“ಹರ್ಷಭರಿತ ಸ್ತುತಿಗಾರರು” ಎಂಬ ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ
ಎಂತಹ ಒಂದು ಉತ್ತಮ ಮುಖ್ಯ ವಿಷಯವನ್ನು 1995ರ ಜಿಲ್ಲಾ ಅಧಿವೇಶನಗಳಿಗಾಗಿ ಆರಿಸಲಾಗಿದೆ: “ಹರ್ಷಭರಿತ ಸ್ತುತಿಗಾರರು”! ನಿಶ್ಚಯವಾಗಿಯೂ ಯೆಹೋವನ ಸಾಕ್ಷಿಗಳು ಇಂಥವರೇ ಆಗಿರುತ್ತಾರೆ. ಯಾರ ಸ್ತುತಿಗಾರರು? ಯೆಹೋವ ದೇವರ ಸ್ತುತಿಗಾರರು ನಿಶ್ಚಯ!
ಯೆಹೋವನು ಅಸಮಾನನೂ, ಎಣೆಯಿಲ್ಲದವನೂ, ಅಸದೃಶನೂ, ಮತ್ತು ಎಷ್ಟೋ ವಿಧಗಳಲ್ಲಿ ಅದ್ವಿತೀಯನೂ ಆಗಿರುತ್ತಾನೆ. ಆತನು ಸರ್ವಶಕ್ತನು, ಸರ್ವಜ್ಞನು, ನ್ಯಾಯದಲ್ಲಿ ಪರಿಪೂರ್ಣನು, ಮತ್ತು ಪ್ರೀತಿಯ ವ್ಯಕ್ತೀಕರಣವೂ ಆಗಿದ್ದಾನೆ. ಬೇರೆಲ್ಲರಿಗಿಂತಲೂ ಮಿಗಿಲಾಗಿ, ನಮ್ಮ ಆರಾಧನೆ ಮತ್ತು ಸ್ತುತಿಯನ್ನು ಹೊಂದಲು ಆತನು ಅರ್ಹನು.
ನಿಶ್ಚಯವಾಗಿಯೂ ನಾವಾತನ ಹರ್ಷಭರಿತ ಸ್ತುತಿಗಾರರಾಗಿರಲು ಬಯಸುತ್ತೇವೆ! ನಮಗೆ ನೆರವಾಗಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು 1995 ಕ್ಕಾಗಿ ಮೂರು ದಿನಗಳ ಒಂದು ಉತ್ತಮ ಅಧಿವೇಶನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಮೂರು ದಿನಗಳು ನಿಶ್ಚಯವಾಗಿಯೂ ಹರ್ಷಭರಿತವಾಗಿರಲಿವೆ, ಮತ್ತು ಪ್ರತಿಯೊಬ್ಬ ಯೆಹೋವನ ಸಾಕ್ಷಿಯು ಶುಕ್ರವಾರ ಬೆಳಗ್ಗೆ ಆರಂಭದ ಸಂಗೀತದಿಂದ ಭಾನುವಾರ ಅಪರಾಹ್ಣದ ಕೊನೆಯ ಸಂಗೀತ ಮತ್ತು ಪ್ರಾರ್ಥನೆಯ ತನಕ ಉಪಸ್ಥಿತನಿರಲು ಕೈಲಾದದ್ದೆಲ್ಲವನ್ನು ಮಾಡಬಯಸುವನು.
ಭಾರತದಲ್ಲಿ 1995ರ ಜಿಲ್ಲಾ ಅಧಿವೇಶನ ಸ್ಥಳಗಳು
NEW DELHI
(Hindi and English)
BANGALORE
(Tamil and English)
SHIMOGA
(Kannada)
VIJAYWADA
(Telugu and English)
MARGAO
(Konkani and English)
BOMBAY
(Hindi)
BOMBAY
(English)
MADURAI
(Tamil)
ANAND
(Gujarati)
PUNE
(Marathi and English)
MADRAS
(Tamil and English)
GUWAHATI
(Hindi and English)
CALCUTTA
(Bengali and English)
PORT BLAIR
(Hindi)
KOTTAYAM
(Malayalam)
CALICUT
(Malayalam)
ಅಧಿವೇಶನ ಹಾಲ್ಗಳ ವಿಳಾಸಗಳು ಮತ್ತು ತಾರೀಖುಗಳು ಅವುಗಳ ಅಂತಿಮ ನಿರ್ಣಯವಾದಾಗ ಪ್ರಕಟಿಸಲ್ಪಡುವವು.