ಪಾದಟಿಪ್ಪಣಿ
a ಈ ಪ್ರಯಾಣದ ಬಗ್ಗೆ ಮತ್ತು ಈ ಮುಂಚೆ ಮರಿಯಳು ಮಾಡಿದ ಪ್ರಯಾಣದ ಬಗ್ಗೆ ಬೈಬಲ್ ಕೊಡುವ ವರ್ಣನೆಯಲ್ಲಿರುವ ವ್ಯತ್ಯಾಸ ಗಮನಿಸಿ. ಆಗ ಸಂಬಂಧಿಕಳಾದ ಎಲಿಸಬೇತಳ ಬಳಿಗೆ ‘ಮರಿಯಳು ಹೋದಳು’ ಎಂದು ಬೈಬಲ್ ತಿಳಿಸುತ್ತದೆ. (ಲೂಕ 1:39) ಆ ಸಮಯದಲ್ಲಿ ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು, ಇನ್ನೂ ಮದುವೆಯಾಗಿರಲಿಲ್ಲ. ಆದಕಾರಣ ಯೋಸೇಫನನ್ನು ವಿಚಾರಿಸದೇ ಅವಳು ಅಲ್ಲಿಗೆ ಹೋಗಿದ್ದಿರಬಹುದು. ಆದರೆ ಲೂಕ 2:4, 5 ರಲ್ಲಿರುವ ‘ಯೋಸೇಫನು ಹೋದನು’ ಎಂಬ ಮಾತಿನಿಂದ ಮದುವೆಯ ಬಳಿಕ ಅವರು ಜೊತೆಗೂಡಿ ಮಾಡಿದ ಈ ಪ್ರಯಾಣದ ನಿರ್ಣಯವನ್ನು ಮರಿಯಳಲ್ಲ ಯೋಸೇಫ ಮಾಡಿದನೆಂದು ತಿಳಿದುಬರುತ್ತದೆ.