ಒಂದು ಬೈಬಲಭ್ಯಾಸವನ್ನು ನೀವೇಕೆ ನಡಿಸ ಬಯಸಬೇಕು
1 ಕ್ರೈಸ್ತನಿಗೆ ಒಂದು ಅತ್ಯಂತ ಪ್ರತಿಫಲದಾಯಕ ಅನುಭವವು ಯಾವುದೆಂದರೆ ಒಬ್ಬನನ್ನು ಕ್ರಿಸ್ತ ನ ಶಿಷ್ಯನಾಗಿ ಮಾಡುವಂತೆ ಯೆಹೋವನಿಂದ ಉಪಯೋಗಿಸಲ್ಪಡುವದೇ. (ಮತ್ತಾಯ 28:19, 20; 1 ಕೊರಿಂಥ 3:6, 9) ಯಾರಿಗೆ ಈ ರೀತಿ ನಾವು ಸಹಾಯ ಮಾಡುತ್ತೇವೋ ಅವರಿಗೆ ಅದು ನಿತ್ಯಜೀವದ ಅರ್ಥದಲ್ಲಿದೆ.
2 ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಒಂದು ಅತ್ಯಂತ ಆಪ್ತ ಸಂಬಂಧವು ಬೆಳೆಯುತ್ತದೆ. ವಿದ್ಯಾರ್ಥಿಯ ಆತ್ಮಿಕ ಬೆಳವಣಿಗೆಯು ನಿಶ್ಚಯವಾಗಿಯೂ ಒಂದು ಮಹಾ ಸಂತೋಷದ ಮೂಲವಾಗಿರುತ್ತದೆ. (1 ಥೆಸ. 2:11, 19, 20) ಆದುದರಿಂದ, ಒಂದಾದರೂ ಬೈಬಲಭ್ಯಾಸವನ್ನು ಸ್ವಂತ ಮನೆಯವರಲದ್ಲಿರುವ ಹೊರಗಿನವರೊಂದಿಗೆ ನಡಿಸುವುದು ಪ್ರತಿಯೊಬ್ಬ ಕ್ರೈಸ್ತನ ಗುರಿಯಾಗಿರಬೇಕು. ಪ್ರತಿ ಕುಟುಂಬ ತಲೆಗೆ ತನ್ನ ಸ್ವಂತ ಕುಟುಂಬದೊಂದಿಗೆ ಕ್ರಮದ, ಅರ್ಥಭರಿತ ಬೈಬಲಭ್ಯಾಸ ನಡಿಸುವ ಜವಾಬ್ದಾರಿಯಿದೆ ನಿಶ್ಚಯ. ನಂಬದ ತಂದೆಯಿರುವ ಮನೆಗಳಲ್ಲಿ ಕ್ರೈಸ್ತ ತಾಯಿಯು ಮಕ್ಕಳೊಂದಿಗೆ ಬೈಬಲಭ್ಯಾಸಕ್ಕಾಗಿ ತಕ್ಕದಾದ ಏರ್ಪಾಡು ಮಾಡುವ ಅಗತ್ಯವಿದೆ.
ಅಭ್ಯಾಸಕ್ಕಾಗಿ ಪ್ರಾರ್ಥಿಸಿರಿ
3 ಅಂತ್ಯಕಾಲದ ಕೊನೆಯನ್ನು ನಾವೀಗ ಮುಟ್ಟಿರಲಾಗಿ, ಪರಿಣಾಮಕಾರಿ ಬೈಬಲಭ್ಯಾಸ ನಡಿಸಲು ಎಲ್ಲರೂ ಪ್ರಯತ್ನಗಳನ್ನು ಮಾಡತಕ್ಕದ್ದು. ಈ ವಿಷಯವಾಗಿ ಕ್ರಮದ ಪ್ರಾರ್ಥನೆಯು, ಅಭ್ಯಾಸ ನಡಿಸಲು ನಮಗಿರುವ ಪ್ರಾಮಾಣಿಕ ಇಚ್ಛೆಯನ್ನು ಪ್ರದರ್ಶಿಸುತ್ತ ದೆ. ಅದರಲ್ಲಿ ಒಳಗೂಡಿರುವ ಜೀವ-ಮರಣದ ಪ್ರಶ್ನೆಯನ್ನು ನಾವು ಕಾಣುತ್ತೇವೆಂದು ಅದು ತೋರಿಸುತ್ತದೆ. (ಯೆಹೆ. 33:7-9, 14-16) ನಮ್ಮ ಮನಃಪೂರ್ವಕ ಪ್ರಯತ್ನಗಳಿಗೆ ಯೆಹೋವನಾಶೀರ್ವಾದದ ಆಶ್ವಾಸನೆ ದೊರೆಯಬಹುದು.—1 ಯೋಹಾ. 5:14, 15.
4 ಶಿಷ್ಯರನ್ನಾಗಿ ಮಾಡುವದರಲ್ಲಿ ಪರಿಣಾಮಕಾರಿಯಾಗಲು ನಾವು ಚೆನ್ನಾಗಿ ತಯಾರಿಸುವ ಅಗತ್ಯವಿದೆ. ಬೈಬಲಭ್ಯಾಸ ನಡಿಸುವುದರಲ್ಲಿ ನಿಪುಣರಾಗಿರುವ ಇತರರನ್ನೂ ಅವಲೋಕಿಸುವದು ಸಹಾ ಅತ್ಯಂತ ಸಹಾಯಕಾರಿಯು. ಮುಂದಣ ತಿಂಗಳುಗಳಲ್ಲಿ, ನಾವು ಯಾರು ಶಿಷ್ಯರನ್ನಾಗಿ ಮಾಡುವದರಲ್ಲಿ ಸಾಫಲ್ಯ ಪಡೆದಿರುವರೋ ಆ ಸಂಚಾರ ಮೇಲ್ವಿಚಾರಕರ ಮತ್ತು ಇತರರ ಸಲಹೆಗಳನ್ನು ನಿಮಗೆ ದಾಟಿಸಲಿದ್ದೇವೆ. ಫಲದಾಯಕ ಬೈಬಲಭ್ಯಾಸಗಳನ್ನು ಆರಂಭಿಸುವುದು ಮತ್ತು ನಡಿಸುವುದು ಹೇಗೆಂಬ ಕೆಲವು ವ್ಯಾವಹಾರ್ಯ ವಿಚಾರಗಳನ್ನು ಲೇಖನಮಾಲೆಯೊಂದು ಎತ್ತಿಹೇಳಲಿದೆ.
ಮುಂದಣ ಲೇಖನಗಳು
5 ನಮ್ಮ ರಾಜ್ಯಸೇವೆ ಮುಂದಣ ಸಂಚಿಕೆಗಳಲ್ಲಿ ಚರ್ಚಿಸಲಿರುವ ಆ ಕೆಲವು ವಿಚಾರಗಳು ಯಾವುವು? ಹಲವಾರು ಪ್ರಚಾರಕರು ಮತ್ತು ಪಯನೀಯರರು ಹೇಗೆ ಬೈಬಲಭ್ಯಾಸ ಆರಂಭಿಸಿದರು ಮತ್ತು ವಿದ್ಯಾರ್ಥಿಗಳ ಹೃದಯವನ್ನು ತಲಪಲು ಯಾವ ಶಿಕ್ಷಣಾ ವಿಧಾನವನ್ನು ಅವರು ಬಳಸಿದ್ದಾರೆ ಎಂಬದನ್ನು ನಾವು ಚರ್ಚಿಸಲಿರುವೆವು. ಹಾಗೂ ಯೆಹೋವನ ಸಂಸ್ಥೆಗಾಗಿ ಗಣ್ಯತೆ ಕಟ್ಟುವ ಮತ್ತು ಕ್ಷೇತ್ರಸೇವೆಯಲ್ಲಿ ಪಾಲಿಗರಾಗುವ ಇಚ್ಛೆಯನ್ನು ಬೆಳೆಸುವ ಕೆಲವು ಸಲಹೆಗಳನ್ನೂ ಕೊಡಲಿದ್ದೇವೆ. ಹಾಗೂ ನಿಮ್ಮ ಮಕ್ಕಳು ಯೆಹೋವನೊಂದಿಗೆ ಒಂದು ಆಪ್ತ ವಾದ ವ್ಯಕ್ತಿಪರ ಸಂಬಂಧವನ್ನು ಬೆಳೆಸುವಂತೆ ನಿಮ್ಮ ಸ್ವಂತ ಕುಟುಂಬ ಬೈಬಲಭ್ಯಾಸವನ್ನು ಹೇಗೆ ಹೆಚ್ಚು ಅರ್ಥಭರಿತ ಮಾಡಬಹುದೆಂಬ ಕೆಲವು ಸಲಹೆಗಳೂ ಅಲ್ಲಿರುವವು.
6 ಕಳೆದ ನಾಲ್ಕು ಸೇವಾ ವರ್ಷಗಳಲ್ಲಿ 9,59,834 ಜನರು ಲೋಕವ್ಯಾಪಕವಾಗಿ ಸ್ನಾನಿತರಾದರು, ಮತ್ತು ಇವರಲ್ಲಿ 836 ಭಾರತದ ಸಭೆಗಳವರು. ಇವರಲ್ಲಿ ಹೆಚ್ಚಿನವರು ದೀಕ್ಷಾಸ್ನಾನದ ಬಿಂದುವನ್ನು ತಲಪಿದ್ದು ಅವರೊಂದಿಗೆ ಬೈಬಲಭ್ಯಾಸ ನಡಿಸಿದವರ ಸಹಾಯದಿಂದಲೇ. ಜ್ಞಾಪಕಾಚರಣೆ ಮತ್ತು ನಮ್ಮ ಜಿಲ್ಲಾ ಅಧಿವೇಶನಗಳ ಉಪಸ್ಥಿತಿಯು, ದೀಕ್ಷಾಸ್ನಾನಕ್ಕೆ ಪ್ರಗತಿಮಾಡಲು ಸಹಾಯಬೇಕಾದ ಇನ್ನೂ ಅನೇಕರು ಇದ್ದಾರೆಂಬದನ್ನು ಸೂಚಿಸುತ್ತದೆ. ಅಂಥವರೊಂದಿಗೆ ಒಂದು ಬೈಬಲಭ್ಯಾಸ ಆರಂಭಮಾಡಿ, ಅದನ್ನು ನಡಿಸುವ ನಮ್ಮ ಪ್ರಯತ್ನವನ್ನು ಮುಂದರಿಸುವ ಮೂಲಕ, ಇನ್ನೂ ಅನೇಕರು ಶಿಷ್ಯರಾಗುವಂತೆ ಮತ್ತು ಕೊನೆಗೆ, ನಿತ್ಯಜೀವ ಪಡೆಯುವಂತೆ ನಾವು ಸಹಾಯ ಮಾಡಬಲ್ಲೆವು.—1 ತಿಮೋಥಿ 6:12, 19.