಜನಿಸಿದನು; ಯೇಸು ದೀಕ್ಷಾಸ್ನಾನ ಪಡೆದಾಗ ಸುಮಾರು “ಮೂವತ್ತು ವರ್ಷದವನಾಗಿದ್ದನು” ಮತ್ತು ಯೇಸು ಸಾ.ಶ. 33ರ ವಸಂತಕಾಲ (ಪಸ್ಕದ ಸಮಯ)ದಲ್ಲಿ ಸತ್ತಾಗ, ಅವನು 33 1⁄2 ವರ್ಷದವನಾಗಿದ್ದನು.—ಲೂಕ 1:24-38; 3:23; 22:14-16, 54.b
ಇಂಥ ಸ್ಪಷ್ಟ ಬೈಬಲ್ ಮಾಹಿತಿಯೊಂದಿಗೆ, ತಿಬೇರಿಯನ ಆಳಿಕೆಯ ಐಹಿಕ ತಾರೀಕು ಸಹಾ ಸೇರಿಸಿ, ಯೋಹಾನನ ಶುಶ್ರೂಷೆಯು ಸಾ.ಶ. 29ರ ವಸಂತಕಾಲದಲ್ಲಿ ಆರಂಭಿಸಿತೆಂದೂ, ಮತ್ತು ಆರು ತಿಂಗಳ ತರುವಾಯ, ಸಾ.ಶ. 29ರ ಶರತ್ಕಾಲದಲ್ಲಿ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದನೆಂದೂ ಬೈಬಲ್ ವಿದ್ಯಾರ್ಥಿಗಳು ಲೆಕ್ಕಮಾಡ ಸಾಧ್ಯವಿದೆ. ಆದ್ದರಿಂದ, ಬೈಬಲ್ ದೃಷ್ಟಿಕೋನಕ್ಕನುಸಾರ ಪ್ರಧಾನ ತಾರೀಕು ಸಾ.ಶ. 14 ಅಲ್ಲ, ಬದಲಾಗಿ ಸಾ.ಶ. 29 ಆಗಿರುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಜೂಲ್ಯನ್ ಕ್ಯಾಲೆಂಡರಲ್ಲಿನ ಸಪ್ಟಂಬರ 17, ಇಂದು ವಿಸ್ತಾರವಾಗಿ ಉಪಯೋಗಿಸಲ್ಪಡುವ ಗ್ರೆಗರಿಯನ್ ಕ್ಯಾಲೆಂಡರಲ್ಲಿ ಸಪ್ಟಂಬರ 15ಕ್ಕೆ ಸರಿಸಮವಾಗಿದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ನ್ಯೂ ಯೋರ್ಕ್, Inc.ರಿಂದ ಪ್ರಕಾಶಿತ, ಇನ್ಸೈಟ್ ಆನ್ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 458, 463, 467; ಸಂಪುಟ 2, ಪುಟ 87, 899-902, 1099, 1100 ಇದಕ್ಕೆ ಹೋಲಿಸಿ.